ಒಂದೇ ಒಂದು ODI ಶತಕ ಸಿಡಿಸದ 5 ಪ್ರಸಿದ್ಧ ಬ್ಯಾಟ್ಸ್‌ಮನ್‌ಗಳು: ಓರ್ವ ಭಾರತೀಯ!

ವಿಶ್ವ ಕ್ರಿಕೆಟ್‌ನಲ್ಲಿ ಏಕದಿನ ಕ್ರಿಕೆಟ್‌ ಸ್ಥಾನವನ್ನು ಪಡೆದುಕೊಂಡಿದ್ದು 1971ರಲ್ಲಿ. ಅಲ್ಲಿಯವರೆಗೆಗೂ ಟೆಸ್ಟ್ ಮಾದರಿ ಮಾತ್ರವೇ ಕ್ರಿಕೆಟ್ ಎಂದೆನಿಸಿತ್ತು. ಐದು ದಿನಗಳ ಕ್ರಿಕೆಟ್‌ನ ಜೊತೆಗೆ ಒಂದು ದಿನದ ಮಾಡಿ ಕ್ರಿಕೆಟ್‌ನಲ್ಲಿ ರೋಚಕತೆಯನ್ನು ಹೆಚ್ಚಿಸಲು ಕಾರಣವಾಯಿತು. ಈ ಪ್ರಕಾರ ಜನಪ್ರೀಯತೆ ಪಡೆಯಲು ಸಾಕಷ್ಟು ಸಮಯ ತೆಗೆದುಕೊಳ್ಳಲಿಲ್ಲ.

ಈ ಏಕದಿನ ಪ್ರಕಾರದಲ್ಲಿ ಈಗ ಸಾವಿರಾರು ದಾಖಲೆಗಳು ಸೃಷ್ಟಿಯಾಗಿದೆ. ಅದೆಷ್ಟೋ ಅವಿಸ್ಮರಣೀಯ ಕ್ಷಣಗಳು ಸೃಷ್ಟಿಯಾಗಿದೆ. ಹಲವಾರು ದಿಗ್ಗಜ ಕ್ರಿಕೆಟಿಗರನ್ನು ಕಂಡಿದೆ. ಆದರೆ ಕೆಲವೊಂದು ವಿಪರ್ಯಾಸಗಳನ್ನೂ ಈ ಏಕದಿನ ಕ್ರಿಕೆಟ್ ಪ್ರಕಾರ ಕಂಡಿದೆ. ಅದರಲ್ಲಿ ಒಂದು ವಿಚಾರವನ್ನು ಇಂದು ನಿಮಗೆ ತಿಳಿಸಲಿದ್ದೇವೆ.

ವಿಶ್ವ ಕ್ರಿಕೆಟ್‌ನಲ್ಲಿ ಈ ಬ್ಯಾಟ್ಸ್‌ಮನ್‌ಗಳು ಸಾಕಷ್ಟು ಖ್ಯಾತಿಯನ್ನು ಗಳಿಸಿದ ಆಟಗಾರರು. ಕೆಲವರಂತು ದಿಗ್ಗಜರೆನಿಸಿದ್ದಾರೆ. ಆದರೆ ಏಕದಿನ ಕ್ರಿಕೆಟ್‌ನಲ್ಲಿ ಈ ದಾಂಡಿಗರಿಂದ ಒಂದೇ ಒಂದು ಶತಕವನ್ನು ಸಿಡಿಸಲು ಸಾಧ್ಯವಾಗಲಿಲ್ಲ. ಅಂತಾ ಐವರು ಆಟಗಾರರು ಯಾರು ಅಂತ ಮುಂದೆ ಓದಿ..

