ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಹೀನಾಯ ಸೋಲು

Posted By:

ಅಡಿಲೇಡ್, ಫೆ.8: ಆಸ್ಟ್ರೇಲಿಯಾದಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಸೋತು ಸುಣ್ಣವಾಗಿದ್ದ ಧೋನಿ ಪಡೆ ಮತ್ತೊಮ್ಮೆ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು ಅನುಭವಿಸಿದೆ. ಐಸಿಸಿ ವಿಶ್ವಕಪ್ ಟೂರ್ನಿ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಭಾನುವಾರ 106ರನ್ ಗಳ ಅಂತರದ ಸೋಲು ಕಂಡಿದೆ.

ಐಸಿಸಿ ವಿಶ್ವಕಪ್ ನ ಮೊದಲ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟಿಂಗ್ ಮಾಡಿ 372 ರನ್ ಚೆಚ್ಚಿತ್ತು. ಇದನ್ನು ಬೆನ್ನಟ್ಟಿದ ಧೋನಿ ಪಡೆ 45.1ಓವರ್ ಗಳಲ್ಲಿ 265 ಸ್ಕೋರ್ ಮಾಡಿ ಆಲೌಟ್ ಆಗಿ ಸೊಲೊಪ್ಪಿಕೊಂಡಿತು.

India suffer 106-run defeat in a warm-up tie versus Australia

ವಿಶ್ವಕಪ್ ಟೂರ್ನಿಗೂ ಮುನ್ನ 14 ಅಭ್ಯಾಸ ಪಂದ್ಯಗಳು ನಡೆಯಲಿವೆ. ಅದರೆ, ಯಾವ ಅಭ್ಯಾಸ ಪಂದ್ಯಕ್ಕೂ ಅಂತಾರಾಷ್ಟ್ರೀಯ ಏಕದಿನ ಪಂದ್ಯದ ಮಾನ್ಯತೆ ಇರುವುದಿಲ್ಲ. ಅಭ್ಯಾಸ ಪಂದ್ಯಗಳಲ್ಲಿ 11 ಆಟಗಾರರ ಬದಲಿಗೆ 15 ಆಟಗಾರರನ್ನು ಕಣಕ್ಕಿಳಿಸಬಹುದಾಗಿದೆ. ಭಾರತ ತನ್ನ ಮುಂದಿನ ಅಭ್ಯಾಸ ಪಂದ್ಯವನ್ನು ಫೆ.10ರಂದು ಅಫ್ಘಾನಿಸ್ತಾನ ವಿರುದ್ಧ ಆಡಲಿದೆ.

ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ
| ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ

ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ 371/9(48.2 ಓವರ್ಸ್)
ಭಾರತ 265/10 (45.1 ಓವರ್ಸ್)

Glenn Maxwell

ಟೀಂ ಇಂಡಿಯಾ ಇನ್ನಿಂಗ್ಸ್: ಅಜಿಂಕ್ಯ ರಹಾನೆ 66 ರನ್ ಗಳಿಸಿ ಟಾಪ್ ಸ್ಕೋರರ್ ಎನಿಸಿದರು. ಶಿಖರ್ ಧವನ್ 59 ರನ್ ಹಾಗೂ ಅಂಬಟಿ ರಾಯುಡು 53ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್ ಮನ್ ಗಳು ರನ್ ಚೇಸಿಂಗ್ ಬಗ್ಗೆ ತಲೆಕೆಡಿಸಿಕೊಂಡಂತೆ ತೋರಲಿಲ್ಲ. ನಾಯಕ ಧೋನಿ ಶೂನ್ಯ ಸುತ್ತಿ ಪೆವಿಲಿಯನ್ ಗೆ ಹೋದರು.

ಆಸ್ಟ್ರೇಲಿಯಾ ಇನ್ನಿಂಗ್ಸ್: ಆರಂಭಿಕ ಆಟಗಾರ ಡೇವಿಡ್ ವಾರ್ನರ್ 104, ಗ್ಲೆನ್ ಮ್ಯಾಕ್ಸ್ ವೆಲ್ 122 ರನ್ ಗಳಿಸಿ ಬೃಹತ್ ಮೊತ್ತಕ್ಕೆ ತಮ್ಮ ಕೊಡುಗೆ ನೀಡಿಡರು. ಭಾರತ ಪರ ಮೊಹಮದ್ ಶಮಿ 3, ಮೋಹಿತ್ ಶರ್ಮಾ 2 ಹಾಗೂ ಉಮೇಶ್ ಯಾದವ್ 2 ವಿಕೆಟ್ ಉರುಳಿಸಿದರು. 57 ಎಸೆತಗಳಲ್ಲಿ 11 ಬೌಂಡರಿ ಹಾಗೂ 8 ಸಿಕ್ಸರ್‌ಗಳನ್ನು ಸಿಡಿಸಿದ ಮ್ಯಾಕ್ಸ್ ವೆಲ್ ಇನ್ನಿಂಗ್ಸ್ ನಡುವೆಯೇ ನಿವೃತ್ತಿ ಪಡೆದು ಪೆವಿಲಿಯನ್ ಸೇರಿದರು.

Story first published: Sunday, February 8, 2015, 18:17 [IST]
Other articles published on Feb 8, 2015

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