ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

PKL 2022: ಬಲಿಷ್ಠ ಗುಜರಾತ್ ಜೈಂಟ್ಸ್ ವಿರುದ್ಧ ತೊಡೆ ತಟ್ಟಲು ಸಜ್ಜಾದ ಯು ಮುಂಬಾ

PKL 2022: Bengal Warriors vs Dabang Delhi, Giants Are Eyeing For Their Third Win, Match Prediction

ಅಕ್ಟೋಬರ್ 26 ರಂದು ಬುಧವಾರ ನಡೆಯಲಿರುವ ಪ್ರೊ ಕಬಡ್ಡಿ ಲೀಗ್ ಸೀಸನ್ 9ರ 40 ನೇ ಪಂದ್ಯದಲ್ಲಿ ಯು ಮುಂಬಾ ಬಲಿಷ್ಠ ಗುಜರಾತ್ ಜೈಂಟ್ಸ್ ವಿರುದ್ಧ ಸೆಣೆಸಲಿದೆ. ಗುಜರಾತ್ ಜೈಂಟ್ಸ್ ಋತುವಿನ ತಮ್ಮ ಸತತ ಮೂರನೇ ಗೆಲುವಿನ ಮೇಲೆ ಕಣ್ಣಿಟ್ಟಿದೆ.

ಗುಜರಾತ್ ಜೈಂಟ್ಸ್ ಟೀಬಲ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ ಮತ್ತು ಯು ಮುಂಬಾ ವಿರುದ್ಧ ಗೆಲ್ಲುವ ನೆಚ್ಚಿನ ತಂಡವಾಗಿದೆ. ಯು ಮುಂಬಾ ಅವರು ತಮ್ಮ ಕೊನೆಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ ಸೋಲನುಭವಿಸಿದ್ದರು. ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

PKL 2022: ಬೆಂಗಾಲ್ ವಾರಿಯರ್ಸ್‌ಗೆ ಟಕ್ಕರ್ ಕೊಡುತ್ತಾ ದಬಾಂಗ್ ಡೆಲ್ಲಿ?PKL 2022: ಬೆಂಗಾಲ್ ವಾರಿಯರ್ಸ್‌ಗೆ ಟಕ್ಕರ್ ಕೊಡುತ್ತಾ ದಬಾಂಗ್ ಡೆಲ್ಲಿ?

ಯು ಮುಂಬಾವನ್ನು ಎದುರಿಸುತ್ತಿರುವ ಗುಜರಾತ್ ಜೈಂಟ್ಸ್ ತಮ್ಮ ಗೆಲುವಿನ ವೇಗವನ್ನು ಮುಂದುವರಿಸಲು ಉತ್ಸುಕರಾಗಿದ್ದಾರೆ. ಮೊದಲ ಕೆಲವು ಪಂದ್ಯಗಳಲ್ಲಿ ಅಸ್ಥಿರವಾಗಿದ್ದ ಗುಜರಾತ್ ಜೈಂಟ್ಸ್ ಕೊನೆಯ ಎರಡು ಪಂದ್ಯಗಳಲ್ಲಿ ಯುಪಿ ಯೋಧಾ ಮತ್ತು ಹರಿಯಾಣ ಸ್ಟೀಲರ್ಸ್ ಅನ್ನು ಸೋಲಿಸುವ ಮೂಲಕ ತಮ್ಮ ಫಾರ್ಮ್‌ಗೆ ಮರಳಿದ್ದಾರೆ. ಪ್ರಸ್ತುತ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಮೂರು ಪಂದ್ಯಗಳನ್ನು ಗೆದ್ದು ಎರಡರಲ್ಲಿ ಸೋತಿದ್ದು, ಒಂದು ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ.

