ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಕ್ರಿಕೆಟ್ ತ್ರಿಮೂರ್ತಿಗಳ ಜೊತೆಗಿನ ಪಂದ್ಯದ ಕ್ಷಣ ನೆನೆದ ಇಕ್ಬಾಲ್

‘Was busy watching Tendulkar, Dravid and Ganguly’: Tamim Iqbal

ಬೆಂಗಳೂರು: ಪೋರ್ಟ್ ಆಫ್‌ ಸ್ಪೇನ್‌ನಲ್ಲಿ ನಡೆದಿದ್ದ 2007ರ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ಆರಂಭಿಕ ಬ್ಯಾಟ್ಸ್‌ಮನ್ ತಮೀಮ್ ಇಕ್ಬಾಲ್ ಅರ್ಧ ಶತಕದಾಟದೊಂದಿಗೆ ಗಮನ ಸೆಳೆದಿದ್ದರು. ಆ ದಿನದ ಪಂದ್ಯವನ್ನು ಇಕ್ಬಾಲ್ ಸ್ಮರಿಸಿಕೊಂಡಿದ್ದಾರೆ. ಆವತ್ತು ಬ್ಯಾಟಿಂಗ್‌ ಮುಗಿಸಿ ಹೋಗುವಾಗ ನಾನು ಭಾರತದ ಮೂವರು ಕ್ರಿಕೆಟ್‌ ದಂತಕತೆಗಳ ಜೊತೆ ಮೈದಾನಕ್ಕಿಳಿದಿದ್ದಕ್ಕಾಗಿ ಸಂಭ್ರಮಪಟ್ಟಿದ್ದೆ. ಪಂದ್ಯ ಆಡುವಾಗ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಅವರನ್ನೇ ನೋಡುತ್ತಿದ್ದೆ ಎಂದು ಇಕ್ಬಾಲ್ ಹೇಳಿದ್ದಾರೆ.

ಬ್ಯಾನ್ ಬಳಿಕ ಬಲಿಷ್ಠ ಕಮ್‌ಬ್ಯಾಕ್ ಮಾಡಿದ ಜನಪ್ರಿಯ 5 ಕ್ರಿಕೆಟಿಗರುಬ್ಯಾನ್ ಬಳಿಕ ಬಲಿಷ್ಠ ಕಮ್‌ಬ್ಯಾಕ್ ಮಾಡಿದ ಜನಪ್ರಿಯ 5 ಕ್ರಿಕೆಟಿಗರು

ತಮೀಮ್ ಇಕ್ಬಾಲ್ ಸ್ಮರಿಸಿಕೊಂಡಿರುವ ಈ ಪಂದ್ಯ ನಡೆದಿದ್ದ ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್‌ನಲ್ಲಿರುವ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ. 2007ರ ಮಾರ್ಚ್ 17ರಂದು ನಡೆದಿದ್ದ ವಿಶ್ವಕಪ್ ಗ್ರೂಪ್ 'ಬಿ'ಯ 8ನೇ ಪಂದ್ಯವಿದು.

13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯೋದು ವಿದೇಶದಲ್ಲಿ?!13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯೋದು ವಿದೇಶದಲ್ಲಿ?!

ಆವತ್ತಿನ ಪಂದ್ಯ ಏನಾಯಿತು? ತಮೀಮ್ ಇಕ್ಬಾಲ್ ಆವತ್ತಿನ ಪಂದ್ಯ ನೆನೆದು ಹೇಳಿರುವ ಮಾತುಗಳೇನು? ಇಲ್ಲಿವೆ.

ತ್ರಿಮೂರ್ತಿಗಳ ನೋಡುತ್ತ ಬ್ಯುಸಿಯಾಗಿದ್ದೆ

ತ್ರಿಮೂರ್ತಿಗಳ ನೋಡುತ್ತ ಬ್ಯುಸಿಯಾಗಿದ್ದೆ

'ಆ ದಿನ ನಾನು 2007ರ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಆಡುತ್ತಿದೆ. ನಾನಾಗ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಅವರನ್ನು ನೋಡುವುದಲ್ಲೇ ಬ್ಯುಸಿ ಆಗಿದ್ದೆ. ನಾನು ಈ ಮೂವರು ತ್ರಿಮೂರ್ತಿಗಳನ್ನು ಸುಮ್ಮನೆ ನೋಡುತ್ತಿದ್ದೆ,' ಎಂದು ತಮೀಮ್ ಇಕ್ಬಾಲ್ ಹೇಳಿದ್ದಾರೆ.

