ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ 2022: ಭಾರತದ ಈ 5 ಆಟಗಾರರಿಗೆ ಮುಂದಿನ T20 ವಿಶ್ವಕಪ್‌ನಲ್ಲಿ ಅವಕಾಶ ಸಿಗದು!

Team india

ಐಸಿಸಿ ಟಿ20 ವಿಶ್ವಕಪ್ 2022ರ ಸೆಮಿಫೈನಲ್‌ನಲ್ಲಿ ಭಾರತದ ಹೀನಾಯ ಸೋಲಿನ ಬಳಿಕ ಟೀಕಾಕಾರರು, ಮಾಜಿ ಕ್ರಿಕೆಟಿಗರು ಭಾರತ ತಂಡದ ಪ್ಲೇಯಿಂಗ್ ಇಲೆವೆನ್ ಆಯ್ಕೆ, ಪ್ರದರ್ಶನ ಹಾಗೂ ವಿಶ್ವಕಪ್‌ನ ಸ್ಕ್ವಾಡ್ ಕುರಿತಾಗಿ ಅಪಸ್ವರ ಎತ್ತಿದ್ದಾರೆ. ವಿಕೆಟ್ ಟೇಕಿಂಗ್ ಸ್ಪಿನ್ನರ್ ಯುಜವೇಂದ್ರ ಚಹಾಲ್‌ಗೆ ಬೆಂಚ್‌ನಲ್ಲೇ ಇರಿಸಿದ್ದರ ಕುರಿತಾಗಿ, ರೋಹಿತ್ ಹಾಗೂ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಕುರಿತು ಕೆಂಡಕಾರಿದ್ದಾರೆ.

ಟೀಂ ಇಂಡಿಯಾ ಪರ ಅನುಭವಿ ಬೌಲರ್‌ಗಳಿಗೇನು ಕಮ್ಮಿ ಇರಲಿಲ್ಲ. ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿರಂತಹ ಟಿ20 ಅನುಭವಿಗಳ ಜೊತೆಗೆ ಅರ್ಷ್‌ದೀಪ್ ಸಿಂಗ್‌ನಂತಹ ಯುವ ಬೌಲರ್‌, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪ್ಲೇಯಿಂಗ್‌ ಇಲೆವೆನ್‌ನಲ್ಲಿದ್ದರೂ ಭಾರತ ಒಂದು ವಿಕೆಟ್ ಪಡೆಯದೆ ನಿರಾಸೆ ಅನುಭವಿಸಿತು.

ಟಿ20 ವಿಶ್ವಕಪ್‌ಗೂ ಮುನ್ನ ಒಂದು ವರ್ಷದಲ್ಲಿ ಯಾವುದೇ ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನಾಡದ ರವಿಚಂದ್ರನ್ ಅಶ್ವಿನ್ ಮತ್ತು ಮೊಹಮ್ಮದ್ ಶಮಿಗೆ ಸ್ಕ್ವಾಡ್‌ನಲ್ಲಿ ಅವಕಾಶ ನೀಡಿದ್ದರ ಕುರಿತು ಬಹುದೊಡ್ಡ ಪ್ರಶ್ನೆ ಎದ್ದಿದೆ. ಇದರ ಜೊತೆಗೆ ಟೀಂ ಇಂಡಿಯಾದಿಂದ ಯಾರನ್ನು ಕೈ ಬಿಡಬೇಕು ಎಂದು ಚರ್ಚೆಗಳು ಸಹ ಶುರುವಾಗಿವೆ.

ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎ ಆತಿಥ್ಯದಲ್ಲಿ ನಡೆಯಲಿರುವ ಮುಂಬರುವ ಐಸಿಸಿ ಟಿ20 ವಿಶ್ವಕಪ್‌ 2024ರಲ್ಲಿ, ಪ್ರಸ್ತುತ ತಂಡದಲ್ಲಿರುವ ಈ ಐವರು ಆಟಗಾರರು ಅವಕಾಶ ಪಡೆಯುವುದು ಅನುಮಾನ ಎನ್ನಲಾಗಿದೆ. ಆ ಆಟಗಾರರು ಯಾರು ಎಂದು ಈ ಕೆಳಗೆ ಕಾಣಬಹುದು.

