ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ 2019: 'ಯೂನಿವರ್ಸ್‌ ಬಾಸ್‌' ಕ್ರಿಸ್‌ ಗೇಲ್‌ ಅಪ್ರತಿಮ ಆಟಗಾರ

World Cup 2019: India vs West Indies: The always bright world of Universe Boss Gayle

ಮ್ಯಾಂಚೆಸ್ಟರ್‌, ಜೂನ್‌ 26: ಆನ್‌ ಫೀಲ್ಡ್‌ ಮತ್ತು ಆಫ್‌ ಫೀಲ್ಡ್‌ನಲ್ಲೂ ಕ್ರಿಸ್‌ ಗೇಲ್‌ ಒಬ್ಬ ಅಪ್ರತಿಮ ಮನೋರಂಜಕ. ಚೆಂಡನ್ನು ಅತ್ಯಂತ ಸರಾಗವಾಗಿ ಮೈಲುಗಟ್ಟಲೆ ದೂರ ಹೋಗಿ ಬೀಳುವಂತೆ ಹೊಡೆಯಬಲ್ಲ ಸಾಮರ್ಥ್ಯ ಅವರದ್ದು. ಮೈಕ್‌ನ ಹಿಂಬದಿ ಅವರು ಸದಾ ತಮ್ಮ ಮನೆಯಲ್ಲಿ ಇರುವಂತಹ ಸ್ವಭಾವದವರು. ಸ್ವಲ್ಪ ತಮಾಶೆಯ ಹಾಗೂ ಅಷ್ಟೇ ನಿಷ್ಠೆಯ ಆಟಗಾರ ಅವರು. ಈಗಿನ ಪೀಳಿಗೆಯವರಲ್ಲಿ ಇಂತಹ ಸ್ವಭಾವ ಕಾಣಸಿಗುವುದು ಅಪರೂಪ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಕ್ರಿಸ್‌ ಗೇಲ್‌ ಅವರಲ್ಲಿ ಅಹಂಕಾರ ಮತ್ತು ಆಡಂಬರದ ಸುಳಿವಿಲ್ಲ. ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ನಲ್ಲಿ ತಮ್ಮನ್ನು ತಾವು ಎಲ್ಲಿ ಗುರುತಿಸಿಕೊಳ್ಳುವಿರಿ ಎಂದು ಕೇಳಲಾಗುವ ಪ್ರಶ್ನೆಗೆ ಅವರು, "ದಿಗ್ಗಜರ ಸಾಲಿನಲ್ಲಿ ನಾನಿದ್ದೇನೆ. ಇದರಲ್ಲಿ ಸಂಶಯವೇ ಬೇಡ," ಎಂದು ಹೇಳಿಕೊಳ್ಳುವುದರಲ್ಲೂ ನಮಗೆ ಯಾವುದೇ ರೀತಿಯ ಅಹಂಕಾರ ಕಾಣಸಿಗುವುದಿಲ್ಲ. ಈ ಮಾತುಗಳನ್ನು ಅವರು ನಗುಮುಖದಲ್ಲೇ ಹೇಳುತ್ತಾರೆ. ಇದನ್ನು ಪ್ರಶ್ನಿಸಲು ಕೂಡ ಯಾರಿಂದಲೂ ಸಾಧ್ಯವಿಲ್ಲ. ಏಕೆಂದರೆ ಅವರ ಸಾಧನೆಯ ಅಂಕಿಅಂಶಗಳು ಹಾಗಿವೆ.

ಟೀಮ್‌ ಇಂಡಿಯಾದ ಬ್ಯಾಟಿಂಗ್‌ ಬಗ್ಗೆ ಮಾತನಾಡಿದ ಭರತ್‌ ಅರುಣ್‌!ಟೀಮ್‌ ಇಂಡಿಯಾದ ಬ್ಯಾಟಿಂಗ್‌ ಬಗ್ಗೆ ಮಾತನಾಡಿದ ಭರತ್‌ ಅರುಣ್‌!

