ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ವಿಶ್ವಕಪ್ 2018: ಅರ್ಜೆಂಟೀನಾ ಸೋಲಿಗೆ ಕಾರಣವಾದ 5 ಅಂಶಗಳು

By Mahesh
fifa-wc-2018-five-reasons-why-argentina-failed-against-croatia

ಬೆಂಗಳೂರು, ಜೂನ್ 22: ಫೀಫಾ ವಿಶ್ವಕಪ್ 2018ರ ಡಿ ಗುಂಪಿನ ಮಹತ್ವದ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ ಕ್ರೋವೇಷಿಯಾ 3-0 ಅಂತರದಲ್ಲಿ ಭರ್ಜರಿ ಜಯ ದಾಖಲಿಸಿದೆ.

ಕ್ರೋವೇಷಿಯಾ ವಿರುದ್ಧ ಡ್ರಾ ಅಥವಾ ಸೋಲು ಕಂಡರೆ ಅರ್ಜೆಂಟೀನಾ, ಟೂರ್ನಮೆಂಟ್ ನಿಂದ ಹೊರ ಬೀಳಲಿದೆ ಎಂಬ ಭಯ ಅಭಿಮಾನಿಗಳನ್ನು ಕಾಡುತ್ತಿತ್ತು. ಅಭಿಮಾನಿಗಳಿಗೆ ಅಭಯ ನೀಡುವಂಥ ಆಟವನ್ನು ಮೆಸ್ಸಿ ಪಡೆ ಆಡಲೇ ಇಲ್ಲ.

ವಿಶ್ವಕಪ್ : ಅರ್ಜೆಂಟೀನಾ ವಿರುದ್ಧ ಕ್ರೋವೇಷಿಯಾಕ್ಕೆ ಭರ್ಜರಿ ಜಯವಿಶ್ವಕಪ್ : ಅರ್ಜೆಂಟೀನಾ ವಿರುದ್ಧ ಕ್ರೋವೇಷಿಯಾಕ್ಕೆ ಭರ್ಜರಿ ಜಯ

ಹಾಗೇ ನೋಡಿದರೆ ಪಂದ್ಯದುದ್ದಕ್ಕೂ ಸಮಬಲದ ಹೋರಾಟ ಕಂಡು ಬಂದಿತು. ಅರ್ಜೆಂಟೀನಾ ಸೋತ ಕ್ಷಣಕ್ಕೆ ಲಿಯೊನೆಲ್ ಮೆಸ್ಸಿ ಮೇಲೆ ಎಲ್ಲಾ ತಪ್ಪುಗಳನ್ನು ಹೇರಲಾಗುವುದಿಲ್ಲ. 2014ರ ರನ್ನರ್ ಅಪ್ ತಂಡದ ಮೇಲೆ ಇದ್ದ ನಿರೀಕ್ಷೆಗೆ ತಕ್ಕಂತೆ ಮಾತ್ರ ಆಡಲಿಲ್ಲ.

ಫೀಫಾ ವಿಶ್ವಕಪ್ 2018 ವಿಶೇಷ ಪುಟ : ವೇಳಾಪಟ್ಟಿ | ತಂಡಗಳು | ಅಂಕಪಟ್ಟಿ

ಪಂದ್ಯದ 53ನೇ ನಿಮಿಷದಲ್ಲಿ ರೆಬಿಕ್, 80ನೇ ನಿಮಿಷದಲ್ಲಿ ಮೊಡ್ರಿಚ್, 90ನೇ ನಿಮಿಷದಲ್ಲಿ ರಾಕಿಟಿಚ್ ಗೋಲು ಗಳಿಸಿದರು. ಮೂರು ಬಾರಿಯೂ ಅರ್ಜೆಂಟೀನಾದ ಗೋಲ್ ಕೀಪರ್ ಎಸಗಿದ ಪ್ರಮಾದ ಎದ್ದು ಕಾಣುತ್ತಿತ್ತು. ಅರ್ಜೆಂಟೀನಾ ಸೋಲಿಗೆ ಕಾರಣವಾದ ಐದು ಅಂಶಗಳು ಇಲ್ಲಿದೆ..

