ಕತಾರ್‌ನಲ್ಲಿ ನಡೆಯುತ್ತಿರುವ 2022ರ ಫಿಫಾ ಫುಟ್ಬಾಲ್ ವಿಶ್ವಕಪ್ ಆರಂಭವಾಗಿ ಈಗಾಗಲೇ ಎರಡು ವಾರಗಳು ಕಳೆದಿದ್ದು, ಇದೀಗ ಪ್ರತಿಷ್ಠಿತ ಪಂದ್ಯಾವಳಿ ನಿರ್ಣಾಯಕ ಘಟ್ಟಕ್ಕೆ ತಲುಪಿದೆ.
ಈ ಬಾರಿ ಕೇವಲ 28 ದಿನಗಳಲ್ಲಿ ಟೂರ್ನಿಯನ್ನು ಆಯೋಜಿಸಲಾಗಿದ್ದು, ಶುಕ್ರವಾರ(ಡಿಸೆಂಬರ್ 9)ದಿಂದ ಅಂತಿಮ 8ರ ಘಟ್ಟದ ಪಂದ್ಯಗಳು ಆರಂಭವಾಗಲಿವೆ. ಈ ಟೂರ್ನಿಯು ಕೆಲವು ಅಚ್ಚರಿ ಮತ್ತು ಆಘಾತಕಾರಿ ಫಲಿತಾಂಶಗಳಿಗೆ ಸಾಕ್ಷಿಯಾಗಿದೆ.
ಫಿಫಾ ಫುಟ್ಬಾಲ್ ವಿಶ್ವಕಪ್ ಟ್ರೋಫಿ ಗೆಲ್ಲುವ ಕನಸು ಹೊತ್ತು ಬಂದ 32 ತಂಡಗಳು ಆರಂಭಿಕ ಹಂತದಲ್ಲಿ 8 ವಿವಿಧ ಗುಂಪುಗಳಲ್ಲಿ ಸೆಣಸಿದ್ದವು. ಈಗ ಪ್ರಶಸ್ತಿ ಪೈಪೋಟಿಯಲ್ಲಿ 8 ತಂಡಗಳಷ್ಟೇ ಉಳಿದುಕೊಂಡಿವೆ.
Team INDIA Schedule 2023 : ಶ್ರೀಲಂಕಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ವಿರುದ್ಧದ ತವರಿನ ಸರಣಿಯ ವೇಳಾಪಟ್ಟಿ ಪ್ರಕಟ
ಹಾಲಿ ಚಾಂಪಿಯನ್ ಫ್ರಾನ್ಸ್, ದಾಖಲೆಯ 5 ಬಾರಿಯ ಚಾಂಪಿಯನ್ ಬ್ರೆಜಿಲ್, 2 ಬಾರಿ ವಿಶ್ವಕಪ್ ಗೆದ್ದಿದ್ದರೂ ಲಿಯೋನೆಲ್ ಮೆಸ್ಸಿ ನಾಯಕತ್ವದಲ್ಲಿ ಮೊದಲ ಪ್ರಶಸ್ತಿಗೆ ಕಾಯುತ್ತಿರುವ ಅರ್ಜೆಂಟೀನಾ, 56 ವರ್ಷಗಳ ಬಳಿಕ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿರುವ ಇಂಗ್ಲೆಂಡ್, ಇನ್ನು ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ನೆದರ್ಲ್ಯಾಂಡ್ಸ್, ಮೊರಾಕ್ಕೊ, ಪೋರ್ಚುಗಲ್, ಕ್ರೊವೇಷಿಯಾ ತಂಡಗಳು ಸೆಮಿಫೈನಲ್‌ಗೇರಲು ಕ್ವಾರ್ಟರ್ ಫೈನಲ್‌ನಲ್ಲಿ ಸೆಣಸಾಡಲಿವೆ.
ಕ್ವಾರ್ಟರ್ ಫೈನಲ್‌ನಲ್ಲಿ ಹಣಾಹಣಿ ಹೇಗಿರಲಿದೆ?
ಫಿಫಾ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯಗಳು ಭಾರೀ ಕುತೂಹಲ ಮೂಡಿಸಿದ್ದು, ಮೊದಲ ಕ್ವಾರ್ಟರ್‌ನಲ್ಲಿ ಬ್ರೆಜಿಲ್‌ಗೆ ಕ್ರೊವೇಷಿಯಾ ಎದುರಾಗಲಿದೆ. ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಬ್ರೆಜಿಲ್ 4-1 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಇನ್ನು ಕ್ರೊವೇಷಿಯಾ ತಂಡ ರೋಚಕ ಪೆನಾಲ್ಟಿ ಶೂಟೌಟ್‌ನಲ್ಲಿ ಜಪಾನ್ ವಿರುದ್ಧ ಗೆದ್ದು ಅಂತಿಮ 8ರ ಘಟ್ಟ ತಲುಪಿದೆ.
2ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಅರ್ಜೆಂಟೀನಾ ಹಾಗೂ ನೆದರ್ಲ್ಯಾಂಡ್ಸ್ ತಂಡಗಳು ಸೆಣಸಾಡಲಿವೆ. ಎರಡೂ ತಂಡಗಳಿಗೆ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಕಠಿಣ ಪೈಪೋಟಿ ಎದುರಾಗಿರಲಿಲ್ಲ. ಆಸ್ಪ್ರೇಲಿಯಾ ವಿರುದ್ಧ ಅರ್ಜೆಂಟೀನಾ ಗೆದ್ದು ಬಂದರೆ, ಯುಎಸ್ಎ ತಂಡವನ್ನು ನೆದರ್ಲ್ಯಾಂಡ್ಸ್ ಸೋಲಿಸಿತ್ತು.
IND vs BAN: ಏಕದಿನ ಕ್ರಿಕೆಟ್ನಲ್ಲಿ ಈ ಸಾಧನೆಗೈದ ವೇಗದ ಭಾರತೀಯ ಬ್ಯಾಟರ್ ಶ್ರೇಯಸ್ ಅಯ್ಯರ್
ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಕ್ರಿಸ್ಟಿಯಾನೋ ರೊನಾಲ್ಡೋ ಆಡದಿದ್ದರೂ 6-1 ಅಂತರದಲ್ಲಿ ಸ್ವಿಟ್ಜರ್ಲ್ಯಾಂಡ್ ತಂಡವನ್ನು ಸೋಲಿಸಿದ ಪೋರ್ಚುಗಲ್‌ಗೆ ಕ್ವಾರ್ಟರ್ ಫೈನಲ್‌ನಲ್ಲಿ ಮೊರಾಕ್ಕೊ ಎದುರಾಗಲಿದೆ. ಸ್ಪೇನ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಅಧಿಕಾರಯುತ ಗೆಲುವು ಸಾಧಿಸಿದ ಮೊರಾಕ್ಕೊ ಸೆಮಿಫೈನಲ್ ತಲುಪಲು ಬಲಿಷ್ಠ ಪೋರ್ಚುಗಲ್ ತಂಡವನ್ನು ಎದುರಿಸಲಿದೆ.
ಫಿಫಾ ವಿಶ್ವಕಪ್ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ನಿರಾಯಾಸವಾಗಿ ಗೆದ್ದ ಫ್ರಾನ್ಸ್ ಹಾಗೂ ಇಂಗ್ಲೆಂಡ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರರಿದ್ದು, ರೋಚಕ ಪೈಪೋಟಿಯನ್ನು ನಿರೀಕ್ಷಿಸಲಾಗಿದೆ.
ಫಿಫಾ ವಿಶ್ವಕಪ್ ಕ್ವಾರ್ಟರ್ ಫೈನಲ್ ವೇಳಾಪಟ್ಟಿ; ಪಂದ್ಯ, ದಿನಾಂಕ, ಸಮಯ
* ಬ್ರೆಜಿಲ್ vs ಕ್ರೊವೇಷಿಯಾ, ಡಿಸೆಂಬರ್ 9, ರಾತ್ರಿ 8.30
* ಅರ್ಜೆಂಟೀನಾ vs ನೆದರ್‌ಲೆಂಡ್ಸ್, ಡಿಸೆಂಬರ್ 9, ರಾತ್ರಿ 12.30
* ಪೋರ್ಚುಗಲ್ vs ಮೊರಾಕ್ಕೊ, ಡಿಸೆಂಬರ್ 10, ರಾತ್ರಿ 8.30
* ಫ್ರಾನ್ಸ್ vs ಇಂಗ್ಲೆಂಡ್, ಡಿಸೆಂಬರ್ 10, ರಾತ್ರಿ 12.30
* ಮೊದಲ ಸೆಮಿಫೈನಲ್, ಡಿಸೆಂಬರ್ 14, ರಾತ್ರಿ 12.30
* ಎರಡನೇ ಸೆಮಿಫೈನಲ್, ಡಿಸೆಂಬರ್ 15, ರಾತ್ರಿ 12.30
* ಮೂರನೇ ಸ್ಥಾನಕ್ಕಾಗಿ ಪ್ಲೇಆಫ್- ಡಿಸೆಂಬರ್ 17, ರಾತ್ರಿ 8.30
* ಫೈನಲ್ - ಡಿಸೆಂಬರ್ 18, ರಾತ್ರಿ 8.30