ಕ್ರಿಸ್ಟಿಯಾನೊ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ತೊರೆಯುತ್ತಿಲ್ಲ: ಕೋಚ್ ಎರಿಕ್ ಸ್ಪಷ್ಟನೆ

ಕ್ರಿಸ್ಟಿಯಾನೊ ರೊನಾಲ್ಡೊ ಈ ಋತುವಿನಲ್ಲಿ ಬೇರೆ ಯಾವುದೇ ಕ್ಲಬ್‌ಗೆ ಹೋಗುವುದಿಲ್ಲ, ಮ್ಯಾಂಚೆಸ್ಟರ್ ಯುನೈಟೆಡ್‌ನ ಜರ್ಸಿಯಲ್ಲಿ ಆಡಲಿದ್ದಾರೆ ಎಂದು ಸುದ್ದಿ ಹೊರಬಂದಿದೆ.

ಮ್ಯಾಂಚೆಸ್ಟರ್ ಯುನೈಟೆಡ್ ಕೋಚ್ ಎರಿಕ್ ಟೆನ್ ಹಾಗ್ ಅವರು ರೊನಾಲ್ಡೊ ಕ್ಲಬ್ ತೊರೆಯುವುದಿಲ್ಲ ಎಂದು ಖಚಿತಪಡಿಸಿದ್ದಾರೆ. ಮ್ಯಾಂಚೆಸ್ಟರ್ ಯುನೈಟೆಡ್ ಹೊಸ ಮುಖ್ಯಸ್ಥ ರೊನಾಲ್ಡೊ ಕುರಿತಾಗಿ ಈ ಎಲ್ಲಾ ರೀತಿಯ ವದಂತಿಗಳನ್ನು ತಳ್ಳಿಹಾಕುವ ಮೂಲಕ ಘೋಷಿಸಿದ್ದಾರೆ.

ಜಪಾನ್ ಓಪನ್ 2022: ಕ್ವಾರ್ಟರ್ ಫೈನಲ್ ತಲುಪಿದ HS ಪ್ರಣೋಯ್, ಕಿಡಂಬಿ ಶ್ರೀಕಾಂತ್ ಔಟ್ಜಪಾನ್ ಓಪನ್ 2022: ಕ್ವಾರ್ಟರ್ ಫೈನಲ್ ತಲುಪಿದ HS ಪ್ರಣೋಯ್, ಕಿಡಂಬಿ ಶ್ರೀಕಾಂತ್ ಔಟ್

"ಇದು ಈಗ ಸ್ಪಷ್ಟವಾಗಿದೆ, ಕನಿಷ್ಠ ಮುಂದಿನ ಜನವರಿವರೆಗೆ ಏಳನೇ ಸಂಖ್ಯೆ (ಕ್ರಿಸ್ಟಿಯಾನೋ ರೊನಾಲ್ಡೊ) ನಮ್ಮೊಂದಿಗೆ ಇರುತ್ತಾರೆ ಎಂದು ಟೆನ್ ಹಾಗ್ ಲೀಸೆಸ್ಟರ್ ಸಿಟಿ ವಿರುದ್ಧದ ಪ್ರೀಮಿಯರ್ ಲೀಗ್ ಪಂದ್ಯದ ಮೊದಲು ಪತ್ರಿಕಾಗೋಷ್ಠಿಯಲ್ಲಿ ಕೋಚ್ ಎರಿಕ್‌ ಸ್ಪಷ್ಟಪಡಿಸಿದ್ದಾರೆ.

"ನಾವು ತಂಡವನ್ನು ಬಲಪಡಿಸಿದ್ದೇವೆ ಎಂಬುದು ಸ್ಪಷ್ಟವಾಗಿದೆ. ಒಬ್ಬ ಮ್ಯಾನೇಜರ್ ಆಗಿ ನೀವು ಯಾವಾಗಲೂ ಹೆಚ್ಚಿನದನ್ನು ಬಯಸುತ್ತೀರಿ ಮತ್ತು ನನ್ನ ಆಟಗಾರರಿಂದ ನಾನು ಏನನ್ನು ಬಯಸುತ್ತೇನೆ ಎಂಬುದನ್ನು ನಾನು ತೋರಿಸಬೇಕು. ನಾನು ಯಾವಾಗಲೂ ಗರಿಷ್ಠಗೊಳಿಸಲು ಬಯಸುತ್ತೇನೆ, ಆದರೆ ಒಂದು ನಿರ್ದಿಷ್ಟ ಹಂತದಲ್ಲಿ ನೀವು ಯಾವುದರಲ್ಲಿ ತೃಪ್ತರಾಗಿರಬೇಕು ಎಂಬ ಅರಿವಿರಬೇಕು'' ಎಂದು ಕೋಚ್ ತಿಳಿಸಿದ್ದಾರೆ.

ಮ್ಯಾಂಚೆಸ್ಟರ್ ಯುನೈಟೆಡ್‌ನಿಂದ ರೊನಾಲ್ಡೊ ನಿರ್ಗಮನದ ಬಗ್ಗೆ ಊಹಾಪೋಹಗಳು ಮುಂದುವರೆದಿದೆ. ಹೊಸ ಕೋಚ್ ಟೆನ್ ಹಾಗ್ ಅವರೊಂದಿಗಿನ ಸಂಬಂಧದ ಬಗ್ಗೆ ವಿವಿಧ ವಿಷಯಗಳು ಕೇಳಿಬರುತ್ತಿವೆ. ಕ್ರಿಸ್ಟಿಯಾನೋ ರೊನಾಲ್ಡೊ ಪ್ರೀಮಿಯರ್ ಲೀಗ್‌ನಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್‌ನ ಬಹುಪಾಲು ಪಂದ್ಯಗಳನ್ನು ಡಚ್ ತರಬೇತುದಾರರೊಂದಿಗೆ ಪ್ರಾರಂಭಿಸಿಲ್ಲ.

ರೊನಾಲ್ಡೊ ಅವರ ಏಜೆಂಟ್ ಜಾರ್ಜ್ ಮೆಂಡೆಸ್ ಪ್ರಯತ್ನಗಳನ್ನ ನಡೆಸುತ್ತಿದ್ದು, ಸದ್ಯಕ್ಕೆ ರೊನಾಲ್ಡೊಗೆ ಪಾವತಿಸಲು ಯಾವುದೇ ಕ್ಲಬ್‌ಗಳು ಸಿದ್ಧವಾಗಿಲ್ಲ. ಯಾವುದೇ ಕ್ಲಬ್ ರೊನಾಲ್ಡೊ ಅವರ ಸಂಬಳವನ್ನು ಪಾವತಿಸಲು ಸಾಧ್ಯವಾಗದ ಕಾರಣ CR 7 ಮ್ಯಾಂಚೆಸ್ಟರ್‌ನಲ್ಲಿ ಉಳಿಯಬೇಕಾಗಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, September 1, 2022, 23:45 [IST]
Other articles published on Sep 1, 2022

Latest Videos

  + More
  + ಇನ್ನಷ್ಟು
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X