ಜಾರ್ಗ್ ಸಂಪೋಲಿ ಆಯ್ಕೆಯಲ್ಲಿ ಲೋಪ

ಜಾರ್ಗ್ ಸಂಪೋಲಿ ಆಯ್ಕೆಯಲ್ಲಿ ಲೋಪ

ಕ್ರೋವೇಷಿಯಾ ತಂಡವನ್ನು ಹಗುರವಾಗಿ ಪರಿಗಣಿಸಿದ ಅರ್ಜೆಂಟೀನಾದ ಕೋಚ್ ಸಂಪೋಲಿ ಅವರು ಭಾರಿ ಬೆಲೆ ತೆತ್ತಿದ್ದಾರೆ. ಅರ್ಜೆಂಟೀನಾದ ಸ್ಟಾರ್ ಆಟಗಾರರಾದ ಏಂಜೆಲ್ ಡಿ ಮಾರಿಯಾ, ಗೊನ್ಜಾಲೊ ಹಿಗ್ವೇನ್, ಪಾಲೋ ಡಿಬಾಲಾ ಅವರನ್ನು ಬೆಂಚು ಕಾಯುವಂತೆ ಮಾಡಿದ್ದು ದೊಡ್ಡ ಪ್ರಮಾದವಾಯಿತು. ಎನ್ಜೊ ಪೆರೆಜ್, ಗ್ಯಾಬ್ರಿಯಲ್ ಮರ್ಸಾಡೋ, ನಿಕೊಲೊಸ್ ಟಾಗ್ಲಿಫಿಕೋ, ಮ್ಯಾಕ್ಸಿ ಮೆಜಾ ಹಾಗೂ ಮಾರ್ಕೊಸ್ ಅಕುನಾಗೆ ಅವಕಾಶ ನೀಡಿದ್ದು ತಪ್ಪು ಎಂಬುದು ಅರಿವಾಗುವಷ್ಟರಲ್ಲಿ ಪಂದ್ಯ ಕೈತಪ್ಪಿ ಹೋಗಿತ್ತು.

2. ರಣತಂತ್ರದಲ್ಲಿ ಎಡವಿದ ಅರ್ಜೆಂಟೀನಾ

2. ರಣತಂತ್ರದಲ್ಲಿ ಎಡವಿದ ಅರ್ಜೆಂಟೀನಾ

ಐಸ್ ಲ್ಯಾಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ 4-2-3-1 ಮಾದರಿಯಲ್ಲಿ ಕಣಕ್ಕಿಳಿದಿದ್ದ ಅರ್ಜೆಂಟೀನಾ 1-1 ಡ್ರಾ ಸಾಧಿಸಿದ್ದೇ ಸಾಧನೆಯಾಯಿತು.

ಕ್ರೋವೇಷಿಯಾ ವಿರುದ್ಧ 3-4-3-1 ಮಾದರಿಯಲ್ಲಿ ಅರ್ಜೆಂಟೀನಾ ಕಣಕ್ಕಿಳಿಯುತ್ತಿದೆ. 1-3-2-4-1 ಮಾದರಿಯಲ್ಲಿ ಲೂಕಾ ಮೊಡ್ರಿಚ್ ನಾಯಕತ್ವದಲ್ಲಿ ಮೈದಾನಕ್ಕಿಳಿದು ಸಮರ್ಥವಾಗಿ ಪ್ರದರ್ಶನ ನೀಡಿತು.

