ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಮಹಿಳಾ 100 ಮೀ.ನಲ್ಲಿ ಎಲೈನ್ ಥಾಂಪ್ಸನ್ ಚಾಂಪಿಯನ್, ಮೂರೂ ಪದಕಗಳು ಜಮೈಕಾ ಪಾಲು!

Tokyo Olympics 2021: Jamaicas Elaine Thompson-Herah Wins Gold in Womens 100m

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ಮಹಿಳಾ ವಿಭಾಗ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಜಮೈಕಾ ಓಟಗಾರ್ತಿ ಜಮೈಕಾದ ಎಲೈನ್ ಥಾಂಪ್ಸನ್-ಹೆರಾ ಅವರು ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ವಿಶೇಷವೆಂದರೆ 100 ಮೀ. ಓಟ ಮಹಿಳಾ ವಿಭಾಗದ ಚಿನ್ನ, ಬೆಳ್ಳಿ, ಕಂಚು ಮೂರೂ ಪದಕಗಳು ಜಮೈಕಾ ದೇಶದ ಪಾಲಾಗಿದೆ. ವೇಗದರಸ ಉಸೇನ್ ಬೋಲ್ಟ್ ಅನ್ನು ಜಗತ್ತಿಗೆ ನೀಡಿದ ಜಮೈಕಾ ಈ ಬಾರಿಯೂ ಒಲಿಂಪಿಕ್ಸ್‌ನಲ್ಲಿ ಮಿನುಗಿದೆ.

ಟೋಕಿಯೋ ಒಲಿಂಪಿಕ್ಸ್: ಬಾಕ್ಸಿಂಗ್‌ನಲ್ಲಿ ದಿಟ್ಟ ಹೋರಾಟ ನಡೆಸಿದ ಸೈನಿಕ ಸತೀಶ್!ಟೋಕಿಯೋ ಒಲಿಂಪಿಕ್ಸ್: ಬಾಕ್ಸಿಂಗ್‌ನಲ್ಲಿ ದಿಟ್ಟ ಹೋರಾಟ ನಡೆಸಿದ ಸೈನಿಕ ಸತೀಶ್!

ಶನಿವಾರ (ಜುಲೈ 31) ನಡೆದ ಮಹಿಳಾ ವಿಬಾಗದ 100 ಮೀಟರ್ ಓಟ ಫೈನಲ್ ಸ್ಪರ್ಧೆಯಲ್ಲಿ ಜಮೈಕಾದ ಎಲೈನ್ ಥಾಂಪ್ಸನ್-ಹೆರಾ ಅವರು 10.61 ಸೆಕೆಂಡ್ ವೇಗದಲ್ಲಿ ಗುರಿ ತಲುಪಿದರೆ, ಇದೇ ದೇಶದ ಶೆಲ್ಲಿ-ಆನ್ ಫ್ರೇಸರ್-ಪ್ರೈಸ್ 10.74 ಸೆಕೆಂಡ್ ಮತ್ತು ಶೆರಿಕಾ ಜಾಕ್ಸನ್ 10.76 ಸೆಕೆಂಡ್ ಸಾಧನೆಯೊಂದಿಗೆ ಕ್ರಮವಾಗಿ ಬೆಳ್ಳಿ, ಕಂಚಿನ ಪದಕಗಳನ್ನು ಗೆದ್ದರು. ಶಾರ್ಟ್ ರೇಸ್‌ ಗಳಲ್ಲಿ ಭಾರತ ಹೀಟ್ಸ್‌ಗಳಲ್ಲೇ ಪದಕದಾಸೆಯಿಂದ ಹೊರ ಬಿದ್ದಿದೆ.

