ಟೋಕಿಯೋ ಒಲಿಂಪಿಕ್ಸ್: ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಸೋಲುಂಡ ಶರತ್ ಕಮಲ್

ಭಾರತದ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಟೋಕಿಯೋ ಒಲಿಂಪಿಕ್ಸ್ ಟೇಬಲ್ ಟೆನಿಸ್ ಪ್ರಿ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಚೀನಾದ ಎಂ ಎ ಲಾಂಗ್ ವಿರುದ್ಧ ಸೋಲನುಭವಿಸಿದ್ದಾರೆ.
ಸೋಮವಾರ ನಡೆದ ಟೇಬಲ್ ಟೆನಿಸ್ ಸ್ಪರ್ಧೆಯ ಎರಡನೇ ಸುತ್ತಿನಲ್ಲಿ ಪೋರ್ಚುಗಲ್ ದೇಶದ ಟಿಯಾಗೋ ಅಪೊಲೊನಿಯಾ ವಿರುದ್ಧ ಭಾರತದ ಶರತ್ ಕಮಲ್ 4-2 ಅಂತರದಿಂದ ಜಯ ಸಾಧಿಸುವುದರ ಮೂಲಕ ಮೂರನೇ ಸುತ್ತಿಗೆ ಪ್ರವೇಶವನ್ನು ಪಡೆದಿದ್ದರು. ಎರಡನೇ ಸುತ್ತಿನಲ್ಲಿ ಶರತ್ ಕಮಲ್ ತೋರಿದ ಅತ್ಯದ್ಭುತ ಪ್ರದರ್ಶನವನ್ನು ಕಂಡು ಕ್ರೀಡಾಭಿಮಾನಿಗಳು ಶರತ್ ಕಮಲ್ ಅವರಿದ್ದ ಪದಕವನ್ನು ನಿರೀಕ್ಷಿಸುತ್ತಿದ್ದರು.
ಆದರೆ ನಿರೀಕ್ಷೆಯ ಮಟ್ಟವನ್ನು ತಲುಪುವಲ್ಲಿ ವಿಫಲರಾಗಿರುವ ಶರತ್ ಕಮಲ್ ರಿಯೋ ಒಲಿಂಪಿಕ್ಸ್ ಟೇಬಲ್ ಟೆನಿಸ್‌ನ ಹಾಲಿ ಚಿನ್ನದ ಪದಕ ವಿಜೇತ ಎಂ ಎ ಲಾಂಗ್ ವಿರುದ್ಧ 1-4 ಅಂತರದಲ್ಲಿ ಸೋಲನ್ನುಂಡಿದ್ದಾರೆ. ಚೀನಾದ ಟೇಬಲ್ ಟೆನಿಸ್ ಆಟಗಾರ ಎಂ ಎ ಲಾಂಗ್ ಭಾರತದ ಶರತ್ ಕಮಲ್ ವಿರುದ್ಧ 11-7, 8-11, 13-11, 11-4 ಹಾಗೂ 11-4 ಸೆಟ್‌ಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ. ಅತ್ತ ಭಾರತೀಯ ಹಾಕಿ ತಂಡ ಸ್ಪೇನ್ ವಿರುದ್ಧ 3-0 ಅಂತರದ ಜಯ ಸಾಧಿಸುವುದರ ಮೂಲಕ ಈ ಗುಂಪಿನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications