ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಥಾಮಸ್ ಕಪ್ 2022: ಚೈನೀಸ್ ತೈಪೆ ವಿರುದ್ಧ ಭಾರತಕ್ಕೆ ಸೋತು ಅಗ್ರಸ್ಥಾನದಿಂದ ಕೆಳಗಿಳಿದ ಭಾರತ

Thomas Cup 2022: India loss to Chinese Taipei and miss out on Group C top spot

ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್ ಥಾಮಸ್ ಕಪ್‌ನ ಗ್ರೂಪ್ ಹಂತದ ಅಂತಿಮ ಸೆಣೆಸಾಟದಲ್ಲಿ ಚೈನೀಸ್ ತೈಪೆ ವಿರುದ್ಧ ಸೋಲು ಅನುಭವಿಸಿದೆ. ಈ ಮೂಲಕ ಸಿ ಗುಂಪಿನ ಅಗ್ರಸ್ಥಾನವನ್ನು ಭಾರತ ತಂಡ ಕಳೆದುಕೊಂಡಿದೆ. ಜರ್ಮನಿ ಹಾಗೂ ಕೆನಡಾ ವಿರುದ್ಧ 5-0 ಅಂತರದಿಂದ ಸಮಗ್ರ ಗೆಲುವು ಸಾಧಿಸಿದ ಬಳಿಕ ಬಲಿಷ್ಠ ಚೈನೀಸ್ ತೈಪೆ ವಿರುದ್ಧದ ಸೆಣೆಸಾಟ ಕುತೂಹಲ ಮೂಡಿಸಿತ್ತು. ಆದರೆ ಈ ಕದನದಲ್ಲಿ ಸೋಲು ಅನುಭವಿಸಿದರೂ ಭಾರತ ಈಗಾಗಲೇ ಕ್ವಾರ್ಟರ್‌ಫೈನಲ್‌ಗೆ ಅರ್ಹತೆಯನ್ನು ಪಡೆದುಕೊಂಡಿದೆ.

ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತ ಲಕ್ಷ್ಯ ಸೇನ್ ಆರಂಭದಲ್ಲಿಯೇ ವಿಶ್ವದ 4ನೇ ಶ್ರೇಯಾಂಕಿತ ಚೌ ತಿನ್ ಚೆನ್ ವಿರುದ್ಧ ನೇರ ಗೇಮ್‌ಗಳಲ್ಲಿ ಸೋಲು ಅನುಭವಿಸಿದ್ದ ಕಾರಣ 0-1 ಅಂತರದಿಂದ ಹಿನ್ನಡೆ ಅನುಭವಿಸಿತು. ಮಂಗಳವಾರ ಕೆನಡಾ ವಿರುದ್ಧದ ಮುಖಾಮುಖಿಯಿಂದ ವಿಶ್ರಾಂತಿ ಪಡೆದಿದ್ದ ಸೇನ್ ಆರಂಭಿಕ ಪಂದ್ಯವನ್ನು ಕಳೆದುಕೊಂಡ ನಂತರ ಮತ್ತೆ ಹೋರಾಟ ನಡೆಸಿದರು. ಆದರೆ ನಿರ್ಣಾಯಕ ಸುತ್ತಿನಲ್ಲಿ ಗೆಲುವು ಸಾಧಿಸ;ಲು ಅವರಿಂದ ಸಾಧ್ಯವಾಗಲಿಲ್ಲ. ಈ ಮ್ಯಾರಥಾನ್ ಕದನ ಒಂದು ಗಂಟೆ 20 ನಿಮಿಷಗಳವರೆಗೆ ಸಾಗಿದ್ದು 21-19, 13-21, 21-17 ಚೈನೀಸ್ ತೈಪೆ ಆಟಗಾರ ಗೆದ್ದುಕೊಂಡಿದ್ದಾರೆ.

ಗುರುತು ಸಿಗದಂತೆ ಮಾಸ್ಕ್ ಧರಿಸಿ ಬೆಂಗಳೂರಿನ ಬೇಕರಿಯಲ್ಲಿ ತಿಂಡಿ ತಿನ್ನಲು ಹೊರಟ ಕೊಹ್ಲಿ; ಆಗಿದ್ದೇನು?ಗುರುತು ಸಿಗದಂತೆ ಮಾಸ್ಕ್ ಧರಿಸಿ ಬೆಂಗಳೂರಿನ ಬೇಕರಿಯಲ್ಲಿ ತಿಂಡಿ ತಿನ್ನಲು ಹೊರಟ ಕೊಹ್ಲಿ; ಆಗಿದ್ದೇನು?

