ಐಪಿಎಲ್‌ನಲ್ಲಿ ಆಡಲು ಸಜ್ಜಾಗಿದ್ದಾರೆ ಐಸಿಸಿ ಟಿ20ಐ ಟಾಪ್ 4 ಶ್ರೇಯಾಂಕಿತ ಬೌಲರ್ಸ್!

ಅಬುಧಾಬಿ: ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟಿ20ಐಯಲ್ಲಿ ಅಗ್ರ ನಾಲ್ಕು ಶ್ರೇಯಾಂಕಿತ ಆಟಗಾರರು ಭಾಗವಹಿಸಲು ತಯಾರಾಗಿದ್ದಾರೆ. ಸೆಪ್ಟೆಂಬರ್‌ 19ರಿಂದ ಅಕ್ಟೋಬರ್ 15ರ ವರೆಗೆ ಐಪಿಎಲ್ 14ನೇ ಆವೃತ್ತಿಯ ದ್ವಿತೀಯ ಹಂತದ ಪಂದ್ಯಗಳು ನಡೆಯಲಿವೆ. ಈ ವೇಳೆ ಐಪಿಎಲ್‌ ಬೇರೆ ಬೇರೆ ತಂಡಗಳಲ್ಲಿ ಈ ಅಗ್ರಸ್ಥಾನಿ ಶ್ರೇಯಾಂಕಿತ ಬೌಲರ್‌ಗಳು ಬಲ ತುಂಬಲಿದ್ದಾರೆ.

ನೀರಜ್ ಚೋಪ್ರಾ ಜಾವೆಲಿನ್ ವಿರೂಪಗೊಳಿಸಿದ್ದರಾ ಪಾಕ್‌ನ ಅರ್ಷದ್ ನದೀಮ್!?: ವಿಡಿಯೋನೀರಜ್ ಚೋಪ್ರಾ ಜಾವೆಲಿನ್ ವಿರೂಪಗೊಳಿಸಿದ್ದರಾ ಪಾಕ್‌ನ ಅರ್ಷದ್ ನದೀಮ್!?: ವಿಡಿಯೋ

ಕೋವಿಡ್-19 ಕಾರಣದಿಂದಾಗಿ ಭಾರತದಲ್ಲಿ ನಡೆಯುತ್ತಿದ್ದ ಐಪಿಎಲ್ 2021ರ ಆವೃತ್ತಿ ಅರ್ಧಕ್ಕೆ ನಿಲ್ಲಿಸಲ್ಪಟ್ಟಿತ್ತು. ಈ ಟೂರ್ನಿ ಯುನೈಟೆಡ್ ಅರಬ್ ನಲ್ಲಿ ಪುನರಾರಂಭವಾಗಲಿದೆ. ಯುಎಇಯಲ್ಲಿ ಒಟ್ಟು 31 ಪಂದ್ಯಗಳು ನಡೆಯಲಿವೆ. ರಾಜಸ್ಥಾನ್ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳಲ್ಲಿ ಟಿ20ಐ ಟಾಪ್ ಬೌಲರ್‌ಗಳು ಮಿಂಚಲಿದ್ದಾರೆ.

1 ತಬ್ರೈಝ್ ಶಂಸಿ

1 ತಬ್ರೈಝ್ ಶಂಸಿ

ದಕ್ಷಿಣ ಆಫ್ರಿಕಾದ ಆರ್ಥೊಡಾಕ್ಸ್ ಸ್ಪಿನ್ನರ್ ತಬ್ರೈಝ್ ಶಂಸಿ ಸದ್ಯ ಐಸಿಸಿ ಟಿ20ಐ ರ್‍ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 792 ರೇಟಿಂಗ್ ಪಾಯಿಂಟ್ಸ್‌ನೊಂದಿಗೆ ಶಂಸಿ ನಂ.1 ಸ್ಥಾನ ಅಲಂಕರಿಸಿದ್ದಾರೆ. ಈ ಐಸಿಸಿ ನಂ.1 ಬೌಲರ್ ಐಪಿಎಲ್‌ ಆರಂಭಿಕ ಆವೃತ್ತಿಯ ಚಾಂಪಿಯನ್ಸ್ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡ ಸದ್ಯ ಐಪಿಎಲ್ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಆಡಿರುವ ಏಳು ಪಂದ್ಯಗಳಲ್ಲಿ ಆರ್ಆರ್ 3ರಲ್ಲಿ ಗೆದ್ದಿದೆ.

