ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ಫಿಸಿಯೋ ಫರ್ಹಾರ್ಟ್, ಫಿಟ್ನೆಸ್ ಕೋಚ್ ಶಂಕರ್ ರಾಜೀನಾಮೆ

ICC World Cup 2019 : ಇದು ಟೀಂ ಇಂಡಿಯಾಗೆ ಆದ ದೊಡ್ಡ ಆಘಾತ..? | Oneindia Kannada
WC 2019: India physio Patrick Farhart, fitness coach Shankar Basu resign

ಬೆಂಗಳೂರು, ಜುಲೈ 11: ಟೀಮ್ ಇಂಡಿಯಾದ ಫಿಸಿಯೋಥೆರಪಿಸ್ಟ್ ಪ್ಯಾಟ್ರಿಕ್ ಫರ್ಹಾರ್ಟ್ ಮತ್ತು ಫಿಟ್ನೆಸ್/ಕಂಡೀಷನಿಂಗ್ ಕೋಚ್ ಶಂಕರ್ ಬಸು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ 2019ರಲ್ಲಿ ಭಾರತ ಹೊರ ಬಿದ್ದ ಬಳಿಕ ಈ ಪ್ರಕ್ರಿಯೆ ನಡೆದಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಬುಧವಾರ (ಜುಲೈ 10) ಮುಕ್ತಾಯಗೊಂಡ ಮೊದಲ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 18 ರನ್‌ಗಳ ಸೋಲನುಭವಿಸಿತು. ಪ್ರತಿಷ್ಠಿತ ಟೂರ್ನಿಯಿಂದ ತಂಡ ಹೊರ ಬಿದ್ದು ಟ್ರೋಫಿ ಕನಸನ್ನು ಕೈ ಚೆಲ್ಲಿದ್ದರಿಂದ ಸಹಜವಾಗಿ ಬೇಸರಗೊಂಡ ಫರ್ಹಾರ್ಟ್, ಬಸು ತಮ್ಮ ಜವಾಬ್ದಾರಿಯಿಂದ ಕೆಳಗಿಳಿದಿದ್ದಾರೆ.

'ನಾನು ಬಯಸಿದಂತೆ ತಂಡ ಹೊರಹೊಮ್ಮಲಿಲ್ಲ. ಹೀಗಾಗಿ ಇದು ತಂಡದೊಂದಿಗಿನ ನನ್ನ ಕೊನೇ ದಿನ. ಕಳೆದ 4 ವರ್ಷಗಳಿಂದ ತಂಡದೊಂದಿಗೆ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕಾಗಿ ನಾನು ಬಿಸಿಸಿಐಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ. ಭವಿಷ್ಯದ ಎಲ್ಲಾ ಆಟಗಾರರಿಗೆ, ಸಿಬ್ಬಂದಿಗಳಿಗೆ ನನ್ನ ಶುಭಹಾರೈಕೆಗಳು' ಎಂದು ಫರಾರ್ಟ್ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.

ಸೆಮಿಫೈನಲ್‌ನಲ್ಲಿ ಭಾರತ ಎಡವಿದೆಲ್ಲಿ ಎಂದು ವಿವರಿಸಿದ ಗಂಗೂಲಿ!ಸೆಮಿಫೈನಲ್‌ನಲ್ಲಿ ಭಾರತ ಎಡವಿದೆಲ್ಲಿ ಎಂದು ವಿವರಿಸಿದ ಗಂಗೂಲಿ!

ಫರ್ಹಾರ್ಟ್ ಮತ್ತು ಕೋಚ್ ಶಂಕರ್ ಬಸು ಇಬ್ಬರೂ 2015ರಿಂದಲೂ ಜೊತೆಯಾಗಿ ತಂಡದೊಂದಿಗೆ ಕೆಲಸ ಮಾಡಿದ್ದರು. ವಿಶ್ವಕಪ್ ಬಳಿಕ ತಮ್ಮ ಜವಾಬ್ದಾರಿಯಿಂದ ಕೆಳಗಿಳಿಯುವುದಾಗಿ ಇಬ್ಬರೂ ಈ ಮೊದಲೇ ಬಿಸಿಸಿಐಗೆ ತಿಳಿಸಿದ್ದರು. ಆಸ್ಟ್ರೇಲಿಯನ್ ಫರ್ಹಾರ್ಟ್ ಮತ್ತು ಶಂಕರ್ ಬಸು ಸೇವೆಗಾಗಿ ಇಬ್ಬರಿಗೂ ಭಾರತದ ಕೆಲ ಕ್ರಿಕೆಟಿಗರು ಟ್ವೀಟ್ ಮೂಲಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

Story first published: Thursday, July 11, 2019, 13:38 [IST]
Other articles published on Jul 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X