ಅಕ್ಷರ್ ಪಟೇಲ್

ಅಕ್ಷರ್ ಪಟೇಲ್

ಟಿ20 ವಿಶ್ವಕಪ್‌ 2022ರ ಆರಂಭಕ್ಕೆ ಕೆಲವೇ ದಿನಗಳಿರುವಂತೆ ಆಲ್‌ರೌಂಡರ್ ರವೀಂದ್ರ ಜಡೇಜಾ ಗಾಯಗೊಂಡು ಹೊರಬಿದ್ದ ಪರಿಣಾಮ ಅವಕಾಶ ಪಡೆದಿದ್ದ ಅಕ್ಷರ್ ಪಟೇಲ್ ವಿಶ್ವಕಪ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದಾರೆ. ಮೊಣಕಾಲು ಇಂಜ್ಯುರಿಗೆ ತುತ್ತಾದ ಜಡೇಜಾರನ್ನ ಇಡೀ ಟೂರ್ನಮೆಂಟ್‌ನಲ್ಲಿ ಮಿಸ್ ಮಾಡಿಕೊಳ್ಳಲಾಗಿದೆ.

ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ 3 ಪಂದ್ಯಗಳಿಂದ 8 ವಿಕೆಟ್ ಪಡೆದಿದ್ದ ಅಕ್ಷರ್ ಪಟೇಲ್ 6.30 ಎಕಾನಮಿಯಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ಆದ್ರೆ ಅದೇ ಟಿ20 ವಿಶ್ವಕಪ್‌ನಲ್ಲಿ ಈತ ಒಟ್ಟಾರೆ ಪಡೆದ ಅವಕಾಶಗಳಲ್ಲಿ ಪಡೆದಿದ್ದು ಕೇವಲ 3 ವಿಕೆಟ್‌ಗಳು. 8.62 ಎಕಾನಮಿ ದರದಲ್ಲಿ ಬೌಲಿಂಗ್ ಮಾಡಿದ ಅಕ್ಷರ್ ಪಟೇಲ್ ಬ್ಯಾಟಿಂಗ್‌ನಲ್ಲೂ ಕೂಡ ಮಿಂಚಲಿಲ್ಲ.

ಎಡಗೈ ಆಲ್‌ರೌಂಡರ್ ಕಳಪೆ ಪ್ರದರ್ಶನದಿಂದಾಗಿ ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆತನಿಗೆ ಅವಕಾಶ ನೀಡದೇ ಇರುವುದು ಅವರ ಚುಟುಕು ಕ್ರಿಕೆಟ್ ಕೆರಿಯರ್‌ಗೆ ಅಂತ್ಯ ಹಾಡಲಾಗಿದೆಯೇ? ಎಂಬ ಅನುಮಾನ ಶುರುವಾಗಿದೆ.

ಮೊಹಮ್ಮದ್ ಶಮಿ

ಮೊಹಮ್ಮದ್ ಶಮಿ

ಟೀಂ ಇಂಡಿಯಾದ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಗಾಯಗೊಂಡ ಪರಿಣಾಮ ಟಿ20 ವಿಶ್ವಕಪ್‌ನಲ್ಲಿ ಮೊಹಮ್ಮದ್ ಶಮಿಗೆ ಅವಕಾಶ ನೀಡುವ ಮೂಲಕ ಆಯ್ಕೆ ಸಮಿತಿ ಎಲ್ಲರಿಗೆ ಅಚ್ಚರಿ ಮೂಡಿಸಿತು. ಕಳೆದೊಂದು ವರ್ಷದಲ್ಲಿ ಭಾರತದ ಟಿ20 ಸ್ಕ್ವಾಡ್‌ನಲ್ಲೇ ಇರದ ಶಮಿಯನ್ನು ವಿಶ್ವಕಪ್‌ ಸ್ಕ್ವಾಡ್‌ಗೆ ಸೇರಿಸಿ ಟೀಂ ಮ್ಯಾನೇಜ್‌ಮೆಂಟ್ ವಿಫಲಗೊಂಡಿದೆ.