#1. ಡ್ವೇನ್ ಸ್ಮಿತ್, ವೆಸ್ಟ್ ಇಂಡೀಸ್

#1. ಡ್ವೇನ್ ಸ್ಮಿತ್, ವೆಸ್ಟ್ ಇಂಡೀಸ್

ಈ ಪಟ್ಟಿಯಲ್ಲಿ ಮೊದಲ ಹೆಸರು ಕೆರಿಬಿಯನ್ ಕ್ರಿಕೆಟ್‌ನ ಆಲ್‌ರೌಂಡರ್ ಡ್ವೇನ್ ಸ್ಮಿತ್ ಅವರದ್ದು. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ 105 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಆದರೆ ಈ ಸಮಯದಲ್ಲಿ ಒಂದು ಶತಕ ಗಳಿಸುವಲ್ಲಿ ವಿಫಲರಾಗಿದ್ದಾರೆ. ಸ್ಮಿತ್ 2004 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾದಾರ್ಪಣೆ ಮಾಡಿದರು. ನಂತರ ಅವರು ಈ ಸ್ವರೂಪದಲ್ಲಿ ಸರಾಸರಿ 18.57 ಮತ್ತು ಸ್ಟ್ರೈಕ್ ರೇಟ್ 92.69 ರೊಂದಿಗೆ 1560 ರನ್ ಗಳಿಸಿದರು.

ಶತಕದಂಚಿನಲ್ಲಿ ಎಡವಿದ್ದ ಸ್ಮಿತ್

ಶತಕದಂಚಿನಲ್ಲಿ ಎಡವಿದ್ದ ಸ್ಮಿತ್

ಫಿರೋಜ್‌ ಶಾ ಕೋಟ್ಲಾ ಮೈದಾನದಲ್ಲಿ ಭಾರತದ ವಿರುದ್ಧ ಆಡುತ್ತಿದ್ದಾಗ ಸ್ಮಿತ್ ತಮ್ಮ ವೃತ್ತಿಜೀವನದಲ್ಲಿ ಶತಕ ಗಳಿಸುವ ಅಂಚಿನಲ್ಲಿದ್ದರು ಈ ಪಂದ್ಯದಲ್ಲಿ ಅವರು 97 ರನ್ ಗಳಿಸಿದರು ಆದರೆ ಮೊಹಮ್ಮದ್ ಶಮಿ ಅವರ ಚೆಂಡು ಅವರನ್ನು ಪೆವಿಲಿಯನ್‌ಗೆ ಕಳುಹಿಸಿತು. ಡ್ವೇನ್ ಸ್ಮಿತ್ ತಮ್ಮ ವೃತ್ತಿಜೀವನದಲ್ಲಿ 8 ಅರ್ಧಶತಕ ಗಳಿಸಿದರೆ ಬೌಲಿಂಗ್‌ನಲ್ಲಿ 61 ವಿಕೆಟ್ ಪಡೆದರು. ಸ್ಮಿತ್ ಕೊನೆಯ ಬಾರಿಗೆ 2015 ರ ವಿಶ್ವಕಪ್‌ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ ಆಡಿದ್ದರು. ನಂತರ ಅವರು ಏಕದಿನ ಕ್ರಿಕೆಟ್‌ನಿಂದ ನಿವೃತ್ತರಾದರು.

#2. ಹಬೀಬುಲ್ ಬಾಶರ್, ಬಾಂಗ್ಲಾದೇಶ

#2. ಹಬೀಬುಲ್ ಬಾಶರ್, ಬಾಂಗ್ಲಾದೇಶ

ಈ ಪಟ್ಟಿಯಲ್ಲಿರುವ ಮತ್ತೊಂದು ಹೆಸರು ಬಾಂಗ್ಲಾದೇಶ ಕ್ರಿಕೆಟ್‌ನ ಮಾಜಿ ನಾಯಕ ಮತ್ತು ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ಹಬೀಬುಲ್ ಬಾಶರ್ ಅವರದ್ದು. ಹಬಿಬುಲ್ ಬಾಶರ್ ತಮ್ಮ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕಾಗಿ 111 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಆದರೆ ಅವರ ವೃತ್ತಿಜೀವನದಲ್ಲಿ ಒಂದೇ ಒಂದು ಶತಕ ಗಳಿಸಲು ವಿಫಲರಾಗಿದ್ದಾರೆ. ಅವರ ವೃತ್ತಿಜೀವನದ ಅವಧಿಯಲ್ಲಿ, ಹಬೀಬುಲ್ 21.68ರ ಸರಾಸರಿಯಲ್ಲಿ 2168 ರನ್ ಗಳಿಸಿದರು ಮತ್ತು ಸ್ಟ್ರೈಕ್ ರೇಟ್ 60.65.

78 ರನ್ನೇ ಹೈಯೆಸ್ಟ್ !

