ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಒಡಿಶಾ ಎಫ್‌ಸಿ ವಿರುದ್ಧ ಗೆಲುವು ಸಾಧಿಸಿದ ಹೈದರಾಬಾದ್ ಎಫ್‌ಸಿ

ISL 2021-22: match 73 HFC vs OFC, Hyderabad FC match won by 3-2 Highlights

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಇಂದು 73ನೇ ಪಂದ್ಯ ಇಂದು ನಡೆದಿದ್ದು ಈ ಪಂದ್ಯದಲ್ಲಿ ಒಡಿಶಾ ಎಫ್‌ಸಿ ಹಾಗೂ ಹೈದರಾಬಾದ್ ಎಫ್‌ಸಿ ತಂಡಗಳು ಮುಖಾಮುಖಿಯಾಗಿದೆ. ರೋಚಕವಾಗಿ ನಡೆದ ಈ ಪಂದ್ಯದಲ್ಲಿ ಹೈದರಾಬಾದ್ ಎಪ್‌ಸಿ 3-2 ಅಂತರದಿಂದ ಗೆದ್ದು ಮೇಲುಗೈ ಸಾಧಿಸಿದೆ. ಈ ಗೆಲುವಿನೊಂದಿಗೆ ಹೈದರಾಬಾದ್ ಎಪ್‌ಸಿ ಅಗ್ರ ಸ್ಥಾನದಲ್ಲಿ ಭದ್ರವಾಗಿ ನೆಲೆಯೂರಿದೆ.

ಸಾಕಷ್ಟು ಪೈಪೋಟಿಯಿಂದ ಕೂಡಿದ್ದ ಈ ಪಂದ್ಯದಲ್ಲಿ ಮೊದರಾರ್ಧದ ಬಹುತೇಕ ಅವಧಿಯಲ್ಲಿ ಎರಡು ತಂಡಗಳು ಗೋಲು ಗಳಿಸಲು ವಿಫಲವಾಗಿದ್ದವು. ಆದರೆ ಮೊದಲಾರ್ಧದ ಅಂತ್ಯಕ್ಕೆ ಕೆಲವೇ ಸೆಕೆಂಡುಗಳಿರುವಾಗ ಒಡಿಶಾ ಎಫ್‌ಸಿ ಮೊದಲ ಗೋಲು ದಾಖಲಿಸಿ ಮುನ್ನಡೆಯನ್ನು ಪಡೆದುಕೊಲ್ಳುವಲ್ಲಿ ಯಶಸ್ವಿಯಾಯಿತು. ಹೀಗಾಗೊ ಮೊದಲಾರ್ಧದ ಅಂತ್ಯದಲ್ಲಿ ಒಡಿಶಾ ಪಡೆ 1-0 ಅಂತರದಿಂದ ಮೇಲುಗೈ ಸಾಧಿಸಿತ್ತು. ಜೆರ್ರಿ ಮಾವಿಹ್ಮಿಂಗ್ತಂಗ ಈ ಗೋಲು ಸಿಡಿಸಿದ್ದರು.

ವಿರಾಟ್‌ಗೆ ಮತ್ತೆ ಆರ್‌ಸಿಬಿ ನಾಯಕತ್ವ ಪಟ್ಟ? ಕೊಹ್ಲಿ ಉತ್ತರಕ್ಕೆ ಕಾದಿದೆ ಫ್ರಾಂಚೈಸಿ!ವಿರಾಟ್‌ಗೆ ಮತ್ತೆ ಆರ್‌ಸಿಬಿ ನಾಯಕತ್ವ ಪಟ್ಟ? ಕೊಹ್ಲಿ ಉತ್ತರಕ್ಕೆ ಕಾದಿದೆ ಫ್ರಾಂಚೈಸಿ!

