ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನಮ್ಮೂರ ಪ್ರತಿಭೆ: ಅಥ್ಲೆಟಿಕ್ಸ್‌ಗೂ ಸೈ, ಸಂಗೀತಕ್ಕೂ ಜೈ ಎನ್ನುವ ಅಭಿನ್ ದೇವಾಡಿಗ

Abhin Devadiga

ಅಭಿನ್ ದೇವಾಡಿಗ, 2001ರಲ್ಲಿ ಭಾಸ್ಕರ್ ದೇವಾಡಿಗ ಮತ್ತು ಆಶಾ ದೇವಾಡಿಗ ರವರ ಮಗನಾಗಿ ಉಡುಪಿ ಜಿಲ್ಲೆಯ ಸಂತೆಕಟ್ಟೆ ಯಲ್ಲಿ ಜನಿಸಿದರು. ಶಾಲೆಗೆ ದಾಖಲಾದ ದಿನದಿಂದ ಕಲಿಕೆಯಲ್ಲಿ ಆಸಕ್ತಿ ತೋರಿದ ಈ ಭವಿಷ್ಯದ ತಾರೆ ಓದಿನ ಜೊತೆಗೆ ಕ್ರೀಡೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದರು.

ಶಾಲೆಗೆ ದಾಖಲಾದ ದಿನದಿಂದಲೇ ಡ್ರಮ್ ಕಲಿಕೆಯಲ್ಲಿ ಆಸಕ್ತಿ ತೋರಿದ್ದರ ಜೊತೆಗೆ, ಎರಡನೇ ತರಗತಿಯಲ್ಲಿಯೇ ತನ್ನ ಮೊದಲ ಪ್ರದರ್ಶನ ನೀಡಿದರು. ಜೊತೆಗೆ ಓದಿನಲ್ಲಿಯೂ ಕೂಡ ಎಂದಿಗೂ ಹಿಂದೆ ಬೀಳಲಿಲ್ಲ. ಐದನೇ ತರಗತಿ ನಂತರದಲ್ಲಿ ಓದಿನ ಜೊತೆಗೆ ಕ್ರೀಡೆಯಲ್ಲಿ ಆಸಕ್ತಿ ತೋರುತ್ತಾ ಬಂದು, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ತಮ್ಮದೆಯಾದ ಛಾಪು ಮೂಡಿಸುತ್ತಿರುವುದು ಸಂತೋಷವೆನಿಸುತ್ತದೆ.

ಅಭಿನ್ ದೇವಾಡಿಗ ಚಿಕ್ಕ ವಯಸ್ಸಿನ ಸಾಧನೆಗಳು

ಅಭಿನ್ ದೇವಾಡಿಗ ಚಿಕ್ಕ ವಯಸ್ಸಿನ ಸಾಧನೆಗಳು

ಇವರ ಸಾಧನೆಯನ್ನು ನೋಡುವುದಾದರೆ 2014ರಲ್ಲಿ ಗದಗದಲ್ಲಿ ನಡೆದ ರಾಜ್ಯಮಟ್ಟದ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಅಥ್ಲೆಟಿಕ್ಸ್‌ ಕ್ರೀಡಾಕೂಟದ 100 ಮೀಟರ್ ಮತ್ತು 200 ಮೀಟರ್ ಓಟದಲ್ಲಿ ಭಾಗವಹಿಸಿ ಚಿನ್ನದ ಪದಕಗಳನ್ನ ಪಡೆದರು. ಕೇವಲ ಪದಕ ಗೆಲ್ಲೋದಷ್ಟೇ ಅಲ್ಲದೆ ಹೊಸ ದಾಖಲೆ ಕೂಡ ನಿರ್ಮಿಸಿದ್ದರು.

2015, 2016, 2017ರಲ್ಲಿ ಮೂಡಬಿದ್ರೆ, ಉಡುಪಿ, ಬೆಂಗಳೂರು, ಧಾರವಾಡ ಮತ್ತು ಬ್ರಹ್ಮಾವರದಲ್ಲಿ ನಡೆದ ಹಲವಾರು ರಾಜ್ಯಮಟ್ಟದ ಅಥ್ಲೆಟಿಕ್ಸ್‌ ಕ್ರೀಡಾಕೂಟದಲ್ಲಿ 100, 200 ಮೀಟರ್ ಓಟದಲ್ಲಿ ಭಾಗವಹಿಸಿ ಚಿನ್ನ , ಬೆಳ್ಳಿ ಮತ್ತು ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿಯ ಬೇಟೆ

ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿಯ ಬೇಟೆ

2018ರಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಪದವಿಪೂರ್ವ ಶಿಕ್ಷಣ ಇಲಾಖೆ ನಡೆಸುವ ಅಥ್ಲೆಟಿಕ್ಸ್‌ ಕ್ರೀಡಾಕೂಟದಲ್ಲಿ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕದ ಗೆಲ್ಲುವ ಮೂಲಕ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ದಾಪುಗಾಲನ್ನಿಟ್ಟರು.