78 ರನ್ನೇ ಹೈಯೆಸ್ಟ್ !

ತಮ್ಮ ವೃತ್ತಿ ಜೀವನದಲ್ಲಿ ಬಾಶರ್ 14 ಅರ್ಧಶತಕ ಇನ್ನಿಂಗ್ಸ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 78 ಆಗಿತ್ತು. ಹಬೀಬುಲ್ 2007 ರಲ್ಲಿ ಹರಾರೆ ಮೈದಾನದಲ್ಲಿ ಜಿಂಬಾಬ್ವೆ ವಿರುದ್ಧ ತಮ್ಮ ವೃತ್ತಿಜೀವನದ ಅತ್ಯಧಿಕ ಇನ್ನಿಂಗ್ಸ್ ಆಡಿದರು. ಭಾರತ, ಆಸ್ಟ್ರೇಲಿಯಾ, ಶ್ರೀಲಂಕಾದಂತಹ ದೊಡ್ಡ ತಂಡಗಳ ವಿರುದ್ಧ ಹಬೀಬುಲ್ ತಮ್ಮ ವೃತ್ತಿಜೀವನದಲ್ಲಿ ಅರ್ಧಶತಕಗಳನ್ನು ಗಳಿಸಿದರಾದರೂ ಶತಕ ಗಳಿಸುವಲ್ಲಿ ವಿಫಲರಾದರು. 2007 ರಲ್ಲಿ ಭಾರತ ವಿರುದ್ಧ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದರು. ಅಲ್ಲಿ ಅವರು 47 ರನ್ ಗಳಿಸಿದರು.

#3. ಮೈಕೆಲ್ ವಾನ್, ಇಂಗ್ಲೆಂಡ್

#3. ಮೈಕೆಲ್ ವಾನ್, ಇಂಗ್ಲೆಂಡ್

ಈ ಪಟ್ಟಿಯಲ್ಲಿ ಮುಂದಿನ ಹೆಸರು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕೆಲ್ ವಾನ್. ಈ ಹೆಸರು ನಿಮಗೆ ಆಶ್ವರ್ಯವನ್ನುಂಟು ಮಾಡಬಹುದು, ಆದರೆ ಮೈಕೆಲ್ ವಾನ್ ಏಕದಿನ ಕ್ರಿಕೆಟ್‌ನಲ್ಲಿ ಒಂದೇ ಒಂದು ಶತಕವನ್ನು ಹೊಂದಿಲ್ಲ ಎಂಬುದು ಕಟು ಸತ್ಯ.

ಟೆಸ್ಟ್ ಕ್ರಿಕೆಟ್‌ಗೆ ದಿಗ್ಗಜ

ಟೆಸ್ಟ್ ಕ್ರಿಕೆಟ್‌ಗೆ ದಿಗ್ಗಜ

ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ಗೆ ಸಾಕಷ್ಟು ಹೆಸರು ತಂದುಕೊಟ್ಟ ಮೈಕೆಲ್ ವಾನ್ ತಮ್ಮ ವೃತ್ತಿಜೀವನದಲ್ಲಿ 86 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 1982 ರನ್ ಗಳಿಸಿ ಸರಾಸರಿ 27.15 ರ ಸರಾಸರಿ ಹೊಂದಿದ್ದು 68.39 ಸ್ಟ್ರೈಕ್ ರೇಟ್ ಗಳಿಸಿದರು. ಈ ಸಮಯದಲ್ಲಿ ವಾನ್ 16 ಅರ್ಧಶತಕ ಗಳಿಸಿದ್ದಾರೆ. ಜಿಂಬಾಬ್ವೆ ವಿರುದ್ಧ ಗಳಿಸಿದ 90 ರನ್ ಮೈಕಲ್ ವಾನ್ ಅವರ ಅತ್ಯಧಿಕ ಸ್ಕೋರ್ ಆಗಿದೆ. ಮೈಕೆಲ್ ವಾನ್ 2007 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದರು.

