ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

FIFA World Cup 2022: ರೊನಾಲ್ಡೊ ವಿಶ್ವಕಪ್ ಕನಸು ಭಗ್ನ, ಪೋರ್ಚುಗಲ್ ಮಣಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಮೊರೊಕ್ಕೊ

FIFA World Cup 2022: Morocco Beat Portugal By 1-0 And Enter Semi-Final For The First Time

ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವಕಪ್ ಕನಸು ಭಗ್ನಗೊಂಡಿದೆ. ಶನಿವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊರೊಕ್ಕೊ ಪೋರ್ಚುಗಲ್ ವಿರುದ್ಧ 1-0 ಗೋಲಿನಿಂದ ಜಯ ಸಾಧಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ.

ಅಲ್ ತುಮಾಮ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊರೊಕ್ಕೊ ಇತಿಹಾಸ ಸೃಷ್ಟಿಸಿತು. ಫಿಫಾ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ಆಫ್ರಿಕನ್ ದೇಶ ಎನ್ನುವ ಖ್ಯಾತಿಗೆ ಪಾತ್ರವಾಯಿತು. ಯೂಸುಫ್ ಅನ್ನಸ್ರಿ ಮೊರೊಕ್ಕೊ ಪರವಾಗಿ ಏಕೈಕ ಗೋಲು ದಾಖಲಿಸಿ ಐತಿಹಾಸಿಕ ಜಯಕ್ಕೆ ಕಾರಣವಾದರು. 42ನೇ ನಿಮಿಷದಲ್ಲಿ ಮೊರೊಕ್ಕೊ ಗೋಲು ದಾಖಲಿಸಿ ಸಂಭ್ರಮಿಸಿತು.

IPL 2023: ಕೊಹ್ಲಿ, ಮ್ಯಾಕ್ಸ್‌ವೆಲ್ ಅಲ್ಲ, 2023ರ ಐಪಿಎಲ್‌ನಲ್ಲಿ ಮಿಂಚಬಹುದಾದ ಆರ್‌ಸಿಬಿ ಆಟಗಾರರು ಇವರುIPL 2023: ಕೊಹ್ಲಿ, ಮ್ಯಾಕ್ಸ್‌ವೆಲ್ ಅಲ್ಲ, 2023ರ ಐಪಿಎಲ್‌ನಲ್ಲಿ ಮಿಂಚಬಹುದಾದ ಆರ್‌ಸಿಬಿ ಆಟಗಾರರು ಇವರು

ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಈ ಪಂದ್ಯದಲ್ಲಿ ಕೂಡ ಹೊರಗಿಡಲಾಯಿತು. ಅವರ ಬದಲಿಗೆ ಕಳೆದ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿದ್ದ ಗೊನ್ಕಾಲೊ ರಾಮೋಸ್‌ ಆಡಿದರು. ಪೋರ್ಚುಗಲ್ ತಂಡದ ತರಬೇತುದಾರ ಸ್ಯಾಂಟೋಸ್ ತಂಡದಲ್ಲಿ ಒಂದು ಬದಲಾವಣೆ ಮಾಡಿದ್ದರು. ವಿಲಿಯಂ ಕಾರ್ವಾಲ್ಹೋ ಬದಲಿಗೆ ರುಬೆನ್ ನೆವೆಸ್ ಅವರನ್ನು ಕಣಕ್ಕಿಳಿಸಲಾಯಿತು.

ತಂಡದ ಆಂತರಿಕ ಕಾರಣಗಳಿಂದಾಗಿ ಕ್ರಿಸ್ಟಿಯಾನೊ ರೊನಾಲ್ಡೊ ಆಟದ ಮೊದಲ 50 ನಿಮಿಷಗಳು ಬೆಂಚ್ ಕಾದರು. ಆಟದ 42ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಮೊರೊಕ್ಕೊ, ಪೋರ್ಚುಗಲ್ ಗೋಲು ಗಳಿಸಲು ಮಾಡಿದ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಿತು. ಅಂತಿಮ ಕ್ಷಣದವರೆಗೂ ಪೋರ್ಚುಗಲ್ ಗೋಲು ಗಳಿಸಲು ಸಾಧ್ಯವಾಗಲೇ ಇಲ್ಲ, ರೊನಾಲ್ಡೊ ಕೊನೆಯ ಕ್ಷಣದಲ್ಲಾದರೂ ಮ್ಯಾಜಿಕ್ ಮಾಡುತ್ತಾರೆ ಎಂದು ನಂಬಿದ್ದ ಕೋಟ್ಯಂತರ ಅಭಿಮಾನಿಗಳ ಕನಸು ನನಸಾಗಲಿಲ್ಲ.

FIFA World Cup 2022: Morocco Beat Portugal By 1-0 And Enter Semi-Final For The First Time

ವಿಶ್ವಕಪ್ ಗೆಲ್ಲುವ ಕನಸು ಭಗ್ನ

50 ನಿಮಿಷಗಳ ಬಳಿಕ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಮೈದಾನಕ್ಕೆ ಬಂದರೂ ತಮ್ಮ ತಂಡದ ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. 37 ವರ್ಷದ ಕ್ರಿಸ್ಟಿಯಾನೊ ರೊನಾಲ್ಡೊಗೆ ಇದು ಕೊನೆಯ ವಿಶ್ವಕಪ್ ಆಗಿದೆ. ಈ ಬಾರಿ ಕಪ್ ಗೆಲ್ಲಲೇಬೆಕೆಂಬ ಛಲದೊಂದಿಗೆ ಬಂದಿದ್ದ ರೊನಾಲ್ಡೊ ಪಡೆಗೆ ಮೊರೊಕ್ಕೊ ದೊಡ್ಡ ಆಘಾತ ನೀಡಿದೆ.

ಪೋರ್ಚುಗಲ್ ತಂಡ ಸೋಲುತ್ತಿದ್ದಂತೆ ಕ್ರಿಸ್ಟಿಯಾನೊ ರೊನಾಲ್ಡೊ ಮೈದಾನದಲ್ಲೇ ಕಣ್ಣೀರು ಹಾಕಿದರು. ಅವರು ಉಕ್ಕಿ ಬರುತ್ತಿರುವ ದುಃಖವನ್ನು ತಡೆದುಕೊಂಡು ಮೈದಾನದಿಂದ ಹೊರನಡೆದರು.

ಮೊರೊಕ್ಕೊ ತಂಡಕ್ಕೆ ಇದು ಐತಿಹಾಸಿಕ ಜಯ, ಯೂರೋಪ್ ಪ್ರಾಬಲ್ಯವಿರುವ ಫುಟ್ಬಾಲ್‌ನಲ್ಲಿ ಮೊದಲ ಬಾರಿಗೆ ಆಫ್ರಿಕಾ ಖಂಡದ ರಾಷ್ಟ್ರವೊಂದು ಸೆಮಿಫೈನಲ್ ಪ್ರವೇಶಿಸಿದೆ.

Story first published: Saturday, December 10, 2022, 23:50 [IST]
Other articles published on Dec 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X