ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಜಯ್ ಹಜಾರೆ ಟ್ರೋಫಿ 2022: ಡೆಲ್ಲಿ ವಿರುದ್ಧ ಕರ್ನಾಟಕ ತಂಡಕ್ಕೆ 4 ವಿಕೆಟ್‌ಗಳ ಗೆಲುವು

Manish pandey

ಕೋಲ್ಕತ್ತಾದ ಜಾಧವ್‌ಪುರ ಯೂನಿವರ್ಸಿಟಿ ಗ್ರೌಂಡ್ 2ನಲ್ಲಿ ನಡೆದ ವಿಜಯ್ ಹಜಾರೆ ಗ್ರೂಪ್ B ಫೈಟ್‌ನಲ್ಲಿ ಡೆಲ್ಲಿ ವಿರುದ್ಧ ಕರ್ನಾಟಕ ತಂಡವು 4 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ.

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಂತಹ ಕರ್ನಾಟಕ ದಾಳಿಗೆ ತತ್ತರಿಸಿದ ದೆಹಲಿ ತಂಡವು ಕೇವಲ 159ರನ್‌ಗಳಿಗೆ ಕುಸಿತಗೊಂಡಿತು. ಈ ಗುರಿ ಬೆನ್ನತ್ತಿದ ಕರ್ನಾಟಕ 30 ಓವರ್‌ಗಳೊಳಗೆ ಆರು ವಿಕೆಟ್ ನಷ್ಟಕ್ಕೆ ಗೆಲುವಿನ ಗೆರೆ ದಾಟಿತು. ಈ ಮೂಲಕ ಕರ್ನಾಟಕ ಸೋಲಿಲ್ಲದ ಸರದಾರನಾಗಿ ಮುಂದುವರಿದಿದೆ. ಮಯಾಂಕ್‌ ಅಗರ್ವಾಲ್ ಅನುಪಸ್ಥಿತಿಯಲ್ಲಿ ಆರ್‌. ಸಮರ್ಥ್‌ ತಂಡವನ್ನ ಮುನ್ನಡೆಸುತ್ತಿದ್ದು, ವೈಯಕ್ತಿಕವಾಗಿಯು ಉತ್ತಮ ಪ್ರದರ್ಶನ ನೀಡಿದ್ದಾರೆ.

ಕರ್ನಾಟಕ ತಂಡಕ್ಕೆ ಆಧಾರವಾದ ಸಮರ್ಥ್ ಮತ್ತು ಮನೀಷ್ ಪಾಂಡೆ

ಕರ್ನಾಟಕ ತಂಡಕ್ಕೆ ಆಧಾರವಾದ ಸಮರ್ಥ್ ಮತ್ತು ಮನೀಷ್ ಪಾಂಡೆ

160 ರನ್‌ಗಳ ಗುರಿ ಬೆನ್ನತ್ತಿದ ಕರ್ನಾಟಕ ತಂಡವು ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಶರತ್ ಬಿ.ಆರ್ 12 ರನ್‌ಗಳಿಸಿ ಔಟಾದ್ರೆ, ನಿಕಿನ್ ಜೋಸ್‌ ಮೊದಲ ಎಸೆತದಲ್ಲೇ ಗೋಲ್ಡನ್ ಡಕೌಟ್ ಆಗುವ ಮೂಲಕ ವಿಕೆಟ್ ಒಪ್ಪಿಸಿದರು.

ಆದ್ರೆ ಈ ವೇಳೆಯಲ್ಲಿ ತಂಡಕ್ಕೆ ಆಧಾರವಾಗಿದ್ದು ನಾಯಕ ಆರ್ ಸಮರ್ಥ್ ಮತ್ತು ಮನೀಷ್ ಪಾಂಡೆ. ತಂಡದ ಪರ ಜವಾಬ್ದಾರಿಯುತ ಆಟವಾಡಿದ ರವಿಕುಮಾರ್ ಸಮರ್ಥ್‌ 73 ಎಸೆತಗಳಲ್ಲಿ 59 ರನ್ ಕಲೆಹಾಕಿದರು. ಅದೇ ವೇಳೆಯಲ್ಲಿ ಮನೀಶ್ ಪಾಂಡೆ 37 ಎಸೆತಗಳಲ್ಲಿ 48 ರನ್‌ ಸಿಡಿಸಿ ಕೇವಲ ಎರಡು ರನ್‌ಗಳ ಅಂತರದಲ್ಲಿ ಅರ್ಧಶತಕ ಮಿಸ್ ಮಾಡಿಕೊಂಡರು.

ಆದ್ರೆ ಬೌಲಿಂಗ್‌ನಲ್ಲಿ ಮೂರು ವಿಕೆಟ್ ಪಡೆದು ಮಿಂಚಿದ್ದ ಶ್ರೇಯಸ್ ಗೋಪಾಲ್ 26 ರನ್ ಕಲೆಹಾಕುವ ಮೂಲಕ ಬ್ಯಾಟಿಂಗ್‌ನಲ್ಲೂ ನೆರವಾಗಿ ತಂಡದ ಗೆಲುವಿಗೆ ಕಾರಣವಾದ್ರು. ಕರ್ನಾಟಕ 29.4 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.

