ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

India vs Spain : ಹಾಕಿ ವಿಶ್ವಕಪ್: ಭಾರತಕ್ಕೆ ಸ್ಪೇನ್ ಸವಾಲು;ಪಂದ್ಯದ ಸಮಯ, ನೇರಪ್ರಸಾರದ ಮಾಹಿತಿ ಹಾಗೂ ಸ್ಕ್ವಾಡ್

Hockey World Cup 2023, India vs Spain; match time, squads and Live details

ಸತತ 2ನೇ ಬಾರಿಗೆ ಹಾಕಿ ವಿಶ್ವಕಪ್ ಆತಿಥ್ಯ ವಹಿಸಿಕೊಂಡಿರುವ ಭಾರತ ಈ ಬಾರಿ ಸುದೀರ್ಘ ಕಾಲದ ವಿಶ್ವಕಪ್ ಟ್ರೋಫಿ ಗೆಲ್ಲುವ ಕನಸಿನೊಂದಿಗೆ ತನ್ನ ಹೋರಾಟವನ್ನು ಆರಂಭಿಸಲಿದೆ. ರೌರ್ಕೆಲಾದಲ್ಲಿ ಭಾರತದ ಮೊದಲ ಪಂದ್ಯ ನಡೆಯಲಿದ್ದು ಈ ಪಂದ್ಯದಲ್ಲಿ ಸ್ಪೇನ್ ಸವಾಲೊಡ್ಡಲಿದೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಒಟ್ಟು 16 ತಂಡಗಳು ಭಾಗವಹಿಸುತ್ತಿದ್ದು ಆರಂಭದಲ್ಲಿ ತಲಾ ನಾಲ್ಕು ತಂಡಗಳ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಪೂಲ್ ಎ ವಿಭಾಗದಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಫ್ರಾನ್ಸ್ ಮತ್ತು ಅರ್ಜೆಂಟೀನಾ ತಂಡಗಳು ಇದ್ದರೆ, ಪೂಲ್ ಬಿ ಬೆಲ್ಜಿಯಂ, ಜಪಾನ್, ಕೊರಿಯಾ ಮತ್ತು ಜರ್ಮನಿಯನ್ನು ಒಳಗೊಂಡಿದೆ. ಪೂಲ್ ಸಿ ನೆದರ್ಲ್ಯಾಂಡ್ಸ್, ಚಿಲಿ, ಮಲೇಷ್ಯಾ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಹೊಂದಿದ್ದು, ಪೂಲ್ ಡಿ ಭಾರತ, ವೇಲ್ಸ್, ಸ್ಪೇನ್ ಮತ್ತು ಇಂಗ್ಲೆಂಡ್ ತಂಡಗಳನ್ನು ಒಖಗೊಂಡಿದೆ.

Ind vs SL: ಪ್ರಮುಖ ದಾಖಲೆ ಬರೆದ ಭಾರತ, ಲಂಕಾ ಹೆಸರಿಗೆ ಬೇಡದ ದಾಖಲೆ: 2ನೇ ಪಂದ್ಯದಲ್ಲಿ ಮುರಿದ 3 ದಾಖಲೆಗಳು!Ind vs SL: ಪ್ರಮುಖ ದಾಖಲೆ ಬರೆದ ಭಾರತ, ಲಂಕಾ ಹೆಸರಿಗೆ ಬೇಡದ ದಾಖಲೆ: 2ನೇ ಪಂದ್ಯದಲ್ಲಿ ಮುರಿದ 3 ದಾಖಲೆಗಳು!

1971 ರಲ್ಲಿ ಮೊದಲ ವಿಶ್ವಕಪ್‌ನಲ್ಲಿ ಭಾರತೀಯ ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದುಕೊಂಡಿದ್ದರೆ 1973ರಲ್ಲಿ ನಡೆದ ಎರಡನೇ ವಿಶ್ವಕಪ್ ಟೂರ್ನಿಯಲ್ಲಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿತ್ತು. ನಂತರ 1975ರಲ್ಲಿ ನಡೆದ 3ನೇ ವಿಶ್ವಕಪ್‌ನಲ್ಲಿ ಅಜಿತ್ ಪಾಲ್ ಸಿಂಗ್ ನೇತೃತ್ವದ ಭಾರತೀಯ ಪುರುಷರ ಹಾಕಿ ತಂಡ ಚಾಂಪಿಯನ್ ಪಟ್ಟಕ್ಕೇರಿತ್ತು. ಆದರೆ ಅದಾದ ಬಳಿಕ ಭಾರತ ಸೆಮಿಫೈನಲ್ ಹಂತವನ್ನು ಕೂಡ ತಲುಪಲು ವಿಫಲವಾಗಿದೆ.

