ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಆಸ್ಟ್ರೇಲಿಯನ್ ಓಪನ್‌ಗೆ ಬುಷ್‌ಫೈರ್ ಹೊಗೆ ಅಡ್ಡಿ, ನಡೆಯದ ಅಭ್ಯಾಸ!

Bushfire smoke halts Australian Open practice

ಸಿಡ್ನಿ, ಜನವರಿ 14: ಆಸ್ಟ್ರೇಲಿಯಾದಲ್ಲಿ ಸಂಭವಿಸಿದ ಕಾಡ್ಗಿಚ್ಚಿನಿಂದ ಉಂಟಾದ ಹೊಗೆಯ ವಾತಾವರಣ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಗೂ ಸಣ್ಣ ಮಟ್ಟಿನಲ್ಲಿ ಅಡ್ಡಿಯಾಗಿದೆ. ವಿಷಕಾರಿ ಗಾಳಿಯ ಕಾರಣ ಟೂರ್ನಿ ಸಲುವಾಗಿ ನಡೆಯಲಿದ್ದ ಅಭ್ಯಾಸಕ್ಕೆ ಹಿನ್ನಡೆಯಾಗಿದೆ. ಅರ್ಹತಾ ಪಂದ್ಯದ ವೇಳೆಯೂ ಆಟಗಾರರು ಉಸಿರಾಟದ ಸಮಸ್ಯೆ ಎದುರಿಸಿದ್ದಾರೆ ಎಂದು ತಿಳಿದುಬಂದಿದೆ.

ಜೋಫ್ರಾ ಆರ್ಚರ್ ನಿಂದಿಸಿದವನಿಗೆ ಎರಡು ವರ್ಷಗಳ ನಿಷೇಧ ಶಿಕ್ಷೆ!ಜೋಫ್ರಾ ಆರ್ಚರ್ ನಿಂದಿಸಿದವನಿಗೆ ಎರಡು ವರ್ಷಗಳ ನಿಷೇಧ ಶಿಕ್ಷೆ!

ಈ ವರ್ಷ ನಡೆಯಲಿರುವ ಮೊದಲ ಗ್ರ್ಯಾಂಡ್‌ಸ್ಲ್ಯಾಮ್ ಟೂರ್ನಿ ಆಸ್ಟ್ರೇಲಿಯಾ ಓಪನ್. ಪ್ರತಿ‍ಷ್ಠಿತ ಟೂರ್ನಿಗಾಗಿ ಮೆಲ್ಬರ್ನ್‌ನಲ್ಲಿ ನಡೆಯಲಿದ್ದ ಅಭ್ಯಾಸ ನಿಲುಗಡೆಯಾಗಿದೆ. ಮೆಲ್ಬರ್ನ್ ಪಾರ್ಟ್ ಕೋರ್ಟ್ 1ರಲ್ಲಿ ಅಲೆಕ್ಸಾಂಡರ್ ಜ್ವೆರೆವ್ ಮತ್ತು ಡೇವಿಡ್ ಗೋಫಿನ್ ಅಭ್ಯಾಸ ನಡೆಸುವುದರಲ್ಲಿದ್ದರು.

ಜ್ವೆರೆವ್ ಮತ್ತು ಗೋಫಿನ್ ನಂತರ ವಿಶ್ವ ನಂ.1 ರಾಫೆಲ್ ನಡಾಲ್ ಕೂಡ ಅಭ್ಯಾಸದಲ್ಲಿ ಪಾಲ್ಗೊಳ್ಳುವುದರಲ್ಲಿದ್ದರು. ಆದರೆ ಅಭ್ಯಾಸ ನಡೆಸಲಾಗಲಿಲ್ಲ. ಅಭ್ಯಾಸಕ್ಕೆ ಬೇಕಾದ ಉತ್ತಮ ಗಾಳಿಗೆ ಬದಲು ಕಲುಷಿತ ಗಾಳಿ ಅಲ್ಲಿರುವುದು ಇದಕ್ಕೆ ಕಾರಣ. ಆಸ್ಟ್ರೇಲಿಯಾ ಓಪನ್ ಜನವರಿ 20ರಿಂದ ಫೆಬ್ರವರಿ 2ರವರೆಗೆ ನಡೆಯಲಿದೆ.

ಟೆಸ್ಟ್‌ ಕ್ರಿಕೆಟನ್ನು ವೀರೇಂದ್ರ ಸೆಹ್ವಾಗ್ ರೋಮ್ಯಾನ್ಸ್‌ಗೆ ಹೋಲಿಸಿದ್ದೇಕೆ?ಟೆಸ್ಟ್‌ ಕ್ರಿಕೆಟನ್ನು ವೀರೇಂದ್ರ ಸೆಹ್ವಾಗ್ ರೋಮ್ಯಾನ್ಸ್‌ಗೆ ಹೋಲಿಸಿದ್ದೇಕೆ?

ಕಳಪೆ ಗುಣಮಟ್ಟದ ಗಾಳಿಯ ಕಾರಣದಿಂದಾಗಿ ಈ ದಿನ ನಡೆಯಬೇಕಿದ್ದ ಅಭ್ಯಾಸವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಈ ಭಾಗದಲ್ಲಿ ವಾತಾವರಣ ಸುಧಾರಿಸುತ್ತಿದೆ. ಈ ಬಗ್ಗೆ ನಿರಂತರವಾಗಿ ಮೇಲ್ವಚಾರಣೆ ನಡೆಸುತ್ತಿದ್ದೇವೆ,' ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.

Story first published: Tuesday, January 14, 2020, 11:42 [IST]
Other articles published on Jan 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X