ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಐಪಿಎಲ್ ಆಯ್ತು ಇನ್ನು ಕಬಡ್ಡಿ ಲೀಗ್ ಹವಾ ಶುರು

By Mahesh

ಬೆಂಗಳೂರು, ಜೂ.4: ಇಂಡಿಯನ್ ಪ್ರಿಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ನಂತರ ಕ್ರೀಡಾಭಿಮಾನಿಗಳ ಮನ ತಣಿಸಲು ಪ್ರೋ ಕಬಡ್ಡಿ ಲೀಗ್ (ಪಿಕೆಎಲ್) ಬರುತ್ತಿದೆ. ಜುಲೈ 18 ರಿಂದ 37 ದಿನಗಳ ಕಾಲ ಕಬಡ್ಡಿ, ಕಬಡ್ಡಿ ಎಲ್ಲಾ ಸದ್ದು ಕೇಳಿ ಬರಲಿದೆ.

ಪ್ರೋ ಕಬಡ್ಡಿ ಲೀಗ್ ಸೀಸನ್ 2 ನ ಮೊದಲ ಪಂದ್ಯದಲ್ಲಿ ಮುಂಬೈ ತಂಡವನ್ನು ಹಾಲಿ ಚಾಂಪಿಯನ್ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡ ಎದುರಿಸಲಿದೆ. ಬೆಂಗಳೂರು ಸೇರಿದಂತೆ 8 ನಗರಗಳ 8ತಂಡಗಳು 60 ಪಂದ್ಯಗಳನ್ನಾಡಲಿವೆ.

ಪ್ರೋ ಕಬಡ್ಡಿ ಲೀಗ್ (ಪಿಕೆಎಲ್) ಎರಡನೇ ಆವೃತ್ತಿಗೆ ಮಾರ್ಗದರ್ಶಿ

ಯಾವಾಗ ಆರಂಭ :
* ಸೀಸನ್ 2 ಜುಲೈ 18 (ಶನಿವಾರ) ರಿಂದ ಆಗಸ್ಟ್ 23 (ಭಾನುವಾರ)

ಎಷ್ಟು ಪಂದ್ಯಗಳು?
* 8 ನಗರಗಳಲ್ಲಿ 60 ಪಂದ್ಯಗಳು, 37 ದಿನ.

ಎಲ್ಲಿ ಪ್ರಸಾರವಾಗುತ್ತದೆ?
* ಎಲ್ಲಾ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಪ್ರಸಾರವಾಗಲಿದೆ.

ಪಿಕೆಎಲ್ 2014 ಗೆದ್ದವರು ಯಾರು?

* ಮೊದಲ ಆವೃತ್ತಿಯ ಪ್ರೋ ಕಬಡ್ಡಿ ಲೀಗ್ ಅಂತಿಮ ಪಂದ್ಯದಲ್ಲಿ ಯೂ ಮುಂಬಾ ತಂಡವನ್ನು ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡ 24-35 ಅಂತರದಿಂದ ಸೋಲಿಸಿ ಕಪ್ ಎತ್ತಿತ್ತು. [ಪ್ರೋ ಕಬಡ್ಡಿ: ಮುಂಬೈ ಮಣಿಸಿ ಕಪ್ ಎತ್ತಿದ ಜೈಪುರ]

Pro Kabaddi League 201

ಯಾವ ಯಾವ ನಗರಗಳಲ್ಲಿ ಪಂದ್ಯ ನಡೆಯಲಿದೆ

* ಬೆಂಗಳೂರು: ಶ್ರೀಕಂಠೀರವ ಒಳಾಂಗಣ ಸ್ಟೇಡಿಯಂ.

* ದೆಹಲಿ: ತ್ಯಾಗರಾಜ ಒಳಾಂಗಣ ಸ್ಟೇಡಿಯಂ.

* ಹೈದರಾಬಾದ್ : ಗಾಂಚಿಬೌಲಿ ಒಳಾಂಗಣ ಸ್ಟೇಡಿಯಂ.

* ಜೈಪುರ: ಸವಾಯಿ ಮಾನ್ ಸಿಂಗ್ ಸ್ಟೇಡಿಯಂ.

* ಕೋಲ್ಕತ್ತಾ: ನೇತಾಜಿ ಒಳಾಂಗಣ ಸ್ಟೇಡಿಯಂ.

* ಮುಂಬೈ: ದಿ ನ್ಯಾಷನಲ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾ.

* ಪಾಟ್ನ: ಪಾಟಲಿ ಪುತ್ರ ಸ್ಪೋರ್ಟ್ಸ್ ಕಾಂಪ್ಲೆಕ್ಸ್.