ಹಲವು ವರ್ಷಗಳಿಂದ ವೈಟ್‌ ಬಾಲ್‌ ಕ್ರಿಕೆಟ್‌ನಲ್ಲಿ ವಿಸ್ಫೋಟಕ ಬ್ಯಾಟಿಂಗ್‌ ಮೂಲಕ ಕ್ರಿಸ್‌ ಗೇಲ್‌ ಅಪಾರ ಖ್ಯಾತಿ ಗಿಟ್ಟಿಸಿದ್ದಾರೆ. ಹೀಗಿರುವಾಗ ಟೆಸ್ಟ್‌ ಕ್ರಿಕೆಟ್‌ನಲ್ಲಿ 2 ತ್ರಿಶತಕಗಳನ್ನು ಬಾರಿಸಿದ ಕೆಲವೇ ಕೆಲ ಬ್ಯಾಟ್ಸ್‌ಮನ್‌ಗಳಲ್ಲಿ ಅವರೂ ಒಬ್ಬರು ಎಂಬುದನ್ನು ನಂಬಲು ಕಷ್ಟವಾಗುತ್ತದೆ. 2010ರಲ್ಲಿ ಶ್ರೀಲಂಕಾ ವಿರುದ್ಧ ಅವರು ದಾಖಲಿಸಿದ 333 ರನ್‌ ಹರಿದು ಬಂದದ್ದು, 5 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ 317 ರನ್‌ಗಳನ್ನು ಗಳಿಸಿದ ನಂತರ. 103 ಟೆಸ್ಟ್‌ ಪಂದ್ಯಗಳನ್ನಾಡಿರುವ ಕ್ರಿಸ್‌, 42.18ರ ಸರಾಸರಿಯಲ್ಲಿ 7214 ರನ್‌ಗಳನ್ನು ದಾಖಲಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 10,345 ರನ್‌ ಮತ್ತು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 1627 ರನ್‌ಗಳನ್ನೂ ಸಿಡಿಸಿದ್ದಾರೆ. ಅಂದಹಾಗೆ ಓಲ್ಡ್‌ ಟ್ರಾಫರ್ಡ್‌ನಲ್ಲಿ ಬುಧವಾರ ಈ ಅಂಕಿ ಅಂಶಗಳನ್ನು ಮತ್ತಷ್ಟು ವಿಸ್ತರಿಸುವುದಾಗಿ ಗೇಲ್‌ ಹೇಳಿದ್ದಾರೆ.

ಇದೇ ವರ್ಷ ಆರಂಭದಲ್ಲಿ ಐಸಿಸಿ ವಿಶ್ವಕಪ್‌ 2019ರ ಟೂರ್ನಿ ಬಳಿಕ ತಮ್ಮ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸುವುದಾಗಿ ಕ್ರಿಸ್‌ ಗೇಲ್‌ ಹೇಳಿದ್ದರು. ಗೇಲ್‌ ವಿದಾಯಕ್ಕೆ ಎಲ್ಲ ಸಿದ್ದವಾಗಿತ್ತು. ಆದರೆ, ಇಂತಹ ಸಂದರ್ಭದಲ್ಲಿ ಒಂದು ಸ್ವಾರಸ್ಯಕರ ತಿರುವು ನೀಡದಿದ್ದರೆ ಗೇಲ್‌ ಅವರ ಸ್ವಭಾವಕ್ಕೆ ಸರಿ ಹೋಗುವುದಿಲ್ಲ. ಗೇಲ್‌ ಅವರ ಈ ತಿರುವು ನಾಯಕ ಜೇಸನ್‌ ಹೋಲ್ಡರ್‌ ಅವರಿಗೂ ಅಚ್ಚರಿ ಮೂಡಿಸಿತ್ತು. ಏಕೆಂದರೆ ಇನ್ನೆರಡು ವಾರಗಳಲ್ಲಿ ಕ್ರಿಕೆಟ್‌ ಮತ್ತು ಕೆರಿಬಿಯನ್‌ ಜಗತ್ತು ಗೇಲ್‌ ಅವರ ಸೇವೆಯನ್ನು ಕಳೆದುಕೊಳ್ಳಲಿದೆ ಎಂಬುದನ್ನು ಅವರು ಕೂಡ ನಂಬಿದ್ದರು.

