ಆಯೋಜಕರಿಗೆ ಸೆಡ್ಡು ಹೊಡೆದು ಫ್ರೆಂಚ್ ಓಪನ್‌ನಿಂದ ಹಿಂದೆ ಸರಿದ ಒಸಾಕಾ!

ಪ್ಯಾರಿಸ್: ಜಪಾನ್‌ನ ಸೂಪರ್‌ ಸ್ಟಾರ್ ಟೆನಿಸ್ ಆಟಗಾರ್ತಿ ನವೋಮಿ ಒಸಾಕಾ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಸುದ್ದಿಗೋಷ್ಠಿಯೊಂದನ್ನು ಬಹಿಷ್ಕರಿಸಿದ ವಿವಾದಕ್ಕೆ ಸಂಬಂಧಿಸಿ ಒಸಾಕಾ ಪ್ರಮುಖ ಟೂರ್ನಿಯಿಂದ ಹೊರ ನಡೆದಿದ್ದಾರೆ. 23ರ ಹರೆಯದ ವಿಶ್ವ ನಂ.2 ಆಟಗಾರ್ತಿ ಒಸಾಕಾ ಸೋಮವಾರ (ಮೇ 31) ದಿನದಾಂತ್ಯದ ವೇಳೆ ಟೂರ್ನಿ ತೊರೆದಿದ್ದಾರೆ. ಟ್ವೀಟ್ ಮೂಲಕ ಈ ವಿಚಾರ ತಿಳಿಸಿದ್ದಾರೆ.

ವೀರೇಂದ್ರ ಸೆಹ್ವಾಗ್ ಮತ್ತು ಜೋ ರೂಟ್ ಹೆಸರಿನಲ್ಲಿ ಮಾತ್ರ ಇದೆ ಈ ವಿಶೇಷ ದಾಖಲೆ!ವೀರೇಂದ್ರ ಸೆಹ್ವಾಗ್ ಮತ್ತು ಜೋ ರೂಟ್ ಹೆಸರಿನಲ್ಲಿ ಮಾತ್ರ ಇದೆ ಈ ವಿಶೇಷ ದಾಖಲೆ!

ಸೋಮವಾರ ಟ್ವಿಟರ್ ಪೋಸ್ಟ್ ಹಾಕಿದ್ದ ಜಗತ್ತಿನ ಅತ್ಯಧಿಕ ಆದಾಯದ ಆಟಗಾರ್ತಿ ನವೋಮಿ ಒಸಾಕಾ, 'ಟೂರ್ನಿಯ ವಿಚಾರದಲ್ಲಿ ಮತ್ತು ಇತರ ಆಟಗಾರರ ವಿಚಾರದಲ್ಲಿ ನಾನು ಮಾಡಬಹುದಾದ ಒಳ್ಳೆಯ ಕೆಲಸವೆಂದರೆ ನಾನು ಟೂರ್ನಿಯಿಂದ ಹಿಂದೆ ಸರಿಯೋದು. ಇದರಿಂದ ಪ್ಯಾರಿಸ್ ಟೂರ್ನಿಯೆಡೆಗೆ ಎಲ್ಲರೂ ಗಮನ ಹರಿಸೋದು ಸಾಧ್ಯವಾಗಬಹುದು' ಎಂದು ಬರೆದುಕೊಂಡಿದ್ದಾರೆ.

ವಿಚಾರವನ್ನು ಲಘುವಾಗಿ ತೆಗೆದುಕೊಳ್ಳಲಾರೆ

ವಿಚಾರವನ್ನು ಲಘುವಾಗಿ ತೆಗೆದುಕೊಳ್ಳಲಾರೆ

'ಯಾರ ಗಮನವನ್ನೂ ಹಾಳು ಮಾಡುವ ಉದ್ದೇಶ ನನ್ನದಾಗಿರಲಿಲ್ಲ. ನನ್ನ ಸಂದೇಶ ಇನ್ನೂ ಸ್ಪಷ್ಟವಾಗಿರಬೇಕಿತ್ತು. ನನ್ನ ಸಮಯ ಸರಿಯಿಲ್ಲ ಅನ್ನೋದನ್ನು ನಾನು ಸ್ವೀಕರಿಸುತ್ತೇನೆ. ಇನ್ನೂ ತುಂಬಾ ಮುಖ್ಯವಾಗಿ ನಾನು ನನ್ನ ಮಾನಸಿಕ ಆರೋಗ್ಯವನ್ನು ಹಾಳು ಮಾಡಿಕೊಳ್ಳಲು, ವಿಚಾರಗಳನ್ನು ಲಘುವಾಗಿ ತೆಗೆದುಕೊಳ್ಳಲು ಬಯಸಲಾರೆ,' ಎಂದು ಒಸಾಕಾ ತಿಳಿಸಿದ್ದಾರೆ.

ಮೊದಲ ಸುತ್ತಿನಲ್ಲಿ ಒಸಾಕಾಗೆ ಜಯ

ಮೊದಲ ಸುತ್ತಿನಲ್ಲಿ ಒಸಾಕಾಗೆ ಜಯ

ಫ್ರೆಂಚ್ ಓಪನ್‌ ಆರಂಭಿಕ ಸುದ್ದಿನಲ್ಲಿ ಒಸಾಕಾ ರೋಮ್ ಆಟಗಾರ್ತಿ ಪೆಟ್ರೀಷಿಯಾ ಮಾರಿಯಾ ಟಿಗ್ ಎದುರು 6-4, 7-6(4) ಜಯ ದಾಖಲಿಸಿದ್ದರು. ಆ ಬಳಿಕ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಒಸಾಕಾ ಪಾಲ್ಗೊಂಡಿರಲಿಲ್ಲ. ಇದಕ್ಕೆ, ನನ್ನ ಮನಸ್ಸು ಸರಿಯಿಲ್ಲ, ಸುದ್ದಿಗಾರರ ಪ್ರಶ್ನೆ ಕಿರಿ ಕಿರಿ ಅನ್ನಿಸುತ್ತದೆ ಎಂಬ ಕಾರಣ ನೀಡಿದ್ದರು.

ಆಯೋಜಕರಿಂದ ಎಚ್ಚರಿಕೆ

ಆಯೋಜಕರಿಂದ ಎಚ್ಚರಿಕೆ

ಒಸಾಕಾ ಸುದ್ದಿಗೋಷ್ಠಿ ತಪ್ಪಿಸಿಕೊಂಡಿದ್ದು ಟೂರ್ನಿ ಆಯೋಜಕರ ಕೆಂಗಣ್ಣಿಗೆ ಕಾರಣವಾಗಿತ್ತು. ಫ್ರೆಂಚ್ ಓಪನ್‌ನಿಂದ ನಿನ್ನನ್ನು ಹೊರ ದಬ್ಬಬೇಕಾಗುತ್ತದೆ, ಭವಿಷ್ಯದಲ್ಲಿ ನೀನು ಪ್ರಮುಖ ಟೂರ್ನಿಗಳಿಂದ ಹೊರಗುಳಿಯಬೇಕಾಗುತ್ತದೆ ಎಂದು ಆಯೋಜಕರು ಎಚ್ಚರಿಸಿದ್ದರು. ಈ ಸವಾಲನ್ನು ದಿಟ್ಟವಾಗೇ ಸ್ವೀಕರಿಸಿರುವ ಒಸಾಕಾ ತಾನೇ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, June 1, 2021, 8:33 [IST]
Other articles published on Jun 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X