ನಂತರ ಭಾರತದ ಅಗ್ರ ಶ್ರೇಯಾಂಕದ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ವಿಶ್ವದ ನಂ. 3 ಜೋಡಿಯಾದ ಲೀ ಯಾಂಗ್ ಮತ್ತು ಚಿ-ಲಿನ್ ವಾಂಗ್ ವಿರುದ್ಧ 40 ನಿಮಿಷಗಳಲ್ಲಿ ಸೋಲು ಅನುಭವಿಸಿದರು. 21-11, 21-19 ಅಂತರದಿಂದ ಈ ಪಂದ್ಯವನ್ನು ಭಾರತ ಕಳೆದುಕೊಂಡಿತು.

ನಂತರ ಪುರುಷರ ಸಿಂಗಲ್ಸ್ ಸ್ಪರ್ಧೆಯ ಎರಡನೇ ಪಂದ್ಯದಲ್ಲಿ ಕಿಡಂಬಿ ಶ್ರೀಕಾಂತ್ ತಮ್ಮ ಗೆಲುವಿನ ಓಟವನ್ನು ಮುಂದುವರಿಸಲು ಯಶಸ್ವಿಯಾದರು. ಟ್ಜು ವೀ ವಾಂಗ್ ವಿರುದ್ಧ 21-19, 21-16 ರಿಂದ ಗೆಲುವು ಸಾಧಿಸಿದರು. ಇದರಿಂದಾಗಿ ಹಿನ್ನಡೆಯ ಅಂತರ 1-2ಕ್ಕೆ ಇಳಿಕೆಯಾಯಿತು.

ಬಳಿಕ ಪುರುಷರ ಡಬಲ್ಸ್ ಸ್ಪರ್ಧೆಯ 2ನೇ ಮುಖಾಮುಖಿಯಲ್ಲಿ ಎಂಆರ್ ಅರ್ಜುನ್ ಮತ್ತು ಧ್ರುವ ಕಪಿಲಾ ಕಣಕ್ಕಿಳಿದರು. ಮೊದಲ ಗೇಮ್ ಅನ್ನು 17-21 ರಲ್ಲಿ ಕಳೆದುಕೊಂಡ ನಂತರ ತಿರುಗಿಬೀಳುವ ಪ್ರಯತ್ನ ನಡೆಸಿದರು. ಎರಡನೇ ಗೇಮ್‌ಅನ್ನು ತಮ್ಮ ಪರವಾಗುವಂತೆ ಮಾಡಿದರಾದರೂ ಅಂತಿಮ ಗೇಮ್ ಮತ್ತೆ ಚೈನೀನ್ ತೈಪೆ ಜೋಡಿಯ ಪಾಲಾಯಿತು. ಒಂದು ಗಂಟೆ 17 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 21-17, 19-21 ಮತ್ತು 21-19 ರಿಂದಲು ಚಿಂಗ್ ಯಾವೊ ಮತ್ತು ಪೊ ಹಾನ್ ಯಾಂಗ್ ಜೋಡಿ ಪಂದ್ಯದಲ್ಲಿ ಗೆಲುವು ಸಾಧಿಸಿದರು.

ಇನ್ನು ಅಂತಿಮವಾಗಿ ಅಷ್ಟೇನು ಮಹತ್ವವಿಲ್ಲದ ಪಂದ್ಯದಲ್ಲಿ ಎಚ್‌ಎಸ್ ಪ್ರಣಯ್ ಅವರು ಲು ಚಿಯಾ ಹಂಗ್ ಅವರನ್ನು ಎದುರಿಸಿದರು. ಈ ಕದನದಲ್ಲಿ ಭಾರತದ ಆಟಗಾರ 21-18, 17-21, 21-18 ರಲ್ಲಿ ಗೆಲುವು ಸಾಧಿಸಿದರು. ಆದರೆ ಈ ಗೆಲುವಿನ ಗೆಲುವಿನ ಹೊರತಾಗಿಯೂ ಭಾರತವು ಚೈನೀಸ್ ತೈಪೆ ವಿರುದ್ಧದ ಸೆಣೆಸಾಟದಲ್ಲಿ ಸೋಲು ಅನುಭವಿಸಿದೆ.

Story first published: Wednesday, May 11, 2022, 20:18 [IST]
Other articles published on May 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X