ಕಳೆದ ಬಾರಿ ನಾಯಕ, ಈ ಬಾರಿ ಎದುರಾಳಿ: ಟ್ವಿಟ್ಟಿಗರ ಪ್ರತಿಕ್ರಿಯೆಗಳು

Posted By:

ಬೆಂಗಳೂರು, ಏಪ್ರಿಲ್ 17: ಕಳೆದ ಐಪಿಎಲ್ ಆವೃತ್ತಿಯಲ್ಲಿ ಕೋಲ್ಕತ್ತದ ಈಡನ್ ಗಾರ್ಡನ್ಸ್ ಕ್ರೀಡಾಂಗಣ ಗೌತಮ್ ಗಂಭೀರ್ ಪಾಲಿಗೆ ತವರು ಮನೆಯಂತಾಗಿತ್ತು. ಈ ಬಾರಿ ಅವರಿಗೆ ಈಡನ್ ಗಾರ್ಡನ್ಸ್ ವಿಭಿನ್ನ ಅನುಭವ ನೀಡಿತು.

ಆಗ ಕೆಕೆಆರ್ ಗೆದ್ದಾಗ ಸಂಭ್ರಮಿಸುತ್ತಿದ್ದ ಗಂಭೀರ್, ಈಗ ಆ ಸ್ಥಿತಿಯಲ್ಲಿಲ್ಲ. ಏಕೆಂದರೆ ಅವರ ಸ್ಥಾನ ಬದಲಾಗಿದೆ. ಬ್ಯಾಟಿಂಗ್‌ನಲ್ಲಿಯೂ ಗಂಭೀರ್ ಉತ್ತಮ ಪ್ರದರ್ಶನ ನೀಡದಿರುವುದು ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದೆ.

ಗೆಲ್ಲುವ ಪ್ರಯತ್ನವನ್ನೇ ಮಾಡಲಿಲ್ಲ ಗಂಭೀರ್ ಪಡೆ

ಒಮ್ಮೆಲೆ ಆಗಸಕ್ಕೆ ಚಿಮ್ಮುವ, ಇದ್ದಕ್ಕಿದ್ದಂತೆ ಪಾತಾಳಕ್ಕೆ ಕುಸಿಯುವ ಆಟದ ವೈವಿಧ್ಯಕ್ಕೆ ಕೆಕೆಆರ್ ಮತ್ತು ಡೆಲ್ಲಿ ಡೇರ್ ಡೆವಿಲ್ಸ್ ನಡುವಣ ಪಂದ್ಯ ಸಾಕ್ಷಿಯಾಯಿತು.

ಡೆಲ್ಲಿ ತಂಡ ಹೋರಾಟದ ಛಾತಿ ಪ್ರದರ್ಶಿಸದೆಯೇ ಇದ್ದರೂ, ಅಭಿಮಾನಿಗಳ ಪಾಲಿಗೆ ಕೆಲ ಕಾಲ ಮನರಂಜನೆಗಂತೂ ಮೋಸವಾಗಲಿಲ್ಲ. ನಿನ್ನೆಯ (ಏಪ್ರಿಲ್ 17) ಪಂದ್ಯದ ಕೆಲವು ವಿಶೇಷತೆಗಳು ಮತ್ತು ಟ್ವಿಟ್ಟಿಗರ ಅಭಿಪ್ರಾಯಗಳು ಇಲ್ಲಿವೆ

ಮಿಸ್‌ ಯೂ ಗಂಭೀರ್ ಎಂದ ಅಭಿಮಾನಿಗಳು

ಗಂಭೀರ್ ಈಗ ಕೆಕೆಆರ್ ತಂಡದಲ್ಲಿ ಇಲ್ಲದಿದ್ದರೂ ಕೆಕೆಆರ್ ಅಭಿಮಾನಿಗಳು ಅವರನ್ನು ಈಗಲೂ ಇಷ್ಟಪಡುತ್ತಾರೆ ಎಂಬುದಕ್ಕೆ ಕ್ರೀಡಾಂಗಣದಲ್ಲಿ ಪೋಸ್ಟರ್‌ಗಳನ್ನು ಹಿಡಿದು ನಿಂತಿದ್ದ ಅಭಿಮಾನಿಗಳೇ ಉದಾಹರಣೆ.

