ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಚಾಂಪಿಯನ್ಸ್ ಲೀಗ್ 2018 : ಹ್ಯಾಟ್ರಿಕ್ ಸಾಧಿಸಿದ ರಿಯಲ್ ಮ್ಯಾಡ್ರಿಡ್

By Mahesh
UCL final, Real Madrid 3 Liverpool 1: Brilliant Gareth Bale undoes Liverpool and Karius

ಕೀವ್, ಮೇ 27: ಸತತ ಮೂರನೇ ಬಾರಿಗೆ ಚಾಂಪಿಯನ್ಸ್ ಲೀಗ್ ಕಪ್ ಎತ್ತಿ ಹಿಡಿದ ರಿಯಲ್ ಮ್ಯಾಡ್ರಿಡ್ ಭರ್ಜರಿಯಾಗಿ ವಿಜಯೋತ್ಸವ ಆಚರಿಸಿದೆ. ಲಿವರ್ ಪೂಲ್ ವಿರುದ್ಧ 3-1ರ ಅಂತರದಲ್ಲಿ ಗೆದ್ದು ಬೀಗಿದೆ.

ಪಂದ್ಯದ ಸಂಪೂರ್ಣ ಅಂಕಿ ಅಂಶ

ಈ ಗೆಲುವಿನ ಮೂಲಕ ಸರ್ಗಿಯೋ ರಮೋಸ್ ನೇತೃತ್ವದ ತಂಡ, ಯುರೋಪಿಯನ್ ಕಪ್ ಹಾಗೂ ಚಾಂಪಿಯನ್ಸ್ ಲೀಗ್ ಕಪ್ ಸತತ ಮೂರು ಬಾರಿ ಗೆದ್ದ ಏಕೈಕ ತಂಡ ಎನಿಸಿಕೊಂಡಿದೆ. 1974 ಹಾಗೂ 1976ರಲ್ಲಿ ಬಾಯಾ ಮೂನಿಚ್ ಈ ಸಾಧನೆ ಮಾಡಿತ್ತು.

ಮತ್ತೊಮ್ಮೆ ಇಂಗ್ಲೀಷ್ ಕ್ಲಬ್ ಗಳ ಮೇಲೆ ಸ್ಪ್ಯಾನೀಷ್ ತಂಡಗಳ ಪ್ರಾಬಲ್ಯ ಮುಂದುವರೆದಿದೆ. ಕಳೆದ ಏಳು ಯುಇಎಫ್ ಎ ಕ್ಲಬ್ ಪೈಪೋಟಿಯಲ್ಲಿ ಇಂಗ್ಲೀಷ್ ಕ್ಲಬ್ ಗಳು ಸೋಲು ಕಂಡಿವೆ.

ರಿಯಲ್ ಮ್ಯಾಡ್ರಿಡ್ ತಂಡದ ಮ್ಯಾನೇಜರ್ ಜಿನೆದಿನ್ ಜಿದಾನೆ ಅವರು ಬಾಬ್ ಪೈಸ್ಲೆ ಹಾಗೂ ಕಾರ್ಲೊ ಅನ್ಸೆಲೊಟ್ಟಿ ನಂತರ ಮೂರು ಯುರೋಪಿಯನ್ ಹಾಗೂ ಚಾಂಪಿಯನ್ಸ್ ಲೀಗ್ ಗೆದ್ದ ಸಾಧನೆ ಮಾಡಿದ್ದಾರೆ. ಆದರೆ, ಸತತ ಚಾಂಪಿಯನ್ಸ್ ಲೀಗ್ ಗೆಲ್ಲಿಸಿಕೊಟ್ಟಿದ್ದು ಜಿದಾನೆಯ ಪ್ರಮುಖ ಸಾಧನೆ.

ಇನ್ನೊಂದೆಡೆ ಲಿವರ್ ಪೂಲ್ ನ ಮ್ಯಾನೇಜರ್ ಜರ್ಗನ್ ಕ್ಲೊಪ್ ಅವರು ಏಳು ಪ್ರಮುಖ ಫೈನಲ್ ಗಳಲ್ಲಿ 6 ಫೈನಲ್ ಕಳೆದುಕೊಂಡಿದ್ದಾರೆ. 2012ರಲ್ಲಿ ಬೊರುಸಿಯಾ ಡಾರ್ಟ್ ಮಂಡ್ ವಿರುದ್ಧ ಡಿಎಫ್ ಬಿ ಪೊಕಲ್ ಗೆದ್ದ ಬಳಿಕ ಮತ್ತೆ ಪ್ರಮುಖ ಟೂರ್ನಿ ಗೆದ್ದಿಲ್ಲ.

2016-17ರಲ್ಲಿ ಚಾಂಪಿಯನ್ಸ್ ಲೀಗ್ ಗೆದ್ದ ರಿಯಲ್ ಮ್ಯಾಡ್ರಿಡ್ XI, 2018ರಲ್ಲೂ ಆಡಿದ್ದು ಈ ಬಾರಿಯ ವಿಶೇಷ.

ಪಂದ್ಯದ ವರದಿ : ಪಂದ್ಯದ ಮೊದಲಾರ್ಧದಲ್ಲಿ ಬಿರುಸಿನ ಆಟ ಕಂಡು ಬಂದರೂ, ಉಭಯ ತಂಡಗಳು ಗೋಲು ಗಳಿಸುವಲ್ಲಿ ವಿಫಲವಾದವು. 30ನೇ ನಿಮಿಷದಲ್ಲಿ ಲಿವರ್ ಪೂಲ್ ನ ಸ್ಟಾರ್ ಆಟಗಾರ ಮೊಹಮ್ಮದ್ ಸಲಾ ಗಾಯಗೊಂಡು ನಿವೃತ್ತರಾಗಿದ್ದು, ತಂಡಕ್ಕೆ ಹಿನ್ನಡೆ ತಂದು ಕೊಟ್ಟಿತು.

ಪಂದ್ಯದ 50ನೇ ನಿಮಿಷದಲ್ಲಿ ಕರೀಂ ಬೆನ್ಜೆಮಾ ಗೋಲು ಗಳಿಸಿ ರಿಯಲ್ ಮ್ಯಾಡ್ರಿಡ್ ಗೆ ಮುನ್ನಡೆ ತಂದು ಕೊಟ್ಟರು. 54ನೇ ನಿಮಿಷದಲ್ಲಿ ಸಡಿಯೋ ಮಾನೆ ಗೋಲು ಬಾರಿಸಿ ಸಮಬಲ ಸಾಧಿಸಿದರು.

ಆದರೆ, ಗರೇತ್ ಬೇಲ್ 63 ಹಾಗೂ 82ನೇ ನಿಮಿಷದಲ್ಲಿ ಅದ್ಭುತ ಗೋಲು ಬಾರಿಸಿ, ರಿಯಲ್ ಮ್ಯಾಡ್ರಿಡ್ ಗೆ ಹ್ಯಾಟ್ರಿಕ್ ಚಾಂಪಿಯನ್ ಪಟ್ಟ ತಂದುಕೊಟ್ಟರು.

Story first published: Sunday, May 27, 2018, 15:57 [IST]
Other articles published on May 27, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X