ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯುಎಇನಲ್ಲಿ ಐಪಿಎಲ್: 2014ರ ಅನುಭವ ಸ್ಮರಿಸಿದ ಸುರೇಶ್ ರೈನಾ

 We Have Very Good Memories Of Playing In The Uae In 2014, Says Suresh Raina

ಈ ಬಾರಿಯ ಐಪಿಎಲ್ ಯುಎಇನಲ್ಲಿ ನಡೆಯುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉಪನಾಯಕ ಸುರೇಶ್ ರೈನಾ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಟೂರ್ನಮೆಂಟ್‌ನ ಉದ್ದಕ್ಕೂ ವಿಮಾನದಲ್ಲಿ ಪ್ರಯಾಣಿಸುವ ಅಗತ್ಯವಿಲ್ಲದಿರುವುದು ಆಟಗಾರರಿಗೆ ಬಹುದೊಡ್ಡ ಸಕಾರಾತ್ಮಕ ಅಂಶವೆಂದು ಸುರೇಶ್ ರೈನಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಮುಂದಿನ ಪಂದ್ಯಕ್ಕೆ ಹೆಚ್ಚು ಲವಲವಿಕೆಯಿಂದಿರಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಗಲ್ಫ್ ನ್ಯೂಸ್‌ ಜೊತೆಗೆ ಮಾತನಾಡಿದ ಸುರೇಶ್ ರೈನಾ ಎರಡನೇ ಬಾರಿಗೆ ಯುಎಇನಲ್ಲಿ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಎದುರುನೋಡುತ್ತಿರುವುದಾಗಿ ಹೇಳಿದ್ದಾರೆ. 2014ರಲ್ಲಿ ಮೂರು ವಾರಗಳ ಕಾಲ ನಡೆದ ಐಪಿಎಲ್ ಟೂರ್ನಿಯಲ್ಲಿ ಅದ್ಭುತವಾದ ನೆನಪುಗಳನ್ನು ಹೊಂದಿದ್ದೇವೆ. ಈ ಹಿಂದೆ ಕೆಲ ಅಂತಾರಾಷ್ಟ್ರೀಯ ಪಂದ್ಯಗಳನ್ನು ಕೂಡ ಆಡಿರುವುದಾಗಿಯೂ ಸುರೇಶ್ ರೈನಾ ನೆನಪಿಸಿಕೊಂಡಿದ್ದಾರೆ.

ಬಿಸಿಸಿಐ ವಿರುದ್ಧ ಅಸಮಾಧಾನ ಹೊರಹಾಕಿದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ಬಿಸಿಸಿಐ ವಿರುದ್ಧ ಅಸಮಾಧಾನ ಹೊರಹಾಕಿದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್

ಐಪಿಎಲ್ 13ನೇ ಆವೃತ್ತಿ ಯುಎಇನಲ್ಲಿ ನಡೆಯುವ ಪ್ರಮುಖ ಬದಲಾವಣೆಯೇನೆಂದರೆ ಕೇವಲ 3 ಸ್ಥಳಗಳಲ್ಲಿ ಟೂರ್ನಮೆಂಟ್ ನಡೆಯಲಿದೆ. ದುಬೈ, ಶಾರ್ಜಾ ಹಾಗೂ ಅಬುದಾಬಿಯಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕ್ರಿಕೆಟ್ ನಡೆಯಲಿದೆ. ಈ ಮೂರು ಸ್ಥಳಗಳನ್ನು ರಸ್ತೆ ಮಾರ್ಗಗಳ ಮೂಲಕವೇ ತಲುಪುವುದು ಕೂಡ ಸುಲಭವಾಗಿರುವುದು ಆಟಗಾರರಿಗೆ ಸಕಾರಾತ್ಮಕ ಅಂಶವಾಗಿದೆ.

'ನನಗೆ ಅಲ್ಲಿನ ಸ್ಟೇಡಿಯಮ್ ಮತ್ತು ಆತಿಥ್ಯದ ನೆನಪಿದೆ. 2014 ರಲ್ಲಿ ಮೊದಲ ಹಂತದ ಐಪಿಎಲ್ ನಡೆಯಲು ಯುಎಇ ಆಡಳಿತ ಅತ್ಯುತ್ತಮ ಬೆಂಬಲವನ್ನು ನೀಡಿತ್ತು. ಈ ಬಾರಿಯೂ ಅದು ಭಿನ್ನವಾಗಿರಲಾರದು ಎಂದು ನಿರೀಕ್ಷಿಸುತ್ತೇನೆ. ನಾನು ಅಲ್ಲಿನ ಸ್ಥಳೀಯ ಆಹಾರದ ದೊಡ್ಡ ಅಭಿಮಾನಿಯಾಗಿದ್ದೇನೆ ಎಂದು ಸುರೇಶ್ ರೈನಾ ಹೇಳಿದ್ದಾರೆ.

2019ರ ವಿಶ್ವಕಪ್‌ನಲ್ಲಿ ಭಾರತದ ಸೋಲಿಗೆ ಸ್ವಾರಸ್ಯಕರ ಕಾರಣ ಹೇಳಿದ ಚೋಪ್ರಾ2019ರ ವಿಶ್ವಕಪ್‌ನಲ್ಲಿ ಭಾರತದ ಸೋಲಿಗೆ ಸ್ವಾರಸ್ಯಕರ ಕಾರಣ ಹೇಳಿದ ಚೋಪ್ರಾ

ಸುರೇಶ್ ರೈನಾ ಐಪಿಎಲ್‌ನಲ್ಲಿ 5368ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿಯ ನಂತರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಯುಎಇನಲ್ಲಿ ನಡೆಯುವ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ

Story first published: Tuesday, July 28, 2020, 9:58 [IST]
Other articles published on Jul 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X