ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭವಿಷ್ಯದ ಎಬಿ ಡಿವಿಲಿಯರ್ಸ್ ಆಗಬಲ್ಲ ಮೂವರು ಮಾಡ್ರನ್ ಡೇ ಕ್ರಿಕೆಟಿಗರು

Dewald brevis

ಅಬ್ರಹಾಂ ಡಿ ವಿಲಿಯರ್ಸ್.. ಇದಕ್ಕಿಂತ ಬೆಸ್ಟ್‌ ಅಂದ್ರೆ ಎಬಿಡಿ ವಿಲಿಯರ್ಸ್‌ ಅಂತ ಹೇಳಿದ್ರೆ ಸಾಕು, ಎಲ್ಲರಿಗೂ ಎಲ್ಲವೂ ಗೊತ್ತಾಗುತ್ತೆ. ದಕ್ಷಿಣ ಆಫ್ರಿಕಾದ ಈ ಕ್ರಿಕೆಟಿಗ ಮೈದಾನದ ಯಾವ ಮೂಲೆಗೆ ಬೇಕಾದ್ರೂ ಚೆಂಡನ್ನು ಅಟ್ಟಬಲ್ಲರು. ಕ್ರಿಕೆಟ್‌ ಪುಸ್ತಕದ ಎಲ್ಲಾ ಶಾಟ್‌ಗಳು ಎಬಿಡಿಗೆ ಗೊತ್ತು. ಅದನ್ನು ಹೊರತಾಗಿ 360 ಡಿಗ್ರಿಯಲ್ಲಿ ಬ್ಯಾಟ್‌ ಬೀಸೋದಿಕ್ಕೆ ಎಬಿಡಿ ಫೇಮಸ್‌.

ಐಪಿಎಲ್‌ನಿಂದಾಗಿ ಭಾರತದ ಮನೆಮಾತಾಗಿದ್ದ ಎಬಿಡಿ ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್ ಸೇರಿದಂತೆ ಚುಟುಕು ಕ್ರಿಕೆಟ್‌ ಲೀಗ್‌ನಿಂದಲೂ ಹೊರಗುಳಿದಿದ್ದಾರೆ. ಹೀಗಾಗಿ ಎಬಿಡಿ ಆಟವನ್ನ ನಾವು ಮತ್ತೆ ಕಣ್ತುಂಬಿಕೊಳ್ಳಲು ಸಾಧ್ಯವಿಲ್ಲ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20,000ಕ್ಕೂ ಅಧಿಕ ರನ್ ಕಲೆಹಾಕಿರುವ ರನ್ ಮಶೀನ್ ಎಬಿಡಿ ಆಧುನಿಕ ಕ್ರಿಕೆಟ್‌ನ ಗ್ರೇಟೆಸ್ಟ್ ಬ್ಯಾಟರ್‌ಗಳಲ್ಲಿ ಒಬ್ಬರು.