ಟೀಮ್‌ ಇಂಡಿಯಾ ವಿರುದ್ದದ ಸರಣಿ ಬಳಿಕ ಕ್ರಿಸ್‌ ಗೇಲ್‌ ನಿವೃತ್ತಿ!ಟೀಮ್‌ ಇಂಡಿಯಾ ವಿರುದ್ದದ ಸರಣಿ ಬಳಿಕ ಕ್ರಿಸ್‌ ಗೇಲ್‌ ನಿವೃತ್ತಿ!

ತಮ್ಮ ಮೀಡಿಯಾ ಮ್ಯಾನೇಜರ್‌ ಮೂಲಕ ಕ್ರಿಸ್‌ ಗೇಲ್‌ ತಮ್ಮ ನಿವೃತ್ತಿ ವಿಸ್ತರಿಸಿದ್ದಾರೆ ಎಂಬುದನ್ನು ತಿಳಿದ ಜೇಸನ್‌ ಹೋಲ್ಡರ್‌ ಅವರ ಪ್ರತಿಕ್ರಿಯೆ ಮಂದಹಾಸದಲ್ಲಿ ಶುರುವಾಯಿತು. ಬಳಿಕ "ಈ ವಿಚಾರವಾಗು ಗಂಭೀರವಾಗಿ ಚರ್ಚಿಸಲಿದ್ದೇನೆ,'' ಎಂದು ಹೇಳಿದರು.

ಈ ಗಂಭೀರ ಚರ್ಚೆ ಕ್ರಿಸ್‌ ಗೇಲ್‌ ಅವರಿಂದಲೇ ಆರಂಭವಾಗಲಿದೆ. ಏಕೆಂದರೆ ಆಗಸ್ಟ್‌ನಲ್ಲಿ ಮೂರು ಏಕದಿನ ಮತ್ತು ಟಿ20 ಹಾಗೂ ಎರಡು ಟೆಸ್ಟ್‌ ಪಂದ್ಯಗಳ ಸರಣಿಗಳ ಸಲುವಾಗಿ ವಿರಾಟ್‌ ಕೊಹ್ಲಿ ಸಾರಥ್ಯದ ಟೀಮ್‌ ಇಂಡಿಯಾ ವೆಸ್ಟ್‌ ಇಂಡೀಸ್‌ ಪ್ರವಾಸ ಕೈಗೊಳ್ಳಲಿದ್ದು, ಇದಕ್ಕಾಗಿ ಕ್ರಿಸ್‌ ಗೇಲ್‌ ಕಾದು ಕುಳಿತಿದ್ದಾರೆ. "ಭಾರತ ವಿರುದ್ಧದ ಟೆಸ್ಟ್‌ ಸರಣಿ ಆಡುವ ಸಾಧ್ಯತೆ ಇದೆ. ಖಂಡಿತವಾಗಿ ಏಕದಿನ ಸರಣಿಯಲ್ಲಂತೂ ಆಡಲಿದ್ದೇನೆ. ಟಿ20 ಸರಣಿಯಲ್ಲಿ ಆಡುವುದಿಲ್ಲ. ಇದೇ ವಿಶ್ವಕಪ್‌ ಬಳಿಕ ಇರುವ ನನ್ನ ಯೋಜನೆ. ನನ್ನಲ್ಲಿ ಇನ್ನೂ ಕೆಲ ಪಂದ್ಯಗಳನ್ನು ಆಡುವುದು ಬಾಕಿ ಇದೆ,'' ಎಂದು ಭಾರತ ವಿರುದ್ಧ ಗುರುವಾರ ನಡೆಯಲಿರುವ ವಿಶ್ವಕಪ್‌ ಪಂದ್ಯದ ಕುರಿತಾಗಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೇಲ್‌ ತಮ್ಮ ನಿವೃತ್ತಿಯನ್ನು ಮುಂದೂಡಿರುವ ವಿಚಾರವನ್ನು ಅವರದ್ದೇ ಶೈಲಿಯಲ್ಲಿ ಬಹಿರಂಗ ಪಡಿಸಿದರು.

