ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಇಂಡಿಯನ್ ಸೂಪರ್ ಲೀಗ್ ಫೈನಲ್ : ಬೆಂಗಳೂರು ಎದುರಾಳಿ ಗೋವಾ

Indian Super League : Mumbai City win but Goa reaches final

ಗೋವಾ, ಮಾರ್ಚ್ 13 : ರಾಫೆಲ್ ಬಾಸ್ಟೋಸ್ 6ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಗೋವಾ ಎಫ್ ಸಿ ತಂಡವನ್ನು ಎರಡನೇ ಲೆಗ್ ನ ಸೆಮಿಫೈನಲ್ ಪಂದ್ಯದಲ್ಲಿ 1-0 ಗೋಲಿನಿಂದ ಮಣಿಸಿದರೂ ಮುಂಬೈ ತಂಡಕ್ಕೆ ಯಾವುದೇ ಪ್ರಯೋಜನ ಆಗಲಿಲ್ಲ. 5-2ರ ಸರಾಸರಿಯಲ್ಲಿ ಯಶಸ್ಸು ಕಂಡ ಗೋವಾ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನ ಫೈನಲ್ ಪ್ರವೇಶಿಸಿತು.

ಮಾರ್ಚ್ 17ರಂದು ಮುಂಬೈಯಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಗೋವಾ ಹಾಗೂ ಬೆಂಗಳೂರು ಎಫ್ ಸಿ ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ. ಇದರೊಂದಿಗೆ ಈ ಬಾರಿ ಇಂಡಿಯನ್ ಸೂಪರ್ ಲೀಗ್ ನಲ್ಲಿ ಹೊಸ ಚಾಂಪಿಯನ್ ಮೂಡಿ ಬರುವುದು ಸ್ಪಷ್ಟ.

ಮುಂಬೈಗೆ ಮನೆಯಲ್ಲೇ ಮತ್ತೊಂದು ಆಘಾತ ನೀಡಿದ ಗೋವಾ ಮುಂಬೈಗೆ ಮನೆಯಲ್ಲೇ ಮತ್ತೊಂದು ಆಘಾತ ನೀಡಿದ ಗೋವಾ

ಮುಂಬೈ ಮುನ್ನಡೆ : 6ನೇ ನಿಮಿಷದಲ್ಲಿ ರಾಫೆಲ್ ಬಾಸ್ಟೋಸ್ ಗಳಿಸಿದ ಗೋಲಿನಿಂದ ಮುಂಬೈ ತಂಡ ಮುನ್ನಡೆ ಕಂಡಿತು. ಆದರೆ 45 ನಿಮಿಷಗಳ ಅವಧಿಯಲ್ಲಿ ಮುಂಬೈ ಗಳಿಸಿರುವ ಗೋಲು ಗೋವಾ ತಂಡವನ್ನು ಫೈನಲ್ ತಲುಪುವುದರಿಂದ ತಡೆಯಲು ಸಾಧ್ಯವಾಗಲಿಲ್ಲ. ಏಕೆಂದರೆ ಐದು ಗೋಲುಗಳ ಅಂತರದಿಂದ ಮುಂಬೈ ಗೆಲ್ಲಬೇಕಿತ್ತು. ಗೋವಾ ಆಡುತ್ತಿರುವ ರೀತಿ ನೋಡಿದರೆ ಅದು ಅಸಾಧ್ಯವಿತ್ತು.

ಗೋವಾ ಈ ಬಾರಿ ಮನೆಯಂಗಣದಲ್ಲಿ ಆಕ್ರಮಣಕಾರಿ ಆಟವಾಡಲಿಲ್ಲ. ಫೈನಲ್‌ಗಾಗಿ ಸಿದ್ಧಗೊಳ್ಳುತ್ತಿರುವ ಗೋವಾ ಹೆಚ್ಚು ಗಾಯಗಳು ಆಗದಂತೆ ನೋಡಿಕೊಳ್ಳುವ ರೀತಿಯಲ್ಲಿ ಪಂದ್ಯವನ್ನಾಡಿತು. ಮುಂಬೈಯಲ್ಲಿ ನಡೆದ ಪಂದ್ಯದಲ್ಲೂ ಬಾಸ್ಟೋಸ್ ಮೊದಲ ಗೋಲು ಗಳಿಸಿದ್ದರು. ಆರಾಮವಾಗಿ ಫೈನಲ್ ತಲಪುತ್ತೇವೆ ಎಂಬ ಆತ್ಮವಿಶ್ವಾಸದಲ್ಲಿದ್ದ ಕಾರಣ ಗೋವಾ ತಂಡ ಮುಂಬೈನ ಬ್ಯಾಕ್‌ಲೈನ್ ಮೇಲೆ ಹೆಚ್ಚಿನ ಒತ್ತಡ ಹೇರಲಿಲ್ಲ.

Indian Super League : Mumbai City win but Goa reaches final

ಇಂಡಿಯನ್ ಸೂಪರ್ ಲೀಗ್ ಫೈನಲ್ ತಲುಪಿದ ಬೆಂಗಳೂರು ಇಂಡಿಯನ್ ಸೂಪರ್ ಲೀಗ್ ಫೈನಲ್ ತಲುಪಿದ ಬೆಂಗಳೂರು

ಮನೆಯಂಗಣದಲ್ಲೇ ಗೋವಾ ತಂಡವನ್ನು ಸೋಲಿಸಲಾಗದೆ ಕಂಗೆಟ್ಟ ಮುಂಬೈ ಎರಡನೇ ಬಾರಿಗೆ ಬೃಹತ್ ಅಂತರದಲ್ಲಿ ಆಘಾತ ಅನುಭವಿಸಿತ್ತು. ಗೋವಾದಲ್ಲಿ ಪವಾಡ ನಡೆದಿದ್ದರೆ ಮಾತ್ರ ಮುಂಬೈ ಫೈನಲ್ ತಲುಪಲು ಸಾಧ್ಯವಿತ್ತು. ಆದರೆ ಆ ಪವಾಡ ಅಷ್ಟು ಸುಲಭವಾದುದಾಗಿರಲಿಲ್ಲ. ಫೆರಾನ್ ಕೊರೊಮಿನಾಸ್, ಎಡು ಬೇಡಿಯಾ, ಜಾಕಿಚಾಂದ್ ಸಿಂಗ್, ಬ್ರೆಂಡಾನ್ ಫೆರ್ನಾಂಡೆಸ್ ಅವರಂಥ ಆಟಗಾರರು ಗೋವಾದ ಅಟ್ಯಾಟ್ ವಿಭಾಗದಲ್ಲಿ ಮಿಂಚಿದ್ದಾರೆ. ಕೊರೊಮಿನಾಸ್ ಈಗಾಗಲೇ 16 ಗೋಲುಗಳನ್ನು ಗಳಿಸಿ ಸತತ ಎರಡನೇ ಬಾರಿಗೆ ಗೋಲ್ಡನ್ ಬೂಟ್ ಗೌರವಕ್ಕೆ ಸಜ್ಜಾಗಿದ್ದಾರೆ.

Story first published: Wednesday, March 13, 2019, 10:47 [IST]
Other articles published on Mar 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X