ಚುಟುಕು ಕ್ರಿಕೆಟ್‌ನಲ್ಲಿ ಟಿ20ಯ ಪಕ್ಕಾ ಬ್ಯಾಟ್ಸ್‌ಮನ್‌

ಚುಟುಕು ಕ್ರಿಕೆಟ್‌ನಲ್ಲಿ ಟಿ20ಯ ಪಕ್ಕಾ ಬ್ಯಾಟ್ಸ್‌ಮನ್‌

ಆಟದ ಸ್ವರೂಪ ಯಾವುದೇ ಇರಲಿ ಅದಕ್ಕೆ ತಕ್ಕಂತೆ ತನ್ನ ಬ್ಯಾಟ್‌ ಬೀಸುತ್ತಿದ್ದ ಎಬಿಡಿ ಕಂಡ್ರೆ ವಿಶ್ವದ ಶ್ರೇಷ್ಟ ಬೌಲರ್‌ಗಳೇ ಬೆವರಿಳಿಸುತ್ತಿದ್ರು. ಅದ್ರಲ್ಲೂ ಟಿ20 ಕ್ರಿಕೆಟ್‌ ಅಂದ್ರೆ ಕೇಳಬೇಕಾ, ಸಿಕ್ಸರ್‌ಗಳಿಗೇನು ಕಮ್ಮಿ ಇಲ್ಲ. ಮೈದಾನದ ಯಾವ ಮೂಲೆಗೆ ಚೆಂಡಿನ ದರ್ಶನ ಮಾಡಿಸುವ ಕಲೆ ಇವರದ್ದಾಗಿತ್ತು. 2004ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಹೆಜ್ಜೆಯಿಟ್ಟ ಎಬಿ ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾದ ಪ್ರಮುಖ ಆಟಗಾರನಾಗಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ತನ್ನ ವಿಭಿನ್ನ 360 ಡಿಗ್ರಿ ಬ್ಯಾಟಿಂಗ್‌ನಿಂದಲೇ ಜಗತ್‌ ಪ್ರಸಿದ್ಧರಾದ ಎಬಿಡಿ ಕಂಡ್ರೆ ಪ್ರಮುಖ ಬೌಲರ್‌ಗಳೇ ಒಮ್ಮೆ ಯೋಚಿಸಬೇಕಾಗಿತ್ತು.

ಆದ್ರೀಗ ಎಬಿಡಿ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ. ಆದ್ರೆ ಎಬಿಡಿ ರೀತಿಯಲ್ಲಿ ಭವಿಷ್ಯದ ಕ್ರಿಕೆಟ್‌ನಲ್ಲಿ ರೂಪುಗೊಳ್ಳಬಲ್ಲ ಮೂವರು ಬ್ಯಾಟರ್‌ಗಳು ಯಾರು ಎಂಬುದನ್ನ ಇಲ್ಲಿ ನಾವು ನಿಮಗೆ ತಿಳಿಸುವ ಪ್ರಯತ್ನ ನಡೆಸಿದ್ದೇವೆ. ಮುಂದೆ ಓದಿ

ಗ್ಲೆನ್ ಮ್ಯಾಕ್ಸ್‌ವೆಲ್

ಗ್ಲೆನ್ ಮ್ಯಾಕ್ಸ್‌ವೆಲ್

ಕ್ರಿಕೆಟ್ ಲೋಕದಲ್ಲಿ ದಿ ಬಿಗ್ ಶೋ ಎಂದೇ ಗುರುತಿಸಿಕೊಂಡಿರುವ ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮ ವಿಭಿನ್ನ ಶಾಟ್ ಸೆಲೆಕ್ಷನ್ ಮೂಲಕ ಗುರುತಿಸಿಕೊಂಡಿದ್ದಾರೆ. ಆಸಿಸ್ ತಂಡದಲ್ಲಿ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಲ್ಲ ಮ್ಯಾಕ್ಸಿ ಎದುರಾಳಿ ಬೌಲರ್‌ಗಳನ್ನ ಚಿಂದಿ ಮಾಡಬಲ್ಲರು.

ಅದ್ರಲ್ಲೂ ಟಿ20 ಕ್ರಿಕೆಟ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್‌ ಅತ್ಯಂತ ಅಪಾಯಕಾರಿ ಬ್ಯಾಟರ್ ಆಗಿ ಹಲವು ವರ್ಷಗಳಿಂದ ಗುರುತಿಸಿಕೊಂಡಿದ್ದಾರೆ. ಆತನ ಟೈಮಿಂಗ್ ಮತ್ತು ಪವರ್‌ನಿಂದಾಗಿ ಕೀಪರ್ ತಲೆ ಮೇಲೆ ಸಿಕ್ಸರ್ ಸಿಡಿಸುವ ತಾಕತ್ತು ಅವರಲ್ಲಿದೆ. ರಿವರ್ಸ್ ಸ್ವೀಪ್‌, ರಿವರ್ಸ್ ಸ್ಕೂಪ್‌ಗಳನ್ನ ನೋಡುವುದೇ ಕಣ್ಣಿಗೆ ಹಬ್ಬ.

