ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC Ranking: ಟಿ20 ಕ್ರಿಕೆಟ್‌ನಲ್ಲಿ ಮತ್ತೆ ನಂಬರ್ 1 ಪಟ್ಟಕ್ಕೇರಿದ ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್

Rashid khan

ಅಫ್ಘಾನಿಸ್ತಾನ ತಂಡದ ಪ್ರೈಮ್ ಸ್ಪಿನ್ನರ್ ರಶೀದ್ ಖಾನ್ ಮತ್ತೆ ನಂಬರ್ 1 ಟಿ20 ಬೌಲರ್ ಆಗಿ ಹೊರಹೊಮ್ಮುವ ಮೂಲಕ ಅಗ್ರ ಸ್ಥಾನವನ್ನ ಮತ್ತೆ ಮರು ಸಂಪಾದಿಸಿದ್ದಾರೆ. ಐಸಿಸಿ ಬುಧವಾರ ಬಿಡುಗಡೆ ಮಾಡಿದ ಟಿ20 ರ್ಯಾಂಕಿಂಗ್‌ನಲ್ಲಿ ರಶೀದ್‌ ಖಾನ್ ಬೌಲರ್ಸ್ ರ್ಯಾಂಕಿಂಗ್‌ನಲ್ಲಿ ಅಗ್ರ ಪಟ್ಟಕ್ಕೇರಿದ್ದಾರೆ.

ಐಸಿಸಿ ಟಿ20 ವಿಶ್ವಕಪ್‌ನ ಸೂಪರ್ 12 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ರಶೀದ್ ಖಾನ್ ಬೊಂಬಾಟ್ ಬೌಲಿಂಗ್ ಪ್ರದರ್ಶಿಸಿದ್ರು. ಪರ್ತ್‌ನಲ್ಲಿ ನಡೆದ ಈ ಪಂದ್ಯದಲ್ಲಿ ರಶೀದ್ ಖಾನ್ ಇಂಗ್ಲೆಂಡ್ ಪ್ರಮುಖ ಬ್ಯಾಟರ್‌ ಹ್ಯಾರಿ ಬ್ರೂಕ್‌ ವಿಕೆಟ್ ಪಡೆಯುವ ಮೂಲಕ ತನ್ನ 4 ಓವರ್‌ಗಳಲ್ಲಿ ಕೇವಲ 17ರನ್ ನೀಡಿ 1 ವಿಕೆಟ್ ಪಡೆದರು. ಆದ್ರೆ ಈ ಪಂದ್ಯವನ್ನ ಇಂಗ್ಲೆಂಡ್ ವಿರುದ್ಧ ಐದು ವಿಕೆಟ್‌ಗಳಿಂದ ಸೋಲನ್ನ ಅನುಭವಿಸಿದೆ.

ಸಿಡ್ನಿಯಲ್ಲಿ ಅಭ್ಯಾಸದ ನಂತರ ಟೀಂ ಇಂಡಿಯಾಗೆ ತಣ್ಣನೆಯ ಆಹಾರ ವಿತರಣೆ ವಿವಾದ: ಐಸಿಸಿ ಪ್ರತಿಕ್ರಿಯೆಸಿಡ್ನಿಯಲ್ಲಿ ಅಭ್ಯಾಸದ ನಂತರ ಟೀಂ ಇಂಡಿಯಾಗೆ ತಣ್ಣನೆಯ ಆಹಾರ ವಿತರಣೆ ವಿವಾದ: ಐಸಿಸಿ ಪ್ರತಿಕ್ರಿಯೆ

ಇನ್ನು ಬುಧವಾರ ನಡೆಯಬೇಕಿದ್ದ ನ್ಯೂಜಿಲೆಂಡ್ ವಿರುದ್ಧ ಅಫ್ಘಾನಿಸ್ತಾನ ಪಂದ್ಯವು ಮಳೆಯಲ್ಲಿ ಕೊಚ್ಚಿ ಹೋಗಿದ್ದು ಉಭಯ ತಂಡಗಳಿಗೆ ಒಂದು ಅಂಕ ಹಂಚಿಕೆಯಾಗಿದೆ.

ಆಸ್ಟ್ರೇಲಿಯಾದ ಟಾಪ್ ಬೌಲರ್ ಜೋಶ್ ಹೇಜಲ್‌ವುಡ್ ಎರಡು ಪಂದ್ಯಗಳಿಂದ 3 ವಿಕೆಟ್ ಪಡೆದಿದ್ದಾರೆ. ಅದ್ರಲ್ಲೂ ನ್ಯೂಜಿಲೆಂಡ್ ವಿರುದ್ಧ ದುಬಾರಿ ಬೌಲಿಂಗ್ ಪ್ರದರ್ಶಿಸಿದ್ದಾರೆ. ಶ್ರೀಲಂಕಾ ವಿರುದ್ಧವು ಹೇಜಲ್‌ವುಡ್‌ ಸ್ವಲ್ಪ ದುಬಾರಿಯೇ ಆಗಿದ್ದಾರೆ. ಹೀಗಾಗಿ ನಂಬರ್ ಒನ್ ಸ್ಥಾನದಿಂದ ಕುಸಿತ ಕಂಡಿದ್ದು ರಶೀದ್ ಖಾನ್ ಪಟ್ಟಕ್ಕೇರಿದ್ದಾರೆ.

