ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪಿಕೆಎಲ್ 2: ಬೆಂಗಳೂರು ಬುಲ್ಸ್ ತಂಡ, ವೇಳಾಪಟ್ಟಿ

By Mahesh

ಬೆಂಗಳೂರು, ಜೂ.4: ಕ್ರೀಡಾಪ್ರಿಯರ ಆಸಕ್ತಿ ಕೆರಳಿಸಿರುವ ಪ್ರೋ ಕಬಡ್ಡಿ ಲೀಗ್ ಜುಲೈ 18ರಿಂದ ಮುಂಬೈನಲ್ಲಿ ಆರಂಭಗೊಳ್ಳಲಿದೆ. ಕಳೆದ ಬಾರಿಯಂತೆ 8 ತಂಡಗಳು 8 ನಗರಗಳಲ್ಲಿ ಪಿಕೆಎಲ್ 2 ಕಪ್ ಗಾಗಿ ಸೆಣಸಲಿವೆ. ಬೆಂಗಳೂರು ಬುಲ್ಸ್ ತಂಡ ಈ ಬಾರಿ ಉತ್ತಮ ಪ್ರದರ್ಶನ ನೀಡುವ ಹುಮ್ಮಸ್ಸಿನಲ್ಲಿದೆ.

ಪ್ರೋ ಕಬಡ್ಡಿ ಲೀಗ್ ಸೀಸನ್ 2 ನ ಮೊದಲ ಪಂದ್ಯದಲ್ಲಿ ಮುಂಬೈ ತಂಡವನ್ನು ಹಾಲಿ ಚಾಂಪಿಯನ್ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡ ಎದುರಿಸಲಿದೆ. ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡದ ವಿರುದ್ಧ ಬೆಂಗಾಲ್ ವಾರಿಯರ್ಸ್ ಆಡಲಿದೆ. ಜುಲೈ 18 ರಿಂದ ಆಗಸ್ಟ್ 23ರ ತನಕ ಕಬಡ್ಡಿ ಲೀಗ್ ನಡೆಯಲಿದೆ. [ಐಪಿಎಲ್ ಆಯ್ತು ಇನ್ನು ಕಬಡ್ಡಿ ಲೀಗ್ ಹವಾ ಶುರು]

ಮೊದಲ ಆವೃತ್ತಿಯ ಪ್ರೋ ಕಬಡ್ಡಿ ಲೀಗ್ ಅಂತಿಮ ಪಂದ್ಯದಲ್ಲಿ ಯೂ ಮುಂಬಾ ತಂಡವನ್ನು ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡ 24-35 ಅಂತರದಿಂದ ಸೋಲಿಸಿ ಕಪ್ ಎತ್ತಿತ್ತು. ಕೋಸ್ಮಿಕ್ ಗ್ಲೋಬಲ್ ಮೀಡಿಯಾ ಮಾಲಿಕತ್ವದ ಬೆಂಗಳೂರು ತಂಡಕ್ಕೆ ರಣಧೀರ್ ಸಿಂಗ್ ಕೋಚ್ ಆಗಿದ್ದಾರೆ.

ಬೆಂಗಳೂರು ಬುಲ್ಸ್ ತಂಡ: ಮಂಜಿತ್ ಚಿಲ್ಲಾರ್ (ನಾಯಕ), ಧರ್ಮರಾಜ್ ಚೆರಲಾಥಾನ್, ಪ್ರಮೋದ್ ಸಿಂಗ್, ಗುರ್ ಪ್ರೀತ್ ಸಿಂಗ್, ಅಜಯ್ ಠಾಕೂರ್, ಶರಣ್ ದಾಸ್, ಸಿನೋಧರನ್ ಕನೇಶರಾಜ್, ಬಿ ವಿನೋದ್ ಕುಮಾರ್, ರಾಜೇಶ್ ಮಂಡಲ್, ಕೆ ಏರಿಯಾನಾ,ದೀಪಕ್ ಸುರೇಶ್ ಕುಮಾರ್, ಪ್ರೀತಂ ಸಿಂಗ್, ಗುರ್ಚೇತ್ ಸಿಂಗ್, ಸುನಿಲ್ ಹನುಮಂತಪ್ಪ.

