ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ನರೈನ್ ಸೇರ್ಪಡೆಯಿಲ್ಲ: ಖಚಿತಪಡಿಸಿದ ನಾಯಕ ಪೊಲಾರ್ಡ್

T20 world cup: Kieron Pollard denied Sunil Narine inclusion in West Indies squad

ಈ ಬಾರಿಯ ಐಪಿಎಲ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಸ್ಪಿನ್ನರ್ ಸುನಿಲ್ ನರೈನ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಆರ್‌ಸಿಬಿ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ನಾಳ್ಕು ವಿಕೆಟ್ ಪಡೆಯುವ ಮೂಲಕ ಎದುರಾಳಿಗೆ ಆಘಾತ ನೀಡಿದ್ದರು. ನಂತರ ಬ್ಯಾಟಿಂಗ್‌ನಲ್ಲಿಯೂ ಸ್ಪೋಟಕ ಪ್ರದರ್ಶನ ನೀಡಿದ ನರೈನ್ ಆರ್‌ಸಿಬಿ ಸೋಲಿನಲ್ಲಿ ಮಹತ್ವದ ಪಾತ್ರವಹಿಸಿದರು. ಈ ಮ್ಯಾಚ್ ವಿನ್ನಿಂಗ್ ಪ್ರದರ್ಶನದ ಬಳಿಕ ಈ ಬಾರಿಯ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಸುನಿಲ್ ನರೈನ್ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು.

ಈ ವಿಚಾರವಾಗಿ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸಲಿರುವ ನಾಯಕ ಕಿರಾನ್ ಪೊಲಾರ್ಡ್ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಕಿರಾನ್ ಪೊಲಾರ್ಡ್ ಸುನಿಲ್ ನರೈನ್ ವಿಶ್ವಕಪ್ ಸ್ಕ್ವಾಡ್‌ಗೆ ಸೇರ್ಪಡೆ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ. ಸ್ಟಾರ್ ಆಲ್‌ರೌಂಡರ್ ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದಿಲ್ಲ ಎಂದಿದ್ದಾರೆ.

T20 ವಿಶ್ವಕಪ್‌: ಟೀಮ್ ಇಂಡಿಯಾ ಸೇರಿಕೊಳ್ಳಲಿದ್ದಾರೆ ಆವೇಶ್ ಖಾನ್T20 ವಿಶ್ವಕಪ್‌: ಟೀಮ್ ಇಂಡಿಯಾ ಸೇರಿಕೊಳ್ಳಲಿದ್ದಾರೆ ಆವೇಶ್ ಖಾನ್

"ಈಗ ನಾವು ನಮ್ಮ ತಂಡದಲ್ಲಿ ಆಯ್ಕೆಯಾಗಿರುವ 15 ಸದಸ್ಯರ ಕಡೆಗೆ ಮಾತ್ರ ಗಮನಹರಿಸುತ್ತೇವೆ. ಅವರ ಪ್ರದರ್ಶನ ನಮಗೆ ಮುಖ್ಯವಾಗಿದೆ. ಈ ಆಟಗಾರರೊಂದಿಗೆ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ನಮ್ಮ ಬಳಿಯಿರುವ ಟಿ20 ವಿಶ್ವಕಪ್‌ಅನ್ನು ರಕ್ಷಣೆ ಮಾಡಲು ಪ್ರಯತ್ನ ನಡೆಸಲಿದ್ದೇವೆ" ಎಂದಿದ್ದಾರೆ.

"ಸುನಿಲ್ ನರೈನ್ ಅವರ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನಿಡಲು ಬಯಸುವುದಿಲ್ಲ. ಈಗಾಗಲೇ ಸಾಕಷ್ಟು ಮಾತುಗಳನ್ನು ಈ ಬಗ್ಗೆ ಆಡಿದ್ದೇನೆ. ನನಗನಿಸುತ್ತದೆ ಸುನಿಲ್ ನರೈನ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸದಿರುವ ಬಗ್ಗೆ ಜನರು ಈಗ ಮಾತ್ರವೇ ಮಾತನಾಡುತ್ತಾರೆ. ನನಗೆ ವೈಯಕ್ತಿಕವಾಗಿ ಸುನಿಲ್ ನರೈನ್ ಅಂತಾರಾಷ್ಟ್ರೀಯ ಕ್ರಿಕೆಟರ್‌ಗಿಂತಲೂ ಮೊದಲು ಗೆಳೆಯನಾಗಿ ತುಂಬಾ ಚೆನ್ನಾಗಿ ಬಲ್ಲೆ. ನಾವಿಬ್ಬರೂ ಕ್ರಿಕೆಟ್ ಆಡುತ್ತಾ ಜೊತೆಯಾಗಿ ಬೆಳೆದವರು. ಆತನೋರ್ವ ವಿಶ್ವದರ್ಜೆಯ ಆಟಗಾರ" ಎಂದು ಕಿರಾನ್ ಪೊಲಾರ್ಡ್ ಹೇಳಿಕೆ ನೀಡಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಭಾಗಿಯಾಗಲಿರುವ ಎಲ್ಲಾ ತಂಡಗಳು ಕೂಡ ಈಗಾಗಲೇ ತಮ್ಮ 15 ಆಟಗಾರರ ತಂಡವನ್ನು ಘೋಷಿಸಿದೆ. ಇದರಲ್ಲಿ ಬದಲಾವಣೆ ಮಾಡಲು ಮುಂದಿನ ಶುಕ್ರವಾರದವರೆಗೂ ತಂಡಗಳಿಗೆ ಐಸಿಸಿ ಅವಕಾಶವನ್ನು ನೀಡಿದೆ.