ಗಂಭೀರ್‌ ಬೌಲ್ಡ್‌ ಮಾಡಿದ ಮವಿ

ಅಂಡರ್ 19 ತಂಡದಲ್ಲಿ ಭಾರತ ತಂಡ ವಿಶ್ವಕಪ್‌ ಗೆಲ್ಲುವಲ್ಲಿ ವೇಗದ ಬೌಲರ್‌ ಶಿವಂ ಮವಿ ಪಾತ್ರ ಕೂಡ ಮುಖ್ಯವಾಗಿತ್ತು. ಕೆಕೆಆರ್ ಪರ ಮೊದಲ ಬಾರಿಗೆ ಐಪಿಎಲ್‌ ಆಡುತ್ತಿರುವ ಶಿವಂ ಮವಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ನಾಯಕ ಗೌತಮ್ ಗಂಭೀರ್ ಅವರನ್ನು ಬೌಲ್ಡ್ ಮಾಡುವ ಮೂಲಕ ತಮ್ಮ ಮೊದಲ ವಿಕೆಟ್‌ ಅನ್ನು ಸ್ಮರಣೀಯವನ್ನಾಗಿಸಿಕೊಂಡಿದ್ದಾರೆ.

ಮೊದಲ ಅಂತರರಾಷ್ಟ್ರೀಯ ಸ್ಪಿನ್ನರ್

ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಬೌಲರ್, ವೆಸ್ಟ್ ಇಂಡೀಸ್‌ನ ಸುನೀಲ್ ನರೇನ್ ಐಪಿಎಲ್‌ನಲ್ಲಿ ನೂರು ವಿಕೆಟ್ ಸಾಧನೆ ಮಾಡಿದರು. 18 ರನ್‌ಗೆ 3 ವಿಕೆಟ್ ಪಡೆದ ನರೇನ್, 100 ವಿಕೆಟ್ ಗಡಿ ದಾಟಿದ ಪ್ರಥಮ ವಿದೇಶಿ ಸ್ಪಿನ್ನರ್ ಎಂದೆನಿಸಿಕೊಂಡರು.

ಗಂಭೀರ್ ಅಭಿಮಾನಿಗಳೆಲ್ಲಿ?

ಗಂಭೀರ್ ಅವರನ್ನು ಟಾರ್ಗೆಟ್ ಮಾಡಿರುವ ಟ್ವಿಟ್ಟಿಗರು, ಡೆಲ್ಲಿ ತಂಡದ ಸೋಲಿಗೆ ಅವರನ್ನೇ ಪ್ರಮುಖ ಹೊಣೆಗಾರರನ್ನಾಗಿಸಿದ್ದಾರೆ. ಗಂಭೀರ್ ಅಭಿಮಾನಿಗಳನ್ನು ಕೆಣಕುವ ಪ್ರಯತ್ನ ಕೂಡ ಮಾಡಿದ್ದಾರೆ.

ರಸೆಲ್ ಆಟಕ್ಕೆ ಮೆಚ್ಚುಗೆ

ವೆಸ್ಟ್ ಇಂಡೀಸ್‌ನ ಆಂಡ್ರೂ ರಸೆಲ್ ಬಿರುಸಿನ ಬ್ಯಾಟಿಂಗ್‌ಗೆ ಹೆಸರಾದವರು. ಬೌಲಿಂಗ್‌ನಲ್ಲಿ ಸಹ ಎದುರಾಳಿಗಳನ್ನು ಕಟ್ಟಿಹಾಕಬಲ್ಲರು. ಇನ್ನು ಫೀಲ್ಡಿಂಗ್‌ ಕೂಡ ಅಷ್ಟೇ ಅದ್ಭುತ. ಹಕ್ಕಿಯಂತೆ ಹಾರಿ ಕ್ಯಾಚ್ ಹಿಡಿಯಬಲ್ಲರು. ಟ್ವಿಟರ್‌ನಲ್ಲಿ ಅವರ ಆಟಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಬಟ್ಟೆಗಳಿವೆ, ದರ್ಜಿಯೂ ಇದ್ದಾರೆ!

ಐಪಿಎಲ್ ಆಡುತ್ತಿರುವ ಆಟಗಾರರ ಹೆಸರಿನಲ್ಲೇ ವಿವಿಧ ಉಡುಪುಗಳ ಹೆಸರಿದೆ. ಪ್ಯಾಂಟ್, ಲುಂಗಿ, ಶಾರ್ಟ್, ಟೈ ಹೆಸರಿನ ಆಟಗಾರರಿದ್ದಾರೆ. ಜತೆಗೆ ದರ್ಜಿ (ಟೈಲರ್) ಕೂಡ ಇದ್ದಾರೆ!

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, April 17, 2018, 11:19 [IST]
Other articles published on Apr 17, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