ಎಲೈನ್ ಥಾಂಪ್ಸನ್ ದಾಖಲೆ

ಎಲೈನ್ ಥಾಂಪ್ಸನ್ ದಾಖಲೆ

ಮಹಿಳಾ 100 ಮೀಟರ್ ಓಟದಲ್ಲಿ ಚಿನ್ನ ಗೆದ್ದಿರುವ ಜಮೈಕಾದ ಎಲೈನ್ ಥಾಂಪ್ಸನ್-ಹೆರಾ ಅವರು ವಿಶೇಷ ದಾಖಲೆಯನ್ನೂ ನಿರ್ಮಿಸಿದ್ದಾರೆ. ಒಲಿಂಪಿಕ್ಸ್ ಇತಿಹಾಸದಲ್ಲೇ ದಾಖಲಾದ ಎರಡನೇ ಅತೀ ವೇಗದ ಓಟಕ್ಕೆ ಥಾಂಪ್ಸನ್-ಹೆರಾ ಅವರ 10.61 ಸೆಕೆಂಡ್ ಕಾಲಾವಧಿ ಗುರುತಿಸಿಕೊಂಡಿದೆ. ಈ ದಾಖಲೆ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವವರೆಂದರೆ ದಿವಂಗತ ಫ್ಲಾರೆನ್ಸ್ ಗ್ರಿಫಿತ್-ಜಾಯ್ನರ್. ಅಮೆರಿಕಾದವರಾದ ಗ್ರಿಫಿತ್-ಜಾಯ್ನರ್ 1988ರಲ್ಲಿ 10.49 ಸೆಕೆಂಡ್ ಕಾಲಾವಧಿಯಲ್ಲಿ ಮಹಿಳಾ ವಿಭಾಗದ 100 ಮೀಟರ್ ಓಟ ಮುಗಿಸಿದ್ದರು. ಇದು ಸುಲಭಕ್ಕೆ ಮುರಿಯಲಾಗದ ದಾಖಲೆಯಾಗಿ ಇಂದಿಗೂ ಉಳಿದುಕೊಂಡಿದೆ. ಆದರೆ ಈ ದಾಖಲೆ ಬರೆದ ಗ್ರಿಫಿತ್-ಜಾಯ್ನರ್ 21 ಸೆಪ್ಟೆಂಬರ್ 1998ರಲ್ಲಿ ಕೊನೆಯುಸಿರೆಳೆದಿದ್ದರು.

ಗಮನ ಸೆಳೆದ ಶೆಲ್ಲಿ-ಆನ್ ಫ್ರೇಸರ್-ಪ್ರೈಸ್

ಗಮನ ಸೆಳೆದ ಶೆಲ್ಲಿ-ಆನ್ ಫ್ರೇಸರ್-ಪ್ರೈಸ್

ದ್ವಿತೀಯ ಸ್ಥಾನ ಪಡೆದ ಶೆಲ್ಲಿ-ಆನ್ ಫ್ರೇಸರ್-ಪ್ರೈಸ್ ಕೂಡ ಫೈನಲ್ ಪಂದ್ಯ ವೇಳೆ ಅಷ್ಟೇ ಗಮನ ಸೆಳೆದಿದ್ದಾರೆ. ಕಾರಣ ಶನಿವಾರ ಫೈನಲ್‌ನಲ್ಲಿ ಎಲೈನ್ ಥಾಂಪ್ಸನ್-ಹೆರಾ ಗೆಲ್ಲುವವರೆಗೂ ಶೆಲ್ಲಿ-ಆನ್ ಫ್ರೇಸರ್ ಸದ್ಯಕ್ಕೆ ಜಗತ್ತಿನ ಅತೀ ವೇಗ ಓಟಗಾರ್ತಿ ಎಂಬ ದಾಖಲೆ ತನ್ನದಾಗಿಸಿಕೊಂಡಿದ್ದರು. ಅಷ್ಟೇ ಅಲ್ಲ, ಈಗ 34 ರ ಹರೆಯದ ಶೆಲ್ಲಿ-ಆನ್ ಒಲಿಂಪಿಕ್ಸ್‌ನಲ್ಲಿ 100 ಮೀಟರ್ ಓಟದಲ್ಲಿ ಪದಕ ಗೆದ್ದಿರುವ ಅತೀ ಹಿರಿಯ ಓಟಗಾರ್ತಿಯಾಗಿ ದಾಖಲೆ ಬರೆದಿದ್ದಾರೆ. ಅಲ್ಲದೆ ಟ್ರ್ಯಾಕ್ ಆ್ಯಂಡ್ ಫೀಲ್ಡ್ ವಿಭಾಗದಲ್ಲಿ ಮೂರು ಪದಕಗಳನ್ನು ಗೆದ್ದ ಅಪರೂಪದ ದಾಖಲೆಯೂ ಫ್ರೇಸರ್-ಪ್ರೈಸ್ ಹೆಸರಿಗೆ ಸೇರಿಸಿಕೊಂಡಿದೆ.

