ಕಾಬೂಲ್ ವಿಮಾನ ನಿಲ್ದಾಣದಲ್ಲಿ ವಿಮಾನದಿಂದ ಬಿದ್ದು ಅಫ್ಘಾನ್ ಫುಟ್ಬಾಲರ್ ಸಾವು

ಕಾಬೂಲ್: ಕಾಬೂಲ್ ವಿಮಾನ ನಿಲ್ದಾಣದಲ್ಲಿ ವಿಮಾನದಿಂದ ಬಿದ್ದು ಅಫ್ಘಾನಿಸ್ತಾನದ ರಾಷ್ಟ್ರೀಯ ಫುಟ್ಬಾಲ್ ತಂಡದ ಆಟಗಾರನೊಬ್ಬ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಯುನೈಟೆಡ್ ಸ್ಟೇಟ್ಸ್ ವಿಮಾನಕ್ಕೆ ಹತ್ತಿದ್ದ ಫುಟ್ಬಾಲರ್ ವಿಮಾನದಿಂದ ಬಿದ್ದಿರುವ ಘಟನೆ ಸೋಮವಾರ (ಆಗಸ್ಟ್ 16) ನಡೆದಿರುವುದಾಗಿ ಅಫ್ಘಾನ್ ನ್ಯೂಸ್ ಏಜೆನ್ಸಿ ಅರಿಯಾನಾ ಗುರುವಾರ (ಆಗಸ್ಟ್ 19) ಹೇಳಿದೆ.

ಮಗುವಿನ ಚಿಕಿತ್ಸೆಗೆ ಒಲಿಂಪಿಕ್ಸ್ ಬೆಳ್ಳಿ ಪದಕ ಹರಾಜಿಗಿಟ್ಟ ಮಾರಿಯಾ ಆ್ಯಂಡ್ರೆಜಿಕ್!ಮಗುವಿನ ಚಿಕಿತ್ಸೆಗೆ ಒಲಿಂಪಿಕ್ಸ್ ಬೆಳ್ಳಿ ಪದಕ ಹರಾಜಿಗಿಟ್ಟ ಮಾರಿಯಾ ಆ್ಯಂಡ್ರೆಜಿಕ್!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ಗಳು ಆಡಳಿತವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿರುವುದರಿಂದ ಅಲ್ಲಿನ ಜನರ ಜೀವನ ಸಂಕಷ್ಟಕ್ಕೀಡಾಗಿದೆ. ಹೀಗಾಗಿ ಅಫ್ಘಾನ್‌ನಿಂದ ಬೇರೆ ದೇಶಕ್ಕೆ ಹೋಗಲು ಅಲ್ಲಿ ಜನ ಪರದಾಡುತ್ತಿದ್ದಾರೆ. ಆಗಸ್ಟ್ 15ರ ಭಾನುವಾರ ಚಲಿಸುತ್ತಿದ್ದ ಯುಎಸ್ ವಿಮಾನದಿಂದ ಜನ ಬಿದ್ದು ಮೃತರಾಗಿದ್ದ ಘಟನೆ ವರದಿಯಾಗಿತ್ತು. ಅದರ ಬೆನ್ನಲ್ಲೇ ಫುಟ್ಬಾಲರ್ ಕೊನೆಯುಸಿರೆಳೆದಿರುವ ಸಂಗತಿ ಕೇಳಿ ಬಂದಿದೆ.

ಅರಿಯಾನಾ ವರದಿಯ ಪ್ರಕಾರ, ಝಾಕಿ ಅನ್ವಾರಿ USAF ಬೋಯಿಂಗ್ C-17 ವಿಮಾನದಿಂದ ಕೆಳಗೆ ಬಿದ್ದು ಮೃತರಾಗಿದ್ದಾರೆ ಎಂದು ಕ್ರೀಡಾ ನಿರ್ದೇಶಕ ಖಾತರಿಪಡಿಸಿದ್ದಾರೆ. ಝಾಕಿ ಅನ್ವಾರಿ ಸಾವಿಗೆ ಕೆಲವೊಂದು ಕ್ರೀಡಾ ಸಂಸ್ಥೆಗಳು ಮತ್ತು ಫುಟ್ಬಾಲ್ ಪ್ರಿಯರಿಂದ ಸಂತಾಪ ವ್ಯಕ್ತಗೊಂಡಿದೆ.

ಅನಿಲ್ ಕುಂಬ್ಳೆಯಲ್ಲ, ರಾಹುಲ್ ದ್ರಾವಿಡ್ ಅಲ್ಲ, ಭಾರತೀಯ ಕ್ರಿಕೆಟ್‌ನಲ್ಲಿ ಅತೀ ವಿದ್ಯಾವಂತ ಕ್ರಿಕೆಟರ್ ಯಾರು ಗೊತ್ತಾ?!ಅನಿಲ್ ಕುಂಬ್ಳೆಯಲ್ಲ, ರಾಹುಲ್ ದ್ರಾವಿಡ್ ಅಲ್ಲ, ಭಾರತೀಯ ಕ್ರಿಕೆಟ್‌ನಲ್ಲಿ ಅತೀ ವಿದ್ಯಾವಂತ ಕ್ರಿಕೆಟರ್ ಯಾರು ಗೊತ್ತಾ?!

ಅಫ್ಘಾನಿಸ್ತಾನದಲ್ಲಿರುವ ಕ್ರಿಕೆಟಿಗರೂ ಈ ಮೊದಲು ದೇಶದಲ್ಲಿರುವ ತಾಲಿಬಾನ್ ಭೀತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಅಫ್ಘಾನ್ ಆಲ್ ರೌಂಡರ್‌ಗಳಾದ ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ತಮ್ಮ ಕುಟುಂಬಸ್ಥರನ್ನು ಬೇರೆಗೆ ಕೊಂಡೊಯ್ಯಲಾಗುತ್ತಿಲ್ಲ ಎಂದು ಹೇಳಿದ್ದರು. ಆದರೆ ಕ್ರಿಕೆಟಿಗರಿಗೆ ಅಲ್ಲಿ ಯಾವುದೇ ಸಮಸ್ಯೆಯಿಲ್ಲ. ಯಾಕೆಂದರೆ ತಾಲಿಬಾನ್‌ಗಳಿಗೆ ಕ್ರಿಕೆಟ್ ಮೆಚ್ಚಿನ ಆಟ ಎಂದು ಅಲ್ಲಿನ ಕ್ರಿಕೆಟ್ ಬೋರ್ಡ್ ತಿಳಿಸಿದೆ.

For Quick Alerts
ALLOW NOTIFICATIONS
For Daily Alerts
ಪೂರ್ವಭಾವಿಗಳು
VS
Story first published: Thursday, August 19, 2021, 22:58 [IST]
Other articles published on Aug 19, 2021
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X