ಆಸ್ಟ್ರೇಲಿಯಾ ಪರ 3 ಓವರ್‌ನಲ್ಲಿ 52ರನ್ ನೀಡಿದ ಅತಿ ದುಬಾರಿ ಬೌಲರ್ ಆಗಿ ಗುರುತಿಸಿಕೊಂಡ ಶ್ರೀಲಂಕಾದ ಸ್ಪಿನ್ನರ್ ವಹಿಂದು ಹಸರಂಗ ಮೂರು ಸ್ಥಾನಗಳನ್ನ ಕಳೆದುಕೊಂಡು ಇತ್ತೀಚಿನ ರ್ಯಾಂಕಿಂಗ್‌ನಲ್ಲಿ 6ನೇ ಸ್ಥಾನ ತಲುಪಿದ್ದಾರೆ. ಅದೇ ಇಂಗ್ಲೆಂಡ್ ಪರ ಮಿಂಚಿನ ದಾಳಿ ನಡೆಸಿದ ಬೌಲರ್ ಸ್ಯಾಮ್ ಕರನ್ ಅಫ್ಘಾನಿಸ್ತಾನ ವಿರುದ್ಧ ಐದು ವಿಕೆಟ್ ಕಬಳಿಸಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಪರ ಚೊಚ್ಚಲ ಐದು ವಿಕೆಟ್‌ ಪಡೆದ ಮೊದಲ ಬೌಲರ್ ಎನಿಸಿರುವ ಸ್ಯಾಮ್ ಕರನ್ ತನ್ನ ವೃತ್ತಿಜೀವನದ ಬೆಸ್ಟ್ 657 ಪಾಯಿಂಟ್ಸ್ ಸಂಪಾದಿಸಿದ್ದಾರೆ. ಸ್ಯಾಮ್ ಅಫ್ಘಾನಿಸ್ತಾನ ವಿರುದ್ಧ 10 ರನ್ ನೀಡಿ 5 ವಿಕೆಟ್ ಸಂಪಾದಿಸಿದ್ರು.

ಇನ್ನು ಟೀಂ ಇಂಡಿಯಾದ ಬೌಲರ್ ಭುವನೇಶ್ವರ್ ಕುಮಾರ್ ಪಾಕಿಸ್ತಾನ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಬಳಿಕ ಐಸಿಸಿ ಇತ್ತೀಚಿನ ರ್ಯಾಂಕಿಂಗ್‌ನಲ್ಲಿ ಎರಡು ಸ್ಥಾನ ಹೆಚ್ಚಿಸಿಕೊಂಡಿದ್ದಾರೆ. ಭುವಿ ತನ್ನ ಬೌಲಿಂಗ್ ಖೋಟಾದಲ್ಲಿ 22 ರನ್ ನೀಡಿ 1 ವಿಕೆಟ್ ಸಂಪಾದಿಸಿದರು. ಜೊತೆಗೆ ಟಾಪ್ 10 ರ್ಯಾಂಕಿಂಗ್‌ ತಲುಪಿದ್ದಾರೆ.

ಇನ್ನು ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ನಂಬರ್ ಒನ್ ಪಟ್ಟವನ್ನ ಉಳಿಸಿಕೊಂಡಿದ್ದಾರೆ. 14 ಪಾಯಿಂಟ್ಸ್‌ಗಳಷ್ಟೇ ಹಿಂದಿರುವ ಅಫ್ಘಾನಿಸ್ತಾನ ತಂಡದ ನಾಯಕ ಮೊಹಮ್ಮದ್ ನಬಿ ಎರಡನೇ ಸ್ಥಾನ ಅಲಂಕರಿಸಿದ್ದಾರೆ.

ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 3 ಸ್ಥಾನ ಬಡ್ತಿ ಪಡೆದು ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ 3ನೇ ಸ್ಥಾನವನ್ನ ತಲುಪಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಪಾಂಡ್ಯ 3 ವಿಕೆಟ್ ಪಡೆದಿದ್ದಲ್ಲದೆ, ಬ್ಯಾಟಿಂಗ್‌ನಲ್ಲಿ 40ರನ್ ಕಲೆಹಾಕಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು.

Story first published: Wednesday, October 26, 2022, 23:30 [IST]
Other articles published on Oct 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X