ಸ್ವಾತಂತ್ರ್ಯೋತ್ಸದ ಅಂಗವಾಗಿ ಆಗಸ್ಟ್ 13ರಂದು 'ಫಿಟ್ ಇಂಡಿಯಾ ಓಟ'

By ಪ್ರತಿನಿಧಿ

ನವದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಭಾಗವಾಗಿ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ದೇಶಾದ್ಯಂತ ಆಗಸ್ಟ್ 13ರಂದು ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟ 2.0 ಅನ್ನು ಆಯೋಜಿಸಿದೆ. ಆಗಸ್ಟ್ 13ರಂದು ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟ ದೇಶದಾದ್ಯಂತ ನಡೆಯಲಿದ್ದು, ಓಟವನ್ನು ಯಶಸ್ವಿಯಾಗಿಸುವಂತೆ ಕ್ರೀಡಾ ಸಚಿವ, ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಮನವಿ ಮಾಡಿಕೊಂಡಿದ್ದಾರೆ.

ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಗೆದ್ದಿರುವ 4 ಕ್ರಿಕೆಟಿಗರ ಪಟ್ಟಿಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಗೆದ್ದಿರುವ 4 ಕ್ರಿಕೆಟಿಗರ ಪಟ್ಟಿ

ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಆಗಸ್ಟ್ 13ರಂದು ರಾಷ್ಟ್ರವ್ಯಾಪಿ ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟ 2.0ಕ್ಕೆ ಚಾಲನೆ ನೀಡಲಿದ್ದು, ಕ್ರೀಡೆ ಮತ್ತು ಯುವಜನ ವ್ಯವಹಾರಗಳ ಖಾತೆ ರಾಜ್ಯ ಸಚಿವ, ನಿಸಿತ್ ಪ್ರಮಾಣಿಕ್ ಪಾಲ್ಗೊಳ್ಳುತ್ತಾರೆ ಎಂದು ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಕಾರ್ಯದರ್ಶಿ ಉಷಾ ಶರ್ಮಾ ತಿಳಿಸಿದ್ದಾರೆ.

75 ಜಿಲ್ಲೆಗಳಲ್ಲಿ ಮತ್ತು ಪ್ರತಿ ಜಿಲ್ಲೆಯ 75 ಹಳ್ಳಿಗಳಲ್ಲಿ ಓಟದ ಕಾರ್ಯಕ್ರಮ
ಫಿಟ್ ಇಂಡಿಯಾ ಸ್ವಾತಂತ್ರ್ಯ ಓಟದ ಉದ್ಘಾಟನಾ ದಿನದಂದು (ಆಗಸ್ಟ್ 13) ದೇಶಾದ್ಯಂತ ಐತಿಹಾಸಿಕ ತಾಣಗಳಲ್ಲಿ 75 ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಬಳಿಕ ಪ್ರತಿ ವಾರ ಕಾರ್ಯಕ್ರಮಗಳು 75 ಜಿಲ್ಲೆಗಳಲ್ಲಿ ಮತ್ತು ಪ್ರತಿ ಜಿಲ್ಲೆಯ 75 ಹಳ್ಳಿಗಳಲ್ಲಿ 2021ರ ಅಕ್ಟೋಬರ್ 2 ರವರೆಗೆ ನಡೆಯಲಿದೆ ಎಂದು ಉಷಾ ಶರ್ಮಾ ಮಾಹಿತಿ ನೀಡಿದ್ದಾರೆ. ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟ ಒಟ್ಟು 744 ಜಿಲ್ಲೆಗಳು, ಪ್ರತಿ ಜಿಲ್ಲೆಯ 75 ಗ್ರಾಮಗಳು ಮತ್ತು ದೇಶಾದ್ಯಂತ 30,000 ಶಿಕ್ಷಣ ಸಂಸ್ಥೆಗಳಲ್ಲಿ ಆಯೋಜಿಸಲಾಗುವುದು. ಈ ಉಪಕ್ರಮದ ಮೂಲಕ, 7.50 ಕೋಟಿಗೂ ಹೆಚ್ಚು ಯುವಕರು ಮತ್ತು ನಾಗರಿಕರನ್ನು ತಲುಪಿ ಈ ಓಟದಲ್ಲಿ ಭಾಗವಹಿಸುವಂತೆ ಮಾಡಲಾಗುವುದು ಎಂದು ಶರ್ಮಾ ವಿವರಿಸಿದರು.