2. ವನಿಂದು ಹಸರಂಗ

2. ವನಿಂದು ಹಸರಂಗ

ಶ್ರೀಲಂಕಾದ ಪ್ರತಿಭಾನ್ವಿತ ಸ್ಪಿನ್ನರ್ ವನಿಂದು ಹಸರಂಗ ಐಸಿಸಿ ಟಿ20ಐ ರ್‍ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಹಸರಂಗ ಖಾತೆಯಲ್ಲಿ 764 ಪಾಯಿಂಟ್ಸ್ ಇವೆ. ಹಸರಂಗ ಈ ಬಾರಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುತ್ತಿದ್ದಾರೆ. ಐಪಿಎಲ್ ಅಂಕಪಟ್ಟಿಯಲ್ಲಿ ಆರ್‌ಸಿಬಿ ಮೂರನೇ ಸ್ಥಾನದಲ್ಲಿದೆ. ಏಳರಲ್ಲಿ ಆರ್‌ಸಿಬಿ 4 ಪಂದ್ಯಗಳನ್ನು ಗೆದ್ದಿದೆ.

3. ರಶೀದ್ ಖಾನ್

3. ರಶೀದ್ ಖಾನ್

ಈಗ ತಾಲಿಬಾನ್ ಹಾವಳಿಯಿಂದ ಸಮಸ್ಯೆಗೆ ಒಳಗಾಗಿರುವ ಅಫ್ಘಾನಿಸ್ತಾನ ತಂಡದ ಪ್ರಮುಖ ಸ್ಪಿನ್ನರ್ ರಶೀದ್ ಖಾನ್ ಮಾಜಿ ಚಾಂಪಿಯನ್ಸ್ ಸನ್ ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಆಟಗಾರ. ಐಸಿಸಿ ಟಿ20ಐ ರ್‍ಯಾಂಕಿಂಗ್‌ನಲ್ಲಿ ರಶಿದ್ ಮೂರನೇ ಸ್ಥಾನದಲ್ಲಿದೆ. ಈ ಐಪಿಎಲ್ ಆವೃತ್ತಿಯಲ್ಲಿ ಎಸ್‌ಆರ್‌ಎಚ್ ಉತ್ತಮ ಪ್ರದರ್ಶನ ನೀಡಿಲ್ಲ. ಸದ್ಯ ಹೈದರಾಬಾದ್ ಅಂಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ. ಆಡಿರುವ 7 ಪಂದ್ಯಗಳಲ್ಲಿ ಕೇವಲ 1 ಪಂದ್ಯ ಗೆದ್ದಿದೆ.

4. ಆದಿಲ್ ರಶೀದ್

4. ಆದಿಲ್ ರಶೀದ್

ಇಂಗ್ಲೆಂಡ್‌ನ ಮಾರಕ ಸ್ಪಿನ್ನರ್ ಆದಿಲ್ ರಶೀದ್ ಐಸಿಸಿ ಟಿ20ಐ ರ್‍ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ರಶೀದ್ ಅವರು ಕನ್ನಡಿಗ ಕೆಎಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡದಲ್ಲಿ ಆಡುತ್ತಿದ್ದಾರೆ. ಪಂಜಾಬ್ ತಂಡ ಐಪಿಎಲ್ ಅಂಕಪಟ್ಟಿಯಲ್ಲಿ ಸದ್ಯ 6ನೇ ಸ್ಥಾನದಲ್ಲಿದೆ. ಆಡಿರುವ 8 ಪಂದ್ಯಗಳಲ್ಲಿ ಪಂಜಾಬ್ 3 ಪಂದ್ಯಗಳನ್ನು ಗೆದ್ದಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, August 26, 2021, 19:24 [IST]
Other articles published on Aug 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X