ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಜಯ್ ಹಜಾರೆ ಟ್ರೋಫಿ 2022: ಸತತ 4 ಶತಕ ಸಿಡಿಸಿ ವಿಶ್ವದಾಖಲೆ ಮಾಡಿದ ತಮಿಳುನಾಡಿನ ಎನ್. ಜಗದೀಶನ್

N Jagadeesan

ವಿಜಯ್ ಹಜಾರೆ ಟ್ರೋಫಿ 2022ರಲ್ಲಿ ತಮಿಳುನಾಡು ಬ್ಯಾಟ್ಸ್‌ಮನ್ ಎನ್. ಜಗದೀಶನ್ ದಾಖಲೆ ಬರೆದಿದ್ದಾರೆ. ಬೆಂಗಳೂರಿನ ಕೆಎಸ್‌ಸಿಎ ಆಲೂರು ಗ್ರೌಂಡ್‌ನಲ್ಲಿ ನಡೆದ ಹರಿಯಾಣ ವಿರುದ್ಧದ ಪಂದ್ಯದಲ್ಲಿ ಶತಕ ದಾಖಲಿಸಿದ ಜಗದೀಶನ್, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸತತ ನಾಲ್ಕು ಶತಕ ದಾಖಲಿಸಿದ ಮೈಲಿಗಲ್ಲು ತಲುಪಿದ್ದಾರೆ.

ಎಲೈಟ್ ಗ್ರೂಪ್‌ ಸಿ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಉಭಯ ತಂಡಗಳ ಪರ ಟಾಸ್ ಸೋತು ಬ್ಯಾಟಿಂಗ್ ಮಾಡಿದ ತಮಿಳುನಾಡು 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 284 ರನ್ ಕಲೆಹಾಕಿತು. ಉತ್ತಮ ಆರಂಭ ಪಡೆಯಿತಾದ್ರೂ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ 300ರ ಗಡಿ ತಲುಪಲಿಲ್ಲ.

ಆದ್ರೆ ಈ ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಎನ್‌. ಜಗದೀಶನ್ ತನ್ನ ಅಮೋಘ ಫಾರ್ಮ್ ಮುಂದುವರಿಸಿದ್ದು, 99 ಎಸೆತಗಳಲ್ಲಿ ಶತಕ ದಾಖಲಿಸಿದ್ದಲ್ಲದೆ, 123 ಎಸೆತಗಳಲ್ಲಿ 128 ರನ್ ಸಿಡಿಸಿದರು. 104.07 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಜಗದೀಶನ್ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 6 ಸಿಕ್ಸರ್ ಒಳಗೊಂಡಿದ್ದವು. ಇವರಿಗೆ ಉತ್ತಮ ಸಾಥ್ ಕೊಟ್ಟ ಸಾಯಿ ಸುದರ್ಶನ್ 67 ರನ್ ಗಳಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 150ರನ್‌ಗಳ ಜೊತೆಯಾಟವಾಡಿತು.

ವಿಜಯ್ ಹಜಾರೆ ಟ್ರೋಫಿಯಲ್ಲಿ ಎನ್. ಜಗದೀಶನ್ ಅತ್ಯಮೋಘ ಫಾರ್ಮ್‌ನಲ್ಲಿದ್ದು, ಇದು ಅವರ ಸತತ 4ನೇ ಶತಕವಾಗಿದೆ. ಈ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಕೆಲವೇ ಆಟಗಾರರ ಪಟ್ಟಿಗೆ ತಮಿಳುನಾಡು ಕ್ರಿಕೆಟರ್ ಸೇರ್ಪಡೆಯಾಗಿದ್ದಾರೆ. ಈ ಪಂದ್ಯದಲ್ಲಿ ತಮಿಳುನಾಡು ದಾಖಲಿಸಿದ 284 ರನ್‌ಗಳಿಗೆ ಉತ್ತರವಾಗಿ ಹರಿಯಾಣ ಕೇವಲ 133ರನ್‌ಗೆ ಆಲೌಟ್ ಆಗುವ ಮೂಲಕ 151ರನ್‌ಗಳ ಬೃಹತ್ ಸೋಲನ್ನ ಅನುಭವಿಸಿದೆ. ತಮಿಳುನಾಡು ಪರ ಶತಕ ದಾಖಲಿಸಿದ ಎನ್‌. ಜಗದೀಶನ್ ಪಂದ್ಯದ ಹೀರೋ ಆಗಿದ್ದು ವಿಶ್ವದಾಖಲೆ ಕೂಡ ಮಾಡಿದ್ದಾರೆ.

ಈ ಸಾಧನೆ ಮಾಡಿದ ಮೊದಲ ಕ್ರಿಕೆಟರ್ ಕುಮಾರ ಸಂಗಕ್ಕಾರ

ಈ ಸಾಧನೆ ಮಾಡಿದ ಮೊದಲ ಕ್ರಿಕೆಟರ್ ಕುಮಾರ ಸಂಗಕ್ಕಾರ

ಶ್ರೀಲಂಕಾದ ಲೆಜೆಂಡ್ ಕುಮಾರ ಸಂಗಕ್ಕಾರ, ದಕ್ಷಿಣ ಆಫ್ರಿಕಾದ ಅಲ್ವಿರೋ ಪೀಟರ್ಸನ್, ಕರ್ನಾಟಕದ ದೇವದತ್ ಪಡಿಕ್ಕಲ್ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಸತತ ನಾಲ್ಕು ಶತಕ ದಾಖಲಿಸಿರುವ ಸಾಧನೆ ಮಾಡಿದ್ದಾರೆ. ಈ ಪಟ್ಟಿಗೆ ಇದೀಗ ನಾರಾಯಣ್ ಜಗದೀಶನ್ ಕೂಡ ಸೇರ್ಪಡೆಗೊಂಡಿದ್ದಾರೆ.

