ಆತ ಇದ್ದಿದ್ದರೆ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಗೆಲ್ಲುತ್ತಿತ್ತು ಎಂದ ನೆಟ್ಟಿಗರು

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ತೃತೀಯ ಟೆಸ್ಟ್ ಪಂದ್ಯ ಮುಕ್ತಾಯವಾಗಿದ್ದು ಈ ಪಂದ್ಯದಲ್ಲಿ ಬಲಿಷ್ಠ ಟೀಮ್ ಇಂಡಿಯಾವನ್ನು 7 ವಿಕೆಟ್‍ಗಳಿಂದ ಮಣಿಸಿದ ದಕ್ಷಿಣ ಆಫ್ರಿಕಾ 3 ಪಂದ್ಯಗಳ ಟೆಸ್ಟ್ ಸರಣಿಯನ್ನು 2 - 1 ಅಂತರದಿಂದ ಗೆದ್ದು ಕೈವಶಪಡಿಸಿಕೊಂಡಿದೆ.

 ಭಾರತದ ಸೋಲಿಗೆ ಕಾರಣನಾದ ದ.ಆಫ್ರಿಕಾದ ಈ ಆಟಗಾರನನ್ನು ಕನ್ನಡಿಗನಿಗೆ ಹೋಲಿಸಿ ಹೊಗಳಿದ ರವಿಶಾಸ್ತ್ರಿ ಭಾರತದ ಸೋಲಿಗೆ ಕಾರಣನಾದ ದ.ಆಫ್ರಿಕಾದ ಈ ಆಟಗಾರನನ್ನು ಕನ್ನಡಿಗನಿಗೆ ಹೋಲಿಸಿ ಹೊಗಳಿದ ರವಿಶಾಸ್ತ್ರಿ

ಇತ್ತಂಡಗಳ ನಡುವೆ ನಡೆದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಭಾರತದ ವಿರುದ್ಧ ತವರಿನಲ್ಲಿ ಸೋಲನ್ನು ಅನುಭವಿಸಿದ ದಕ್ಷಿಣ ಆಫ್ರಿಕಾ ನಂತರ ನಡೆದ ದ್ವಿತೀಯ ಹಾಗೂ ತೃತೀಯ ಟೆಸ್ಟ್ ಪಂದ್ಯಗಳಲ್ಲಿ ವಿಶ್ವದ ನಂಬರ್ ಒನ್ ಟೆಸ್ಟ್ ತಂಡಕ್ಕೆ ಮಣ್ಣುಮುಕ್ಕಿಸುವುದರ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದೆ. ಈ ಸರಣಿ ಸೋಲಿನ ಮೂಲಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಸೋಲಿನ ಸರಪಣಿಯನ್ನು ಮುಂದುವರಿಸಿರುವ ಟೀಂ ಇಂಡಿಯಾದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ದೊಡ್ಡ ಮಟ್ಟದ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಟೀಕೆಗಳಲ್ಲಿ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ ಅವರಿಗೆ ಪದೇ ಪದೇ ಯಾಕೆ ಅವಕಾಶವನ್ನು ನೀಡುತ್ತಿದ್ದಾರೆ ಎಂಬ ವಿಷಯ ಸಾಕಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಮತ್ತೊಂದಷ್ಟು ನೆಟ್ಟಿಗರು ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ಅನುಪಸ್ಥಿತಿ ಟೀಮ್ ಇಂಡಿಯಾಗೆ ಕಾಡುತ್ತಿದೆ ಎಂದು ಸಹ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಕೀಗನ್ ಪೀಟರ್ಸನ್ ಹೊಗಳಿದ ಶಾಸ್ತ್ರಿ

