ಐಎಸ್‌ಎಲ್‌: ಕೊರೊ ಗೈರಲ್ಲಿ ಜೆಮ್ಷೆಡ್ಪುರ ಎದುರಿಸಲಿರುವ ಗೋವಾ ಎಫ್‌ಸಿ

By Isl Media
ISL: JFC vs FCG: Coro’s absence the talking point as Jamshedpur face Goa

ಜೆಮ್ಷೆಡ್ಪುರ, ಅಕ್ಟೋಬರ್ 31: ಸ್ಟಾರ್ ಸ್ಟ್ರೈಕರ್ ಫೆರಾನ್ ಕೊರೊಮಿನಾಸ್ ಅವರ ಅನುಪಸ್ಥಿತಿಯಲ್ಲಿ ಸರ್ಗಿಯೊ ಲೊಬೆರಾ ನೇತೃತ್ವದ ಗೋವಾ ಪಡೆ ಹೀರೋ ಇಂಡಿಯನ್ ಸೂಪರ್ ಲೀಗ್‌ನ ಪ್ರಮುಖ ಪಂದ್ಯದಲ್ಲಿ ಜೆಮ್ಷೆಡ್ಪುರ ಎಫ್ಸಿ ವಿರುದ್ಧ ಸೆಣಸಲಿದೆ. ಕೊರೊ ಗೈರು ಟಾಟಾ ಪಡೆಯ ಮನೋಬಲವನ್ನು ಹೆಚ್ಚಿಸಿರುವುದು ಸ್ಪಷ್ಟ.

ಪಂದ್ಯದ Live Score ಕೆಳಗಿದೆ. ಸ್ಕೋರ್ ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
1022321

ಕಳೆದ ಋತುವಿನಲ್ಲಿ ಗೋಲ್ಡನ್ ಬೂಟ್ ಗೌರವ ಪಡೆದಿರುವ ಕೊರೊಮಿನಾಸ್, ಈಗಾಗಲೇ ಆರು ಗೋಲುಗಳನ್ನು ಗಳಿಸಿದ್ದು, ನಾಲ್ಕು ಗೋಲುಗಳನ್ನು ಗಳಿಸುವಲ್ಲಿ ನೆರವಾಗಿದ್ದಾರೆ. ಪುಣೆ ಸಿಟಿ ವಿರುದ್ಧದ ಪಂದ್ಯದಲ್ಲಿ ಗೋವಾ ತಂಡ 4-2 ಅಂತರದಲ್ಲಿ ಗೆದ್ದಿತ್ತು, ಆದರೆ ಕೊರೊಮಿನಾಸ್ ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ಋತುವಿನಲ್ಲಿ ಚೆನ್ನೈಯಿನ್ ತಂಡದ ವಿರುದ್ಧ ಮೊದಲ ಪಂದ್ಯವನ್ನಾಡಿ ಐಎಸ್‌ಎಲ್‌ಗೆ ಪದಾರ್ಪಣೆ ಮಾಡಿದಾಗಿನಿಂದ ಮೊದಲ ಬಾರಿಗೆ ತಂಡದಿಂದ ಹೊರಗುಳಿದಿದ್ದಾರೆ.

ಗೋಲ್ ಬಾರಿಸಿ ಗೆಳತಿಗೆ 'ಪ್ರಪೋಸ್' ಮಾಡಿದ ಬೆಲ್ಲೊಗೆ ಯೆಲ್ಲೋ ಕಾರ್ಡ್!

'ಇದೊಂದು ಸಂಘಟಿತ ಹೋರಾಟ. ಅಂಗಣದಲ್ಲಿ ಸಂಘಟಿತ ಹೋರಾಟ ನೀಡಿ, ಉತ್ತಮ ಲಿತಾಂಶವನ್ನು ಪಡೆಯುವುದು ನಮ್ಮ ಗುರಿ,' ಎಂದು ಲೊಬೆರಾ ಹೇಳಿದ್ದಾರೆ.