ಅರ್ಹತಾ ಸುತ್ತಿನಲ್ಲಿ ನಾಲ್ವರು ಆಟಗಾರರನ್ನು ರಕ್ಷಣಾ ಪಡೆಯಲ್ಲಿ ಇರಿಸಿಕೊಳ್ಳುತ್ತಿದ್ದ ಅರ್ಜೆಂಟೀನಾ, ಈ ಪಂದ್ಯದಲ್ಲಿ ರಕ್ಷಣಾ ತಂತ್ರ ಬದಲಾಯಿಸಿದ್ದರಿಂದ ಕ್ರೊವೇಷಿಯಾಕ್ಕೆ ದಾಳಿ ಮಾಡಲು ಸುಲಭವಾಯಿತು. ಮೋಡ್ರಿಚ್ ಹಾಗೂ ರೆಬಿಕ್ ಸತತ ದಾಳಿ ನಡೆಸಿ, ಗೋಲು ಬಾರಿಸಿದರು.

3. ಆಟಗಾರರನ್ನು ಬಳಸಿಕೊಂಡ ರೀತಿ

ಚೆಲ್ಸಿ ಪರ ಆಡುವ 36 ವರ್ಷ ವಯಸ್ಸಿನ ವಿಲ್ಲಿ ಕಾಬಾಲ್ಲೆರೋ ಕಳಪೆ ಫಾರ್ಮ್ ನಲ್ಲಿರುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿತ್ತು. ಆದರೆ, ವಿಲ್ಲಿ ಮಾಡಿದ ಪ್ರಮಾದದಿಂದಾಗಿ ಕ್ರೋವೇಷಿಯಾದ ಆಂಟೆ ರೆಬಿಕ್ ಅದ್ಭುತವಾಗಿ ಗೋಲು ಬಾರಿಸಿದರು.

4. ಲೂಕಾ ಮೋಡ್ರಿಚ್ ಆಟ

4. ಲೂಕಾ ಮೋಡ್ರಿಚ್ ಆಟ

ಜನಪ್ರಿಯ ಆಟಗಾರ, ಅದ್ಭುತ ಮಿಡ್ ಫೀಲ್ಡರ್ ಲೂಕಾ ಮೊಡ್ರಿಚ್ ಅವರು ತಮ್ಮ ಅನುಭವವನ್ನು ಸಮರ್ಥವಾಗಿ ಬಳಸಿಕೊಂಡರು. ಬಾರ್ಸಿಲೋನಾದ ಮೆಸ್ಸಿ ವಿರುದ್ಧ ಯಾವ ರೀತಿ ಆಡಬೇಕು ಎಂಬುದನ್ನು ರಿಯಲ್ ಮ್ಯಾಡ್ರಿಡ್ ಆಟಗಾರ ಮೊಡ್ರಿಚ್ ಚೆನ್ನಾಗಿ ಬಲ್ಲರು. ಕ್ರೋವೇಷಿಯಾದ ನಾಯಕ ಮೋಡ್ರಿಚ್ ಮುಂಪಡೆಯಲ್ಲಿ ಉತ್ತಮವಾಗಿ ಆಡಿ, ಗೋಲು ಗಳಿಸಿದ್ದಲ್ಲದೆ, ಮೆಸ್ಸಿ ಕಟ್ಟಿ ಹಾಕುವಲ್ಲಿ ನೆರವಾದರು.

5. ಸಂಘಟಿತ ಹೋರಾಟದ ಕೊರತೆ

ಮೆಸ್ಸಿ ಮುಂಪಡೆಯಲ್ಲಿ ಮುನ್ನುಗಲು ಆಗದಂಥ ರಕ್ಷಣಾ ತಂತ್ರವನ್ನು ಕ್ರೋವೇಷಿಯಾ ಮಾಡಿತ್ತು. ಮೆಸ್ಸಿ ಸುತ್ತ ಇತರೆ ಆಟಗಾರರನ್ನು ನಿಲ್ಲಿಸಿ ಮುನ್ನುಗ್ಗುವ ತಂತ್ರ ಹೆಣೆದಿದ್ದು ತಪ್ಪಾಯಿತು. ಈ ತಪ್ಪನ್ನು ಸರಿ ಪಡಿಸಿಕೊಳ್ಳುವ ಹೊತ್ತಿಗೆ ಪಂದ್ಯ ಕೈತಪ್ಪಿತ್ತು.

Story first published: Friday, June 22, 2018, 17:09 [IST]
Other articles published on Jun 22, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X