ಇದೀಗ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡ ಈ ಬಾರಿಯ ವಿಶ್ವಕಪ್‌ನಲ್ಲಿ ಸಾಕಷ್ಟು ಭರವಸೆ ಮೂಡಿಸಿದ್ದು 48 ಬರ್ಷಗಳ ವಿಶ್ವಕಪ್ ಕನಸನ್ನು ನನಸು ಮಾಡುವ ವಿಶ್ವಾಸದಲ್ಲಿದೆ. ಮೊದಲ ಪಂದ್ಯದಲ್ಲಿ ಭಾರತಕ್ಕೆ ಸ್ಪೈನ್ ಎದುರಾಳಿಯಾಗಿದ್ದು ಈ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ.

ಭಾರತ ಹಾಗೂ ಸ್ಪೇನ್ ನಡುವಿನ ಹಾಕಿ ಪಂದ್ಯ ಇಂದು(ಜನವರಿ 13 ಶುಕ್ರವಾರ) ಸಂಜೆ 7 ಗಂಟೆಗೆ ಆರಂಭವಾಗಲಿದೆ. ಸ್ಟಾರ್‌ ಸ್ಪೋರ್ಟ್ಸ್ ಫಸ್ಟ್, ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ 2 ವಾಹಿನಿಗಳಲ್ಲಿ ಈ ಪಂದ್ಯದ ನೇರಪ್ರಸಾರವಿರಲಿದೆ. ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿಯೂ ಪಂದ್ಯ ವೀಕ್ಷಿಸಬಹುದು.

ಭಾರತ ಸ್ಕ್ವಾಡ್: ಅಭಿಷೇಕ್, ಸುರೇಂದರ್ ಕುಮಾರ್, ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ಜರ್ಮನ್‌ಪ್ರೀತ್ ಸಿಂಗ್, ಮನ್‌ದೀಪ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್ (ನಾಯಕ), ಲಲಿತ್ ಉಪಾಧ್ಯಾಯ, ಕ್ರಿಶನ್ ಪಾಠಕ್, ನಿಲಮ್ ಸಂಜೀಪ್ ಕ್ಸೆಸ್, ಪಿಆರ್ ಶ್ರೀಜೇಶ್, ನೀಲಕಂಠ ಶರ್ಮಾ, ಶಂಶೇರ್ ಸಿಂಗ್, ವರುಣ್ ಕುಮಾರ್, ಆಕಾಶದೀಪ್ ಸಿಂಗ್, ಅಮಿತ್ ರೋಹಿದಾಸ್ (ಉಪನಾಯಕ), ವಿವೇಕ್ ಸಾಗರ್ ಪ್ರಸಾದ್ ಮತ್ತು ಸುಖಜೀತ್ ಸಿಂಗ್.

ಸ್ಪೇನ್: ಆಂಡ್ರಿಯಾಸ್ ರಫಿ, ಅಲೆಜಾಂಡ್ರೊ ಅಲೋನ್ಸೊ, ಸೀಸರ್ ಕ್ಯುರಿಯಲ್, ಕ್ಸೇವಿ ಗಿಸ್ಪರ್ಟ್, ಬೋರ್ಜಾ ಲಕಾಲ್, ಅಲ್ವಾರೊ ಇಗ್ಲೇಷಿಯಸ್, ಇಗ್ನಾಸಿಯೊ ರೊಡ್ರೆಗ್ಸ್, ಎನ್ರಿಕ್ ಗೊನ್ಜಾಲೆಜ್, ಗೆರಾರ್ಡ್ ಕ್ಲೇಪ್ಸ್, ಆಂಡ್ರಿಯಾಸ್ ರಫಿ, ಜೋರ್ಡಿ ಬೊನಾಸ್ಟ್ರೆ, ಜೋಕ್ವಿನ್ ಮೆನಿನಿ, ಮಾರಿಯೋ ಗ್ಯಾರಿನ್, ಮಾರ್ಕ್ ರೆಯ್ನೆ, ಮಾರ್ಕ್ ಮಿರಾಲ್ಲೆಸ್, ಪೆಪೆ ಕುನಿಲ್, ಮಾರ್ಕ್ ರಿಕಾಸೆನ್ಸ್, ಪೌ ಕುನಿಲ್ ಮತ್ತು ಮಾರ್ಕ್ ವಿಜ್ಕೈನೊ.

Story first published: Friday, January 13, 2023, 15:34 [IST]
Other articles published on Jan 13, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X