ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೋಟೋಗಾಗಿ ಸುನಿಲ್ ಚೆಟ್ರಿಯನ್ನೇ ಪಕ್ಕಕ್ಕೆ ತಳ್ಳಿದ ಪಶ್ಚಿಮ ಬಂಗಾಳ ರಾಜ್ಯಪಾಲ: ವ್ಯಾಪಕ ಆಕ್ರೋಶ

ಬೆಂಗಳೂರು ಎಫ್‌ಸಿ ಭಾನುವಾರ 2022ರ ಡುರಾಂಡ್ ಕಪ್ ಚಾಂಪಿಯನ್‌ಪಟ್ಟವನ್ನು ಅಲಂಕರಿಸಿತು. ಆದರೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತೀಯ ಫುಟ್ಬಾಲ್ ದಂತಕಥೆ ಸುನಿಲ್ ಚೆಟ್ರಿ ಅವರೊಂದಿಗೆ ನಡೆದ ಘಟನೆ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆ ವ್ಯಕ್ತವಾಗುತ್ತಿದೆ.

ಪಂದ್ಯ ಗೆದ್ದ ನಂತರ ಪ್ರಶಸ್ತಿ ಪ್ರದಾನ ಮಾಡುವ ವೇಳೆ ಪಶ್ಚಿಮ ಬಂಗಾಳ ರಾಜ್ಯಪಾಲ ಫೋಟೋಗೆ ಫೊಸ್ ನೀಡಲು ಸುನಿಲ್ ಚೆಟ್ರಿಯನ್ನು ಪಕ್ಕಕ್ಕೆ ತಳ್ಳಿದ್ದಾರೆ. ಪಶ್ಚಿಮ ಬಂಗಾಳದ ಗವರ್ನರ್ ಲಾ ಗಣೇಶನ್ ಸುನಿಲ್ ಛೆಟ್ರಿಯನ್ನು ದೂರ ತಳ್ಳುತ್ತಿರುವ ವೀಡಿಯೊ ಪ್ರಸ್ತುತ ವೈರಲ್ ಆಗಿದೆ. ಮಾಜಿ ಆಟಗಾರರು ಸೇರಿದಂತೆ ಫುಟ್ಬಾಲ್ ಅಭಿಮಾನಿಗಳು ರಾಜ್ಯಪಾಲರ ವರ್ತನೆ ಕೀಳು ಮಟ್ಟದ್ದು ಎಂದು ಭಾರಿ ಟೀಕೆ ಮಾಡಿದ್ದಾರೆ.

Durand Cup 2022: ಚೊಚ್ಚಲ ಬಾರಿಗೆ ಟ್ರೋಫಿ ಗೆದ್ದು ಇತಿಹಾಸ ಬರೆದ ಬೆಂಗಳೂರು ಎಫ್‌ಸಿDurand Cup 2022: ಚೊಚ್ಚಲ ಬಾರಿಗೆ ಟ್ರೋಫಿ ಗೆದ್ದು ಇತಿಹಾಸ ಬರೆದ ಬೆಂಗಳೂರು ಎಫ್‌ಸಿ

ಮಾಜಿ ಕ್ರಿಕೆಟ್ ಆಟಗಾರ ಆಕಾಶ್ ಚೋಪ್ರಾ ಕೂಡ ಪಶ್ಚಿಮ ಬಂಗಾಳ ರಾಜ್ಯಪಾಲರ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು. ರಾಜಕಾರಣಿಗಳ ವರ್ತನೆ ಅಸಹ್ಯಕರ ಎಂದು ಟ್ವೀಟ್ ಮಾಡಿದ್ದಾರೆ. ಆಕಾಶ್ ಚೋಪ್ರಾ ಮಾತ್ರವಲ್ಲದೆ ಟ್ವಿಟರ್ ನಲ್ಲಿ ಹಲವರು ಫುಟ್ಬಾಲ್ ದಂತಕತೆ ಸುನಿಲ್ ಚೆಟ್ರಿ ಅವರಿಗೆ ಮಾಡಿದ ಅವಮಾನ ಸಹಿಸುವಂತದ್ದಲ್ಲ ಎಂದು ಹೇಳಿದ್ದಾರೆ.