ಆಸೀಸ್‌ ವಿರುದ್ಧದ ಹೀನಾಯ ಸೋಲಿನ ನಂತರ ಮಾರ್ಗನ್‌ ಹೇಳಿದ್ದೇನು?ಆಸೀಸ್‌ ವಿರುದ್ಧದ ಹೀನಾಯ ಸೋಲಿನ ನಂತರ ಮಾರ್ಗನ್‌ ಹೇಳಿದ್ದೇನು?

1999ರಲ್ಲಿ ಕೊಲಂಬೊದಲ್ಲಿ ನಡೆದ ಡಿಎಂಸಿ ಕಪ್‌ನಲ್ಲಿ ಭಾರತದ ವಿರುದ್ಧ ತಮ್ಮ 19ನೇ ವಯಸ್ಸಿನಲ್ಲಿ ಜಾಗತಿಕ ಕ್ರಿಕೆಟ್‌ಗೆ ಕಾಲಿಟ್ಟ ಕ್ರಿಸ್ಟೋಫರ್‌ ಹೆನ್ರಿ ಗೇಲ್‌, ಅಂದಿನಿಂದ ಇಂದಿನ ವಾರೆಗೆ ಬೆಳೆದು ಬಂದ ಹಾದಿ ನಿರೀಕ್ಷೆಗೂ ಮೀರಿದ್ದು. ಯೂನಿವರ್ಸ್‌ ಬಾಸ್‌ ಎಂದೆನಿಸಿಕೊಂಡರು. ಇದೀಗ ವೆಸ್ಟ್‌ ಇಂಡೀಸ್‌ ತಂಡದಲ್ಲಿ ತಮ್ಮ ಸ್ಥಾನ ತುಂಬಬಲ್ಲ ಸಾಮರ್ಥ್ಯ ಹೊಂದಿರುವ ಆಟಗಾರನನ್ನು ಹೆಸರಿಸಲು ಗೇಲ್‌ ಚಿಂತೆಯ ಕಡಲಲ್ಲಿ ಮುಳುಗುತ್ತಾರೆ.

"ಮಿನಿ ಯೂನಿವರ್ಸ್‌ ಬಾಸ್‌? ಇದು ನಿಜಕ್ಕೂ ಗಂಭೀರವಾದ ಹೆಸರು," ಎಂದು ಆಲೋಚಿಸಿದ ಗೇಲ್‌, " ನಿಕೊಲಾಸ್‌ ಪೂರನ್‌, ಅವರ ಕೆಲಸದ ಮೇಲಿನ ನಿಷ್ಠೆ, ಮತ್ತು ಅವರ ಬದ್ಧತೆಯನ್ನು ನಾನು ನಿಜಕ್ಕೂ ಪ್ರಶಂಶಿಸುತ್ತೇನೆ. ಯುವ ಆಟಗಾರನಿಗೆ ತಂಡದಲ್ಲಿ ಸ್ಥಾನ ಸಿಕ್ಕಿರುವುದು ನಿಜಕ್ಕೂ ಉತ್ತಮ ಸಂಗತಿ. ವಿಶ್ವ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಬಲ್ಲ ಆಟಗಾರ ಅವರು. ನಿಕೊಲಾಸ್‌ ಪೂರನ್‌ ಅದ್ಭುತ ಯುವ ಪ್ರತಿಭೆ. ಈ ಮಾತಿನ ಮೇಲೆ ವಿಶ್ವಾಸವಿಡಿ,'' ಎಂದು ಮಿನಿ ಯೂನಿವರ್ಸ್‌ ಬಾಸ್‌ ಕುರಿತಾಗಿ ಮಾತನಾಡಿದ್ದಾರೆ.