Ind vs SA 3rd ODI: 7 ವಿಕೆಟ್‌ಗಳಿಂದ ಗೆದ್ದ ಭಾರತ, 2-1 ಅಂತರದಲ್ಲಿ ಸರಣಿ ಜಯ

ಸೂರ್ಯಕುಮಾರ್ ಯಾದವ್

ಸೂರ್ಯಕುಮಾರ್ ಯಾದವ್

ಟೀಂ ಇಂಡಿಯಾ ಮಿಸ್ಟರ್ 360 ಆಗಿರುವ ಸೂರ್ಯಕುಮಾರ್ ಯಾದವ್ ಈ ಪಟ್ಟಿಯಲ್ಲಿ ಹೆಸರು ಹೇಗೆ ಪಡೆದರು ಎಂದು ಅನೇಕರಿಗೆ ಆಶ್ಚರ್ಯವಾಗಬಹುದು. ಆದ್ರೆ ಸೂರ್ಯ ತನ್ನ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಇದನ್ನ ಪ್ರೂವ್ ಮಾಡಿ ತೋರಿಸಿದ್ದಾರೆ. ವೇಗದ ಬೌಲರ್‌ಗಳಿಗೆ ಲೀಲಾಜಾಲವಾಗಿ ಸಿಕ್ಸರ್ ಸಿಡಿಸುವ ಸಾಮರ್ಥ್ಯ ಹೊಂದಿರುವ ಸೂರ್ಯಕುಮಾರ್ ಯಾದವ್ ವಿಶ್ವದ ಖ್ಯಾತ ಟಿ20 ಬ್ಯಾಟರ್ ಆಗಿ ರೂಪುಗೊಂಡಿದ್ದಾರೆ.

ಬ್ಯಾಕ್ ಫುಟ್ ಗೇಮ್ ಮತ್ತು ಫ್ರಂಟ್ ಪೂಟ್ ಗೇಮ್ ಅನ್ನು ಚೆನ್ನಾಗಿ ಅರಿತಿರುವ ಸೂರ್ಯ ಮೈದಾನದ ಯಾವುದೇ ಮೂಲೆಗೆ ಚೆಂಡನ್ನ ಅಟ್ಟುವ ಸಾಮರ್ಥ್ಯ ಹೊಂದಿದ್ದಾರೆ. ಇತ್ತೀಚೆಗಷ್ಟೇ
ಟಿ20 ಕ್ರಿಕೆಟ್‌ನಲ್ಲಿ ಇದುವರೆಗೂ ಯಾರೂ ಮಾಡದ ಸಾಧನೆಯನ್ನ ಸೂರ್ಯಕುಮಾರ್ ಯಾದವ್ ಮಾಡಿದ್ದಾರೆ. ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಎದುರಿಸಿದ ಚೆಂಡಿನ ಆಧಾರದ ಮೇಲೆ ವೇಗವಾಗಿ ಸಹಸ್ರ ರನ್ ದಾಖಲಿಸಿದ ಸಾಧನೆಯನ್ನ ಸೂರ್ಯಕುಮಾರ್ ಯಾದವ್ ಮಾಡಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್‌ರನ್ನ ಹಿಂದಿಕ್ಕಿದ್ದಾರೆ.

174ರ ಸ್ಟ್ರೈಕ್‌ರೇಟ್‌ನಲ್ಲಿ 573 ಎಸೆತಗಳಲ್ಲಿ ಸೂರ್ಯಕುಮಾರ್ ಯಾದವ್ 1000 ರನ್ ಸಿಡಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಇಷ್ಟು ವರ್ಷ ಮ್ಯಾಕ್ಸ್‌ವೆಲ್ ಹೆಸರಲ್ಲಿದ್ದ ದಾಖಲೆ ಮುರಿದಿದೆ.