ಶಿವಶಕ್ತಿ ನಾರಾಯಣನ್‌ಗೂ ಇದೇ ಅನುಭವ

ಶಿವಶಕ್ತಿ ನಾರಾಯಣನ್‌ಗೂ ಇದೇ ಅನುಭವ

ಫುಟ್ಬಾಲ್ ತಾರೆ ಸುನಿಲ್ ಚೆಟ್ರಿಗೆ ಮಾತ್ರವಲ್ಲದೆ ಬೆಂಗಳೂರು ಎಫ್‌ಸಿಯ ಮತ್ತೋರ್ವ ಪ್ರಮುಖ ಆಟಗಾರ ಶಿವಶಕ್ತಿ ನಾರಾಯಣನ್ ಅವರಿಗೂ ಕೂಡ ಇದೇ ಅನುಭವವಾಗಿದೆ. ಪ್ರಶಸ್ತಿ ಸ್ವೀಕರಿಸುವ ವೇಳೆ ಫೋಟೋ ತೆಗೆಸಿಕೊಳ್ಳಲು ಪಶ್ಚಿಮ ಬಂಗಾಳ ಕ್ರೀಡಾ ಮತ್ತು ಯುವಜನ ಸಚಿವ ಅರೋಪ್ ಬಿಸ್ವಾಸ್‌ ಫುಟ್ಬಾಲ್ ಆಟಗಾರ ಶಿವಶಕ್ತಿಯವರನ್ನ ಪಕ್ಕಕ್ಕೆ ತಳ್ಳಿದ್ದಾರೆ.

ವಿಡಿಯೋ ಸದ್ಯ ವೈರಲ್ ಆಗಿದ್ದು, ಕ್ರೀಡಾಪಟುಗಳಿಗೆ ಸರಿಯಾಗಿ ಗೌರವ ನೀಡಲು ಬಾರದ ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಇದು ನಾಚಿಕೆಗೇಡಿನ ಕೆಲಸ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಶಮಿ ಸ್ಥಾನದಲ್ಲಿ ಉಮೇಶ್ ಯಾದವ್ ಆಯ್ಕೆ: ಟೀಂ ಮ್ಯಾನೇಜ್‌ಮೆಂಟ್ ನಿರ್ಧಾರದ ಕುರಿತು ಆಕಾಶ್ ಚೋಪ್ರಾ ಪ್ರಶ್ನೆ

ಪ್ರಶಸ್ತಿ ತಾವೇ ಗೆದ್ದಿದ್ದೇವೆ ಎನ್ನುವಂತೆ ಫೋಸ್

ಪ್ರಶಸ್ತಿ ತಾವೇ ಗೆದ್ದಿದ್ದೇವೆ ಎನ್ನುವಂತೆ ಫೋಸ್

ಮತ್ತೆ ಕೆಲವರು ಟ್ವಿಟರ್ ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ ಡುರಾಂಡ್ ಕಪ್ ಗೆದ್ದಿದ್ದಕ್ಕಾಗಿ ಇಮಗೆ ಅಭಿನಂದನೆಗಳು ರಾಜ್ಯಪಾಲ ಲಾ ಗಣೇಶನ್ ಅವರೇ ಎಂದು ವ್ಯಂಗ್ಯವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ತಾವೇ ಕಪ್ ಗೆದ್ದಿದ್ದೇವೆ ಎನ್ನುವ ಮಟ್ಟಿಗೆ ಫೋಟೊಗೆ ಫೋಸ್ ಕೊಡುವ ಈ ರಾಜಕಾರಣಿಗಳಿಗೆ ಸ್ವಲ್ಪವಾದರೂ ಮರ್ಯಾದೆ ಇದೆಯಾ ಎಂದು ಟ್ವೀಟರ್ ಬಳಕೆದಾರರು ಹಿಗ್ಗಾ ಮುಗ್ಗಾ ಜಾಡಿಸಿದ್ದಾರೆ.

