ಯಸಾರ್‌ ದೊಗು ಅಂತಾರಾಷ್ಟ್ರೀಯ ಕುಸ್ತಿಯಲ್ಲಿ ವಿನೇಶ್‌ಗೆ ಚಿನ್ನ

ಇಸ್ತಾನ್ಬುಲ್‌, ಜುಲೈ 14: ಭಾರತದ ಸ್ಟಾರ್‌ ಕುಸ್ತಿಪಟು ವಿನೇಶ್‌ ಫೋಗಟ್‌, ಇಲ್ಲಿ ನಡೆದ ಯಾಸರ್‌ ದೊಗು ಅಂತಾರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ 53 ಕೆಜಿ ವಿಭಾಗದಲ್ಲಿ ಸತತ ಎರಡನೇ ಬಾರಿ ಬಂಗಾರದ ಸಾಧನೆ ಮೆರೆದಿದ್ದಾರೆ.

ವಿಶ್ವಕಪ್‌ ಫೈನಲ್‌ನಲ್ಲಿ ಅರೆ ನಗ್ನವಾಗಿ ಮೈದಾನಕ್ಕೆ ನುಗ್ಗಿದ ಮಹಿಳೆ!ವಿಶ್ವಕಪ್‌ ಫೈನಲ್‌ನಲ್ಲಿ ಅರೆ ನಗ್ನವಾಗಿ ಮೈದಾನಕ್ಕೆ ನುಗ್ಗಿದ ಮಹಿಳೆ!

ನಿರೀಕ್ಷೆಯಂತೇ ಅಧಿಕಾರಯುತ ಪ್ರದರ್ಶನವನ್ನೇ ನೀಡಿದ ವಿನೇಶ್‌, 9-5 ಅಂಕತಗಳಿಂದ ರಷ್ಯಾದ ಬಲಿಷ್ಠ ಎದುರಾಳಿ ಕಟರಿನಾ ಪೊಲೆಷ್ಚುಕ್‌ ಎದುರು ಗೆದ್ದು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಕಳೆದ ವಾರ ಸ್ಪೇನ್‌ನಲ್ಲಿ ನಡೆದ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲೂ ವಿನೇಶ್‌ ಪೋಡಿಯಂ ಮೆಟ್ಟಿಲೇರಿದ್ದರು.

ಇದರೊಂದಿಗೆ ಭಾರತಕ್ಕೆ ಕೂಟದಲ್ಲಿ ಮೂರನೇ ಸ್ವರ್ಣ ಲಭ್ಯವಾಗಿದೆ. ಇದಕ್ಕೂ ಮುನ್ನ 50 ಕೆಜಿ ವಿಭಾಗದಲ್ಲಿ ಸೀಮಾ ಮತ್ತು 59 ಕೆಜಿ ವಿಭಾಗದಲ್ಲಿ ಮಂಜು ಸ್ವರ್ಣ ಪದಕಗಳನ್ನು ಗೆದ್ದಿದ್ದರು. ಇನ್ನು ಫೈನಲ್‌ನಲ್ಲಿ ಅಬ್ಬರಿಸುವುದಕ್ಕೂ ಮುನ್ನ ಮಿಂಚಿನ ಪಟ್ಟುಗಳನ್ನು ಪ್ರದರ್ಶಿಸಿದ್ದ ವಿನೇಶ್‌ ತಮ್ಮ ಎದುರಾಳಿಗಳನ್ನು ತಾಂತ್ರಿಕವಾಗಿ ಪ್ರಬಲ್ಯ ಮೆರೆದು ಹೊಡೆದುರುಳಿಸಿದ್ದರು.

ನಿವೃತ್ತಿ ಬಳಿಕ ಬಿಜೆಪಿ ಸೇರಲಿದ್ದಾರಂತೆ ಮಹೇಂದ್ರ ಸಿಂಗ್‌ ಧೋನಿ!ನಿವೃತ್ತಿ ಬಳಿಕ ಬಿಜೆಪಿ ಸೇರಲಿದ್ದಾರಂತೆ ಮಹೇಂದ್ರ ಸಿಂಗ್‌ ಧೋನಿ!

ಇನ್ನು ಕಳೆದ ವಾರ ಮ್ಯಾಡ್ರಿಡ್‌ನಲ್ಲಿ ಚಿನ್ನ ಗೆದ್ಇದ್ದ ದಿವ್ಯಾ ಕಕ್ರನ್‌ (68 ಕೆಜಿ) ಮತ್ತು ಬೆಳ್ಳಿ ಗೆದ್ದಿದ್ದ ಪೂಜಾ ಧಂದಾ (57 ಕೆಜಿ) ಫೈನಲ್‌ ಪ್ರವೇಶಿಸುವಲ್ಲಿ ವಿಫಲರಾಗಿದ್ದರು. ದಿವ್ಯಾ ಅರ್ಹತಾ ಸುತ್ತಿನಲ್ಲೇ ಸೋತು ಹೊರಬಿದ್ದರೆ, ಪೂಜಾ ಕ್ವಾರ್ಟರ್‌ಫೈನಲ್‌ ಹಂತದಲ್ಲಿ ನಿರಾಸೆ ಅನುಭವಿಸಿದ್ದರು.

ಇನ್ನು ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಮಿಂಚಿದ್ದ ಸಾಕ್ಷಿ ಮಲಿಕ್‌ ಗಾಯದ ಸಮಸ್ಯೆಯಿಂದ ಚೇತರಿಸಿ ತಮ್ಮ ಶ್ರೇಷ್ಠ ಲಯ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾರೆ ಆದರೂ, ಪದಕ ಸುತ್ತು ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ. ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತ ಸಾಕ್ಷಿಗೆ ಬಳಿಕ ರೆಪೆಚೇಜ್‌ನಲ್ಲಿ ಕಂಚಿಗಾಗಿ ಪೈಪೋಟಿ ನಡೆಸುವ ಅವಕಾಶ ಸಿಕ್ಕಿತಾದರೂ ಅಲ್ಲಿಯೂ ವಿಫಲಗೊಂಡರು.

ವಿಶ್ವಕಪ್‌: ಜಯವರ್ಧನೆ ಅವರ ವಿಶ್ವ ದಾಖಲೆ ಮುರಿದ ಕೇನ್‌ ವಿಲಿಯಮ್ಸನ್‌ವಿಶ್ವಕಪ್‌: ಜಯವರ್ಧನೆ ಅವರ ವಿಶ್ವ ದಾಖಲೆ ಮುರಿದ ಕೇನ್‌ ವಿಲಿಯಮ್ಸನ್‌

ಪುರುಷರ ಫ್ರೀಸ್ಟೈಲ್‌ ಕುಸ್ತಿಯಲ್ಲಿ ರಾಹುಲ್‌ ಅವಾರೆ (61ಕೆಜಿ) 4-1 ಅಂತರದಲ್ಲಿ ಟರ್ಕಿಯ ಮುನಿರ್‌ ಅಕ್ತಾಸ್‌ ಅವರನ್ನು ಮಣಿಸಿ ವೃತ್ತಿ ಬದುಕಿನ ಚೊಚ್ಚಲ ಕೆರಿಯರ್‌ ಶ್ರೇಯಾಂಕ ಸರಣಿ ಗೆದ್ದುಕೊಂಡಿದ್ದಾರೆ. ಮತ್ತೊಂದೆಡೆ ಉತ್ಕರ್ಷ್‌ ಕಾಳೆ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Tuesday, June 29, 2021, 14:06 [IST]
Other articles published on Jun 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X