2021ರ ಟಿ20 ವಿಶ್ವಕಪ್‌ನಲ್ಲೂ ಭಾರತ ತಂಡದಲ್ಲಿದ್ದ ಶಮಿಯನ್ನು ಕಳಪೆ ಪ್ರದರ್ಶನದಿಂದ ಕೈ ಬಿಡಲಾಗಿತ್ತು. ಆದ್ರೆ ಒಂದು ವರ್ಷದಲ್ಲಿ ಯಾವುದೇ ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನ ಆಡದ ಶಮಿಗೆ ಮತ್ತೆ ವಿಶ್ವಕಪ್‌ನಲ್ಲಿ ಅವಕಾಶ ನೀಡಿ ಆಯ್ಕೆಗಾರರು ತಪ್ಪು ಮಾಡಿದರು ಎಂಬ ಟೀಕೆ ಕೇಳಿಬಂದಿದೆ.

32 ವರ್ಷದ ಶಮಿ ಇಡೀ ಟೂರ್ನಮೆಂಟ್‌ನಲ್ಲಿ 7.15 ಎಕಾನಮಿಯಲ್ಲಿ ಬೌಲಿಂಗ್ ಮಾಡಿ ಪಡೆದಿದ್ದು ಕೇವಲ 6 ವಿಕೆಟ್‌ಗಳು. ಹೀಗಾಗಿ ಮುಂದಿನ ಟಿ20 ವಿಶ್ವಕಪ್‌ಗೆ ಶಮಿ ಆಯ್ಕೆಯಾಗುವುದು ಅನುಮಾನ ಮೂಡಿಸಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಶಮಿಗೆ ಅವಕಾಶ ಸಿಗಬಹುದು.

ಮುಂದಿನ T20 ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಈ ಮುಖಗಳನ್ನ ನೋಡಲು ಬಯಸುವುದಿಲ್ಲ: ವೀರೇಂದ್ರ ಸೆಹ್ವಾಗ್

ರವಿಚಂದ್ರನ್ ಅಶ್ವಿನ್

ರವಿಚಂದ್ರನ್ ಅಶ್ವಿನ್

ಟೀಂ ಇಂಡಿಯಾ ಟಿ20 ಫಾರ್ಮೆಟ್‌ನಲ್ಲಿ ಲೆಕ್ಕದಲ್ಲಿಯೇ ಇರದ ರವಿಚಂದ್ರನ್ ಅಶ್ವಿನ್‌ಗೆ ಅವಕಾಶ ನೀಡುವ ಮೂಲಕ ಟೀಂ ಇಂಡಿಯಾ ಆಯ್ಕೆಗಾರರ ಸಮಿತಿಯು ಇಡೀ ಕ್ರಿಕೆಟ್ ಲೋಕಕ್ಕೆ ಅಚ್ಚರಿಯನ್ನ ಮೂಡಿಸಿತು. ಆದ್ರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಲೆಜೆಂಡರಿ ಬೌಲರ್ ಆಗಿರುವ ಅಶ್ವಿನ್ ಚುಟುಕು ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ವಿಫಲರಾಗಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ 86 ಪಂದ್ಯಗಳಲ್ಲಿ 442 ವಿಕೆಟ್ ಕಬಳಿಸಿರುವ ಆ್ಯಶ್, 2931 ರನ್ ಕೂಡ ಕಲೆಹಾಕಿದ್ದಾರೆ. ಆದ್ರೆ ಅದೇ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 65 ಪಂದ್ಯಗಳಲ್ಲಿ 6.90 ಎಕಾನಮಿಯಲ್ಲಿ 72 ವಿಕೆಟ್ ಉರುಳಿಸಿದ್ದಾರೆ.

ಆದ್ರೆ ಪ್ರಸ್ತುತ ನಡೆದ ಟಿ20 ವಿಶ್ವಕಪ್‌ನಲ್ಲಿ ಅಶ್ವಿನ್ ಮಿಂಚುವಲ್ಲಿ ವಿಫಲಗೊಂಡರು. ಸೂಪರ್ 12 ಹಾಗೂ ಸೆಮಿಫೈನಲ್‌ ಎಲ್ಲಾ ಪಂದ್ಯಗಳನ್ನ ಆಡಿದ ಕೇರಂ ಸ್ಪಿನ್ನರ್ ಪಡೆದಿದ್ದು 6 ವಿಕೆಟ್. 36 ವರ್ಷದ ಆರ್. ಅಶ್ವಿನ್ ಮುಂದಿನ ಎರಡು ವರ್ಷಗಳ ಬಳಿಕ ನಡೆಯುವ ಟಿ20 ವಿಶ್ವಕಪ್‌ಗೆ ಆಯ್ಕೆಯಾಗುವುದು ಅಸಾಧ್ಯವಾಗಿದೆ.

ಟಿ20 ವಿಶ್ವಕಪ್: ಮಳೆಯಿಂದಾಗಿ ನ.13ರಂದು ಫೈನಲ್ ನಡೆಯಲಿದ್ರೆ, ಸೋಮವಾರ ಎಷ್ಟು ಓವರ್ ಪಂದ್ಯ? ಏನು ಸಮಯ?

ದಿನೇಶ್ ಕಾರ್ತಿಕ್

ದಿನೇಶ್ ಕಾರ್ತಿಕ್

ಐಪಿಎಲ್ 2022ರ ಸೀಸನ್‌ನಲ್ಲಿ ಬೊಂಬಾಟ್ ಪ್ರದರ್ಶನ ನೀಡಿದ್ದರ ಪರಿಣಾಮ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದ ದಿನೇಶ್ ಕಾರ್ತಿಕ್ ಮ್ಯಾಜಿಕ್ ಮಾಡಿ ಬಿಡುತ್ತಾರೆ ಎಂದೇ ಭಾವಿಸಲಾಗಿತ್ತು. ಭಾರತದ ಹೊಸ ಫಿನಿಷರ್ ಎಂದೇ ಹೈಲೈಟ್ ಆಗಿದ್ದ ಕಾರ್ತಿಕ್, ವಿಶ್ವಕಪ್‌ನಲ್ಲಿ ಸಿಕ್ಕ ಅವಕಾಶಗಳನ್ನೆಲ್ಲಾ ಕೈ ಚೆಲ್ಲಿದರು.

ಐಪಿಎಲ್‌ 2022ರಲ್ಲಿ 16 ಪಂದ್ಯಗಳಲ್ಲಿ 183.33 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದ DK 330 ರನ್ ಕಲೆಹಾಕಿದರು. ಆದ್ರೆ ಪ್ರಸ್ತುತ ಟಿ20 ವಿಶ್ವಕಪ್‌ನಲ್ಲಿ ಕಾರ್ತಿಕ್‌ಗೆ ಅವಕಾಶ ಸಿಕ್ಕಿದ್ದು ಕಡಿಮೆಯಾದ್ರೂ ಗಳಿಸಿದ್ದು 14ರನ್. ಅದ್ರಲ್ಲೂ 66.63 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಕಾರ್ತಿಕ್‌ ನೀರಸ ಪ್ರದರ್ಶನ ನೀಡಿದರು.

