ಮಾನಸಿಕ ಆರೋಗ್ಯಕ್ಕೆ ಒತ್ತು: ಅನಿರ್ದಿಷ್ಟಾವಧಿಗೆ ಕ್ರಿಕೆಟ್‌ನಿಂದ ದೂರವಿರಲು ಟಿಮ್ ಪೈನ್ ನಿರ್ಧಾರ

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಿರ್ಗಮಿತ ನಾಯಕ ಟಿಮ್ ಪೈನ್ ಈಗ ವಿವಾದದ ಕೇಂದ್ರ ಬಿಂದು. ಇತ್ತೀಚೆಗಷ್ಟೇ ಟಿಮ್ ಪೈನ್ ಮಾಜಿ ಮಹಿಳಾ ಸಹೋದ್ಯೋಗಿಗೆ ಅಶ್ಲೀಲ ಸಂದೇಶ ಕಳುಹಿಸಿದ ವಿಚಾರವಾಗಿ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರ ಘೋಷಿಸಿದ್ದರು. ಅದಾದ ನಂತರ ಕ್ರಿಕೆಟ್ ಆಸ್ಟ್ರೇಲಿಯಾ ಈಗ ಮುಂಬರುವ ಆಶಸ್ ಸರಣಿಗೆ ಹೊಸ ನಾಯಕನನ್ನು ಕೂಡ ಘೋಷಿಸಿದೆ. ಪ್ಯಾಟ್ ಕಮ್ಮಿನ್ಸ್‌ಗೆ ತಂಡದ ನಾಯಕತ್ವದ ಹೊಣೆ ಬಿದ್ದಿದ್ದರೆ ಸ್ಟೀವ್ ಸ್ಮಿತ್ ಉಪ ನಾಯಕನಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಈ ಮಧ್ಯೆ ಟಿಮ್ ಪೈನ್ ಮತ್ತೊಂದು ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದಾರೆ.

ವಿವಾದದ ಕೇಂದ್ರ ಬಿಂದುವಾಗಿರುವ ಟಿಮ್ ಪೈನ್ ಈಗ ಮಾನಸಿಕ ಆರೋಗ್ಯದತ್ತ ಗಮನಹರಿಸಿದ್ದಾರೆ. ಈ ಕಾರಣದಿಂದಾಗಿಯೇ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿರ್ದಿಷ್ಟಾವಧಿಗೆ ವಿಶ್ರಾಂತಿಯನ್ನು ಪಡೆದುಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಮುಂಬರುವ ಆಶಸ್ ಸರಣಿಯಿಂದ ಟಿಮ್ ಪೈನ್ ಸಂಪೂರ್ಣವಾಗಿ ಹೊರಗುಳಿಯುವುದು ಬಹುತೇಕ ಖಚಿತ.

ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕನಾಗಿ ಪ್ಯಾಟ್ ಕಮಿನ್ಸ್ ಆಯ್ಕೆ, ಸ್ಮಿತ್‌ ಉಪನಾಯಕಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕನಾಗಿ ಪ್ಯಾಟ್ ಕಮಿನ್ಸ್ ಆಯ್ಕೆ, ಸ್ಮಿತ್‌ ಉಪನಾಯಕ

