ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Aaron Finch retirement : ಏಕದಿನ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ ಆ್ಯರೋನ್ ಫಿಂಚ್: ಟಿ20 ನಾಯಕನಾಗಿ ಮುಂದುವರಿಕೆ

Aaron finch

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಲಿಮಿಟೆಡ್ ಓವರ್ ಕ್ಯಾಪ್ಟನ್ ಆ್ಯರೋನ್ ಫಿಂಚ್ ಏಕದಿನ ಕ್ರಿಕೆಟ್‌ಗೆ ದಿಢೀರ್ ಎಂದು ನಿವೃತ್ತಿ ಘೋಷಿಸಿದ್ದಾರೆ. ಭಾನುವಾರ(ಸೆ.11) ನಡೆಯಲಿರುವ ನ್ಯೂಜಿಲೆಂಡ್‌ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವು ಫಿಂಚ್‌ಗೆ ಕೊನೆಯ ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಆದಾಗ್ಯೂ, ಅವರು ಆಸ್ಟ್ರೇಲಿಯಾದ ಟಿ20 ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ.

ಆ್ಯರೋನ್ ಫಿಂಚ್ ದಿಢೀರ್ ನಿವೃತ್ತಿ ಘೋಷಿಸುತ್ತಿದ್ದಂತೆ ODI ಫಾರ್ಮೆಟ್‌ನಲ್ಲಿ ಆಸ್ಟ್ರೇಲಿಯಾದ ಮುಂದಿನ ನಾಯಕತ್ವಕ್ಕೆ ಹಲವಾರು ಹೆಸರುಗಳು ಹೊರಹೊಮ್ಮುತ್ತಿವೆ. ಆದರೂ ಫಿಂಚ್ ಇಷ್ಟು ಬೇಗ ಏಕದಿನ ಫಾರ್ಮೆಟ್‌ಗೆ ನಿವೃತ್ತಿ ಘೋಷಿಸಿದ್ದು ಏಕೆ ಎಂಬುದು ಅರ್ಥವಾಗದ ಪ್ರಶ್ನೆಯಾಗಿದೆ. 2023 ಐಸಿಸಿ 50 ಓವರ್‌ಗಳ ವಿಶ್ವಕಪ್‌ಗೆ ಒಂದು ವರ್ಷ ಮೊದಲೇ ತಂಡದ ನಾಯಕತ್ವ ಬಿಟ್ಟು ಕೊಡುವ ಮೂಲಕ ಫಿಂಚ್‌ ಟೆಸ್ಟ್ ಹಾಗೂ ಟಿ20 ಫಾರ್ಮೆಟ್‌ನಲ್ಲಿ ಮುಂದುವರಿಯುವ ಆಸೆ ವ್ಯಕ್ತಪಡಿಸಿದ್ದಾರೆ.

ಒಡಿಐನಲ್ಲಿ ಹೊಸ ನಾಯಕನ ಆಯ್ಕೆಗೆ ಸಮಯ ಬಂದಿದೆ!

ಒಡಿಐನಲ್ಲಿ ಹೊಸ ನಾಯಕನ ಆಯ್ಕೆಗೆ ಸಮಯ ಬಂದಿದೆ!

ಪತ್ರಿಕಾಗೋಷ್ಟಿಯಲ್ಲಿ ತನ್ನ ನಿವೃತ್ತಿ ನಿರ್ಧಾರವನ್ನ ತಿಳಿಸಿರುವ ಆ್ಯರೋನ್ ಫಿಂಚ್ ''ಇದು ಕೆಲವು ನಂಬಲಾಗದ ನೆನಪುಗಳೊಂದಿಗೆ ಅದ್ಭುತ ಸವಾರಿಯಾಗಿದೆ." ಎಂದಿದ್ದಾರೆ.

"ಕೆಲವು ಅದ್ಭುತ ಏಕದಿನ ತಂಡಗಳ ಭಾಗವಾಗಲು ನಾನು ಅತ್ಯಂತ ಅದೃಷ್ಟಶಾಲಿಯಾಗಿದ್ದೇನೆ. ತನ್ನೊಂದಿಗೆ ಆಡಿದ ಎಲ್ಲರಿಂದ ಮತ್ತು ತೆರೆಮರೆಯಲ್ಲಿರುವ ಅನೇಕ ಜನರ ಆಶೀರ್ವಾದ ಸಮಾನವಾಗಿ ಪಡೆದಿದ್ದೇನೆ" ಎಂದು ಅವರು ಸೇರಿಸಿದರು.

