AUS vs WI 1st Test : ನಾಥನ್ ಲಿಯಾನ್ ಸ್ಪಿನ್ ಮೋಡಿ : ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಗೆದ್ದ ಆಸ್ಟ್ರೇಲಿಯಾ

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲನೇ ಪಂದ್ಯದಲ್ಲಿ ಆಸ್ಟ್ರೇಲಿಯಾ 164 ರನ್‌ಗಳ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲಿಯಾನ್ 6 ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾದ ಗೆಲುವಿನಲ್ಲಿ ಜಯ ಸಾಧಿಸಿದರು.

ಟೆಸ್ಟ್‌ನಲ್ಲಿ ಮೊದಲನೇ ದಿನದಿಂದಲೇ ಆಸ್ಟ್ರೇಲಿಯಾ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಮಾರ್ನಸ್ ಲಾಬುಸ್ಚಾಗ್ನೆ ಮತ್ತು ಸ್ಟೀವ್‌ ಸ್ಮಿತ್‌ರ ದ್ವಿಶತಕದ ನೆರವಿನಿಂದ 4 ವಿಕೆಟ್‌ ಕಳೆದುಕೊಂಡು 598 ರನ್‌ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಮಾರ್ನಸ್ ಲಾಬುಸ್ಚಾಗ್ನೆ 204 ರನ್ ಗಳಿಸಿದರೆ, ಸ್ಟೀವ್ ಸ್ಮಿತ್ ಅಜೇಯ 200 ರನ್ ಗಳಿಸಿ ಮಿಂಚಿದರು. ಟ್ರಾವಿಸ್ ಹೆಡ್ 99 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 283 ರನ್‌ಗಳಿಗೆ ಆಲೌಟ್ ಆಗುವ ಮೂಲಕ 315 ರನ್‌ಗಳ ಹಿನ್ನಡೆ ಅನುಭವಿಸಿತು. ಕಾರ್ಲೋಸ್ ಬ್ರಾಥ್‌ವೈಟ್, ಟಗೆನರೈನ್ ಚಂದ್ರಪಾಲ್ ಅರ್ಧಶತಕ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ ಗಳು ಸಂಪೂರ್ಣವಾಗಿ ವಿಫಲರಾದರು.

 ಮಾರ್ನಸ್ ಲಾಬುಸ್ಚಾಗ್ನೆ ಶತಕ

ಮಾರ್ನಸ್ ಲಾಬುಸ್ಚಾಗ್ನೆ ಶತಕ

ಮೊದಲನೇ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಗಳಿಸಿ ಮಿಂಚಿದ್ದ ಮಾರ್ನಸ್ ಲಾಬುಸ್ಚಾಗ್ನೆ ದ್ವಿತೀಯ ಇನ್ನಿಂಗ್ಸ್‌ನಲ್ಲಿಯೂ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದರು. 110 ಎಸೆತಗಳಲ್ಲಿ ಅಜೇಯ 104 ರನ್ ಗಳಿಸಿ ಮಿಂಚಿದರು. ಲಾಬುಸ್ಚಾಗ್ನೆ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ 2 ವಿಕೆಟ್‌ ಕಳೆದುಕೊಂಡು 182 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು.

ಎರಡೂ ಇನ್ನಿಂಗ್ಸ್‌ಗಳಿಂದ 308 ರನ್ ಗಳಿಸುವ ಮೂಲಕ ಪಂದ್ಯದ ಆಟಗಾರ ಪ್ರಶಸ್ತಿ ಪಡೆದುಕೊಂಡರು. ಮೊದಲನೇ ಇನ್ನಿಂಗ್ಸ್‌ನಲ್ಲಿ 315 ರನ್‌ ಗಳಿಂದ ಮುನ್ನಡೆ ಸಾಧಿಸಿದ್ದ ಆಸ್ಟ್ರೇಲಿಯಾ ವೆಸ್ಟ್ ಇಂಡೀಸ್ ಗೆಲುವಿಗೆ 488 ರನ್‌ಗಳ ಬೃಹತ್ ಸವಾಲು ಒಡ್ಡಿತು.

IND vs BAN 1st ODI: ಕೆಎಲ್ ರಾಹುಲ್ ಏಕಾಂಗಿ ಹೋರಾಟ; ಸಾಧಾರಣ ಗುರಿ ನೀಡಿದ ಭಾರತ

ಬ್ರಾಥ್‌ವೈಟ್ ಹೋರಾಟ ವ್ಯರ್ಥ

ಬ್ರಾಥ್‌ವೈಟ್ ಹೋರಾಟ ವ್ಯರ್ಥ

488 ರನ್‌ಗಳ ಬೃಹತ್ ಸವಾಲು ಬೆನ್ನಟ್ಟಿದ ವೆಸ್ಟ್ ಇಂಡೀಸ್ ಪಡೆಗೆ ಕ್ರೈಗ್ ಬ್ರಾಥ್‌ವೈಟ್ ಆಸರೆಯಾದರು. ಬ್ರಾಥ್‌ವೈಟ್ 110 ರನ್‌ ಗಳಿಸಿದರೆ, ಚಂದ್ರಪಾಲ್ 45 ರನ್ ಗಳಿಸುವ ಮೂಲಕ ಹೋರಾಟ ನೀಡಿದರು. ರಾಸ್ಟನ್ ಚೇಸ್ 55 ರನ್ ಗಳಿಸಿದರೆ, ಅಲ್ಜಾರಿ ಜೋಸೆಫ್ 43 ರನ್ ಗಳಿಸಿದರು.

ಉಳಿದ ಬ್ಯಾಟರ್ ಗಳು ರನ್ ಗಳಿಸಲು ವಿಫಲವಾದ ಕಾರಣ ವೆಸ್ಟ್ ಇಂಡೀಸ್ ಗೆಲುವಿನ ಸನಿಹ ಕೂಡ ಹೋಗಲಾಗಲಿಲ್ಲ. ನಾಯಕ ಬ್ರಾಥ್‌ವೈಟ್ ಉತ್ತಮ ಆಟವಾಡಿದರು ಕೂಡ ತಂಡವನ್ನು ಸೋಲಿನಿಂದ ತಪ್ಪಿಸಲು ಸಾಧ್ಯವಾಗಲಿಲ್ಲ.

6 ವಿಕೆಟ್‌ ಪಡೆದ ನಾಥನ್ ಲಿಯಾನ್

6 ವಿಕೆಟ್‌ ಪಡೆದ ನಾಥನ್ ಲಿಯಾನ್

ಆಸ್ಟ್ರೇಲಿಯಾದ ಸ್ಪಿನ್‌ ಬೌಲರ್ ನಾಥನ್ ಲಿಯಾನ್ ವೆಸ್ಟ್ ಇಂಡೀಸ್ ತಂಡದ ಬ್ಯಾಟಿಂಗ್‌ಗೆ ಮಾರಕವಾದರು. ನಾಲ್ಕನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 192 ರನ್ ಗಳಿಸಿದ್ದ ವೆಸ್ಟ್ ಇಂಡೀಸ್ ಐದನೇ ದಿನದಾಟವನ್ನು ಎಚ್ಚರಿಕೆಯಿಂದ ಆರಂಭಿಸಿತು.

ಪ್ಯಾಟ್ ಕಮ್ಮಿನ್ಸ್ ಗಾಯಗೊಂಡ ಕಾರಣ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್‌ ಮಾಡಲಿಲ್ಲ. ಆದರೆ, ನಾಥನ್ ಲಿಯಾನ್ 6 ವಿಕೆಟ್ ಪಡೆದರೆ, ಟ್ರಾವಿಸ್ ಹೆಡ್ 2 ವಿಕೆಟ್ ಪಡೆದರು. ಲಿಯಾನ್ ಬೌಲಿಂಗ್ ದಾಳಿಗೆ ಸಿಲುಕಿದ ವೆಸ್ಟ್ ಇಂಡೀಸ್ 110.5 ಓವರ್ ಗಳಲ್ಲಿ 333 ರನ್‌ ಆಗುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 164 ರನ್‌ಗಳಿಂದ ಸೋಲನುಭವಿಸಿತು.

ಎರಡೂ ತಂಡಗಳ ಪ್ಲೇಯಿಂಗ್ XI

ಎರಡೂ ತಂಡಗಳ ಪ್ಲೇಯಿಂಗ್ XI

ಆಸ್ಟ್ರೇಲಿಯಾ: ಉಸ್ಮಾನ್ ಖವಾಜಾ, ಡೇವಿಡ್ ವಾರ್ನರ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಜಲ್ವುಡ್

ವೆಸ್ಟ್ ಇಂಡೀಸ್: ಕ್ರೈಗ್ ಬ್ರಾಥ್‌ವೈಟ್ (ನಾಯಕ), ಟಗೆನರೈನ್ ಚಂದ್ರಪಾಲ್, ಎನ್‌ಕ್ರುಮಾ ಬೊನ್ನರ್, ಜರ್ಮೈನ್ ಬ್ಲಾಕ್‌ವುಡ್, ರೋಸ್ಟನ್ ಚೇಸ್, ಕೈಲ್ ಮೇಯರ್ಸ್, ಜೇಸನ್ ಹೋಲ್ಡರ್, ಜೋಶುವಾ ಡಾ ಸಿಲ್ವಾ, ಅಲ್ಜಾರಿ ಜೋಸೆಫ್, ಕೆಮರ್ ರೋಚ್, ಜೇಡನ್ ಸೀಲ್ಸ್, ಶಮರ್ ಬ್ರೂಕ್ಸ್

For Quick Alerts
ALLOW NOTIFICATIONS
For Daily Alerts
Story first published: Sunday, December 4, 2022, 17:21 [IST]
Other articles published on Dec 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X