ಇವಿಷ್ಟು ರಾಜ್ಯ ಮಟ್ಟದ ಸಾಧನೆಯಾದ್ರೆ, 2016ರಲ್ಲಿ ಆಂಧ್ರಪ್ರದೇಶದಲ್ಲಿ ನಡೆದ ರಾಷ್ಟ್ರಮಟ್ಟದ ಆರ್‌ಜಿಕೆ ಕ್ರೀಡಾಕೂಟದ 100 ಮೀಟರ್ ಓಟದಲ್ಲಿ ಕಂಚು, ತೆಲಂಗಾಣದ ಕರೀಂನಗರದಲ್ಲಿ ನಡೆದ ಸೌತ್ ಜೋನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 100 ಮೀಟರ್ ಓಟದಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

2017ರಲ್ಲಿ ಹರಿಯಾಣ ದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಕೂಲ್ ಕ್ರೀಡಾಕೂಟದಲ್ಲಿ 200 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದಿರುವ ಈ ಯುವ ಅಥ್ಲಿಟ್, 2019 ಮತ್ತು 2020ರಲ್ಲಿ ಹಲವು ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದಿದ್ದಾರೆ.

ನಮ್ಮೂರ ಪ್ರತಿಭೆ: ಇಕ್ವೆಸ್ಟ್ರಿಯನ್ ಚಾಂಪಿಯನ್, ಬೆಂಗಳೂರಿನ ಫವಾದ್ ಮಿರ್ಜಾ

ಖೇಲೋ ಇಂಡಿಯಾದಲ್ಲೂ ಪದಕ ಗೆದ್ದಿರುವ ಅಭಿನ್ ದೇವಾಡಿಗ

ಖೇಲೋ ಇಂಡಿಯಾದಲ್ಲೂ ಪದಕ ಗೆದ್ದಿರುವ ಅಭಿನ್ ದೇವಾಡಿಗ

ಖೇಲೋ ಇಂಡಿಯಾ ಯೂತ್ ಗೇಮ್ಸ್‌ಗೆ ಅಸ್ಸಾಂನ ಗೌಹಾಟಿಯಲ್ಲಿ ಖೇಲೋ ಇಂಡಿಯಾ ಯೂತ್ಸ್ ಗೇಮ್ಸ್‌ನಲ್ಲಿ 200 ಮೀಟರ್ ಓಟದಲ್ಲಿ ನೂತನ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿರುವ ಸಾಧನೆ ಇವರದ್ದಾಗಿದೆ. ಜೊತೆಗೆ ಉಡುಪಿಯಲ್ಲಿ ನಡೆ ಸೌತ್ ಜೋನ್ ನ್ಯಾಷನಲ್ಸ್ ಕ್ರೀಡಾಕೂಟದ 200ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ತಮಿಳುನಾಡಿನ ತಿರುವಣ್ಣಾಮಲೈಯಲ್ಲಿ ನಡೆದ ನ್ಯಾಷನಲ್ ಜ್ಯೂನಿಯರ್ ಫೆಡರೇಷನ್ ಕ್ರೀಡಾಕೂಟದ 200 ಮೀಟರ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಅಲ್ಲದೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದ ನ್ಯಾಷನಲ್ ಜ್ಯೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ನಲ್ಲಿಯೂ ಕೂಡ 200 ಮೀಟರ್ ಓಟದಲ್ಲಿ ಚಿನ್ನದ ಪದಕ ಹಾಗೂ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ನಮ್ಮೂರ ಪ್ರತಿಭೆ: ಭಾರತೀಯ ವಾಲಿಬಾಲ್‌ನಲ್ಲಿ ಮಿಂಚುತ್ತಿರುವ ಅಶ್ವಲ್ ರೈ

ಸಂಗೀತ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ದೇವಾಡಿಗ

ಸಂಗೀತ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ದೇವಾಡಿಗ

ಅಭಿನ್ ದೇವಾಡಿಗ ಚಿಕ್ಕ ವಯಸ್ಸಿನಲ್ಲಿಯೇ ಯಾವುದೇ ಹಾಡಿಗೂ ಸ್ಥಳದಲ್ಲಿಯೇ ರಿದಮ್ ನುಡಿಸುವ ಸಾಮರ್ಥ್ಯ ಹೊಂದಿದ್ದರು. ಇವರ ಸಂಗೀತದ ಸಾಧನೆಗೆ ಹಲವಾರು ಪ್ರಶಸ್ತಿಗಳು ಆಕರ್ಷಿತವಾಗಿವೆ. ಕಲಾಕಿರಣ, ಜೆಸ್ಸಿ ಕಲಾಶ್ರೀ, ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿಗಳನ್ನ ಪಡೆದಿದ್ದಾರೆ.

ಉತ್ತಮ ಡ್ರಮ್ಮರ್ ಆಗಿರುವ ಅಭಿನ್ ದೇವಾಡಿಗ ಅಥ್ಲೆಟಿಕ್ಸ್‌ ಜೊತೆಗೆ ಡ್ರಮ್ ನುಡಿಸುವುದನ್ನ ಇನ್ನಷ್ಟು ಉತ್ತಮವಾಗಿ ಕಲಿಯಲು ಅಂತರಾಷ್ಟ್ರೀಯ ಮಟ್ಟದ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಉತ್ತಮ ಡ್ರಮ್ಮರ್ ಆಗಿ ರೂಪುಗೊಳ್ಳುತ್ತಿದ್ದಾರೆ. ಇವರ ಸಂಗೀತ ಮತ್ತು ಅಥ್ಲೆಟಿಕ್ಸ್‌ನ ಸಾಧನೆ ಮತ್ತಷ್ಟು ಎತ್ತರಕ್ಕೆ ಸಾಗಲಿ ಎಂಬುದು 'ಮೈಖೇಲ್ ಕನ್ನಡ'ದ ಆಶಯ.

Story first published: Saturday, May 21, 2022, 18:18 [IST]
Other articles published on May 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X