ಟೋಕಿಯೋ ಒಲಿಂಪಿಕ್ಸ್‌ ಗ್ರಾಮಗಳಲ್ಲಿ ಈ ಬಾರಿ ಕಾಂಡೋಮ್ ವಿತರಣೆಯಿಲ್ಲ

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್‌ ಆಯೋಜಕರು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳು ಮಾಡಬಹುದಾದ ಮತ್ತು ಮಾಡಬಾರದ ಸಂಗತಿಗಳು ಬಗ್ಗೆ ಪಟ್ಟಿ ಪ್ರಕಟಿಸಿದ್ದಾರೆ. ಈ ಪಟ್ಟಿಯಲ್ಲಿ ಒಲಿಂಪಿಕ್ಸ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದು ಬದಲಾವಣೆ ಕಾಣಿಸಿಕೊಂಡಿದೆ.

WTC Final: ವೀರೇಂದ್ರ ಸೆಹ್ವಾಗ್ 'ಮೂಡ್ ಸ್ವಿಂಗ್' ಆಗಲು ಕಾರಣ?WTC Final: ವೀರೇಂದ್ರ ಸೆಹ್ವಾಗ್ 'ಮೂಡ್ ಸ್ವಿಂಗ್' ಆಗಲು ಕಾರಣ?

ಒಲಿಂಪಿಕ್ಸ್ ಕ್ರೀಡಾಕೂಟಗಳ ವೇಳೆ ಕಾಂಡೋಮ್ ವಿತರಿಸುವ ಸಂಪ್ರದಾಯ ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿತ್ತು. ಆದರೆ ಈ ಬಾರಿ ಟೋಕಿಯೋ ಒಲಿಂಪಿಕ್ಸ್ ವಿಲೇಜ್ ಗಳಲ್ಲಿ ಕಾಂಡೋಮ್ ವಿತರಿಸುತ್ತಿಲ್ಲ ಎಂದು ಆಯೋಜಕರು ಹೇಳಿದ್ದಾರೆ. ಕೋವಿಡ್ ಕಾರಣ ಕ್ರೀಡಾಪಟುಗಳು ಪರಸ್ಪರ ಸಂಪರ್ಕಿಸಲು ನಿರ್ಬಂಧವಿರುವುದರಿಂದ ಈ ಬದಲಾವಣೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವವರಿಗೆ ಒಲಿಂಪಿಕ್ಸ್ ವಿಲೇಜ್‌ನಲ್ಲಿ ಕಾಂಡೋಮ್‌ಗಳನ್ನು ವಿತರಿಸಲಾಗುವುದಿಲ್ಲ. ಆದರೆ ಕ್ರೀಡಾಪಟುಗಳು ಗೇಮ್ಸ್ ಮುಗಿಸಿ ಹೊರಡುವಾಗ ಅವರಿಗೆ ಕಾಂಡೋಮ್ ಕೊಡಲಾಗುತ್ತದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.

WTC Final: ಇಂಗ್ಲೆಂಡ್‌ನಲ್ಲಿ ಕಪಿಲ್‌ದೇವ್ ಸಾಧನೆಯನ್ನು ಹಿಂದಿಕ್ಕಿ ದಾಖಲೆ ಬರೆದ ಇಶಾಂತ್WTC Final: ಇಂಗ್ಲೆಂಡ್‌ನಲ್ಲಿ ಕಪಿಲ್‌ದೇವ್ ಸಾಧನೆಯನ್ನು ಹಿಂದಿಕ್ಕಿ ದಾಖಲೆ ಬರೆದ ಇಶಾಂತ್

ಆಯೋಜಕರ ಈ ಹೊಸ ನಿರ್ಧಾರ 1988ರಿಂದಲೂ ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯವೊಂದು ಕೊನೆಗೊಳ್ಳುವಂತೆ ಮಾಡಿದೆ. ಅಕ್ವೈರ್ಡ್ ಇಮ್ಯುನೋಡೆಫಿಶಿಯೆನ್ಸಿ ಸಿಂಡ್ರೋಮ್ ಅಥವಾ ಏಡ್ಸ್‌ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಕಾಂಡೋಮ್ ವಿತರಣೆಯನ್ನು ಒಲಿಂಪಿಕ್ಸ್‌ನಲ್ಲಿ ಹಿಂದಿನಿಂದಲೂ ಪಾಲಿಸಿಕೊಂಡು ಬರಲಾಗಿತ್ತು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, June 21, 2021, 17:19 [IST]
Other articles published on Jun 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X