ಜೊತೆಗೆ "ಮುಂದಿನ ವಿಶ್ವಕಪ್‌ಗೆ ಸಿದ್ಧರಾಗಲು ಮತ್ತು ಗೆಲ್ಲಲು ಹೊಸ ನಾಯಕನಿಗೆ ಉತ್ತಮ ಅವಕಾಶವನ್ನು ನೀಡುವ ಸಮಯ ಇದಾಗಿದೆ. ಈ ಹಂತಕ್ಕೆ ನನ್ನ ಪ್ರಯಾಣಕ್ಕೆ ಸಹಾಯ ಮಾಡಿದ ಮತ್ತು ಬೆಂಬಲಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ" ಎಂದು ಫಿಂಚ್ ಹೇಳಿದ್ದಾರೆ.

ಈ ಮೂಲಕ ಮುಂಬರುವ ಐಸಿಸಿ ಏಕದಿನ ವಿಶ್ವಕಪ್ 2023ರಲ್ಲಿ ಆಸ್ಟ್ರೇಲಿಯಾ ಪುರುಷರ ತಂಡದ ಭಾಗವಾಗಿರುವುದಿಲ್ಲ ಎಂಬುದನ್ನ ಸ್ಪಷ್ಟಪಡಿಸಿದ್ದಾರೆ.

T20 ವಿಶ್ವಕಪ್‌ 2022: ಭಾರತದ ಸಂಭಾವ್ಯ ಸ್ಕ್ವಾಡ್‌ ಘೋಷಿಸಿದ ಆಶಿಶ್ ನೆಹ್ರಾ

145 ಏಕದಿನ ಪಂದ್ಯಗಳನ್ನಾಡಿರುವ ಆ್ಯರೋನ್ ಫಿಂಚ್

145 ಏಕದಿನ ಪಂದ್ಯಗಳನ್ನಾಡಿರುವ ಆ್ಯರೋನ್ ಫಿಂಚ್

ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ 145 ಏಕದಿನ ಪಂದ್ಯಗಳನ್ನಾಡಿದ್ದು, 141 ಇನ್ನಿಂಗ್ಸ್‌ಗಳಲ್ಲಿ 39.14ರ ಬ್ಯಾಟಿಂಗ್ ಸರಾಸರಿಯಲ್ಲಿ 5,401 ರನ್ ಗಳಿಸಿದ್ದಾರೆ. 17 ಶತಕ ಹಾಗೂ 30 ಅರ್ಧಶತಕ ದಾಖಲಿಸಿರುವ ಫಿಂಚ್ 87.82ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ.

ಆಸ್ಟ್ರೇಲಿಯಾ ಕಂಡಂತಹ ಸ್ಫೋಟಕ ಓಪನರ್‌ಗಳಲ್ಲಿ ಒಬ್ಬರಾದ ಈತ ತನ್ನ ಅಗ್ರೆಸ್ಸಿವ್ ಬ್ಯಾಟಿಂಗ್ ಮೂಲಕವೇ ಹೆಸರಾದವರು. 2013ರಲ್ಲಿ ಮೆಲರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಫಿಂಚ್, ಸ್ಕಾಟ್ಲೆಂಡ್ ವಿರುದ್ಧ ತಮ್ಮ ಚೊಚ್ಚಲ ಏಕದಿನ ಶತಕ (148) ಸಿಡಿಸಿದರು.

ಏಷ್ಯಾ ಕಪ್‌ 2022: ಈ 3 ಆಟಗಾರರನ್ನ ಸರಿಯಾಗಿ ಬಳಸಿಕೊಳ್ಳದ ಟೀಂ ಇಂಡಿಯಾ, ಸೋಲಿಗೆ ಪ್ರಮುಖ ಕಾರಣ

2018ರಲ್ಲಿ ಬಯಸದೇ ಬಂದಿದ್ದ ನಾಯಕತ್ವ

2018ರಲ್ಲಿ ಬಯಸದೇ ಬಂದಿದ್ದ ನಾಯಕತ್ವ

ಆ್ಯರೋನ್ ಫಿಂಚ್ ನೇರವಾಗಿ ಆಸ್ಟ್ರೇಲಿಯಾ ತಂಡದ ಚುಕ್ಕಾಣಿ ಹಿಡಿದವರಲ್ಲ. 2018ರಲ್ಲಿ ಸ್ಟೀವ್‌ ಸ್ಮಿತ್‌ ಹಾಗೂ ಡೇವಿಡ್ ವಾರ್ನರ್ ಬಾಲ್‌ ಟ್ಯಾಂಪರಿಂಗ್ ವಿವಾದದಲ್ಲಿ ಸಿಲುಕಿದ ಪರಿಣಾಮ ಅವರನ್ನು ನಾಯಕತ್ವದಿಂದ ವಜಾಗೊಳಿಸಿದ್ದಲ್ಲದೆ ಒಂದು ವರ್ಷ ನಿಷೇಧ ಕೂರ ಹೇರಲಾಗಿತ್ತು. ಈ ವೇಳೆಯಲ್ಲಿ ಆ್ಯರೋನ್ ಫಿಂಚ್‌ರನ್ನ ವೈಟ್‌ ಬಾಲ್ ಕ್ರಿಕೆಟ್ ಫಾರ್ಮೆಟ್‌ಗೆ ನಾಯಕನಾಗಿ ಆಯ್ಕೆ ಮಾಡಲಾಯಿತು.