ಅತೀವ ಖುಷಿಯಾಗಿತ್ತು

ಅತೀವ ಖುಷಿಯಾಗಿತ್ತು

ಇಎಸ್‌ಪಿಎನ್ ಆಯೋಜಿಸಿದ್ದ ವೀಡಿಯೋ ಚಾಟ್‌ನಲ್ಲಿ ಭಾರತದ ಕಾಮೆಂಟೇಟರ್ ಅಂಜಯ್ ಮಂಜ್ರೇಕರ್ ಜೊತೆಗೆ ಮಾತನಾಡುತ್ತ ತಮೀಮ್, ಭಾರತದ ವಿರುದ್ಧದ ಪಂದ್ಯದ ವೇಳೆಯ ಖುಷಿ ಹಂಚಿಕೊಂಡರು. '(ಸಚಿನ್, ದ್ರಾವಿಡ್, ಗಂಗೂಲಿ) ಈ ಮೂವರು ದಿಗ್ಗಜರ ಸಮ್ಮುಖದಲ್ಲಿ ಆಡುತ್ತಿರುವುದಕ್ಕೆ ಆವತ್ತು ನನಗೆ ಅತೀವ ಖುಷಿ ಆಗಿತ್ತು,' ಎಂದು ತಮೀಮ್ ಹೇಳಿದರು.

ಜಹೀರ್ ಎದುರಿಸಬೇಕಾಗಿ ಬಂದಿತ್ತು

ಜಹೀರ್ ಎದುರಿಸಬೇಕಾಗಿ ಬಂದಿತ್ತು

'ಆವತ್ತು ಭಾರತ 190 ರನ್ ಮಾಡಿದಾಗ ನಮಗೊಂದು ಚಾನ್ಸ್ ಇದೆ ಅಂತ ಅನ್ನಿಸಿತ್ತು. ನಾನು ಬ್ಯಾಟಿಂಗ್‌ಗೆ ಹೋದೆ, ಝಹೀರ್‌ ಖಾನ್ ಅವರ ಎಸೆತ ಎದುರಿಸಬೇಕಾಗಿ ಬಂತು. 140 kph ವೇಗದಲ್ಲಿ ಬರುವ ಬೌಲರ್‌ನನ್ನು ನಾನು ಎದುರಿಸಬಲ್ಲೆ ಎಂದು ನಾನು ಮನಸ್ಸು ಗಟ್ಟಿ ಮಾಡಿಕೊಂಡೆ. ಜಹೀರ್ ಮೊದಲ ಎಸೆತ ಎಸೆದರು. ನಾನು ಹೇಗೋ ಅದನ್ನು ನಿಭಾಯಿಸಿದೆ. ಮುಂದಿನ ಎಸೆತಕ್ಕೆ ನಾನು ಫೋರ್ ಬಾರಿಸಿದೆ. ಆಗ ನನಗೆ ಸ್ವಲ್ಪ ಆತ್ಮವಿಶ್ವಾಸ ಬಂತು,' ಎಂದು ತಮೀಮ್ ಪಂದ್ಯದ ಕ್ಷಣ ವಿವರಿಸಿದ್ದಾರೆ.

ಪಂದ್ಯದ ಫಲಿತಾಂಶ

ಪಂದ್ಯದ ಫಲಿತಾಂಶ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ರಾಹುಲ್ ದ್ರಾವಿಡ್ ನಾಯಕತ್ವದ ಭಾರತ ತಂಡ, ಆರಂಭಿಕ ಬ್ಯಾಟ್ಸ್‌ಮನ್ ಸೌರವ್ ಗಂಗೂಲಿ 66, ಯುವರಾಜ್ ಸಿಂಗ್ 47 ಗಮನಾರ್ಹ ರನ್‌ನೊಂದಿಗೆ 49.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 191 ರನ್ ಮಾಡಿತ್ತು. ಗುರಿ ಬೆನ್ನಟ್ಟಿದ ಬಾಂಗ್ಲಾ, ತಮೀಮ್ ಇಕ್ಬಾಲ್ 51, ಮುಷ್ಫಕರ್ ರಹೀಮ್ 56, ಶಕೀಬ್ ಅಲ್ ಹಸನ್ 53 ರನ್‌ನೊಂದಿಗೆ 48.3 ಓವರ್‌ನಲ್ಲಿ 5 ವಿಕೆಟ್‌ ನಷ್ಟದಲ್ಲಿ 192 ರನ್ ಬಾರಿಸಿ, 5 ವಿಕೆಟ್ ಗೆಲುವನ್ನಾಚರಿಸಿತ್ತು.

Story first published: Friday, June 5, 2020, 15:23 [IST]
Other articles published on Jun 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X