ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

US Open 2022: ಪುರುಷರ ಸಿಂಗಲ್ಸ್‌ನಲ್ಲಿ ಚೊಚ್ಚಲ ಫೈನಲ್ ತಲುಪಿದ ಕಾರ್ಲೊಸ್ ಅಲ್ಕರಾಜ್

Carlos Alcaraz

ಮಹಿಳೆಯರ ಸಿಂಗಲ್ಸ್‌ನಂತೆಯೇ ಈ ಬಾರಿ ಯುಎಸ್ ಓಪನ್‌ನ ಪುರುಷರ ಸಿಂಗಲ್ಸ್‌ನಲ್ಲಿಯೂ ಹೊಸ ಚಾಂಪಿಯನ್ ಆಗಲಿದ್ದಾರೆ. ಭಾನುವಾರ ನಡೆಯಲಿರುವ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಸ್ಪೇನ್‌ನ ಮೂರನೇ ಶ್ರೇಯಾಂಕದ ಕಾರ್ಲೋಸ್ ಅಲ್ಕರಾಜ್ ಐದನೇ ಶ್ರೇಯಾಂಕದ ನಾರ್ವೆಯ ಕಾಸ್ಪರ್ ರುಡ್ ಅವರನ್ನು ಎದುರಿಸಲಿದ್ದಾರೆ. ರುಡ್ ಈ ವರ್ಷ ಫ್ರೆಂಚ್ ಓಪನ್‌ನಲ್ಲಿ ಫೈನಲ್ ತಲುಪಿದ್ದರು. ಆದ್ರೆ ಅಲ್ಕರಾಜ್ ತಮ್ಮ ವೃತ್ತಿಜೀವನದ ಮೊದಲ ಗ್ರ್ಯಾಂಡ್ ಸ್ಲಾಮ್ ಫೈನಲ್ ತಲುಪಿದ್ದಾರೆ.

ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಅಲ್ಕರಾಜ್ ಅಮೆರಿಕದ ಫ್ರಾನ್ಸಿಸ್ ಟಿಯಾಫೋ ವಿರುದ್ಧ ಗೆದ್ದರು. ಐದು ಸೆಟ್‌ಗಳ ಹೋರಾಟದಲ್ಲಿ ಎರಡು ಬಾರಿ ಹಿಂದೆ ಬಿದ್ದರೂ ಸಹ ಹೋರಾಟ ಬಿಡದೆ ಅಲ್ಕರಾಜ್ ಪಂದ್ಯ ಜಯಿಸಿದ್ರು. ಆರ್ಥರ್ ಆಶ್ ಸ್ಟೇಡಿಯಂನಲ್ಲಿ ಈ ಪಂದ್ಯ 4 ಗಂಟೆ 18 ನಿಮಿಷಗಳ ಕಾಲ ನಡೆಯಿತು.

ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರನಾಗುವ ಗುರಿ

ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆಟದ ಫಲಿತಾಂಶವು 6-7 (6-8), 6-3, 6-1, 6-7 (5-7), 6-3 ಆಗಿದ್ದು, ಅಲ್ಕರಾಜ್ ಮತ್ತು ಟಿಯಾಫೊ ಅವರ ಗ್ರೌಂಡ್‌ಸ್ಟ್ರೋಕ್‌ಗಳು ಮತ್ತು ಆಕ್ರಮಣಕಾರಿ ಸರ್ವ್‌ಗಳು ಗಮನ ಸೆಳೆಯುವಂತಿದ್ದವು.

ಅಲ್ಕಾರಝ್ ಮೊದಲ ಸೆಟ್‌ನಲ್ಲಿ ನಾಲ್ಕು ಪಾಯಿಂಟ್‌ಗಳನ್ನು ಉಳಿಸಿಕೊಂಡರು, ಆದರೆ ಅವರು ಅದನ್ನು ಗೆಲ್ಲಲು ಕಠಿಣ ಹೋರಾಟ ಎದುರಿಸಿದ್ರು. ಟಿಯಾಫೊ ಅವರ ವಿರುದ್ಧ ಟೈಬ್ರೇಕ್‌ಗೆ ತೆಗೆದುಕೊಂಡು ಗೆದ್ದರು. ಎರಡನೇ ಸೆಟ್‌ನಲ್ಲಿ ಟಿಯಾಫೊ ಉತ್ತಮ ಆಟವಾಡಿದರೂ ಅಲ್ಕರಾಜ್ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ಮೂರನೇ ಸೆಟ್‌ನಲ್ಲಿ ಬಲದಿಂದ ಗೆದ್ದರು. ಟಿಯಾಫೊ ನಂತರ ಉತ್ತಮ ಪುನರಾಗಮನವನ್ನು ಮಾಡಿದರು, ನಾಲ್ಕನೇ ಸೆಟ್ ಅನ್ನು ಟೈಬ್ರೇಕ್‌ಗೆ ಹಿಂತಿರುಗಿ ಸಮಬಲಗೊಳಿಸಿದರು. ಅಲ್ಕರಾಜ್ ಐದನೇ ಸೆಟ್ ಗೆದ್ದು ಕೊನೆಯ ನಗೆ ಬೀರಿದರು. ಈ ಋತುವಿನಲ್ಲಿ ಎಟಿಪಿ ಟೂರ್‌ನಲ್ಲಿ 50ನೇ ಗೆಲುವು ಸಾಧಿಸಿದ ಮೊದಲ ಆಟಗಾರ ಎನಿಸಿಕೊಂಡರು.

ಇನ್ನು ಅಲ್ಕರಾಜ್ ಅವರು ಯುಎಸ್ ಓಪನ್ ಪ್ರಶಸ್ತಿಯನ್ನು ಗೆದ್ದರೆ ವಿಶ್ವದ ನಂ.1 ಟೆನಿಸ್ ತಾರೆಯಾಗುವ ಸಾಧನೆ ಮಾಡಲಿದ್ದಾರೆ.