ಮಾನಸಿಕ ಆರೋಗ್ಯದ ದೃಷ್ಟಿಯಿಂದ ಟಿಮ್ ಪೈನ್ ಕ್ರಿಕೆಟ್‌ನಿಂದ ಸದ್ಯಕ್ಕೆ ದೂರವುಳಿಯಲು ನಿರ್ಧರಿಸಿರುವ ವಿಚಾರವನವನ್ನು ಅವರ ಮ್ಯಾನೇಜರ್ ಜೇಮ್ಸ್ ಹ್ಯಾಂಡರ್ಸನ್ ಖಚಿತಪಡಿಸಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ "ಟಿಮ್ ಪೈನ್ ಅವರು ಮಾನಸಿಕ ಆರೋಗ್ಯವನ್ನು ಪಡೆದುಕೊಳ್ಳಲು ಅನಿರ್ದಿಷ್ಟಾವಧಿಗೆ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ" ಎದು ಬರೆದುಕೊಂಡಿದ್ದಾರೆ. "ನಾವು ಈ ಸಂದರ್ಭದಲ್ಲಿ ಅವರ ಹಾಗೂ ಪತ್ನಿ ಬೋನೀ ಅವರ ಯೋಗಕ್ಷೇಮದ ಬಗ್ಗೆ ಕಾಳಜಿಯನ್ನು ಹೊಂದಿದ್ದೇವೆ. ಈ ಸಂದರ್ಭದಲ್ಲಿ ನಾವು ಯಾವುದೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ" ಎಂದು ಟಿಮ್ ಪೈನ್ ಅವರ ಮ್ಯಾನೇಜರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಈ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಾಹಕ ನಿಕ್ ಹಾಕ್ಲೆ ಪ್ರತಿಕ್ರಿಯಿಸಿದ್ದಾರೆ. "ಟಿಮ್ ಹಾಗೂ ಅವರ ಕುಟುಂಬಕ್ಕೆ ಇದು ಅತ್ಯಂತ ಕಠಿಣವಾದ ಸಂದರ್ಭ ಎಂದು ನಾವು ಪರಿಗಣಿಸಿದ್ದೇವೆ. ಅವರ ಕುಟುಂಬಕ್ಕೆ ನಾವು ಬೆಂಬಲವಾಗಿ ನಿಲ್ಲಲು ಬದ್ಧವಾಗಿದ್ದೇವೆ" ಎಂದು ನಿಕ್ ಹಾಕ್ಲೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ. "ನಾವು ಟಿಮ್ ಪೈನ್ ಅವರ ನಿರ್ಧಾರವನ್ನು ಗೌರವಿಸುತ್ತಿದ್ದು ಕ್ರಿಕೆಟ್‌ನಿಂದ ವಿರಾಮವನ್ನು ಪಡೆದುಕೊಂಡು ತಮ್ಮ ಹಾಗೂ ಕುಟುಂಬದ ಯೋಗಕ್ಷೇಮಕ್ಕೆ ಒತ್ತು ನೀಡಲು ಬಯಸುವುದನ್ನು ಅರ್ಥ ಮಾಡಿಕೊಳ್ಳುತ್ತೇವೆ" ಎಂದುದ್ದಾರೆ.

ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್: ಈ ಸಾಧನೆ ಮಾಡಿದ ಭಾರತದ 16ನೇ ಪ್ಲೇಯರ್ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್: ಈ ಸಾಧನೆ ಮಾಡಿದ ಭಾರತದ 16ನೇ ಪ್ಲೇಯರ್

ಗುರುವಾರದ ಮಾಹಿತಿಯಂತೆ ಟಿಮ್ ಪೈನ್ ಈ ವಾರಾಂತ್ಯದಲ್ಲಿ ಆಸ್ಟ್ರೇಲಿಯಾ ಸ್ಕ್ವಾಡ್ ಸೇರಿಕೊಳ್ಳಲಿದ್ದಾರೆ ಎನ್ನಲಾಗುತ್ತು. ಹೀಗಾಗಿ ಆಸ್ಟ್ರೇಲಿಯಾ ತಂಡದ ಆಟಗಾರರು ಇಂಗ್ಲೆಂಡ್ ವಿರುದ್ಧಧ ಆಶಸ್ ಸರಣಿಯ ಡಿಸೆಂಬರ್ 8ರಂದು ನಡೆಯುವ ಮೊದಲ ಪಂದ್ಯದಲ್ಲಿ ಪೈನ್ ಆಡುವ ನಿರೀಕ್ಷೆಯನ್ನು ಹೊಂದಿದ್ದರು. ಆದರೆ ಶುಕ್ರವಾರ ಟಿಮ್ ಪೈನ್ ವಿರಾಮ ಪಡೆದುಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಮಹಿಳಾ ಸಹೋದ್ಯೋಗಿಯೊಬ್ಬರಿಗೆ ಅಶ್ಲೀಲ ಸಂದೇಶ ಕಳುಹಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕ್ರಿಕೆಟ್ ಆಸ್ಟ್ರೇಲಿಯಾ ಟಿಮ್ ಪೈನ್ ವಿರುದ್ಧ ತನಿಖೆಯನ್ನು ನಡೆಸುತ್ತಿದೆ. ಈ ಪ್ರಕರಣದ ಕಾರಣದಿಂದಾಗಿ ಟಿಮ್ ಪೈನ್ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು. ಆಶಸ್ ಟೆಸ್ಟ್ ಸರಣಿಗೆ ಕೆಲವೇ ದಿನಗಳಿರುವಾಗ ಈ ಬೆಳವಣಿಗೆ ನಡೆದಿರುವುದು ಆಸಿಸ್ ತಂಡಕ್ಕೆ ದೊಡ್ಡ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ

ಕಳೆದ ಶುಕ್ರವಾರ ಆಸ್ಟ್ರೇಲಿಯಾದ ಹೋಬಾರ್ಟ್‌ನಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಟಿಮ್ ಪೈನ್ ತಮ್ಮ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸಿದ್ದರು. 2017ರಲ್ಲಿ ಕ್ರಿಕೆಟ್ ಟಾಸ್ಮೇನಿಯಾದ ಮಹಿಳಾ ಉದ್ಯೋಗಿ ಜೊತೆಗಿನ ಈ ಪ್ರಕರಣ ಬಹಿರಂಗವಾಗಿತ್ತು. ಹೀಗಾಗಿ ಈ ರಾಜೀನಾಮೆ ನಿರ್ಧಾರವನ್ನು ತೆಗೆದುಕೊಂಡಿದ್ದರು ಟಿಮ್ ಪೈನ್. ಇನ್ನು ರಾಜೀನಾಮೆ ನಿರ್ಧಾರ ಪ್ರಕಟಿಸಿದ ಸಂದರ್ಭದಲ್ಲಿ ಇದಕ್ಕೆ ಕಾರಣವಾದ ಅಂಶವನ್ನು ಕೂಡ ಸ್ವತಃ ತಾವೇ ಹೇಳಿಕೊಂಡಿದ್ದರು.

ಶ್ರೇಯಸ್ ಅಯ್ಯರ್ ತಂದೆ ವಾಟ್ಸಾಪ್ DPಯಲ್ಲಿ ಆ ಫೋಟೋವನ್ನ 4 ವರ್ಷ ಬದಲಿಸಿಲ್ಲವಂತೆ! ಏಕೆ?
"ಸುಮಾರು ನಾಲ್ಕು ವರ್ಷಗಳ ಹಿಂದೆ ನಾನು ನನ್ನ ಆಗಿನ ಸಹೋದ್ಯೋಗಿಯ ಜೊತೆಗೆ ಸಂದೇಶಗಳ ವಿನಿಮಯದಲ್ಲಿ ತೊಡಗಿದ್ದೆ. ಆ ಸಂದರ್ಭದಲ್ಲಿ ಈ ಸಂದೇಶಗಳ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾದ ಇಂಟಿಗ್ರಿಟಿ ಯೂನಿಟ್ ತನಿಖೆಯನ್ನು ನಡೆಸಿತ್ತು. ಈ ವಿಚಾರಣೆಯನ್ನು ನಾನು ಸಂಪೂರ್ಣವಾಗಿ ಹಾಗೂ ಬಹಿರಂಗವಾಗಿ ಭಾಗವಹಿಸಿದ್ದೆ. ಆ ತನಿಖೆಯಲ್ಲಿ ಹಾಗೂ ಕ್ರಿಕೆಟ್ ಟಾಸ್ಮೇನಿಯಾದ ಹೆಚ್‌ಆರ್ ತನಿಖೆಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾದ ನೀತಿ ಸಂಹಿತೆಯ ಉಲ್ಲಂಘನೆ ಆಗಿಲ್ಲ ಎಂದು ಸಾಬೀತಾಗಿದೆ. ದೀಷ ಮುಕ್ತನಾದರೂ ಆ ಸಂದರ್ಭದಲ್ಲಿ ಹಾಗೂ ಈಗಲೂ ಈ ಘಟನೆಗೆ ನಾನು ತೀವ್ರವಾಗಿ ವಿಷಾದ ಹೊಂದಿದ್ದೇನೆ. ಈ ಸಂದರ್ಭದಲ್ಲಿ ನನಗೆ ನನ್ನ ಪತ್ನಿ ಹಾಗೂ ಕುಟುಂಬದವರು ನನಗೆ ಬೆಂಬಲವನ್ನು ನೀಡಿದ್ದಾರೆ. ಅದಕ್ಕಾಗಿ ಕೃತಜ್ಞನಾಗಿದ್ದೇನೆ" ಎಂದು ಟಿಮ್ ಪೈನ್ ಹೇಳಿಕೊಂಡಿದ್ದರು.

Shreyas Iyer ತಂದ ಈ ದಿನಕ್ಕಾಗಿ ಕಾದು ಕುಳಿತಿದ್ದರು | Oneindia Kannada

For Quick Alerts
ALLOW NOTIFICATIONS
For Daily Alerts
Story first published: Friday, November 26, 2021, 13:21 [IST]
Other articles published on Nov 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X