ಆದರೆ ದ್ವಿತೀಯಾರ್ಧದ ಆರಂಭದಿಂದಲೇ ಹೈದರಾಬಾದ್ ಎಫ್‌ಸಿ ಆಕ್ರಮಣಕಾರಿ ಆಟಕ್ಕೆ ಮುಖದಾಗಿ ಅದರಲ್ಲಿ ಯಶಸ್ಸು ಗಳಿಸಿತ್ತು. 51ನೇ ನಿಮಿಷದಲ್ಲಿ ಜೋಯೆಲ್ ಜೋಸೆಫ್ ಹೈದರಾಬಾದ್ ತಂಡಕ್ಕೆ ಮೊದಲ ಗೋಲು ಗಳಿಸುವ ಮೂಲಕ ತಂಡ ಸಮಬಲ ಸಾಧಿಸಲು ಕಾರಣವಾದರು. ಅದಾದ ಬಳಿಕ 70ನೇ ನಿಮಿಷದಲ್ಲಿ ಹೈದರಾಬಾದ್ ತಂಡ ಎರಡನೇ ಗೋಲು ದಾಖಲಿಸುವ ಮೂಲಕ ಒಡಿಶಾ ತಂಡದ ಹಿನ್ನಡೆಗೆ ಕಾರಣವಾದರು. ನಾಯಕ ಜೋವೊ ವಿಕ್ಟರ್ ಈ ಗೋಲು ಸಿಡಿಸಿದ್ದರು.

ದ್ವಿತೀಯಾರ್ಧದ ಆರಂಭದಿಂದಲೇ ಹೈದರಾಬಾದ್ ಎಫ್‌ಸಿ ಆಕ್ರಮಣಕಾರಿ ಆಟಕ್ಕೆ ಮುಖದಾಗಿ ಅದರಲ್ಲಿ ಯಶಸ್ಸು ಗಳಿಸಿತ್ತು. 51ನೇ ನಿಮಿಷದಲ್ಲಿ ಜೋಯೆಲ್ ಜೋಸೆಫ್ ಹೈದರಾಬಾದ್ ತಂಡಕ್ಕೆ ಮೊದಲ ಗೋಲು ಗಳಿಸುವ ಮೂಲಕ ತಂಡ ಸಮಬಲ ಸಾಧಿಸಲು ಕಾರಣವಾದರು. ಅದಾದ ಬಳಿಕ 70ನೇ ನಿಮಿಷದಲ್ಲಿ ಹೈದರಾಬಾದ್ ತಂಡ ಎರಡನೇ ಗೋಲು ದಾಖಲಿಸುವ ಮೂಲಕ ಒಡಿಶಾ ತಂಡದ ಹಿನ್ನಡೆಗೆ ಕಾರಣವಾದರು. ನಾಯಕ ಜೋವೊ ವಿಕ್ಟರ್ ಈ ಗೋಲು ಸಿಡಿಸಿದ್ದರು.

ಈ ಎರಡನೇ ಗೋಲು ಸಿಡಿದ ಮೂನೇ ನಿಮಿಷದ ಅಂತರದಲ್ಲಿ ಹೈದರಾಬಾದ್ ಎಫ್‌ಸಿ ತನ್ನ ಮೂರನೇ ಗೋಲು ಸಿಡಿಸಲು ಸಫಲವಾಯಿತು. ಆಕಾಶ್ ಮಿಶ್ರಾ ಹೈದರಾಬಾದ್ ತಮಡಕ್ಕೆ ಮೂರನೇ ಗೋಲು ಸಿಡಿಸಿದ್ದರು. ಈ ಮೂಲಕ ಹೈದರಾಬಾದ್ ಎಫ್‌ಸಿ ಈ ಹಂತದಲ್ಲಿ 3-1 ಅಂತರದ ಮುನ್ನಡೆಯನ್ನು ಸಾಧಿಸಿತ್ತು.