ಹಂದಿ ಎಂದು ಅಪಮಾನಿಸಿದವರ ಬಗ್ಗೆ ಮಾತನಾಡಿದ ಸರ್ಫರಾಝ್‌!ಹಂದಿ ಎಂದು ಅಪಮಾನಿಸಿದವರ ಬಗ್ಗೆ ಮಾತನಾಡಿದ ಸರ್ಫರಾಝ್‌!

ಪ್ರಸಕ್ತ ವಿಶ್ವಕಪ್‌ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಬ್ಬರಿಸದ ಗೇಲ್‌ ಸ್ಟೋರ್ಮ್‌ ಎದುರಿಸಲು ಭಾರತ ಸಂಪೂರ್ಣ ಸಜ್ಜಾಗಿದೆ. ಪ್ರಸಕ್ತ ವಿಶ್ವಕಪ್‌ನಲ್ಲಿ ವೆಸ್ಟ್‌ ಇಂಡೀಸ್‌ ತಂಡದ ಮೊದಲ ಪಂದ್ಯದಲ್ಲಿ ಗೇಲ್‌ 34 ಎಸೆತಗಳಲ್ಲಿ 50 ರನ್‌ಗಳನ್ನು ಸಿಡಿಸಿ ಜಯದ ರೂವಾರಿಯಾದರು. ಇದು ಟೂರ್ನಿಯಲ್ಲಿ ವಿಂಡೀಸ್‌ಗೆ ಸಿಕ್ಕ ಏಕಮಾತ್ರ ಗೆಲುವಾಗಿದೆ. ಬಳಿಕ ನ್ಯೂಜಿಲೆಂಡ್‌ ಎದುರು 5 ಸಿಕ್ಸ್‌ ಮತ್ತು 8 ಫೋರ್‌ಗಳನ್ನು ಒಳಗೊಂಡಂತೆ 84 ಎಸೆತಗಳಲ್ಲಿ 87 ರನ್‌ಗಳನ್ನು ಚಚ್ಚಿದರು. ಆದರೆ, ಜಯದ ಹೊಸ್ತಿಲಲ್ಲಿ ನಿರಾಸೆ ಎದುರಾಗಿತ್ತು. ಇನ್ನು ಟೀಮ್‌ ಇಂಡಿಯಾ ಗೇಲ್‌ ಸ್ಟೋರ್ಮ್‌ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಏಕೆಂದರೆ ಕಳೆದ 12 ಪಂದ್ಯಗಳಲ್ಲಿ ಗೇಲ್‌ ಭಾರತದ ವಿರುದ್ಧ ಕೇವಲ ಒಂದು ಅರ್ಧಶತಕ ಮಾತ್ರವೇ ದಾಖಲಿಸಿದ್ದಾರೆ. ಅದರಲ್ಲೂ ಜಸ್‌ಪ್ರೀತ್‌ ಬುಮ್ರಾ ಬೌಲಿಂಗ್‌ ಎದುರಿಸುವ ಭೀತಿ ಗೇಲ್‌ ಅವರನ್ನು ಕಾಡುತ್ತಿದೆ. ಇದನ್ನು ಅವರೇ ಒಪ್ಪಿಕೊಂಡಿದ್ದಾರೆ ಕೂಡ.

"ಬುಮ್ರಾ ಸದ್ಯ ವಿಶ್ವದ ನಂ.1 ಬೌಲರ್‌. ವಿಶ್ವ ದರ್ಜೆಯ ಗುಣಮಟ್ಟದ ಬೌಲರ್‌ ಅವರು. ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಹೇಳಬಹುದು,'' ಎಂದಿದ್ದಾರೆ. ಆದರೆ, ಯೂನಿವರ್ಸ್‌ ಬಾಸ್‌ ಅವರ ಬ್ಯಾಟ್‌ ಏನನ್ನು ಹೇಳುತ್ತದೆ? ಎಂಬುದರ ಬಗ್ಗೆ ಗೇಲ್‌ ತುಟಿ ಬಿಚ್ಚಿಲ್ಲ.

Story first published: Wednesday, June 26, 2019, 23:49 [IST]
Other articles published on Jun 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X