ಐಸಿಸಿ ಏಕದಿನ ವಿಶ್ವಕಪ್ 2015ರಲ್ಲಿ ಕುಮಾರ ಸಂಗಕ್ಕಾರ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗರಾದರು. ಸಂಗಕ್ಕಾರ ಬಳಿಕ ದಕ್ಷಿಣ ಆಫ್ರಿಕಾದ ಓಪನರ್ ಅಲ್ವಿರೋ ಪೀಟರ್ಸನ್ ದೇಶೀಯ ಕ್ರಿಕೆಟ್‌ನಲ್ಲಿ ಹೈವೆಲ್ಡ್ ಲಯನ್ಸ್ ಪರ ಆಡುವಾಗ ಈ ಸಾಧನೆ ಮಾಡಿದರು. ಕರ್ನಾಟಕದ ದೇವದತ್ ಪಡಿಕ್ಕಲ್ 2020-21 ಲಿಸ್ಟ್ ಎ ಕ್ರಿಕೆಟ್ ಅವಧಿಯಲ್ಲಿ ಸತತ ನಾಲ್ಕು ಶತಕ ದಾಖಲಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆ ಬರೆದರು.

Ind vs Nz 2nd T20: ಪಿಚ್ ರಿಪೋರ್ಟ್, ಹೆಡ್ ಟು ಹೆಡ್ ರೆಕಾರ್ಡ್, ಸಂಭಾವ್ಯ ಪ್ಲೇಯಿಂಗ್ 11

ಪ್ರಸ್ತುತ ಅತಿ ಹೆಚ್ಚು ರನ್ ಕಲೆಹಾಕಿರುವ ಜಗದೀಶನ್

ಪ್ರಸ್ತುತ ಅತಿ ಹೆಚ್ಚು ರನ್ ಕಲೆಹಾಕಿರುವ ಜಗದೀಶನ್

ವಿಜಯ್ ಹಜಾರೆ ಟ್ರೋಫಿ 2022ರಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟ್ಸ್‌ಮನ್‌ಗಳ ಲಿಸ್ಟ್‌ನಲ್ಲಿ ಜಗದೀಶನ್ ಮೊದಲ ಸ್ಥಾನದಲ್ಲಿದ್ದಾರೆ. 5 ಇನ್ನಿಂಗ್ಸ್‌ಗಳಲ್ಲಿ 522 ರನ್ ಕಲೆಹಾಕಿರುವ ಜಗದೀಶನ್ ಒಟ್ಟಾರೆ 41 ಲಿಸ್ಟ್ ಎ ಪಂದ್ಯಗಳಲ್ಲಿ 1700ರನ್ ಕಲೆಹಾಕಿದ್ದಾರೆ. ಇದರಲ್ಲಿ 7 ಶತಕ ಹಾಗೂ ಅನೇಕ ಅರ್ಧಶತಕಗಳು ಒಳಗೊಂಡಿವೆ.

ಆಯ್ಕೆ ಮಂಡಳಿ ಕಿತ್ತೆಸೆದ ಬಳಿಕ ಭಾರತ ತಂಡದಲ್ಲೂ ಪ್ರಮುಖ ಬದಲಾವಣೆಗೆ ಬಿಸಿಸಿಐ ನಿರ್ಧಾರ?

ಎನ್‌ ಜಗದೀಶನ್‌ರನ್ನ ಕೈ ಬಿಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್‌

ಎನ್‌ ಜಗದೀಶನ್‌ರನ್ನ ಕೈ ಬಿಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್‌

ನವೆಂಬರ್ 15ರಂದು ಐಪಿಎಲ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ತಮಿಳುನಾಡು ಬ್ಯಾಟರ್ ಎನ್. ಜಗದೀಶನ್‌ರನ್ನು ರಿಲೀಸ್ ಮಾಡುವ ಮೂಲಕ ಆಶ್ಚರ್ಯ ಮೂಡಿಸಿತು. 2022ರ ಸೀಸನ್‌ನಲ್ಲಿ ಮೂಲ ಬೆಲೆ 20 ಲಕ್ಷ ರೂಪಾಯಿಗೆ ಖರೀದಿಸಿದ್ದ ಸಿಎಸ್‌ಕೆ ಆಟಗಾರನನ್ನು ರೀಟೈನ್ ಮಾಡಿಕೊಳ್ಳಲು ಮನಸ್ಸು ಮಾಡಲಿಲ್ಲ. ಪರಿಣಾಮ ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿರುವ ಮಿನಿ ಐಪಿಎಲ್ ಹರಾಜಿನಲ್ಲಿ ಎನ್. ಜಗದೀಶನ್ ತಮ್ಮ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.

ವಿಜಯ್ ಹಜಾರೆ ಟ್ರೋಫಿಯಲ್ಲಿ ಶತಕದ ಮೇಲೆ ಶತಕ ಸಿಡಿಸಿರುವ ಎನ್. ಜಗದೀಶನ್, ಐಪಿಎಲ್‌ ಹರಾಜಿನಲ್ಲಿ ಈ ಬಾರಿ ಫ್ರಾಂಚೈಸಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಬಹುದು.

Story first published: Saturday, November 19, 2022, 16:47 [IST]
Other articles published on Nov 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X