ವೆಸ್ಟ್ ಇಂಡೀಸ್‌ ವಿರುದ್ಧದ ಓಡಿಐ ಸರಣಿಗೆ ಟೀಂ ಇಂಡಿಯಾ ಆಯ್ಕೆ: ರೋಹಿತ್ ಶರ್ಮಾ ನಾಯಕತ್ವವೆಸ್ಟ್ ಇಂಡೀಸ್‌ ವಿರುದ್ಧದ ಓಡಿಐ ಸರಣಿಗೆ ಟೀಂ ಇಂಡಿಯಾ ಆಯ್ಕೆ: ರೋಹಿತ್ ಶರ್ಮಾ ನಾಯಕತ್ವ

ಅದಾದ ಬಳಿಕ ಒಡಿಶಾ ಎಫ್‌ಸಿ ಕೂಡ ತನ್ನ ಹೊರಾಟವನ್ನು ಮುಂದುವರಿಸಿತ್ತು. ಪಂದ್ಯದ 84ನೇ ನಿಮಿಷದಲ್ಲಿ ಎರಡನೇ ಗೋಲು ಗಳಿಸಲು ಒಡಿಶಾ ಎಫ್‌ಸಿ ಸಫಲವಾಗಿತ್ತು. ಆದರೆ ಒಡಿಶಾ ತಂಡದ ಹೋರಾಟ ಅಲ್ಲಿಗೆ ಅಂತ್ಯವಾಯಿತು. ಮತ್ತೊಂದು ಗೋಈಲು ಗಳಿಸಲು ತಂಡಕ್ಕೆ ಸಾಧ್ಯವಾಗಲಿಲ್ಲ. ಹೀಗಾಗಿ ಪಂದ್ಯದಲ್ಲಿ 3-2 ಅಂತರದಿಂದ ಹಯದರಾಬಾದ್ ಎಪ್‌ಸಿ ಗೆಲುವು ಸಾಧಿಸಿದೆ.

ಇನ್ನು ಈ ಗೆಲುವಿನೊಂದಿಗೆ ಹಯದರಾಬಾದ್ ಎಪ್‌ಸಿ ತಂಡ ಅಂಕಪಟ್ಟಿಯ್ಲಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಒಡಿಶಾ ಎಫ್‌ಸಿ ಕೂಡ 7ನೇ ಸ್ಥಾನದಲ್ಲಿಯೇ ಮುಂದುವರಿದಿದೆ. ಈ ಫಲಿತಾಂಶ ಅಂಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಹೈದರಾಬಾದ್ ಎಫ್‌ಸಿ ಆಡುವ ಬಳಗ: ಲಕ್ಷ್ಮೀಕಾಂತ್ ಕಟ್ಟಿಮನಿ (ಗೋಲ್‌ ಕೀಪರ್), ಜುವಾನನ್, ನಿಮ್ ದೋರ್ಜಿ, ಆಕಾಶ್ ಮಿಶ್ರಾ, ಆಶಿಶ್ ರೈ, ಜೋವೊ ವಿಕ್ಟರ್ (ನಾಯಕ), ಅನಿಕೇತ್ ಜಾಧವ್, ಸೌವಿಕ್ ಚಕ್ರಬರ್ತಿ, ನಿಖಿಲ್ ಪೂಜಾರಿ, ಜೋಯಲ್ ಚಿಯಾನೀಸ್, ಬಾರ್ತಲೋಮಿವ್ ಓಗ್ಬೆಚೆ.

ಒಡಿಶಾ ಎಫ್‌ಸಿ ಆಡುವ ಬಳಗ: ಅರ್ಷದೀಪ್ ಸಿಂಗ್ (ಗೋಲ್‌ ಕೀಪರ್), ಲಾಲ್ಹ್ರೆಜುವಾಲಾ ಸೈಲುಂಗ್, ವಿಕ್ಟರ್ ಮೊಂಗಿಲ್ (ನಾಯಕ), ಗೌರವ್ ಬೋರಾ, ಸಾಹಿಲ್ ಪನ್ವಾರ್, ಜೇವಿಯರ್ ಹೆರ್ನಾಂಡೆಜ್, ತೊಯ್ಬಾ ಸಿಂಗ್, ಐಸಾಕ್ ಚಕ್ಚುವಾಕ್, ಲಿರಿಡಾನ್ ಕ್ರಾಸ್ನಿಕಿ, ನಂದಕುಮಾರ್ ಸೇಕರ್, ಜೆರ್ರಿ ಮಾವಿಹ್ಮಿಂಗ್ತಂಗ.

Story first published: Thursday, January 27, 2022, 21:49 [IST]
Other articles published on Jan 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X