ಕೊರೊ ಅವರಿಗಿಂತ ಗೋವಾ ಒಂದು ಪರಿಗಣಿಸುತ್ತೇವೆ ಎಂದು ಜೆಮ್ಷೆಡ್ಪುರ ತಂಡದ ಕೋಚ್ ಸೆಸರ್ ಫೆರಾಂಡೊ ಹೇಳಿದ್ದಾರೆ. 'ಅವರೊಬ್ಬ ಉತ್ತಮ ಆಟಗಾರ, ಗೋವಾ ಕೂಡ ಒಂದು ಉತ್ತಮ ತಂಡ. ಕೊರೊ ಅವರಿಗಾಗಿ ನಾವು ಯಾವುದೇ ಹೊಸ ಯೋಜನೆಯನ್ನು ಹಾಕಿಕೊಂಡಿಲ್ಲ. ನಾವು ಗೋವಾ ಒಂದು ತಂಡವೆಂದು ಪರಿಗಣಿಸಿ ಅದಕ್ಕೆ ಬೇಕಾಗುವ ರಣತಂತ್ರ ರೂಪಿಸಿದ್ದೇವೆ, ನಾವು ತಂಡವಾಗಿ ಆಡಿದರೆ ಗೆಲ್ಲುತ್ತೇವೆ. ನಾನು ಈಗ ನಮ್ಮ ತಂಡದ ಬಗ್ಗೆ ಯೋಚನೆ ಮಾಡುತ್ತಿದ್ದೇನೆ,' ಎಂದು ಫೆರಾಂಡೊ ಹೇಳಿದ್ದಾರೆ.

ಮುಂಬೈ ಸಿಟಿ ವಿರುದ್ಧ ಜಯ ಗಳಿಸಿದ ಫೆರಾಂಡೊ ಪಡೆ ನಂತರ ನಿರಂತರ ಡ್ರಾದಲ್ಲಿ ತೃಪ್ತಿ ಕಂಡಿತ್ತು. ಬೆಂಗಳೂರು ಎಫ್ಸಿ, ಎಟಿಕೆ, ನಾರ್ತ್ ಈಸ್ಟ್ ಯುನೈಟೆಡ್ ಮತ್ತು ಕೇರಳ ಬ್ಲಾಸ್ಟರ್ಸ್ ವಿರುದ್ಧ ಡ್ರಾ ಕಂಡಿತ್ತು.

ಜೆಮ್ಷೆಡ್ಪುರ ತಂಡ ಕೇರಳ ಬ್ಲಾಸ್ಟರ್ಸ್ ವಿರುದ್ಧ ಗೆದ್ದೇ ಗೆಲ್ಲುತ್ತೇವೆಂಬ ರೀತಿಯಲ್ಲಿ ಆಡಿತ್ತು, ಆದರೆ ಡೇವಿಡ್ ಜೇಮ್ಸ್ ಪಡೆ ದ್ವಿತಿಯಾ'ರ್ದಲ್ಲಿ ಗಳಿಸಿದ ಎರಡು ಗೋಲು ತಂಡದ ಜಯವನ್ನು ಕಸಿದುಕೊಂಡಿತ್ತು.

'ತಂಡದ ಬಗ್ಗೆ ನನಗೆ ಸಾಕಷ್ಟು ಖುಷಿ ಇದೆ. ಕೇರಳ ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ನನಗೆ ಸಾಕಷ್ಟು ಸಿಟ್ಟು ಬಂದಿತ್ತು, ಏಕೆಂದರೆ ನಾವು ಕೆಲವು ಸಣ್ಣ ಪುಟ್ಟ ತಪ್ಪುಮಾಡಿ ಬೆಲೆ ತೆತ್ತೆವು. ಎಟಿಕೆ ವಿರುದ್ಧ ನಾವು ಮೂರು ಪ್ರಮಾದಗಳನ್ನು ಎಸಗಿದೆವು. ನಾರ್ತ್ ಈಸ್ಟ್ ವಿರುದ್ಧವೂ ಒಂದು ತಪ್ಪು ಮಾಡಿದೆವು. ಹಿಂದಿನ ಪಂದ್ಯದಲ್ಲಿ ಬ್ಲಾಸ್ಟರ್ಸ್ ತಂಡ ಒಂದು ಪೆನಾಲ್ಟಿ ಅವಕಾಶವನ್ನು ಕೈ ಚೆಲ್ಲಿತು. ನಂತರ ಅವರು ಮೊದಲ ಗೋಲು ಗಳಿಸಿದಾಗ ನಮ್ಮ ಆರು ಮಂದಿ ಆಟಗಾರರು ಪೆನಾಲ್ಟಿ ಬಾಕ್ಸ್‌ನ ಒಳಗಿದ್ದರು, ಆದರೂ ತಡೆಯಲು ಸಾಧ್ಯವಾಗಲಿಲ್ಲ,' ಎಂದು ಫೆರಾಂಡೊ ವಿವರಿಸಿದರು.

ಐಸಿಸಿ ಕ್ರಿಕೆಟ್‌ ವಿಶ್ವಕಪ್‌ 2019 ಊಹಿಸು
Match 33 - June 26 2019, 03:00 PM
ನ್ಯೂಜಿಲೆಂಡ್
ಪಾಕಿಸ್ತಾನ
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts

Story first published: Wednesday, October 31, 2018, 20:06 [IST]
Other articles published on Oct 31, 2018
+ ಇನ್ನಷ್ಟು
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more