ಯುಎಸ್ ಓಪನ್: ಕ್ವಾರ್ಟರ್‌ಫೈನಲ್ ಪಂದ್ಯಕ್ಕೆ ಸಾಕ್ಷಿಯಾದ ಭಾರತದ ಇಬ್ಬರು ಕ್ರಿಕೆಟ್ ದಿಗ್ಗಜರು

ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಕ್ಯಾಸ್ಪರ್ ರುಡ್ ಅಬ್ಬರ

ಇದಕ್ಕೂ ಮುನ್ನ ಕ್ಯಾಸ್ಪರ್ ರುಡ್ ಯುಎಸ್ ಓಪನ್ ಫೈನಲ್ ತಲುಪಿದ್ದರು. ಈ ವರ್ಷದ ಫ್ರೆಂಚ್ ಓಪನ್ ಫೈನಲ್‌ನಲ್ಲಿ ಅವರು ಲೆಜೆಂಡ್ ರಾಫೆಲ್ ನಡಾಲ್ ವಿರುದ್ಧ 3-6, 3-6, 0-6 ಸೆಟ್‌ಗಳಿಂದ ಸೋತರು. ಈ ಬಾರಿ ಪ್ರಶಸ್ತಿ ಗೆಲ್ಲಲು ಮತ್ತೊಮ್ಮೆ ಮುಂದಿದ್ದಾರೆ. ಫ್ಲಶಿಂಗ್ ಮೆಡೋಸ್‌ನಲ್ಲಿ ನಡೆದ ಸೆಮಿ-ಫೈನಲ್‌ನಲ್ಲಿ ನಾಲ್ಕು ಸೆಟ್‌ಗಳಲ್ಲಿ ಗೆದ್ದು US ಓಪನ್‌ನಲ್ಲಿ ರುಡ್ ತನ್ನ ಬಿರುಸಿನ ಫಾರ್ಮ್ ಅನ್ನು ಮುಂದುವರೆಸಿದನು.

ಮೂರು ಗಂಟೆಗಳ ಹೋರಾಟದಲ್ಲಿ ಕರೆನ್ ಖಚಾನೋವ್ ಅವರನ್ನು ಸೋಲಿಸಿದರು. ಪಂದ್ಯದ ಫಲಿತಾಂಶ 7-6 (5), 6-2, 5-7, 6-2 ಆಗಿದೆ. ಫೈನಲ್ ತಲುಪಿದ ನಂತರ, ಫ್ರೆಂಚ್ ಓಪನ್ ಫೈನಲ್‌ನ ನಂತರ, ಇದು ತನ್ನ ವೃತ್ತಿಜೀವನದ ಕೊನೆಯ ಗ್ರ್ಯಾಂಡ್ ಸ್ಲಾಮ್ ಫೈನಲ್ ಎಂದು ಭಾವಿಸಿದ್ದಾಗಿ ರುಡ್ ಒಪ್ಪಿಕೊಂಡರು. ಇದರಿಂದಾಗಿ ಸಹಜವಾಗಿಯೇ ಕೆಲ ತಿಂಗಳ ಬಳಿಕ ಮತ್ತೊಮ್ಮೆ ಗ್ರ್ಯಾನ್ ಸ್ಲಾಮ್ ಫೈನಲ್ ತಲುಪಿದ ಖುಷಿಯಲ್ಲಿದ್ದಾರೆ.

ಯುಎಸ್ ಓಪನ್‌ನಲ್ಲಿ ನಾಲ್ಕು ಬಾರಿ ರುಡ್ ಸ್ಪರ್ಧೆ

ರುಡ್ ಈ ಹಿಂದೆ US ಓಪನ್‌ನಲ್ಲಿ ನಾಲ್ಕು ಬಾರಿ ಸ್ಪರ್ಧಿಸಿದ್ದಾರೆ, ಆದರೆ ಮೂರನೇ ಸುತ್ತನ್ನು ದಾಟಲಿಲ್ಲ. ಆದರೆ ಈ ಬಾರಿ ಮಾರಿಯೋ ಬೆರೆಟ್ಟಿನಿ ಅವರನ್ನು ಸೋಲಿಸಿ ಸೆಮಿಫೈನಲ್ ತಲುಪಿದ್ದಾರೆ. ಅವರು ಕ್ಯಾಮರೂನ್ ನಾರ್ರಿಯನ್ನು ಹಿಂದಿಕ್ಕಿ ಋತುವಿನ 44 ನೇ ಗೆಲುವನ್ನು ಪಡೆದರು. ಅಲ್ಲದೆ ಮೊದಲ ಸೆಮೀಸ್‌ನಲ್ಲಿ ಕರೆನ್ ಖಚಾನೋವ್ ಅವರನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಮತ್ತೊಂದೆಡೆ ಸ್ಯಾನಿಶ್ ಟೆನಿಸ್ ಆಟಗಾರ ಕಾರ್ಲೋಸ್ ಅಲ್ಕರಾಜ್ ಸೆಮಿಫೈನಲ್ ಗೆಲ್ಲುವ ಮೂಲಕ ತಮ್ಮ 50 ನೇ ಜಯವನ್ನು ಗಳಿಸಿದರು. ರುಡ್ ಅವರು ಯುಎಸ್ ಓಪನ್ ಪ್ರಶಸ್ತಿಯನ್ನು ಗೆದ್ದರೆ ಎಟಿಪಿ ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ.

Story first published: Saturday, September 10, 2022, 14:17 [IST]
Other articles published on Sep 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X