ಭಾರತ vs ಇಂಗ್ಲೆಂಡ್ ದ್ವಿತೀಯ ಟೆಸ್ಟ್: ಶಾರ್ದೂಲ್ ಠಾಕೂರ್ ಸ್ಥಾನಕ್ಕೆ ಆಯ್ಕೆಯಾಗಬಹುದಾದ 3 ಆಟಗಾರರುಭಾರತ vs ಇಂಗ್ಲೆಂಡ್ ದ್ವಿತೀಯ ಟೆಸ್ಟ್: ಶಾರ್ದೂಲ್ ಠಾಕೂರ್ ಸ್ಥಾನಕ್ಕೆ ಆಯ್ಕೆಯಾಗಬಹುದಾದ 3 ಆಟಗಾರರು

ಆರೋಗ್ಯಕರ ಭಾರತದಿಂದ ಮಾತ್ರವೇ ಬಲಿಷ್ಠ ಭಾರತ ಮಾಡಲು ಸಾಧ್ಯ
ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಮಾತನಾಡಿ, "ನಾವು ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುತ್ತಿರುವಾಗ, ನಾವು ಸದೃಢ ಮತ್ತು ಆರೋಗ್ಯಕರ ಭಾರತಕ್ಕಾಗಿ ಸಂಕಲ್ಪ ಮಾಡಬೇಕು ಏಕೆಂದರೆ ಸದೃಢ ಮತ್ತು ಆರೋಗ್ಯಕರ ಭಾರತದಿಂದ ಮಾತ್ರವೇ ಬಲಿಷ್ಠ ಭಾರತ ಮಾಡಲು ಸಾಧ್ಯ. ಆದ್ದರಿಂದ, ರಾಷ್ಟ್ರವ್ಯಾಪಿ ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟ 2.0 ರಲ್ಲಿ ಭಾಗವಹಿಸಿ ಅದನ್ನು ಜನಾಂದೋಲನವನ್ನಾಗಿ ಮಾಡಿ ಎಂದು ತಾವು ಪ್ರತಿಯೊಬ್ಬರನ್ನೂ ಆಗ್ರಹಿಸುತ್ತೇನೆ" ಎಂದು ತಿಳಿಸಿದ್ದಾರೆ. ಆಗಸ್ಟ್ 15ರಂದು ಭಾರದಾದ್ಯಂತ 75ನೇ ವರ್ಷದ ಸ್ವಾತಂತ್ರ್ಯೋತ್ಸವ ನಡೆಯಲಿದೆ. ಇದರ ಭಾಗವಾಗಿ ಫಿಟ್ ಇಂಡಿಯಾ ಓಟ ನಡೆಯಲಿದೆ.

ಫಿಟ್ ಇಂಡಿಯಾ ಓಟಕ್ಕೆ ನೋಂದಾಯಿಸಲು ಹೀಗೆ ಮಾಡಿ
ಫಿಟ್ ಇಂಡಿಯಾ ಓಟದ ಕಾರ್ಯಕ್ರಮದಲ್ಲಿ ಜನರು ತೊಡಗಿಕೊಳ್ಳಲು ಹೀಗೆ ಮಾಡಬೇಕು. ಫಿಟ್ ಇಂಡಿಯಾ ಪೋರ್ಟಲ್ https://fitindia.gov.in ನಲ್ಲಿ ತಮ್ಮ ಓಟವನ್ನು ನೋಂದಾಯಿಸಬಹುದು ಮತ್ತು ಅಪ್ ಲೋಡ್ ಮಾಡಬಹುದು ಮತ್ತು #Run4India ಮತ್ತು #AzadikaAmritMahotsav ತಮ್ಮ ಸಾಮಾಜಿಕ ಮಾಧ್ಯಮ ಚಾನೆಲ್ ಗಳಲ್ಲಿ ಸ್ವಾತಂತ್ರ್ಯ ಓಟವನ್ನು ಉತ್ತೇಜಿಸಬಹುದು. ಫಿಟ್ ಇಂಡಿಯಾ ಅಭಿಯಾನದ ಮೊದಲ ಆವೃತ್ತಿಯನ್ನು ಆಗಸ್ಟ್ 15ರಿಂದ ಅಕ್ಟೋಬರ್ 2, 2020 ರವರೆಗೆ ಆಯೋಜಿಸಲಾಗಿತ್ತು. ಕೇಂದ್ರ ಸಶಸ್ತ್ರ ಪಡೆಗಳು, ಎನ್.ಜಿಒಗಳು, ಖಾಸಗಿ ಸಂಸ್ಥೆಗಳು, ಶಾಲೆಗಳು, ವ್ಯಕ್ತಿಗಳು, ಯುವ ಕ್ಲಬ್ ಗಳು ಸೇರಿದಂತೆ ಕೇಂದ್ರ/ರಾಜ್ಯ ಇಲಾಖೆಗಳು ಮತ್ತು ಸಂಘಟನೆಗಳ 5 ಕೋಟಿಗೂ ಹೆಚ್ಚು ಜನರು ಇದರಲ್ಲಿ ಭಾಗವಹಿಸಿದ್ದರು ಮತ್ತು ಸುಮಾರು 18 ಕೋಟಿ ಕಿ.ಮೀ ದೂರವನ್ನು ಓಟದ ಮೂಲಕ ಕ್ರಮಿಸಿದ್ದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, August 11, 2021, 20:59 [IST]
Other articles published on Aug 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X