ಬೆಂಗಳೂರಿನಲ್ಲಿ ಭಾರತದ ಮೊತ್ತ ಮೊದಲ ಪಾಡೆಲ್ ಟೆನಿಸ್ ಪಂದ್ಯಾವಳಿ

Indias first ever padel tennis tournament in Bangalore

ಬೆಂಗಳೂರು, ಜನವರಿ 26: ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಾಡಲ್ ಟೆನ್ನಿಸ್ ಕ್ರೀಡೆ ಈಗ ಭಾರತಕ್ಕೂ ಕಾಲಿಟ್ಟು ಜನಪ್ರಿಯಗೊಳ್ಳುತ್ತಿದೆ. ಭಾರತದಲ್ಲೇ ಮೊದಲ ಕೋರ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸದಾಶಿವನಗರದ ಪೆಡಲ್ ಟೆನಿಸ್ ಕೋರ್ಟನ್ನು ಉಪಮುಖ್ಯಮಂತ್ರಿ ಯಸ್.ಎಂ. ಕೃಷ್ಣ ಹಾಗೂ ಮಲ್ಲೇಶ್ವರಂ ಕ್ಷೇತ್ರದ ಶಾಸಕರಾದ ಡಾ. ಅಶ್ವಥ್ ನಾರಾಯಣ್ ಅವರು ಇತ್ತೀಚೆಗೆ ಉದ್ಘಾಟಿಸಿದರು.

ರಣಜಿ: ಸೌರಾಷ್ಟ್ರವನ್ನು 227/7ಕ್ಕೆ ಕಟ್ಟಿಹಾಕಿದ ರೋನಿತ್ ಮೋರೆ

ಬೆಂಗಳೂರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಸ್ಟೇಟ್ ಪಾಡಲ್ ಫೆಡರೇಷನ್ ಅಧ್ಯಕ್ಷೆ ಸ್ನೇಹ ಅಬ್ರಹಾಂ ಸೆಹಗಲ್, 'ಹೊಸ ಕ್ರೀಡೆಯನ್ನು ಕಲಿಯುವಲ್ಲಿ ಜನರ ಆಸಕ್ತಿಯನ್ನು ನೋಡಿ ನಮಗೆ ಆಶ್ಚರ್ಯವಾಗಿದೆ. ಕರ್ನಾಟಕದಲ್ಲಿ ಪಾಡಲ್ ಟೆನ್ನಿಸನ್ನು ಜನಪ್ರಿಯಗೊಳಿಸುವುದು ನಮ್ಮ ಮುಖ್ಯ ಉದ್ದೇಶ' ಎಂದರು.

'ಟೆನ್ನಿಸ್ ವಿತ್ ವಾಲ್ಸ್' ಹಾಗು 'ಸ್ಕ್ವ್ಯಾಷ್ ಇನ್ ದಿ ಸನ್' ಎಂಬ ಹೆಸರಿನಿಂದಲೂ ಕರೆಯಲ್ಪಡುವ ಈ ಕ್ರೀಡೆಯನ್ನು ಮಹಿಳೆ ಪುರಷ ಎಂಬ ಬೇಧವಿಲ್ಲದೆ ಎಲ್ಲಾ ವಯೋವರ್ಗದವರೂ ಆಡಬಹುದಾಗಿದೆ. ಸುಲಭವಾಗಿ ಕಲಿಯಬಹುದಾದ ಈ ಕ್ರೀಡೆಯನ್ನು ಗಾಜಿನ ಕೋರ್ಟ್ ಒಳಗೆ ಆಡುತ್ತಾರೆ. 66ಅಡಿ X 33 ಅಡಿಯಷ್ಟು ವಿಸ್ತೀರ್ಣ ಹೊಂದಿರುವ ಪಾಡೆಲ್ ಟೆನ್ನಿಸ್ ಕೋರ್ಟ್, ಟಿನ್ನಿಸ್ ಕೋರ್ಟ್‌ಗಿಂತ ಚಿಕ್ಕದಾಗಿದೆ. ಬಹುಬೇಗನೆ ಕಲಿಯಬಹುದಾದ ಈ ಕ್ರೀಡೆಯನ್ನು ಜಗತ್ತಿನಾದ್ಯಂತ ಸುಮಾರು 3 ಕೋಟಿ ಜನರು ಆಡುತ್ತಿದ್ದಾರೆ.