ಇಂಗ್ಲೆಂಡ್ ಕ್ರಿಕೆಟಿಗರ ಸೆಂಟ್ರಲ್ ಕಾಂಟ್ರ್ಯಾಕ್ಟ್‌ 2022: 30 ಆಟಗಾರರಿಗೆ ಸ್ಥಾನ

ಡೆವಾಲ್ಡ್‌ ಬ್ರೆವಿಸ್

ಡೆವಾಲ್ಡ್‌ ಬ್ರೆವಿಸ್

ಬೇಬಿ ಎಬಿ ಖ್ಯಾತಿ ದಕ್ಷಿಣ ಆಫ್ರಿಕಾದ ಡೆವಾಲ್ಡ್ ಬ್ರೇವಿಸ್‌ ಅಬ್ಬರದ ಆಟವಾಡುವ ಮೂಲಕ ಅಭಿಮಾನಿಗಳನ್ನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಂಡರ್-19 ವಿಶ್ವಕಪ್‌ ಮೂಲಕ ತನ್ನ ಸಾಮರ್ಥ್ಯವನ್ನ ಪ್ರದರ್ಶಿಸಿರುವ ಡೆವಾಲ್ಡ್‌ ಬ್ರೆವಿಸ್ ಟೈಮಿಂಗ್ ಮತ್ತು ಉತ್ತಮ ಸ್ಟ್ರೋಕ್‌ ಆಡಲು ಹೆಸರುವಾಸಿ. ಅತಿ ಚಿಕ್ಕ ವಯಸ್ಸಿನಲ್ಲೇ ಸ್ಫೋಟಕ ಆಟವಾಡುವ ಸಾಮರ್ಥ್ಯ ಇವರಲ್ಲಿದೆ.

ಇತ್ತೀಚೆಗೆ ನಡೆದ ಭಾರತದ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಬೇಬಿ ಎಬಿಡಿ ಅರ್ಧಶತಕ ದಾಖಲಿಸಿದರು. ಆತನ ಬ್ಯಾಟಿಂಗ್ ನೋಡಿದವರಿಗೆ ಲೆಜೆಂಡ್ ಎಬಿ ಡಿವಿಲಿಯರ್ಸ್ ನೆನಪು ಮರುಕಳಿಸಿತು.

ಇನ್ನು ಕೆಲ ವಾರಗಳ ಹಿಂದಷ್ಟೇ ಮುಕ್ತಾಯಗೊಂಡ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಒಂದೇ ಓವರ್‌ನಲ್ಲಿ ಈತ ಐದು ಸಿಕ್ಸರ್ ಸಿಡಿಸಿ ನೋಡುಗರನ್ನ ದಂಗಾಗಿಸಿದ್ದರು. ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ಪರ ತಾನು ಎದುರಿಸಿದ ಕೇವಲ 6 ಎಸೆತಗಳಲ್ಲಿ 30 ರನ್ ಸಿಡಿಸಿದ ಬೇಬಿ ಎಬಿ ಆಟಕ್ಕೆ ಅಭಿಮಾನಿಗಳು ದಂಗಾದರು. ಅದ್ರಲ್ಲೂ ಐದು ಎಸೆತಗಳಲ್ಲಿ ಸತತ ಐದು ಸಿಕ್ಸರ್ ಸಿಡಿಸಿದ ಬೇಬಿ ಎಬಿ ಆಟ ದಕ್ಷಿಣ ಆಫ್ರಿಕಾದ ಲೆಜೆಂಡ್ ಎಬಿ ಡಿವಿಲಿಯರ್ಸ್‌ ಬ್ಯಾಟಿಂಗ್ ಅನ್ನು ನೆನಪಿಸಿತು.

ಈ ಮೂವರು ಬ್ಯಾಟರ್‌ಗಳು ಎಬಿ ಡಿವಿಲಿಯರ್ಸ್‌ಗೆ ಸಮನಾಗಲು ಸಾಧ್ಯವಿಲ್ಲದಿದ್ರೂ, ಅವರ ಶಾಟ್‌ಗಳನ್ನ ಹೊಡೆಯುವ ಸಾಮರ್ಥ್ಯ ಇವರಲ್ಲಿದೆ.

Story first published: Tuesday, October 11, 2022, 19:08 [IST]
Other articles published on Oct 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X