ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ತಾಲಿಬಾನ್‌ ಕ್ರಿಕೆಟ್‌ನ ಪ್ರೀತಿಸುತ್ತೆ, ಬೆಂಬಲಿಸುತ್ತೆ, ಅವರಿಂದ ಆಟಕ್ಕೆ ತೊಂದರೆಯಿಲ್ಲ'

Taliban love and support cricket, I dont see game suffering under their rule, says ACB CEO

ಕಾಬುಲ್: ತಾಲಿಬಾನ್ ಸಮಸ್ಯೆಯಿಂದ ಅಫ್ಘಾನಿಸ್ತಾನ ದೇಶ ತೊಂದರೆಯಲ್ಲಿದ್ದರೂ ತಾಲಿಬಾನ್‌ ನಿಯಮಗಳಿಂದ ಕ್ರಿಕೆಟ್‌ಗೆ ಏನೂ ತೊಂದರೆಯಿಲ್ಲ. ಯಾಕೆಂದರೆ ಅವರಿಗೆ ಕ್ರಿಕೆಟ್ ಬಗ್ಗೆ ಪ್ರೀತಿಯಿದೆ. ಕ್ರಿಕೆಟ್‌ಗೆ ಅವರ ಬೆಂಬಲವೂ ಇದೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್‌ ನ (ಎಸಿಬಿ) ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಮಿದ್ ಶಿನ್ವಾರಿ ಹೇಳಿದ್ದಾರೆ. ತಾಲಿಬಾನ್‌ಗಳಿಂದ ದೇಶಿ ಕ್ರಿಕೆಟ್ ಅಥವಾ ಕ್ರಿಕೆಟಿಗರು ಹೆದರಬೇಕಾಗಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ.

ಕಾಬುಲ್‌ನಿಂದ ಪಿಟಿಐ ಜೊತೆಗೆ ಮಾತನಾಡಿದ ಹಮಿದ್ ಶಿನ್ವಾರಿ, ತಾಲಿಬಾನ್‌ಗಳಿಂದ ಅಫ್ಘಾನಿಸ್ತಾನದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದರೂ ರಾಷ್ಟ್ರೀಯ ಕ್ರಿಕೆಟ್ ತಂಡದ ಆಟಗಾರರಿಗೆ ಮತ್ತು ಅವರ ಕುಟುಂಬಸ್ಥರಿಗೆ ತೊಂದರೆಯೇನಿಲ್ಲ. ಅವರೆಲ್ಲ ಸುರಕ್ಷಿತವಾಗಿದ್ದಾರೆ ಎಂದಿದ್ದಾರೆ.

ಅಫ್ಘಾನಿಸ್ತಾನದ ಸ್ಟಾರ್ ಆಟಗಾರರಾದ ರಶೀದ್ ಖಾನ್, ಮೊಹಮ್ಮದ್ ನಬಿ ಮತ್ತು ಮುಜೀಬ್ ಝದ್ರನ್ ಸದ್ಯ ಯುನೈಟೆಡ್ ಕಿಂಗ್ಡಮ್‌ನಲ್ಲಿ ದ ಹಂಡ್ರೆಡ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದಕ್ಕೂ ಮುನ್ನ ಆಲ್ ರೌಂಡರ್ ರಶೀದ್, ದೇಶದಲ್ಲಿನ ಭಯೋತ್ಪಾದನೆ ಬಗ್ಗೆ ಭೀತಿ ತೋರಿಕೊಂಡಿದ್ದರು. ದೇಶದಿಂದ ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ತೋರಿಕೊಂಡಿದ್ದರು.

Virat Kohli ಹೀಗೆ DRS ತೆಗೆದುಕೊಂಡಿದ್ದು ಬಹಳ ಒಳ್ಳೆಯದಾಯಿತು | Oneindia Kannada

ಆದರೆ ತಾಲಿಬಾನ್‌ಗಳು ಕ್ರಿಕೆಟ್‌ಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳಿಗೆ ಅಡ್ಡಿಪಡಿಸಲಾರರು ಎಂದು ಹಮಿದ್ ಶಿನ್ವಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 'ತಾಲಿಬಾನ್‌ಗಳೂ ಕೂಡ ಕ್ರಿಕೆಟ್ ಪ್ರೀತಿಸುತ್ತಾರೆ. ಆರಂಭದಿಂದಲೂ ಅವರು ಕ್ರಿಕೆಟ್‌ಗೆ ಬೆಂಬಲಿಸುತ್ತಿದ್ದಾರೆ. ಅವರು ಯಾವತ್ತಿಗೂ ಕ್ರಿಕೆಟ್ ಸಂಬಂಧಿ ಚಟುವಟಿಕೆಗಳಲ್ಲಿ ಮಧ್ಯಪ್ರವೇಶಿಸುವುದಿಲ್ಲ," ಎಂದು ಶಿನ್ವಾರಿ ಹೇಳಿದ್ದಾರೆ.

Story first published: Monday, August 16, 2021, 23:33 [IST]
Other articles published on Aug 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X