* ಪುಣೆ: ಬಾಲೆವಾಡಿ ಕ್ರೀಡಾ ಕಾಂಪ್ಲೆಕ್ಸ್.

ತಂಡ, ಮಾಲೀಕ, ನಾಯಕ, ಕೋಚ್ : [ಸತತ ಏಳನೇ ಬಾರಿ ಕಬಡ್ಡಿಯಲ್ಲಿ ಭಾರತಕ್ಕೆ ಚಿನ್ನ]

1. ಬೆಂಗಾಲ್ ವಾರಿಯರ್ಸ್

* ಮಾಲೀಕ: ಫ್ಯೂಚರ್ ಗ್ರೂಪ್
* ನಾಯಕ: ನೀಲೇಶ್ ಶಿಂಧೆ.
* ಕೋಚ್: ರಾಜ್ ನಾರಾಯಣ್ ಶರ್ಮ.

2. ಬೆಂಗಳೂರು ಬುಲ್ಸ್

* ಮಾಲೀಕ: ಕೋಸ್ಮಿಕ್ ಗ್ಲೋಬಲ್ ಮೀಡಿಯಾ
* ನಾಯಕ: ಮಂಜಿತ್ ಚಿಲ್ಲಾರ್
* ಕೋಚ್: ರಣಧೀರ್ ಸಿಂಗ್.

3. ದಬಾಂಗ್ ದೆಹಲಿ
* ಮಾಲೀಕ: ಡು ಇಟ್ ಸ್ಫೋರ್ಟ್ಸ್ ಮ್ಯಾನೇಜ್ಮೆಂಟ್
* ನಾಯಕ: ಜಸ್ಮೇರ್ ಸಿಂಗ್.
* ಕೋಚ್: ಅರುಣ್ ಸಿಂಗ್.

4. ಜೈಪುರ್ ಪಿಂಕ್ ಪ್ಯಾಂಥರ್ಸ್.
* ಮಾಲೀಕ: ಅಭಿಷೇಕ್ ಬಚ್ಚನ್.
* ನಾಯಕ: ನವನೀತ್ ಗೌತಮ್.
* ಕೋಚ್: ಕಾಶಿನಾಥನ್ ಬಾಸ್ಕರನ್.

Pro Kabaddi League (PKL)

5. ಪಾಟ್ನ ಪೈರೇಟ್ಸ್
* ಮಾಲೀಕ: ರಾಜೇಶ್ ಶಾ
* ನಾಯಕ: ರಾಕೇಶ್ ಕುಮಾರ್
* ಕೋಚ್: ಆರ್ ಎಸ್ ಖೋಖರ್.

6. ಪುಣೇರಿ ಪಲ್ಟನ್
* ಮಾಲೀಕ: ಇನ್ಸೂರ್ ಕೋಟ್ ಸ್ಫೋರ್ಟ್ಸ್
* ನಾಯಕ:ವಾಜೀರ್ ಸಿಂಗ್.
* ಕೋಚ್: ರಾಮ್ ಪಾಲ್ ಕೌಶಿಕ್.

7. ತೆಲುಗು ಟೈಟನ್ಸ್

* ಮಾಲೀಕ: ವೀರಾ ಸ್ಫೋರ್ಟ್ಸ್
* ನಾಯಕ: ರಾಜಗುರು ಸುಬ್ರಮಣ್ಯಂ
* ಕೋಚ್: ಜೆ ಉದಯ್ ಕುಮಾರ್.

8. ಯೂ ಮುಂಬಾ
* ಮಾಲೀಕ: ಯೂನಿಲೇಕರ್ ಸ್ಫೋರ್ಟ್ಸ್
* ನಾಯಕ: ಅನುಪ್ ಕುಮಾರ್.
* ಕೋಚ್: ರವಿ ಶೆಟ್ಟಿ.

ವೇಳಾಪಟ್ಟಿ:
ಜುಲೈ 18 (ಶನಿವಾರ) ಮುಂಬೈ
* ಯೂ ಮುಂಬಾ vs ಜೈಪುರ್ ಪಿಂಕ್ ಪ್ಯಾಂಥರ್ಸ್
* ಬೆಂಗಳೂರು ಬುಲ್ಸ್ vs ಬೆಂಗಾಲ್ ವಾರಿಯರ್ಸ್ [ಪೂರ್ಣ ವೇಳಾಪಟ್ಟಿಗೆ ಇಲ್ಲಿ ಕ್ಲಿಕ್ ಮಾಡಿ]

(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:15 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X