ಉತ್ತಮ ಫಾರ್ಮ್‌ನಲ್ಲಿದೆ ಗುಜರಾತ್ ಜೈಂಟ್ಸ್

ಉತ್ತಮ ಫಾರ್ಮ್‌ನಲ್ಲಿದೆ ಗುಜರಾತ್ ಜೈಂಟ್ಸ್

ಗುಜರಾತ್ ಜೈಂಟ್ಸ್‌ನ ಈವರೆಗಿನ ಅತ್ಯುತ್ತಮ ಆಟಗಾರ ರೈಡರ್ ರಾಕೇಶ್, ಕೇವಲ 6 ಪಂದ್ಯಗಳಲ್ಲಿ 78 ರೇಡ್ ಪಾಯಿಂಟ್‌ಗಳನ್ನು ಗಳಿಸಿದ್ದಾರೆ. ಕಲೆದ ಎರಡು ಪಂದ್ಯಗಳಿಂದ 34 ರೇಡ್ ಪಾಯಿಂಟ್‌ಗಳನ್ನು ಪಡೆಯುವ ಮೂಲಕ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದರು. ಚಂದ್ರನ್ ರಂಜಿತ್ 35 ರೇಡ್ ಪಾಯಿಂಟ್‌ಗಳೊಂದಿಗೆ ತಂಡದ ಎರಡನೇ ಅತ್ಯುತ್ತಮ ರೈಡರ್ ಆಗಿದ್ದಾರೆ. ರಂಜಿತ್ ಅವರು ಇಲ್ಲಿಯವರೆಗೆ ಅಸ್ಥಿರ ಫಾರ್ಮ್ ಅನ್ನು ತೋರಿಸಿದ್ದಾರೆ. ಅವರು ತಮ್ಮ ಫಾರ್ಮ್ ಮರಳಿ ಪಡೆದರೆ, ದಾಳಿಯಲ್ಲಿ ರಾಕೇಶ್ ಕೆಲಸವನ್ನು ಹೆಚ್ಚು ಸುಲಭಗೊಳಿಸುತ್ತದೆ.

ಸೌರವ್ ಗುಲಿಯಾ 18 ಟ್ಯಾಕಲ್ ಪಾಯಿಂಟ್‌ಗಳೊಂದಿಗೆ ತಂಡದ ಪ್ರಮುಖ ಡಿಫೆಂಡರ್ ಆಗಿದ್ದರೆ, ಅರ್ಕಾಮ್ ಶೇಖ್ 12 ಟ್ಯಾಕಲ್ ಪಾಯಿಂಟ್‌ಗಳನ್ನು ಪಡೆದಿದ್ದಾರೆ. ಗುಮಾನ್ ಸಿಂಗ್‌ರಂತಹ ಬಲಿಷ್ಠ ರೈಡರ್ ಗಳನ್ನು ಹೊಂದಿರುವ ಯು ಮುಂಬಾ ಲೈನ್-ಅಪ್ ವಿರುದ್ಧ, ಡಿಫೆಂಡರ್‌ಗಳು ತಂಡವು ತಮ್ಮ ಮೂರನೇ ಜಯವನ್ನು ಗಳಿಸಲು ಅತ್ಯುತ್ತಮ ಪ್ರದರ್ಶನ ನೀಡಬೇಕಿದೆ.

ಪಾಕ್ ವಿರುದ್ಧ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಆಟಗಾರನನ್ನು ಮುಂದಿನ ಪಂದ್ಯದಿಂದ ಹೊರಗಿಡಲು ಗವಾಸ್ಕರ್ ಸಲಹೆ

ಬುಲ್ಸ್ ವಿರುದ್ಧ ಸೋತ ಯು ಮುಂಬಾ

ಬುಲ್ಸ್ ವಿರುದ್ಧ ಸೋತ ಯು ಮುಂಬಾ

ಯು ಮುಂಬಾ ತನ್ನ ಹಿಂದಿನ ಸ್ಪರ್ಧೆಯಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ 32-42 ರಿಂದ ಸೋತಿದ್ದು ಗೆಲುವಿನ ಹಾದಿಗೆ ಮರಳಲು ಪ್ರಯತ್ನಿಸುತ್ತಿದೆ. ಸುರೀಂದರ್ ಸಿಂಗ್ ಮತ್ತು ತಂಡ ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ ಮತ್ತು ಮುಂಬರುವ ಪಂದ್ಯಗಳಲ್ಲಿ ತಮ್ಮ ಪ್ರದರ್ಶನವನ್ನು ಉತ್ತಮಪಡಿಸಲು ಪ್ರಯತ್ನಿಸುತ್ತಾರೆ.

