ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಮೌಂಟ್‌ ಎವರೆಸ್ಟ್‌ ಹತ್ತಿದ ಕಪ್ಪು ವರ್ಣದ ಮೊದಲ ಆಫ್ರಿಕನ್‌ ಮಹಿಳೆ!

Saray Khumalo becomes first black SA woman to conquer Mount Everest

ಜೊಹಾನ್ಸ್‌ಬರ್ಗ್‌, ಮೇ 16: ದಕ್ಷಿಣ ಆಫ್ರಿಕಾದ ಪರ್ವತಾರೋಹಿ ಸರೇ ಖುಮಾಲೊ, ಮೌಂಟ್‌ ಎವರೆಸ್ಟ್‌ ಶಿಖರವನ್ನೇರಿದ ಆಫ್ರಿಕಾದ ಮೊದಲ ಕಪ್ಪು ವರ್ಣದ ಮಹಿಳೆ ಎಂಬ ಹೆಗ್ಗಳಿಕೆಗೆ ಗುರುವಾರ ಪಾತ್ರರಾಗಿದ್ದಾರೆ.

 ಈ ಬಾರಿ ವಿಶ್ವಕಪ್‌ನಲ್ಲಿ ಮೋಡಿ ಮಾಡಬಲ್ಲ Top 5 ಸ್ಪಿನ್ನರ್‌ಗಳು! ಈ ಬಾರಿ ವಿಶ್ವಕಪ್‌ನಲ್ಲಿ ಮೋಡಿ ಮಾಡಬಲ್ಲ Top 5 ಸ್ಪಿನ್ನರ್‌ಗಳು!

ತಮ್ಮ ರಾಷ್ಟ್ರದ ಮಕ್ಕಳ ಶಿಕ್ಷಣ ಸಲುವಾಗಿ ದತ್ತಿ ಹಣ ಸಂಗ್ರಹಿಸಲುವ ಸಲುವಾಗಿ ಕಳೆದ ಆರು ವರ್ಷಗಳಿಂದ ಪರ್ವತಾರೋಹಣದಲ್ಲಿ ತೊಡಗಿಸಿಕೊಂಡಿರುವ ಖುಮಾಲೊ, ವಿಶ್ವದ ವಿವಿಧ ಪರ್ವತಗಳನ್ನು ಏರಿದ ಅನುಭವವನ್ನೂ ಹೊಂದಿದ್ದಾರೆ.

 ಅಭ್ಯಾಸಕ್ಕೆ ತಡವಾದರೆ 10 ಸಾವಿರ ರೂ. ದಂಡ ವಿಧಿಸುತ್ತಿದ್ದ ಧೋನಿ: ಅಪ್ಟನ್‌ ಅಭ್ಯಾಸಕ್ಕೆ ತಡವಾದರೆ 10 ಸಾವಿರ ರೂ. ದಂಡ ವಿಧಿಸುತ್ತಿದ್ದ ಧೋನಿ: ಅಪ್ಟನ್‌

"ಕೆಲ ಸಮಯದ ಹಿಂದಷ್ಟೇ, ಸರೇ ಎನ್ಕುಸಿ ಖುಮಾಲೊ ವಿಶ್ವದ ಅತ್ಯಂತ ಎತ್ತರದ ಸ್ಥಳ ತಲುಪಿದ್ದಾರೆ. ಝಾಂಬಿಯಾ ಮೂಲದವರಾದದ ಅವರು ಈಗ ದಕ್ಷಿಣ ಆಫ್ರಿಕಾದ ನಿವಾಸಿ. ಆಫ್ರಿಕಾದ ಈ ಸಹೋದರಿ ಇದೀಗ ಮೌಂಟ್‌ ಎವರೆಸ್ಟ್‌ ಹತ್ತಿದ ಆಫ್ರಿಕಾದ ಕಪ್ಪು ವರ್ಣದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ,'' ಎಂದು ಖುಮಾಲೊ ಅವರನ್ನು 2013ರಿಂದ ಬೆಂಬಲಿಸುತ್ತಾ ಬಂದಿರುವ ಸಂಸ್ಥೆಯೊಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದೆ.

ಸಿಎಸ್‌ಕೆ ಅಭಿಮಾನಿಗಳಿಗೆ ಆಸ್ಟ್ರೇಲಿಯಾದಿಂದ ಸಂದೇಶ ರವಾನಿಸಿದ ವ್ಯಾಟ್ಸನ್‌!ಸಿಎಸ್‌ಕೆ ಅಭಿಮಾನಿಗಳಿಗೆ ಆಸ್ಟ್ರೇಲಿಯಾದಿಂದ ಸಂದೇಶ ರವಾನಿಸಿದ ವ್ಯಾಟ್ಸನ್‌!

ಎರಡು ದಿನಗಳ ಹಿಂದಷ್ಟ್ಏ ಬೇಸ್‌ ಕ್ಯಾಂಪ್‌ ತಲುಪಿ ಫೋಟೊ ಪ್ರಕಟಿಸಿದ್ದ ಖುಮಾಲೊ, ಇದೀಗ ಎವರೆಸ್ಟ್‌ನ ತುತ್ತ ತುದಿ ತಲುಪಿದ್ದಾರೆ. 29,029 ಅಡಿ ಎತ್ತರದ (8,848 ಮೀ.) ಎವರೆಸ್ಟ್‌ ಹತ್ತಲು ಖುಮಾಲೊ ಅವರ ನಾಲ್ಕನೇ ಪ್ರಯತ್ನ ಇದಾಗಿದೆ. 2014ರಲ್ಲಿ ಕೆಟ್ಟ ಹವಾಮಾನ ಕಾರಣ ಸಾಧ್ಯವಾಗಿರಲಿಲ್ಲ. 2015ರಲ್ಲೂ ಭೂಕಂಪನದಿಂದ ಸಾಧ್ಯವಾಗಿರಲಿಲ್ಲ.

ವಿಶ್ವಕಪ್‌ನಲ್ಲಿ ಬ್ಯಾಟ್ಸ್‌ಮನ್‌ಗಳ ನಿದ್ರೆ ಕೆಡಿಸಬಲ್ಲ ಬೌಲರ್‌ಗಳಿವರು!

ಇನ್ನು 2012ರಲ್ಲಿ ಖುಮಾಲೊ ಅವರು ತಾನ್ಝೇನಿಯಾದ ಮೌಂಟ್‌ ಕಿಲಿಮಂಜಾರೊ (5,895 ಮೀ) ಮತ್ತು ಅರ್ಜೆಂಟೀನಾದ ಅಕೋನ್‌ಕಾಗುವಾ (6,962 ಮೀ.) ಶಿಖರಗಳನ್ನೇರಿದ್ದರು.

Story first published: Thursday, May 16, 2019, 20:04 [IST]
Other articles published on May 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X