2019ರ ಆಗಸ್ಟ್ ತಿಂಗಳ ನಂತ ಸುನಿಲ್ ನರೈನ್ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರತಿನಿಧಿಸಿಲ್ಲ. ಇದೇ ಕಾರಣದಿಂದಾಗಿ ವೆಸ್ಟ್ ಇಂಡೀಸ್‌ನ ವಿಶ್ವಕಪ್‌ ಸ್ಕ್ವಾಡ್‌ಗೂ ಸುನಿಲ್ ನರೈನ್ ಆಯ್ಕೆಯಾಗಿರಲಿಲ್ಲ. 33ರ ಹರೆಯದ ಸುನಿಲ್ ನರೈನ್ ಈ ಬಾರಿಯ ಐಪಿಎಲ್‌ನ ಯುಎಇ ಚರಣದಲ್ಲಿ ಆಡಿದ 8 ಪಂದ್ಯಗಳಲ್ಲಿ 11 ವಿಕೆಟ್ ಪಡೆದು ಮಿಂಚಿದ್ದಾರೆ.

ಐಪಿಎಲ್, ಕ್ವಾ.-2: ಕೋಲ್ಕತ್ತಾ vs ಡೆಲ್ಲಿ, ಸಂಭಾವ್ಯ ತಂಡ, ಪಿಚ್ ರಿಪೋರ್ಟ್ಐಪಿಎಲ್, ಕ್ವಾ.-2: ಕೋಲ್ಕತ್ತಾ vs ಡೆಲ್ಲಿ, ಸಂಭಾವ್ಯ ತಂಡ, ಪಿಚ್ ರಿಪೋರ್ಟ್

RCB ಗೆ ರಾಹುಲ್ ಬರೋದು ಬಹುತೇಕ ಡೌಟ್!! ಯಾಕೆ ಗೊತ್ತಾ? | Oneindia Kannada

ವೆಸ್ಟ್ ಇಂಡೀಸ್ ತಂಡ: ಕೀರನ್ ಪೊಲಾರ್ಡ್ (ನಾಯಕ), ನಿಕೋಲಸ್ ಪೂರನ್ (ಉಪ ನಾಯಕ), ಫ್ಯಾಬಿಯನ್ ಅಲೆನ್, ಡ್ವೇನ್ ಬ್ರಾವೊ, ರೋಸ್ಟನ್ ಚೇಸ್, ಆಂಡ್ರೆ ಫ್ಲೆಚರ್, ಕ್ರಿಸ್ ಗೇಲ್, ಶಿಮ್ರಾನ್ ಹೆಟ್ಮೇರ್, ಎವಿನ್ ಲೂಯಿಸ್, ಓಬೇಡ್ ಮೆಕಾಯ್, ಲೆಂಡಲ್ ಸಿಮನ್ಸ್, ರವಿ ರಾಂಪಾಲ್, ಆಂಡ್ರೆ ರಸೆಲ್, ಓಶನ್ ಥಾಮಸ್, ಹೇಡನ್ ವಾಲ್ಷ್ ಜೂನಿಯರ್
ಮೀಸಲು ಆಟಗಾರರು: ಡ್ಯಾರೆನ್ ಬ್ರಾವೊ, ಶೆಲ್ಡನ್ ಕಾಟ್ರೆಲ್, ಜೇಸನ್ ಹೋಲ್ಡರ್, ಅಕೆಲ್ ಹೊಸೈನ್
ವೆಸ್ಟ್ ಇಂಡೀಸ್ ತಂಡದ ವೇಳಾಪಟ್ಟಿ: 24 ಅಕ್ಟೋಬರ್‌ vs ಇಂಗ್ಲೆಂಡ್, 26 ಅಕ್ಟೋಬರ್‌ vs ದಕ್ಷಿಣ ಆಫ್ರಿಕಾ, 29 ಅಕ್ಟೋಬರ್‌ vs ಬಿ2, 5 ನವೆಂಬರ್ vs ಎ1, 6 ನವೆಂಬರ್‌ vs ಆಸ್ಟ್ರೇಲಿಯಾ

Story first published: Thursday, October 14, 2021, 10:00 [IST]
Other articles published on Oct 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X