ಗುಮಾನ್ ಸಿಂಗ್ ಪ್ರಸ್ತುತ 6 ಪಂದ್ಯಗಳಿಂದ 48 ರೇಡ್ ಪಾಯಿಂಟ್‌ಗಳನ್ನು ಪಡೆಯುವ ಮೂಲಕ ಉತ್ತಮ ರೈಡರ್ ಎನಿಸಿಕೊಂಡಿದ್ದಾರೆ, ರೇಡಿಂಗ್ ವಿಭಾಗವನ್ನು ಮುನ್ನಡೆಸುತ್ತಿದ್ದಾರೆ. ಜೈ ಭಗವಾನ್ 25 ಅಂಕ ಮತ್ತು ಆಶಿಶ್ 23 ರೇಡಿಂಗ್ ಪಾಯಿಂಟ್ ಪಡೆಯುವ ಮೂಲಕ ಉತ್ತಮ ಬೆಂಬಲ ನೀಡುತ್ತಿದ್ದಾರೆ.

ರಕ್ಷಣಾ ವಿಭಾಗದಲ್ಲಿ ಸುಧಾರಣೆಯಾಗಬೇಕು

ರಕ್ಷಣಾ ವಿಭಾಗದಲ್ಲಿ ಸುಧಾರಣೆಯಾಗಬೇಕು

ರಕ್ಷಣಾ ವಿಭಾಗದಲ್ಲಿ ನಾಯಕ ಸುರಿಂದರ್ ಸಿಂಗ್ 18 ಟ್ಯಾಕಲ್ ಪಾಯಿಂಟ್‌ಗಳೊಂದಿಗೆ ಮುನ್ನಡೆ ಸಾಧಿಸಿದ್ದು, ರಿಂಕು ಕೂಡ 12 ಟ್ಯಾಕಲ್ ಪಾಯಿಂಟ್‌ಗಳೊಂದಿಗೆ ಪ್ರಭಾವಿಯಾಗಿದ್ದಾರೆ. ಬೆಂಗಳೂರು ಬುಲ್ಸ್ ವಿರುದ್ಧದ ತಮ್ಮ ಕೊನೆಯ ಪಂದ್ಯದಲ್ಲಿ, ಉತ್ತಮ ಆಟ ಆಡಿತ್ತು. ಯು ಮುಂಬಾ ಮೊದಲಾರ್ಧದ ಅಂತ್ಯಕ್ಕೆ 24-11 ರಿಂದ ಮುನ್ನಡೆ ಸಾಧಿಸುವ ಮೂಲಕ ಉತ್ತಮ ಸ್ಥಿತಿಯಲ್ಲಿದ್ದರು, ಆದರೆ ದ್ವಿತೀಯಾರ್ಧದಲ್ಲಿ ಯು ಮುಂಬಾ ಕಳಪೆ ಪ್ರದರ್ಶನ ನೀಡಿತು, ದ್ವಿತೀಯಾರ್ಧದಲ್ಲಿ ಒಂದು ಪಾಯಿಂಟ್ ಅನ್ನು ಸಹ ಪಡೆಯಲಾಗಲಿಲ್ಲ.

ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಯು ಮುಂಬಾ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಮತ್ತು ಪಾಯಿಂಟ್‌ಗಳ ಪಟ್ಟಿಯಲ್ಲಿ ಮೇಲೇರಲು ಗೆಲುವಿನ ಹಾದಿಗೆ ಮರಳಲು ನೋಡುತ್ತದೆ.

Story first published: Wednesday, October 26, 2022, 14:01 [IST]
Other articles published on Oct 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X