ಇಮಾಮ್ ಶತಕ ವ್ಯರ್ಥ, ಪಾಕ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ 13 ರನ್ ಜಯ

ಬೆಂಗಳೂರಿನ ಸದಾಶಿವನಗರದಲ್ಲಿ ಜನವರಿ 26 ಹಾಗೂ 27ರಂದು ನಡೆಯುವ ಪಾಡಲ್ ಟೆನ್ನಿಸ್ ಪಂದ್ಯಾವಳಿ ಕ್ರೀಡಾಪಟುಗಳಿಗೆ ಒಂದು ಉತ್ತಮ ಅವಕಾಶ. ಈಗಾಗಲೇ ಸಂಘದ ವೆಬ್‌ಸೈಟ್‌ನಲ್ಲಿ (www.padelfederationindia.com) ನೋಂದಣಿ ಶುರುವಾಗಿದೆ. ಆಸಕ್ತ ಕ್ರೀಡಾಪಟುಗಳು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ಈ ಪಂದ್ಯಾವಳಿಯ ವಿಜೇತರು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಪಂದ್ಯಕ್ಕೆ ಅರ್ಹರಾಗಿರುತ್ತಾರೆ.

ಪಾಡೆಲ್ ಟೆನ್ನಿಸ್ ಆಟದ ನಿಯಮಗಳು

ಪಾಡೆಲ್ ಟೆನ್ನಿಸ್ ಆಟದ ನಿಯಮಗಳು

1. ಪಾಡಲ್ ಟೆನ್ನಿಸನ್ನು ಯಾವಾಗಲೂ ಡಬಲ್ಸ್ ಮಾದರಿಯಲ್ಲಿ ಆಡುತ್ತಾರೆ

2. ಕ್ರೀಡೆಯು ಅಂಡರ್ಹ್ಯಾಂಡ್ ಸರ್ವಿಸ್ ಮೂಲಕ ಶುರುವಾಗುತ್ತದೆ ಹಾಗು ಎರಡು ಪ್ರಯತ್ನಗಳನ್ನು ಒಳಗೊಂಡಿರುತ್ತದೆ.

3. ಟೆನ್ನಿಸ್ ಆಟದ ಹಾಗೆಯೇ ಇದರಲ್ಲಿ ಬಾಲನ್ನು ಒಮ್ಮೆ ಮಾತ್ರ ಹಿಟ್ ಹಾಗು ಬೌನ್ಸ್ ಮಾಡಬಹುದು

4. ಎದುರಾಳಿಯು ಬಾಲನ್ನು ಡೈರೆಕ್ಟ್ ಹಿಟ್ ಮಾಡದೆ ನೆಲದಮೇಲೆ ಬೌನ್ಸ್ ಅದಮೇಲಷ್ಟೇ ಹೊಡೆಯಬೇಕು.

ಅಂಕಗಳು

ಅಂಕಗಳು

1. ಪಾಡಲ್ ಟೆನ್ನಿಸ್ಸಿನ ಅಂಕಗಳು ಟೆನ್ನಿಸ್ ಅಂಕಗಳ ಹಾಗೆಯೇ ಇರುತ್ತದೆ (ಉದಾಹರಣೆ : 15/೦, 3೦/೦, 4೦/೦, ಅಡ್ವಾಂಟೇಜ್, ಡ್ಯೂಸ್ ಇತ್ಯಾದಿ )

2. ಪಾಡಲ್ ಟೆನ್ನಿಸ್ ಗೆಲ್ಲಲು 2 ಸೆಟ್ಟಲ್ಲಿ ಜಯಗಳಿಸಬೇಕು (ಒಂದು ಸೆಟ್ 6 ಪಂದ್ಯಗಳನ್ನು ಒಳಗೊಂಡಿರುತ್ತದೆ ).

ಕರ್ನಾಟಕ ರಾಜ್ಯ ಪೆಡಲ್ ಸಂಘ ಸಂಸ್ಥೆ

ಕರ್ನಾಟಕ ರಾಜ್ಯ ಪೆಡಲ್ ಸಂಘ ಸಂಸ್ಥೆ

ನಮ್ಮ ಸಂಸ್ಥೆಯ ಕಾರ್ಯಕಾರಿಣಿ ಸದಸ್ಯರ ಪಟ್ಟಿ ಇಂತಿವೆ ಆದಿನಾಥ್ ನರ್ದೇ (ಅಧ್ಯಕ್ಷರು),

ಸಿರಿಲ್ ಝಕರಿಯಾ (ಉಪಾಧ್ಯಕ್ಷರು), ಪ್ರಶಾಂತ್ ಸಂಬರ್ಗಿ (ಪ್ರಧಾನ ಕಾರ್ಯದರ್ಶಿ), ಸೌವೀಕ್ ಮಜುಂದಾರ್ (ಖಜಾಂಚಿ), ಸುರಭಿ ಶರ್ಮ (ಸ್ಥಾಪಕ ಸದಸ್ಯ), ಆದಿ ನಾರಾಯಣನ್ (ಸ್ಥಾಪಕ ಸದಸ್ಯ), ರೊನ್ನಿ ಸೆಹಗಲ್ (ಭಾರತ ಪಾಡೆಲ್ ಟೆನ್ನಿಸ್ ಸಂಸ್ಥೆಯ ಪ್ರತಿನಿಧಿ)

ಸಂಸ್ಥೆಯ ಉದ್ದೇಶ

ಸಂಸ್ಥೆಯ ಉದ್ದೇಶ

1. ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿ ಜನರಿಗೆ ಪಾಡಲ್ ಟೆನಿಸನ್ನು ಪರಿಚಯಿಸುವುದು.

2. ಜಿಲ್ಲಾ ಮಟ್ಟದ ಸ್ಪರ್ಧೆ ಏರ್ಪಡಿಸುವುದು.

3. ಅಟೋಟೋದ ನಿಯಮಗಳ ಬಗ್ಗೆ ಪ್ರತಿಯೊಂದು ಕ್ಲಬ್ ಗಳಿಗೆ ಮಾಹಿತಿ ನೀಡುವುದು.

ಪಾಡಲ್ ಟೆನಿಸ್ ಕರ್ನಾಟಕದಲ್ಲಿ ಯಾಕೆ ಬೇಕು?

ಪಾಡಲ್ ಟೆನಿಸ್ ಕರ್ನಾಟಕದಲ್ಲಿ ಯಾಕೆ ಬೇಕು?

1. ಪಾಡಲ್ ಕ್ರೀಡೆಯು ಯೂರೋಪ್, ಅಮೆರಿಕ ಕೆನಡಾ, ದುಬೈ ಹಾಗೂ ಜಪಾನ್ ದೇಶಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಹಾಗೂ ಈ ಶತಮಾನದ ಕ್ರೀಡೆ ಎಂದು ಖ್ಯಾತಿಗೊಂಡಿದೆ.

2. ಪಾಡೇಲ್ ಟೆನ್ನಿಸ್ ಎಲ್ಲರೂ ಆಡಬಹುದಾದಂತಹ ಅತ್ಯಂತ ಸುಲಭದ ಕ್ರೀಡೆ ಹಾಗೂ ಈ ಕ್ರೀಡೆಯನ್ನು ಆಡುವುದರಿಂದ ಇನ್ನಷ್ಟು ಬಲಾಢ್ಯರಾಗಬಹುದು.

3. ಭಾರತ ದೇಶದಲ್ಲಿ ಕರ್ನಾಟಕ ಅತ್ಯಂತ ಅಭಿವೃದ್ಧಿ ಹೊಂದುತ್ತಿರುವ ರಾಜ್ಯ. ಐಟಿ ಸಿಟಿ, ಗಾರ್ಡೆನ್ ಸಿಟಿ ಎಂದೇ ಖ್ಯಾತಿಪಡೆದ ಬೆಂಗಳೂರಿನ ಜನಸಂಖ್ಯೆ ದಿನೇ ದಿನೇ ಏರುತ್ತಿದೆ. ಕೆಲಸದ ಒತ್ತಡದಿಂದ ತತ್ತರಿಸಿ ಹೋಗಿರುವ ಜನರಿಗೆ ಇಂತಹ ಕ್ರೀಡೆಯ ಅಗತ್ಯವಿದೆ.

4. ಈಗಿನ ತಾಂತ್ರಿಕಯುಗದಲ್ಲಿ ಜನರಿಗೆ ಯಾವುದಕ್ಕೂ ಸಮಯವಿಲ್ಲ. ಅವರು ಕೆಲಸದ ಒತ್ತಡದಲ್ಲಿ ತಮ್ಮ ಆರೋಗ್ಯದ ಕಡೆ ಕಾಳಜಿ ವಹಿಸುವುದಿಲ್ಲ, ಮನೆಯವರ ಜೊತೆ ಹಾಗೂ ಸ್ನೇಹಿತರೊಡನೆ ಮಾತನಾಡಲೂ ಅವರಿಗೆ ಸಮಯವವಿಲ್ಲ. ಪಾಡಲ್ ಟೆನ್ನಿಸ್ ಆಡುವುದರಿಂದ ಗಂಟೆಗೆ 500 ಕ್ಯಾಲೊರಿಸ್ ಇಳಿಸಬಹುದು, ಮನೆಯವರ ಹಾಗೂ ಸ್ನೇಹಿತರ ಜೊತೆ ಇದನ್ನು ಆಡಬಹುದರಿಂದ ಅವರ ಜೊತೆ ಬಾಂಧವ್ಯವು ಚೆನ್ನಾಗಿರುತ್ತದೆ, ಹಾಗೂ ಹೊಸಜನರ ಸಂಪರ್ಕವೂ ಆಗುತ್ತದೆ.

For Quick Alerts
ALLOW NOTIFICATIONS
For Daily Alerts

Story first published: Saturday, January 26, 2019, 11:47 [IST]
Other articles published on Jan 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more