ಫುಟ್ಬಾಲ್‌ಗೆ ಸುನಿಲ್ ಚೆಟ್ರಿ ಕೊಡುಗೆ ಅಪಾರ

ಫುಟ್ಬಾಲ್‌ಗೆ ಸುನಿಲ್ ಚೆಟ್ರಿ ಕೊಡುಗೆ ಅಪಾರ

ಮೊದಲೇ ಭಾರತದಲ್ಲಿ ಕ್ರಿಕೆಟ್ ಜನಪ್ರಿಯತೆಯ ಅಲೆಯಲ್ಲಿ ಇತರೆ ಕ್ರೀಡೆಗಳಿಗೆ ಸೂಕ್ತವಾದ ಪ್ರೋತ್ಸಾಹ ದೊರೆಯುತ್ತಿಲ್ಲ ಎನ್ನುವ ಅಪವಾದವಿದೆ. ಅಂತಹುದರಲ್ಲಿ ಭಾರತದಲ್ಲಿ ಫುಟ್ಬಾಲ್‌ ಜನಪ್ರಿಯಗೊಳಿಸಲು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಫುಟ್ಬಾಲ್ ಕ್ರೀಡೆಯಲ್ಲಿ ಭಾರತ ಗುರುತಿಸಿಕೊಳ್ಳುವಂತೆ ಮಾಡುವಲ್ಲಿ ಸುನಿಲ್ ಚೆಟ್ರಿ ಕೊಡುಗೆ ಅಪಾರವಾಗಿದೆ. ಅಂತಹ ಸಂದರ್ಭದಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಇತರೆ ಕ್ರೀಡಾಪಟುಗಳನ್ನು ಹೀಗೆ ನಡೆಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಕೇಳುತ್ತಿದ್ದಾರೆ.

ಫುಟ್ಬಾಲ್ ದಂತಕಥೆಗೆ ಕೊಡುವ ಗೌರವ ಇದೇನಾ, ಕ್ಯಾಮೆರಾಗೆ ನೀವು ಪೋಸ್ ಕೊಡಲು ಅಂತಹ ಆಟಗಾರನ ಜೊತೆ ನಡೆದುಕೊಂಡ ರೀತಿ ಸರಿಯಲ್ಲ ಎಂದು ಹೇಳಿದ್ದಾರೆ.

ಚೊಚ್ಚಲ ಬಾರಿಗೆ ಚಾಂಪಿಯನ್ ಆದ ಬೆಂಗಳೂರು

ಚೊಚ್ಚಲ ಬಾರಿಗೆ ಚಾಂಪಿಯನ್ ಆದ ಬೆಂಗಳೂರು

ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ 2-1 ಗೋಲುಗಳಿಂದ ಮುಂಬೈ ಸಿಟಿ ಎಫ್‌ಸಿಯನ್ನು ಸೋಲಿಸುವ ಮೂಲಕ ಇದೇ ಮೊದಲ ಬಾರಿಗೆ ಡುರಾಂಡ್‌ಕಪ್‌ ಜಯಿಸಿತು.

ಬೆಂಗಳೂರು ಎಫ್‌ಸಿ ಪರ ಶಿವಶಕ್ತಿ (10ನೇ ನಿಮಿಷ) ಮತ್ತು ಬ್ರೆಜಿಲ್‌ನ ಅಲನ್ ಕೋಸ್ಟಾ (61ನೇ ನಿ.) ಗೋಲು ಗಳಿಸಿದರೆ, ಮುಂಬೈ ಪರ ಅಪುಯಾ ಏಕೈಕ ಗೋಲು ಗಳಿಸಿದರು.

Story first published: Monday, September 19, 2022, 17:36 [IST]
Other articles published on Sep 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X