#4. ಮಿಸ್ಬಾ ಉಲ್ ಹಕ್, ಪಾಕಿಸ್ತಾನ

#4. ಮಿಸ್ಬಾ ಉಲ್ ಹಕ್, ಪಾಕಿಸ್ತಾನ

ಈ ಪಟ್ಟಿಯ ಮತ್ತೊಂದು ಅತ್ಯಂತ ಆಶ್ಚರ್ಯಕರ ಹೆಸರು ಎಂದರೆ ಪಾಕಿಸ್ತಾನದ ಮಾಜಿ ಕ್ರಿಕೆಟ್ ತಂಡದ ನಾಯಕ ಮಿಸ್ಬಾ-ಉಲ್-ಹಕ್. ಮಿಸ್ಬಾ ತಮ್ಮ ವೃತ್ತಿಜೀವನದಲ್ಲಿ 162 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು 43.40 ಸರಾಸರಿಯಲ್ಲಿ 5122 ರನ್ ಗಳಿಸಿದ್ದಾರೆ, ಆದರೆ ಈ ಮಧ್ಯೆ ಅವರು ಒಂದೇ ಶತಕ ಗಳಿಸುವಲ್ಲಿ ವಿಫಲರಾದರು.

42 ಅರ್ಧಶತಕವಿದ್ದರೂ ಶತಕವಿಲ್ಲ!

42 ಅರ್ಧಶತಕವಿದ್ದರೂ ಶತಕವಿಲ್ಲ!

ಮಿಸ್ಬಾ-ಉಲ್-ಹಕ್ ತಮ್ಮ ವೃತ್ತಿಜೀವನದಲ್ಲಿ 42 ಅರ್ಧಶತಕ ಗಳಿಸಿದ್ದಾರೆ. ಮಿಸ್ಬಾ ಉಲ್ ಹಕ್ ಅವರ ಹೈಯೆಸ್ಟ್ ಸ್ಕೋರ್ 96 ರನ್. ಅವರು ಓವಲ್ ಮೈದಾನದಲ್ಲಿ 2013 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಈ ಇನ್ನಿಂಗ್ಸ್ ಆಡಿದ್ದರು. ಮಿಸ್ಬಾ 2015 ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದಾರೆ.

#5. ದಿನೇಶ್ ಕಾರ್ತಿಕ್, ಟೀಮ್ ಇಂಡಿಯಾ

#5. ದಿನೇಶ್ ಕಾರ್ತಿಕ್, ಟೀಮ್ ಇಂಡಿಯಾ

ಈ ಪಟ್ಟಿಯಲ್ಲಿ ಕೊನೆಯ ಹೆಸರು ಭಾರತೀಯ ಕ್ರಿಕೆಟ್ ತಂಡದ ಹಿರಿಯ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್. ಇದುವರೆಗೆ ಭಾರತಕ್ಕಾಗಿ 94 ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದರೂ ಒಂದೇ ಒಂದು ಶತಕ ಗಳಿಸುವಲ್ಲಿ ವಿಫಲರಾಗಿದ್ದಾರೆ.

ಸಿಕ್ಕ ಅವಕಾಶದಲ್ಲಿ ವಿಫಲ

ಸಿಕ್ಕ ಅವಕಾಶದಲ್ಲಿ ವಿಫಲ

ದಿನೇಶ್ ಕಾರ್ತಿಕ್ ತಮ್ಮ ಏಕದಿನ ವೃತ್ತಿಜೀವನದ 94 ಪಂದ್ಯಗಳಲ್ಲಿ 30.20 ಸರಾಸರಿಯಲ್ಲಿ 1752 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ ಅವರು 9 ಅರ್ಧಶತಕಗಳನ್ನು ಗಳಿಸಿದ್ದಾರೆ. 79 ಅವರ ಅತ್ಯಧಿಕ ಸ್ಕೋರ್. 2019ರ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದಲ್ಲಿ ಅವಕಾಶವನ್ನು ಪಡೆದುಕೊಳ್ಳುವಲ್ಲಿ ಕಾರ್ತಿಕ್ ಯಶಸ್ವಿಯಾಗಿದ್ದರು.ಆದರೆ ಸಿಕ್ಕ ಅವಕಾಶದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಕಾರ್ತಿಕ್ ವಿಫಲರಾದರು.

For Quick Alerts
ALLOW NOTIFICATIONS
For Daily Alerts
Story first published: Sunday, April 12, 2020, 8:30 [IST]
Other articles published on Apr 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X