ಈಗಾಗಲೇ 37 ವರ್ಷದ ದಿನೇಶ್ ಕಾರ್ತಿಕ್‌ರನ್ನು 2024ರಲ್ಲಿ ನಡೆಯುವ ಮುಂದಿನ ಟಿ20 ವಿಶ್ವಕಪ್‌ಗೆ ಮತ್ತೆ ಆಯ್ಕೆ ಮಾಡುವುದು ನಂಬಲಾಗದ ಮಾತಾಗಿದೆ. ಮುಂದಿನ ಟಿ20 ಸರಣಿಗಳಿಗೆ ದಿನೇಶ್ ಕಾರ್ತಿಕ್‌ರನ್ನ ಆಯ್ಕೆ ಸಮಿತಿ ಕೈ ಬಿಟ್ಟಿದೆ.

ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಹೊರಬಿದ್ದ ಭಾರತಕ್ಕೆ ಸಿಗುವ ಬಹುಮಾನದ ಮೊತ್ತವೆಷ್ಟು?

ರೋಹಿತ್ ಶರ್ಮಾ

ರೋಹಿತ್ ಶರ್ಮಾ

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ಎಡವಿದ್ದಾರೆ. ಧೋನಿ ಐಸಿಸಿ ಟ್ರೋಫಿ ಗೆದ್ದ ಬಳಿಕ, ಕೊಹ್ಲಿ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ವಿಫಲಗೊಂಡರು. ಇದೇ ಸಾಲಿಗೆ ಈಗ ರೋಹಿತ್ ಶರ್ಮಾ ಸೇರಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ 138.24ರ ಸ್ಟ್ರೈಕ್‌ರೇಟ್ ಮತ್ತು 3856 ರನ್‌ ದಾಖಲಿಸಿರುವ ರೋಹಿತ್ 4 ಶತಕಗಳ ಒಡೆಯ ಕೂಡ. ಆದ್ರೆ ರೋಹಿತ್ ವಿಂಟೇಜ್ ಆಟವು ಈ ಬಾರಿಯ ವಿಶ್ವಕಪ್‌ನಲ್ಲಿ ಕಾಣಲೇ ಇಲ್ಲ. ಆರು ಪಂದ್ಯಗಳಲ್ಲಿ ಭಾರತದ ಅನುಭವಿ ಬ್ಯಾಟರ್ ಗಳಿಸಿದ್ದು ಕೇವಲ 116ರನ್. ಒಂದು ಅರ್ಧಶತಕ ದಾಖಲಿಸಿದ ರೋಹಿತ್, ಸೆಮಿಫೈನಲ್‌ನಲ್ಲಿ ಕಳಪೆ ಆಟವಾಡಿ ಪೆವಿಲಿಯನ್ ಸೇರಿದರು.

35 ವರ್ಷದ ರೋಹಿತ್ ಶರ್ಮಾ ಇನ್ನೂ ಎರಡು ವರ್ಷಗಳ ಕಾಲ ತನ್ನ ಫಿಟ್ನೆಸ್ ಹಾಗೂ ಫಾರ್ಮ್ ಅನ್ನು ಉಳಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ 2023ರ ಟೆಸ್ಟ್ ಚಾಂಪಿಯನ್ ಶಿಪ್ ಹಾಗೂ 2023ರ ಐಸಿಸಿ ಏಕದಿನ ವಿಶ್ವಕಪ್ ಕಡೆಗೆ ರೋಹಿತ್ ಗಮನವಹಿಸಲಿದ್ದು, ಆಯ್ಕೆಸಮಿತಿಯು ಟಿ20 ಫಾರ್ಮೆಟ್‌ನಲ್ಲಿ ಹೊಸ ಆಟಗಾರನಿಗೆ ಪಟ್ಟ ಕಟ್ಟಬಹುದು. ಜೊತೆಗೆ ರೋಹಿತ್ ಶರ್ಮಾ ಮುಂದಿನ ದಿನಗಳಲ್ಲಿ ಟಿ20 ಫಾರ್ಮೆಟ್ ಆಡುತ್ತಾರ? ಎಂಬುದು ಸಹ ಅನುಮಾನ ಮೂಡಿಸಿದೆ.

Story first published: Saturday, November 12, 2022, 15:23 [IST]
Other articles published on Nov 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X