Team Bengaluru Bulls guide

ಪಿಕೆಎಲ್ 2015 ವೇಳಾಪಟ್ಟಿ ಹೀಗಿದೆ:

ಜುಲೈ 18 (ಶನಿವಾರ), ಮುಂಬೈ
* ಯೂ ಮುಂಬಾ vs ಜೈಪುರ ಪ್ಯಾಂಥರ್ಸ್
* ಬೆಂಗಳೂರು ಬುಲ್ಸ್ vs ಬೆಂಗಾಲ್ ವಾರಿಯರ್ಸ್

ಜುಲೈ 19 (ಭಾನುವಾರ), ಮುಂಬೈ
* ತೆಲುಗು ಟೈಟನ್ಸ್ vs ದಬಾಂಗ್ ದೆಹಲಿ
* ಯೂ ಮುಂಬಾ vs ಬೆಂಗಳೂರು ಬುಲ್ಸ್

ಜುಲೈ 20 (ಸೋಮವಾರ), ಮುಂಬೈ
* ಪುಣೇರಿ ಪಲ್ಟನ್ vs ತೆಲುಗು ಟೈಟನ್ಸ್
* ಯೂ ಮುಂಬಾ vs ಪಟ್ನಾ ಪೈರೇಟ್ಸ್

ಜುಲೈ 21 (ಮಂಗಳವಾರ), ಮುಂಬೈ
* ಯೂ ಮುಂಬಾ vs ಪುಣೇರಿ ಪಲ್ಟನ್. [ಪ್ರೋ ಕಬಡ್ಡಿ: ಮುಂಬೈ ಮಣಿಸಿ ಕಪ್ ಎತ್ತಿದ ಜೈಪುರ]

ಕೋಲ್ಕತ್ತಾದಲ್ಲಿ
ಜುಲೈ 22 (ಬುಧವಾರ)

* ಬೆಂಗಾಲ್ ವಾರಿಯರ್ಸ್ vs ಜೈಪುರ್ ಪಿಂಕ್ ಪ್ಯಾಂಥರ್ಸ್
* ಬೆಂಗಳೂರು ಬುಲ್ಸ್ vs ಪಾಟ್ನ ಪೈರೇಟ್ಸ್

ಜುಲೈ 25 (ಶನಿವಾರ)
* ಬೆಂಗಳೂರು vs ಪುಣೇರಿ ಪಲ್ಟನ್

ಜೈಪುರದಲ್ಲಿ
ಜುಲೈ 28 (ಮಂಗಳವಾರ)
ಜೈಪುರ ಪಿಂಕ್ ಪ್ಯಾಂಥರ್ಸ್ vs ಬೆಂಗಳೂರು ಬುಲ್ಸ್

ಬೆಂಗಳೂರಿನಲ್ಲಿ
ಆಗಸ್ಟ್ 12 (ಬುಧವಾರ)
ಬೆಂಗಳೂರು ಬುಲ್ಸ್ vs ಯೂ ಮುಂಬಾ

ಆಗಸ್ಟ್ 13 (ಗುರುವಾರ)
ಬೆಂಗಳೂರು ಬುಲ್ಸ್ vs ಜೈಪುರ್ ಪಿಂಕ್ ಪ್ಯಾಂಥರ್ಸ್

ಆಗಸ್ಟ್ 14 (ಶುಕ್ರವಾರ)
ಬೆಂಗಳೂರು ಬುಲ್ಸ್ vs ದಬಾಂಗ್ ದೆಹಲಿ

ಆಗಸ್ಟ್ 15 (ಶನಿವಾರ)
ಬೆಂಗಳೂರು ಬುಲ್ಸ್ vs ತೆಲುಗು ಟೈಟನ್ಸ್

(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:15 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X