ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕರ್ನಾಟಕ ಮಹಿಳಾ ಹಾಕಿ ತಂಡಕ್ಕೆ ಹಾಸನದ 7 ಆಟಗಾರ್ತಿಯರು ಆಯ್ಕೆ; ಸ್ಥಳೀಯರಿಂದ ಮೆಚ್ಚುಗೆ

By ಹಾಸನ ಪ್ರತಿನಿಧಿ

ಹಾಸನ, ಮೇ 6: ಕರ್ನಾಟಕದ ಮಹಿಳಾ ಹಾಕಿ ತಂಡಕ್ಕೆ ಹಾಸನದ 7 ಆಟಗಾರ್ತಿಯರು ಆಯ್ಕೆಯಾಗಿದ್ದಾರೆ. ಮೇ ತಿಂಗಳ 11ರಿಂದ 22ರವರೆಗೆ ಮಣಿಪುರದ ಇಂಪಾಲ್‌ನಲ್ಲಿ ನಡೆಯುವ ಮಹಿಳೆಯರ 12ನೇ ಹಾಕಿ ಇಂಡಿಯಾ ಸಬ್ ಜ್ಯೂನಿಯರ್ ನ್ಯಾಷನಲ್ಸ್ ಪಂದ್ಯಾವಳಿಯಲ್ಲಿ ಭಾಗಿಯಾಗುವ ಕರ್ನಾಟಕ ತಂಡಕ್ಕೆ ಹಾಸನದ 7 ಆಟಗಾರ್ತಿಯರು ಆಯ್ಕೆಯಾಗುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

ಹಾಸನ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ತರಬೇತಿ ಪಡೆಯುತ್ತಿರುವ ಆರು ಆಟಗಾರ್ತಿಯರಾದ ಹರ್ಷಿತಾ, ಮೇಘಾವತಿ, ಯಮುನಾ, ಸುಪ್ರಿತಾ, ಸೌಮ್ಯ ಮತ್ತು ಚತುರ್ಥಿ ಆಯ್ಕೆಯಾಗಿದ್ದಾರೆ.

ಜೊತೆಗೆ ರಾಯಲ್ ಅಪೊಲೋ ಇಂಟರ್ ನ್ಯಾಷನಲ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಾ ಹಾಕಿ ತರಬೇತಿ ಪಡೆಯುತ್ತಿರುವ ದ್ರವ್ಯ ಎಂ. ಗೌಡ ಸಹ ಆಯ್ಕೆಯಾಗಿದ್ದಾರೆ. ರಾಜ್ಯ ತಂಡವನ್ನು ಹಾಸನ ಜಿಲ್ಲೆಯ 7 ಮಂದಿ ಮಹಿಳಾ ಕ್ರೀಡಾಪಟುಗಳು ಪ್ರತಿನಿಧಿಸುತ್ತಿರುವುದು ಜಿಲ್ಲೆಯ ಮಟ್ಟಿಗೆ ದೊಡ್ಡ ಸಾಧನೆಯಾಗಿದೆ.

Hassan Districts 7 Players Selected For Karnataka Womens Hockey Team; Appreciation By People

ಈ ಸಾಧನೆಗೆ ಹಾಸನ ಹಾಕಿ ತರಬೇತುದಾರರಾದ ರವೀಶ್ ಅವರ ಪರಿಶ್ರಮ ಪ್ರಮುಖ ಕಾರಣವಾಗಿದ್ದು, ಕೋಚ್ ಮತ್ತು ಕರ್ನಾಟಕ ತಂಡ ಪ್ರತಿನಿಧಿಸುತ್ತಿರುವ ಜಿಲ್ಲೆಯ ಯುವತಿಯರಿಗೆ ಅನೇಕರು ಅಭಿನಂದನೆ ಸಲ್ಲಿಸಿ ಗೆದ್ದು ಬನ್ನಿ ಎಂದು ಶುಭ ಕೋರಿದ್ದಾರೆ.

ಸ್ಥಳೀಯರಿಂದ ಆಟಗಾರ್ತಿಯವರಿಗೆ ಮೆಚ್ಚುಗೆ, ಕುಟುಂಬಸ್ಥರಲ್ಲಿ ಹರ್ಷ
ಜಿಲ್ಲೆಯ ಹಾಕಿ ಆಟಗಾರ್ತಿಯರು ರಾಜ್ಯ ತಂಡಕ್ಕೆ ಆಯ್ಕೆಯಾಗಿರುವ ಹಿನ್ನೆಲೆ ಸ್ಥಳೀಯರು, ಆಟಗಾರ್ತಿಯರ ಕುಟುಂಬಸ್ಥರಲ್ಲಿ ಹರ್ಷ ಮನೆ ಮಾಡಿದೆ. 18 ಆಟಗಾರ್ತಿಯರಲ್ಲಿ ಹಾಸನದ 7 ಯುವತಿಯರು ಆಯ್ಕೆ ಆಗಿರುವುದು ಕುಟುಂಬಸ್ಥರಿಗೆ ಸಂತಸ ತಂದಿದೆ. ಗೆದ್ದು ಬನ್ನಿ ಮಕ್ಕಳೇ ಎಂದು ಬೆಸ್ಟ್ ಆಫ್ ಲಕ್ ಹೇಳಿದ್ದಾರೆ.

Hassan Districts 7 Players Selected For Karnataka Womens Hockey Team; Appreciation By People

ವಿದ್ಯಾರ್ಥಿನಿಯರ ಆಯ್ಕೆಗೆ ಕೋಚ್ ಪರಿಶ್ರಮ ಕಾರಣ
ಹಾಸನದ ಏಳು ವಿದ್ಯಾರ್ಥಿನಿಯರು ರಾಜ್ಯ ತಂಡಕ್ಕೆ ಆಯ್ಕೆಯಾಗುವಲ್ಲಿ ಹಾಕಿ ತರಬೇತುದಾರ ರವೀಶ್ ಪರಿಶ್ರಮವೇ ಪ್ರಮುಖ ಕಾರಣವಾಗಿದೆ. ದಿನನಿತ್ಯ ಯುವತಿಯರಿಗೆ ಹಾಕಿ ಅಭ್ಯಾಸ ಮಾಡಿಸುವ ಮೂಲಕ ಉತ್ತಮ ಟ್ರೈನಿಂಗ್ ನೀಡುತ್ತಿದ್ದರು. ಆಟಗಾರ್ತಿಯರ ಶ್ರದ್ಧೆ ಹಾಗೂ ಹಾಕಿ ಅಭ್ಯಾಸ ಇವತ್ತು ರಾಜ್ಯ ತಂಡವನ್ನು ಪ್ರತಿನಿಧಿಸುವಲ್ಲಿ ಯಶಸ್ವಿಯಾಗಿಸಿದೆ. ಆಟಗಾರ್ತಿಯರು ರಾಜ್ಯ ತಂಡಕ್ಕೆ ಆಯ್ಕೆ ಆಗಿರುವುದು ತುಂಬಾ ಖುಷಿ ಆಗಿದೆ ಅಂತಿದ್ದಾರೆ ಕೋಚ್ ರವೀಶ್.

Story first published: Friday, May 6, 2022, 14:31 [IST]
Other articles published on May 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X