ಕೀಗನ್ ಪೀಟರ್ಸನ್ ಹೊಗಳಿದ ಶಾಸ್ತ್ರಿ

ಹೀಗೆ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಅಂತಿಮ ಟೆಸ್ಟ್ ಪಂದ್ಯ ಮುಗಿದ ಬೆನ್ನಲ್ಲೇ ಸರಣಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ ದಕ್ಷಿಣ ಆಫ್ರಿಕಾದ ಗೆಲುವಿಗೆ ಪ್ರಮುಖ ಕಾರಣರಾದ ಕೀಗನ್ ಪೀಟರ್ಸನ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದ ರವಿ ಶಾಸ್ತ್ರಿ, ಮಾರನೇ ದಿನಕ್ಕೆ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರ ಕುರಿತಾಗಿಯೂ ಕೂಡ ಟ್ವೀಟ್ ಮಾಡಿದ್ದಾರೆ.

ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದ ನೆಟ್ಟಿಗರು

ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದ ನೆಟ್ಟಿಗರು

ಟೆಸ್ಟ್ ತಂಡದ ನಾಯಕನಾಗಿ ಟೀಮ್ ಇಂಡಿಯಾಗೆ ಅತ್ಯಮೂಲ್ಯ ಯಶಸ್ಸನ್ನು ತಂದುಕೊಟ್ಟ ನೀನು ತಲೆ ಎತ್ತಿಕೊಂಡು ಹೋಗಬೇಕು ಎಂದು ರವಿಶಾಸ್ತ್ರಿ ಕೊಹ್ಲಿ ಕುರಿತು ಹೊಗಳಿಕೆಯ ಟ್ವೀಟ್ ಮಾಡಿದ್ದಾರೆ. ಹೀಗೆ ವಿರಾಟ್ ಕೊಹ್ಲಿ ಮತ್ತು ಕೀಗನ್ ಪೀಟರ್ಸನ್ ಕುರಿತು ರವಿಶಾಸ್ತ್ರಿ ಮಾಡಿರುವ ಟ್ವೀಟ್‌ಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನ ವಿಭಿನ್ನ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಒಂದಿಷ್ಟು ನೆಟ್ಟಿಗರು ಟೀಮ್ ಇಂಡಿಯಾಗೆ ನಿಮ್ಮ ಅಗತ್ಯತೆ ಇದೆ ಹಾಗೂ ಟೀಮ್ ಇಂಡಿಯಾ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದೆ ಎಂದು ಬರೆದುಕೊಂಡಿದ್ದಾರೆ.

Virat Kohli ಕ್ಯಾಪ್ಟೆನ್ಸಿ ನಿರ್ಗಮನದ ಹಿಂದೆಯೇ ಟೀಮ್ ಇಂಡಿಯಾಗೆ ಬಿಗ್ ಶಾಕ್ ಕೊಟ್ಟ ICC | Oneindia Kannada
ಟೀಮ್ ಇಂಡಿಯಾಗೆ ಮರಳಿ ಎಂದು ಮನವಿ

ಟೀಮ್ ಇಂಡಿಯಾಗೆ ಮರಳಿ ಎಂದು ಮನವಿ

ಹೀಗೆ ರವಿಶಾಸ್ತ್ರಿ ಮಾಡಿರುವ ಟ್ವೀಟ್‌ಗಳಿಗೆ ಪ್ರತಿಕ್ರಿಯೆ ನೀಡುತ್ತಿರುವ ನೆಟ್ಟಿಗರ ಪೈಕಿ ಕೆಲವರು ರವಿಶಾಸ್ತ್ರಿ ಬಳಿ ಮತ್ತೆ ಕೋಚ್ ಆಗಿ ಟೀಂ ಇಂಡಿಯಾಗೆ ಬಂದು ಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ನೀವೇನಾದರೂ ಟೀಮ್ ಇಂಡಿಯಾದ ಕೋಚ್ ಆಗಿದ್ದರೆ ಈ ಸರಣಿಯಲ್ಲಿ ಟೀಮ್ ಇಂಡಿಯಾ ಗೆಲುವನ್ನು ಸಾಧಿಸುತ್ತಿತ್ತು ಎಂದು ಕೂಡ ಕೆಲ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Saturday, January 15, 2022, 23:33 [IST]
Other articles published on Jan 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X