'ಪಾಕ್ ಸ್ಪಿನ್ನರ್ ಅಜ್ಮಲ್ ಇನ್ಮುಂದೆ ಬೌಲ್ ಮಾಡುವಂತಿಲ್ಲ'

ಬೌಲಿಂಗ್ ಶೈಲಿಯ ಬಗ್ಗೆ ನಡೆದ ಪರೀಕ್ಷೆಯ ಫಲಿತಾಂಶ ಹೊರಬಂದಿದ್ದು, ಅಜ್ಮಲ್ ಅವರು ಬೌಲಿಂಗ್ ಮಾಡುವಾಗ ಅವರ ಬಾಹು ನಿಯಮಿತ 15 ಡಿಗ್ರಿ ಕೋನವನ್ನು ಮೀರುತ್ತಿರುವುದು ಕಂಡು ಬಂದಿದೆ. ಇಂತಿಷ್ಟೇ ಕೋನದಲ್ಲಿ ಕೈ ಮಡಿಸಿ ಬೌಲಿಂಗ್ ಮಾಡಲು ಅವಕಾಶವಿರುತ್ತದೆ. ಆದರೆ, ಐಸಿಸಿಯ ಈ ನಿಯಮವನ್ನು ಮೀರಿ ಅಜ್ಮಲ್ ಬೌಲಿಂಗ್ ಮಾಡುತ್ತಿರುವುದು ಕಂಡು ಬಂದಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಐಸಿಸಿ) ಮಂಗಳವಾರ ನೀಡಿರುವ ಆದೇಶದಿಂದ ಪಾಕಿಸ್ತಾನಕ್ಕೆ ಭಾರಿ ಹಿನ್ನಡೆಯಾಗಿದೆ. ಯುಎಇನಲ್ಲಿ ಮುಂದಿನ ತಿಂಗಳು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್, ಟಿ20 ಹಾಗೂ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನಾಡಲು ಪಾಕಿಸ್ತಾನ ಕ್ರಿಕೆಟ್ ತಂಡ ತಯಾರಿ ನಡೆಸಿರುವ ಸಂದರ್ಭದಲ್ಲೇ ಈ ಆಘಾತಕಾರಿ ಆದೇಶ ಹೊರಬಂದಿದೆ.
ಕಳೆದ ತಿಂಗಳು ಗಾಲೆಯಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಆಫ್ ಸ್ಪಿನ್ನರ್ ಸಯೀದ್ ಅಜ್ಮಲ್ ವಿರುದ್ಧ ದೂರು ಕೇಳಿ ಬಂದಿತ್ತು. ಬೌಲಿಂಗ್ ಶೈಲಿ ಬದಲಾವಣೆ ಕುರಿತಂತೆ ಇರುವ ಐಸಿಸಿ ನಿಯಮ ಪರಿಚ್ಛೇದ 2.4 ರಂತೆ ತಮ್ಮ ಶೈಲಿಯ ಬಗ್ಗೆ ಅಜ್ಮಲ್ ತಿಳಿಸಿದ್ದರು.
ಈ ಬಗ್ಗೆ ಆ.25ರಂದು ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿ ಪರೀಕ್ಷೆ ನಡೆಸಲಾಯಿತು. ಇದರ ಫಲಿತಾಂಶ ಆಧಾರವಾಗಿಟ್ಟುಕೊಂಡು ಐಸಿಸಿ ಈ ನಿರ್ಧಾರ ಕೈಗೊಂಡಿದೆ. 36 ವರ್ಷ ವಯಸ್ಸಿನ ಅಜ್ಮಲ್ ಅವರು 35 ಟೆಸ್ಟ್ ಪಂದ್ಯಗಳು, 111 ODIಗಳು, 63 ಟಿ20 ಪಂದ್ಯಗಳನ್ನಾಡಿದ್ದಾರೆ. ಕ್ರಮವಾಗಿ 178 ಟೆಸ್ಟ್, 183 ಏಕದಿನ ಹಾಗೂ 85 ಟಿ20 ವಿಕೆಟ್ ಪಡೆದುಕೊಂಡಿದ್ದಾರೆ.
ಅಕ್ರಮ ಬೌಲಿಂಗ್ ಎಸೆದು ಸಸ್ಪೆಂಡ್ ಆಗಿರುವ ಶ್ರೀಲಂಕಾದ ಸಚಿತ್ರಾ ಸೇನಾನಾಯಕೆ, ನ್ಯೂಜಿಲೆಂಡ್ ನ ಕೇನ್ ವಿಲಿಯಂಸನ್, ಜಿಂಬಾಬ್ವೆಯ ಪ್ರೊಸ್ಪರ್ ಉತ್ಸೇಯ ಅವರ ಸಾಲಿಗೆ ಪಾಕಿಸ್ತಾನದ ಸಯೀದ್ ಅಜ್ಮಲ್ ಹೊಸದಾಗಿ ಸೇರ್ಪಡೆಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications