ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಿಸ್ ಆಗಿದ್ದ ಉಗಾಂಡ ವೇಟ್‌ಲಿಫ್ಟರ್ ಪತ್ತೆ

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ಅಭ್ಯಾಸ ಶಿಬಿರದಿಂದ ನಾಪತ್ತೆಯಾಗಿದ್ದ ಉಗಾಂಡಾದ ವೇಟ್ ಲಿಫ್ಟರ್ ಅನ್ನು ಜಪಾನ್ ಪೊಲೀಸರು ಪತ್ತೆಹಚ್ಚಿದ್ದಾರೆ. ಜೂಲಿಯಸ್ ಸೆಕಿಟೋಲೆಕೊ ಹೆಸರಿನ ವೇಟ್ ಲಿಫ್ಟರ್ ಒಲಿಂಪಿಕ್ಸ್ ಟ್ರೇನಿಂಗ್ ಕ್ಯಾಂಪ್‌ನಿಂದ ಕಾಣೆಯಾಗಿ ಸುದ್ದಿಯಾಗಿದ್ದರು.
ಅಭ್ಯಾಸ ಶಿಬಿರದಿಂದ ನಾಪತ್ತೆಯಾಗಿದ್ದ ಜೂಲಿಯಸ್ ಸೆಕಿಟೋಲೆಕೊ ಅವರು, ತಾನಿಲ್ಲಿ ಕೆಲಸ ಹುಡುಕಬಯಸಿರುವುದಾಗಿ ನೋಟ್ ಒಂದರಲ್ಲಿ ಬರೆದಿಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವ್ಯಕ್ತಿ ಅಭ್ಯಾಸ ಶಿಬಿರದಿಂದ ತಪ್ಪಿಸಿಕೊಂಡು ಹೋಗಿದ್ದಲ್ಲದೆ ಬೇರೆ ಯಾವುದೇ ತಪ್ಪನ್ನೆಸಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
"ಕಾಣೆಯಾಗಿದ್ದ ಉಗಾಂಡ ವ್ಯಕ್ತಿ ಇಂದು ಮೈ ಪ್ರಿಫೆಕ್ಚರ್ ನಲ್ಲಿ ಸಿಕ್ಕಿದ್ದಾರೆ. ಅವರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ ಮತ್ತವರು ಯಾವುದೇ ರೀತಿಯ ತಪ್ಪೆಸಗಿಲ್ಲ," ಎಂದು ಹೆಸರು ಹೇಳಲಿಚ್ಛಿಸದ ಒಸಾಕಾ ಪೊಲೀಸ್ ಅಧಿಕಾರಿ ಎಎಫ್‌ಪಿಗೆ ಮಾಹಿತಿ ನೀಡಿದ್ದಾರೆ.
ಕಳೆದ ವಾರ ಉಗಾಂಡ ತಂಡದಿಂದ ಕೋವಿಡ್ 19 ಪರೀಕ್ಷೆಗಾಗಿ ಗಂಟಲ ದ್ರವ ಸಂಗ್ರಹಿಸುವಾಗ ಸೆಕಿಟೋಲೆಕೊ ತಪ್ಪಿಸಿಕೊಂಡಿರುವುದು ಗೊತ್ತಾಗಿತ್ತು. ಪೊಲೀಸರು ಹುಡುಕಾಟದಲ್ಲಿ ತೊಡಗಿದ್ದರು. ಟೋಕಿಯೋ ಒಲಿಂಪಿಕ್ಸ್ ಜುಲೈ 23ರಿಂದ ಆಗಸ್ಟ್ 8ರ ವರೆಗೆ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications