ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊಹಮ್ಮದ್ ಶಮಿಗೆ ವೀಸಾ ನಿರಾಕರಿಸಿದ ಯುಎಸ್, ನೆರವಿಗೆ ಬಂದ ಬಿಸಿಸಿಐ

ಮೊಹಮ್ಮದ್ ಶಮಿ ನೆರವಿಗೆ ನಿಂತ BCCI..? | Mohammed Shami | Oneindia Kannada
US rejects India pacer Mohammed Shami’s visa on domestic violence charge

ನವದೆಹಲಿ, ಜುಲೈ 27: ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ ಅವರ ಯುಎಸ್ ವೀಸಾ ನಿರಾಕರಿಸಲ್ಪಟ್ಟ ಘಟನೆ ನಡೆದಿದೆ. ಶಮಿ ಮೇಲೆ ಕೌಟುಂಬಿಕ ಹಿಂಸೆ ಮತ್ತು ಲೈಂಗಿಕ ದೌರ್ಜನ್ಯದ ದೂರು ಪೊಲೀಸ್ ದಾಖಲೆಯಲ್ಲಿ ಇರುವುದರಿಂದ ವೀಸಾ ನಿರಾಕರಿಸಲ್ಪಟ್ಟಿತ್ತು ಎನ್ನಲಾಗಿದೆ. ಆದರೆ ಬಿಸಿಸಿಐ, ಶಮಿ ನೆರವಿಗೆ ನಿಂತಿದೆ.

ಆಗಸ್ಟ್‌ 16ರಿಂದ ಕರ್ನಾಟಕ ಪ್ರೀಮಿಯರ್‌ ಲೀಗ್‌, ಫೈನಲ್‌ ಎಲ್ಲಿ ಗೊತ್ತಾ?ಆಗಸ್ಟ್‌ 16ರಿಂದ ಕರ್ನಾಟಕ ಪ್ರೀಮಿಯರ್‌ ಲೀಗ್‌, ಫೈನಲ್‌ ಎಲ್ಲಿ ಗೊತ್ತಾ?

ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಅವರು ಯುಎಸ್ ರಾಯಭಾರಿ ಕಚೇರಿಗೆ ಪತ್ರ ಬರೆದು, ಕ್ರೀಡಾತಾರೆ ದೇಶಕ್ಕೆ ನೀಡಿದ ಸಾಧನೆಗಳನ್ನು ಪರಿಗಣಿಸಿ, ಪತ್ನಿ ಹಸೀನ್ ಜಾಹನ್ ನೀಡಿರುವ ವೈವಾಹಿಕ ಕಲಹಕ್ಕೆ ಸಂಬಂಧಿಸಿದ ಕೇಸನ್ನು ಬದಿಗಿರಿಸುವಂತೆ ಕೋರಿಕೊಂಡ ಬಳಿಕ ಬೆಂಗಾಲ್ ವೇಗದ ಬೌಲರ್ ಶಮಿಗೆ ಕ್ಲೀಯರೆನ್ಸ್ ದೊರೆತಿದೆ.

ಆರ್ಮಿ ಸೇವೆಯಲ್ಲಿರುವ ಧೋನಿಗೆ ರಕ್ಷಣೆ: ಪ್ರತಿಕ್ರಿಯಿಸಿದ ಸೇನಾ ಮುಖ್ಯಸ್ಥ!ಆರ್ಮಿ ಸೇವೆಯಲ್ಲಿರುವ ಧೋನಿಗೆ ರಕ್ಷಣೆ: ಪ್ರತಿಕ್ರಿಯಿಸಿದ ಸೇನಾ ಮುಖ್ಯಸ್ಥ!

'ಹೌದು ಆರಂಭದಲ್ಲಿ ಯುಎಸ್ ಎಂಬೆಸಿ, ಶಮಿಯ ವೀಸಾ ಅರ್ಜಿಯನ್ನು ನಿರಾಕರಿಸಿತ್ತು,' ಎಂದು ಬಿಸಿಸಿಐ ಮೂಲ ತಿಳಿಸಿದೆ. ಬಿಸಿಸಿಐ ವಿನಂತಿ ಬಳಿಕ ಶಮಿಗೆ ಪಿ1 (ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ವಿದೇಶಿ ಕ್ರೀಡಾಪಟುಗಳ ಸದಸ್ಯರಿಗೆ ನೀಡುವ ವೀಸಾ) ವರ್ಗದಡಿ ವೀಸಾ ಲಭಿಸಿದೆ ಎಂದು ತಿಳಿದು ಬಂದಿದೆ.

ಕೊಹ್ಲಿ-ರೋಹಿತ್ ನಡುವೆ ಏನೋ ಸರಿಯಿಲ್ಲ ಎನ್ನುತ್ತಿವೆ ಈ ನಿದರ್ಶನಗಳು!ಕೊಹ್ಲಿ-ರೋಹಿತ್ ನಡುವೆ ಏನೋ ಸರಿಯಿಲ್ಲ ಎನ್ನುತ್ತಿವೆ ಈ ನಿದರ್ಶನಗಳು!

2018ರ ಆರಂಭದಲ್ಲಿ ಶಮಿ ಪತ್ನಿ ಜಾಹನ್, ಶಮಿ ಮೇಲೆ ಕೌಟುಂಬಿಕ ಕಲಹದ ಆರೋಪ ಹೊರಿಸಿದ್ದರು. ಆ ಬಳಿಕ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಸದ್ಯ ಇಬ್ಬರೂ ದೂರವಿದ್ದಾರೆ. ಇಬ್ಬರ ಮಧ್ಯೆ ದಾಂಪತ್ಯ ಜೀವನದ ಕಲಹ ಶುರುವಾದಾಗಲೇ ಜಾಹನ್, ಶಮಿ ಮೇಲೆ ಕೋಲ್ಕತ್ತಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೇ ದೂರು ಶಮಿ ವೀಸಾ ಅರ್ಜಿಗೆ ಸಮಸ್ಯೆ ತಂದಿತ್ತು.

Story first published: Saturday, July 27, 2019, 12:07 [IST]
Other articles published on Jul 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X