ಪಾರ್ಟಿ ಮಾಡಿದ ಉಸೇನ್ ಬೋಲ್ಟ್

100 ಮೀಟರ್ ಓಟ ಮಹಿಳಾ ವಿಭಾಗದ ಸ್ಪರ್ಧೆಯಲ್ಲಿ ಜಮೈಕಾ ದೇಶದ ಎಲೈನ್ ಥಾಂಪ್ಸನ್-ಹೆರಾ, ಶೆಲ್ಲಿ-ಆನ್ ಫ್ರೇಸರ್-ಪ್ರೈಸ್, ಶೆರಿಕಾ ಜಾಕ್ಸನ್ ಪದಕ ಗೆದ್ದಿದ್ದು ನೋಡಿ 100 ಮೀಟರ್ ಓಟದಲ್ಲಿ ಜಮೈಕಾದ ಮಾಜಿ ವಿಶ್ವ ಚಾಂಪಿಯನ್ ಉಸೇನ್ ಬೋಲ್ಟ್ ಪಾರ್ಟಿ ಖುಷಿ ಹಂಚಿಕೊಂಡಿದ್ದಾರೆ. ಟ್ವೀಟ್ ಮಾಡಿರುವ ಬೋಲ್ಟ್, ತನ್ನ 'ಇಟ್ಸ್‌ ಅ ಪಾರ್ಟಿ' ಸಾಂಗಿನ ವಿಡಿಯೋ ಹಾಕಿಕೊಂಡಿದ್ದಾರೆ. ವಿಡಿಯೋದಲ್ಲಿ ಪಾರ್ಟಿ ಸಾಂಗಿಗೆ ಬೋಲ್ಟ್ ಸೇರಿದಂತೆ ಅವರ ಸ್ನೇಹಿತರು ಕುಣಿಯುತ್ತಿರುವ ಚಿತ್ರಣವಿದೆ. 'ಇಟ್ಸ್‌ ಅ ಪಾರ್ಟಿ' ವಿಡಿಯೋ ಸಾಂಗ್ ಬೋಲ್ಟ್ ಅವರದ್ದೇ. ಅಂದ್ಹಾಗೆ ಬೋಲ್ಟ್ ಹೆಸರಿನಲ್ಲಿ ಇಂದಿಗೂ 100 ಮೀ. ಓಟದಲ್ಲಿ ವಿಶ್ವ ದಾಖಲೆಯಿದೆ. 2009ರಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೋಲ್ಟ್ 9.58 ಸೆಕೆಂಡ್ ಸಾಧನೆಯೊಂದಿಗೆ 100 ಮೀಟರ್ ಬಂಗಾರ ಗೆದ್ದಿದ್ದರು. ಆ ದಾಖಲೆ ಇಂದಿಗೂ ಮುರಿಯದೆ ಹಾಗೆ ಉಳಿದುಕೊಂಡಿದೆ.

Story first published: Sunday, August 1, 2021, 19:24 [IST]
Other articles published on Aug 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X