IND vs NZ: ವಿರಾಟ್ ಕೊಹ್ಲಿಯ ಈ ಟಿ20 ದಾಖಲೆ ಮುರಿಯಲು ಸೂರ್ಯಕುಮಾರ್‌ಗಿದೆ ಅದ್ಭುತ ಅವಕಾಶ

ಕರ್ನಾಟಕ ದಾಳಿಗೆ ತತ್ತರಿಸಿದ ದೆಹಲಿ

ಕರ್ನಾಟಕ ದಾಳಿಗೆ ತತ್ತರಿಸಿದ ದೆಹಲಿ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದೆಹಲಿ ಮೊದಲ 15 ಓವರ್‌ಗಳಲ್ಲಿ ಪ್ರಮುಖ ನಾಲ್ಕು ವಿಕೆಟ್‌ಗಳನ್ನ ಕಳೆದುಕೊಳ್ಳುವ ಮೂಲಕ ಕುಸಿತಕ್ಕೆ ಒಳಗಾಯಿತು. ಕ ಡೆಲ್ಲಿ ಪರ ಹಿಮ್ಮತ್ ಸಿಂಗ್ 1, ಧೃವ್ ಶೋರೆ 9, ಯಶ್ ಧುಲ್ 1, ಶಿವಾಂಕ್ ವೈಶಿಷ್ಟ್‌ 12ರನ್‌ಗಳಿಸಿ ರನೌಟ್ ಆದರು. ನಾಯಕ ನಿತಿಶ್ ರಾಣಾ ಆಟ 30ರನ್‌ಗೆ ಕೊನೆಗೊಂಡಿತು.

ಒಂದೆಡೆ ವಿಕೆಟ್ ಉರುಳುತ್ತಿದ್ರೆ, ತಾಳ್ಮೆಯುತ ಆಟವಾಡಿದ ಲಲಿತ್ ಯಾದವ್ 100 ಎಸೆತಗಳಲ್ಲಿ 59 ರನ್ ಕಲೆಹಾಕುವ ಮೂಲಕ ದೆಹಲಿಗೆ ಆಧಾರವಾದ್ರು. ಆದ್ರೆ ದೆಹಲಿ ಸವಾಲಿನ ಮೊತ್ತ ಕಲೆಹಾಕುವಲ್ಲಿ ವಿಫಲಗೊಂಡಿತು. 45.4 ಓವರ್‌ಗಳಲ್ಲಿ 159ರನ್‌ಗಳಿಗೆ ಕುಸಿತಗೊಂಡಿತು.

ಕರ್ನಾಟಕದ ಪರ ಅದ್ಭುತ ಬೌಲಿಂಗ್ ಮಾಡಿರುವ ವಾಸುಕಿ ಕೌಶಿಕ್ 3 ವಿಕೆಟ್ ಪಡೆದಿದ್ದು, ಶ್ರೇಯಸ್ ಗೋಪಾಲ್ ಕೇವಲ 5.4 ಓವರ್‌ಗಳಲ್ಲಿ ಮೂರು ವಿಕೆಟ್ ಎಗರಿಸಿದ್ರು. ವಿಧ್ವತ್ ಕಾವೇರಪ್ಪ, ಮನೋಜ್ ಬಂಡಾಜೆ, ಕೆ.ಗೌತಮ್ ತಲಾ 1 ವಿಕೆಟ್ ತಮ್ಮದಾಗಿಸಿಕೊಂಡರು.

ಫುಟ್ಬಾಲ್‌ನಿಂದ ಫಿಫಾ ಹೇಗೆ ಹಣ ಗಳಿಸುತ್ತದೆ? ವರ್ಷಕ್ಕೆ ಎಷ್ಟು ಆದಾಯ? ವಿಶ್ವಕಪ್‌ನಿಂದ ಎಷ್ಟು ಲಾಭ?

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ಕರ್ನಾಟಕ:
ರವಿಕುಮಾರ್ ಸಮರ್ಥ್ (ನಾಯಕ), ನಿಕಿನ್ ಜೋಸ್, ಮನೀಶ್ ಪಾಂಡೆ, ಮನೋಜ್ ಬಂಡಾಜೆ, ಅಭಿನವ್ ಮನೋಹರ್, ಶರತ್ ಬಿಆರ್ (ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್, ವಾಸುಕಿ ಕೌಶಿಕ್, ರೋನಿತ್ ಮೋರೆ, ವಿಧ್ವತ್ ಕಾವೇರಪ್ಪ

ಬೆಂಚ್: ಮುರಳೀಧರ ವೆಂಕಟೇಶ್, ನಿಹಾಲ್ ಉಳ್ಳಾಲ್, ಜಗದೀಶ ಸುಚಿತ್, ಮಯಾಂಕ್ ಅಗರ್ವಾಲ್


ಡೆಲ್ಲಿ:
ಧೃವ್ ಶೊರೆ, ಹಿಮ್ಮತ್ ಸಿಂಗ್, ಯಶ್ ದುಲ್, ನಿತಿಶ್ ರಾನಾ (ನಾಯಕ), ಲಲಿತ್ ಯಾದವ್, ಆಯುಷ್ ಬದೋನಿ, ಲಕ್ಷಯ್ ತರೇಜಾ(ವಿಕೆಟ್ ಕೀಪರ್), ಶಿವಾಂಕ್ ವೈಶಿಷ್ಟ, ನವದೀಪ್ ಸೈನಿ, ಮಯಾಂಕ್ ಅಗರ್ವಾಲ್, ಪ್ರದೀಪ್ ಸಂಗ್ವಾನ್

ಬೆಂಚ್: ಜಾಂಟಿ ಸಿಧು, ಅನುಜ್ ರಾವತ್, ಇಶಾಂತ್ ಶರ್ಮಾ, ಶಿಖರ್ ಧವನ್, ಯೋಗೆಶ್ ಶರ್ಮಾ, ವೈಭವ್ ಕಂಡ್ಪಾಲ್, ಹ್ರಿತಿಕ್ ಶೊಕೀನ್, ಹರ್ಷಿತ್ ರಾನಾ

Story first published: Thursday, November 17, 2022, 19:07 [IST]
Other articles published on Nov 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X