ಏಕದಿನ ಫಾರ್ಮೆಟ್‌ನಲ್ಲಿ ಅಷ್ಟೊಂದು ಗಮನಸೆಳೆಯದಿದ್ರೂ ಸಹ ಟಿ20 ಫಾರ್ಮೆಟ್‌ನಲ್ಲಿ ಆಸ್ಟ್ರೇಲಿಯಾಕ್ಕೆ ವಿಶ್ವಕಪ್ ಗೆದ್ದು ಕೊಡುವಲ್ಲಿ ಫಿಂಚ್ ಯಶಸ್ವಿಯಾದ್ರು. 2021ರ ಐಸಿಸಿ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಆಸ್ಟ್ರೇಲಿಯಾಗೆ ಚೊಚ್ಚಲ ಚುಟುಕು ವಿಶ್ವಕಪ್ ಗೆದ್ದು ಕೊಟ್ಟ ಕೀರ್ತಿ ಇವರದ್ದಾಗಿದೆ.

Virat Kohli ಆಟ ನೋಡಿದ ಕೋಚ್ ಹಾಗು ಕ್ಯಾಪ್ಟನ್ ಮಾಡಿದ್ದೇನು | *Cricket | OneIndia Kannada
ನ್ಯೂಜಿಲೆಂಡ್ ವಿರುದ್ಧ 1 ಪಂದ್ಯ ಬಾಕಿ ಇರುವಂತೆಯೇ ಸರಣಿ ಗೆಲುವು

ನ್ಯೂಜಿಲೆಂಡ್ ವಿರುದ್ಧ 1 ಪಂದ್ಯ ಬಾಕಿ ಇರುವಂತೆಯೇ ಸರಣಿ ಗೆಲುವು

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಒಂದು ಪಂದ್ಯ ಬಾಕಿ ಇರುವಂತೆಯೇ ಫಿಂಚ್ ನಾಯಕತ್ವದ ಕಾಂಗರೂಗಳು ಸರಣಿ ಜಯ ಸಾಧಿಸಿದ್ದಾರೆ. ಮೊದಲ ಪಂದ್ಯದಲ್ಲಿ ಎರಡು ವಿಕೆಟ್‌ಗಳ ಗೆಲುವು ಸಾಧಿಸಿದ್ದ ಆಸ್ಟ್ರೇಲಿಯಾ, ಎರಡನೇ ಏಕದಿನ ಪಂದ್ಯದಲ್ಲಿ 113ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದ ನ್ಯೂಜಿಲೆಂಡ್ ಆಸ್ಟ್ರೇಲಿಯಾವನ್ನ 195ರನ್‌ಗಳಿಗೆ ಕಟ್ಟಿಹಾಕಿತು. ಆದ್ರೆ 196ರನ್‌ ಗುರಿ ಬೆನ್ನತ್ತಿದ ಕೇನ್ ವಿಲಿಯಮ್ಸನ್ ಪಡೆ ಆ್ಯಡಂ ಜಂಪಾ ಮತ್ತು ಸೀನ್ ಅಬಾಟ್ ದಾಳಿಗೆ ತತ್ತರಿಸಿ ಕೇವಲ 33 ಓವರ್‌ಗಳಲ್ಲಿ 82ರನ್‌ಗೆ ಆಲೌಟ್‌ ಆಗುವ ಮೂಲಕ ಹೀನಾಯ ಸೋಲು ಅನುಭವಿಸಿತು. ಈ ಮೂಲಕ ಭಾನುವಾರ ನಡೆಯಲಿರುವ ಅಂತಿಮ ಏಕದಿನ ಪಂದ್ಯಕ್ಕೂ ಮುನ್ನ ಕಾಂಗರೂಗಳು 2-0 ಅಂತರದಲ್ಲಿ ಸರಣಿ ಜಯ ಸಾಧಿಸಿದೆ.

Story first published: Saturday, September 10, 2022, 10:35 [IST]
Other articles published on Sep 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X