ಕಣ್ಣೀರಿಟ್ಟು ಹೊರನಡೆದ ಮೊದಲ ತೃತೀಯಲಿಂಗಿ ಕ್ರೀಡಾಪಟು

Posted By:
CWG 2018: First transgender competitor withdraws in tears after injury

ಬೆಂಗಳೂರು, ಏಪ್ರಿಲ್ 09: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಿದ ಮೊದಲ ತೃತೀಯಲಿಂಗಿ ಕ್ರೀಡಾಪಟು ನ್ಯೂಜಿಲೆಂಡ್‌ನ ವೇಯ್ಟ್‌ಲಿಫ್ಟರ್ ಲಾರೆಲ್ ಹಬ್ಬಾರ್ಡ್, ಗಾಯದ ಸಮಸ್ಯೆಯಿಂದಾಗಿ ಕ್ರೀಡಾಕೂಟದಿಂದ ಹೊರಬಿದ್ದಿದ್ದಾರೆ.

ಮಹಿಳೆಯರ 90 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ತೂಕ ಎತ್ತುವಾಗ ಅವರ ತೋಳಿದ ಮೂಳೆ ಜಾರಿಹೋಗಿದೆ. ಇದರಿಂದ ತೀವ್ರ ದುಃಖಿತರಾದ ಹಬ್ಬಾರ್ಡ್ ಕಣ್ಣೀರಿಡುತ್ತಾ ಕ್ರೀಡಾಕೂಟದಿಂದ ಹೊರನಡೆದರು.

ಕಾಮನ್‌ವೆಲ್ತ್ ಗೇಮ್ಸ್: 5ನೇ ದಿನದ ಆರಂಭದಲ್ಲಿಯೇ ಮೂರು ಪದಕ

ಲಾರೆಲ್ ಮೊದಲ ಹೆಸರು ಗೆವಿನ್ ಹಬ್ಬಾರ್ಡ್. 30ನೇ ವರ್ಷದಲ್ಲಿ ಅವರು ತಮ್ಮ ಲಿಂಗಪರಿವರ್ತನೆ ಮಾಡಿಕೊಂಡು ಮಹಿಳೆಯಾಗಿ ಬದಲಾಗಿದ್ದರು. ಕ್ರೀಡಾಕೂಟದಲ್ಲಿ ಲಾರೆಲ್‌ಗೆ ಅವಕಾಶ ನೀಡಿದ್ದು, ತೀವ್ರ ಚರ್ಚೆಗೆ ಒಳಗಾಗಿದ್ದಲ್ಲದೆ, ಎದುರಾಳಿಗಳಿಂದ ವಿರೋಧಕ್ಕೂ ಕಾರಣವಾಗಿತ್ತು.

ಲಾರೆಲ್ ಅವರಲ್ಲಿ ಇನ್ನೂ ಪುರುಷರು ಹೊಂದಿರುವ ಸಾಮರ್ಥ್ಯವೇ ಇದೆ. ಹೀಗಿರುವಾಗ ಇತರೆ ಮಹಿಳಾ ಸ್ಪರ್ಧಿಗಳ ಜತೆ ಅವರನ್ನು ಕಣಕ್ಕಿಳಿಸುವುದು ನ್ಯಾಯೋಚಿತವಲ್ಲ ಎಂದು ಸಮೊವನ್‌ನ ವೇಯ್ಟ್‌ಲಿಫ್ಟಿಂಗ್ ತಂಡದ ಕೋಚ್ ಜೆರ್ರಿ ವಾಲ್‌ವರ್ಕ್ ಹೇಳಿದ್ದರು.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನನ್ನ ಸ್ಪರ್ಧೆಗೆ ಸಂಬಂಧಿಸಿದಂತೆ ಅಭಿಪ್ರಾಯ, ಹೇಳಿಕೆಗಳನ್ನು ನಾನು ಓದಿಲ್ಲ ಮತ್ತು ಪಾಲಿಸಿಲ್ಲ. ನನ್ನಲ್ಲಿ ಯಾವುದೇ ಅಭಿಪ್ರಾಯವಿಲ್ಲ ಎಂದು ಲಾರೆಲ್ ವಿವಾದದ ಕುರಿತಂತೆ ಪ್ರತಿಕ್ರಿಯಿಸಿದ್ದರು.

ಶೂಟಿಂಗ್‌ನಲ್ಲಿ ಭಾರತಕ್ಕೆ ಮತ್ತೆರಡು ಪದಕ

ಪ್ರೇಕ್ಷಕರ ಪ್ರತಿಕ್ರಿಯೆ ಕುರಿತು ಅವರಲ್ಲಿ ಕಳವಳವಿತ್ತು. ಆದರೆ, ಅವರಿಗೆ ದೊರೆತ ಉತ್ತೇಜನಪೂರ್ವಕ ಸ್ವಾಗತದಿಂದ ಖುಷಿಯಾಗಿದ್ದರು.

ಆಸ್ಟ್ರೇಲಿಯಾದ ಪ್ರೇಕ್ಷಕ ಸಮೂಹ ಅದ್ಭುತವಾಗಿತ್ತು. ನನ್ನ ಗರಿಷ್ಠ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರಯತ್ನಿಸಿದೆ. ನನ್ನ ಪೂರ್ಣ ಪ್ರಯತ್ನ ಹಾಕಿದ್ದೆ, ಆದರೆ, ಭಾರ ಎತ್ತಲು ಸಾಧ್ಯವಾಗದೆ ಇರುವುದಕ್ಕೆ ವಿಷಾದವಾಗುತ್ತಿದೆ ಎಂದು ಲಾರೆಲ್ ಹೇಳಿದರು.

ಅಂತಿಮ ಸ್ನ್ಯಾಚ್ ವಿಭಾಗದಲ್ಲಿ ಲಾರೆಲ್ ಅವರ ಕೈತೋಳಿನ ಮೂಳೆ ಜಾರಿತ್ತು. ಇದರಿಂದ ಅವರು ಸ್ಪರ್ಧೆಯಿಂದ ಹೊರಹೋಗುವುದು ಅನಿವಾರ್ಯವಾಯಿತು.

Story first published: Monday, April 9, 2018, 16:44 [IST]
Other articles published on Apr 9, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